ಅಯ್ಯೋ ದುರ್ವಿಧಿಯೇ.. ಟೈಟಾನಿಕ್ ಅವಶೇಷ ನೋಡಲು ಹೋದವರ ಸಾವು? ಸಮುದ್ರದಲ್ಲಿ ಅಮೆರಿಕದ ನೌಕಾಪಡೆಗೆ ಕಾಣಿಸಿದ್ದು ಏನು? | US Coast Guard says they found debris of missing Submarine near Titanic

International

oi-Malathesha M

|

Google Oneindia Kannada News

ಕೆನಡಾ: ಏನು ಆಗಬಾರದಿತ್ತೋ ಅದೇ ನಡೆದೋಗಿದೆ, ಕೋಟ್ಯಂತರ ಜನರ ಪ್ರಾರ್ಥನೆಯು ಫಲಿಸಿಲ್ಲ. 12,600 ಅಡಿ ಆಳದಲ್ಲಿ ಟೈಟಾನಿಕ್ ಅವಶೇಷ ನೋಡಲು ಹೋದವರು ಉಸಿರು ಚೆಲ್ಲಿ ಭೀಕರ ಸಾವು ಕಂಡಿರುವುದು ಬಹುತೇಕ ಪಕ್ಕಾ ಆಗಿದೆ. ಜಲಾಂತರ್ಗಾಮಿ ಮೂಲಕ ಟೈಟಾನಿಕ್ ಅವಶೇಷ ನೋಡಲು ಹೋದವರು ಹೆಣವಾಗಿದ್ದಾರೆ ಎನ್ನಲಾಗಿದೆ. ಹಾಗಾದ್ರೆ ಅಲ್ಲಿ ನಡೆದಿದ್ದಾದರೂ ಏನು? ಸಂಪೂರ್ಣ ಮಾಹಿತಿ ಇಲ್ಲಿದೆ.

3-4 ದಿನದಿಂದ ಅಮೆರಿಕ ಹಾಗೂ ಕೆನಡಾ ಕರಾವಳಿಯಲ್ಲಿ ನಿರಂತರವಾಗಿ ನಡೆಯುತ್ತಿರುವ ಕಾರ್ಯಾಚರಣೆ ಫಲ ನೀಡಿಲ್ಲ. ಕೆನಡಾದ ನ್ಯೂಫೌಂಡ್‌ಲ್ಯಾಂಡ್‌ ಕರಾವಳಿ ಭಾಗದಿಂದ 400 ಮೈಲು ದೂರದಲ್ಲಿ ಬೃಹತ್ ಹಡಗು ಟೈಟಾನಿಕ್‌ನ ಅವಶೇಷ ಬಿದ್ದಿವೆ. ಇಲ್ಲಿ ಟೈಟಾನಿಕ್‌ನ ಅವಶೇಷ ನೋಡಲು ಹೋಗಿದ್ದವರು ಹೆಣವಾಗಿದ್ದಾರೆ ಎನ್ನಲಾಗಿದೆ. ಅಮೆರಿಕ ನೌಕಾಪಡೆ ಸಿಬ್ಬಂದಿಗೆ ನಾಪತ್ತೆಯಾಗಿರುವ ಜಲಾಂತರ್ಗಾಮಿ ಅವಶೇಷಗಳು ಕಾಣಿಸಿವೆ ಎನ್ನಲಾಗಿದೆ. ಈ ಹಿನ್ನೆಲೆಯಲ್ಲಿ ಮತ್ತಷ್ಟು ಪರಿಶೀಲನೆ ನಡೆಸಲಾಗುತ್ತಿದೆ. ಹೀಗಾಗಿಯೇ ಆತಂಕ ಮತಷ್ಟು ಹೆಚ್ಚಾಗಿದ್ದು, ಜಲಾಂತರ್ಗಾಮಿ ಮೂಲಕ ಸಮುದ್ರದ ಆಳಕ್ಕೆ ಟೈಟಾನಿಕ್ ಅವಷೇಗಳನ್ನ ನೋಡಲು ತೆರಳಿದ್ದವರು ಬದುಕಿರುವುದು ಬಹುತೇಕ ಅನುಮಾನ ಎನ್ನಲಾಗಿದೆ.

US Coast Guard says they found debris of missing Submarine near Titanic

ಆಮ್ಲಜನಕ ಇಲ್ಲದೆ ಮೃತಪಟ್ಟಿದ್ದಾರಾ?

ಕರುಣಾಜನಕ ಘಟನೆಯಲ್ಲಿ ಟೈಟಾನಿಕ್ ಅವಶೇಷ ನೋಡಲು ಹೋದವರು ಆಮ್ಲಜನಕದ ಕೊರತೆಯಿಂದ ಸತ್ತು ಹೋದ್ರಾ? ಅನ್ನೋ ಡೌಟ್ ಕಾಡುತ್ತಿದೆ. ಯಾಕಂದ್ರೆ ನಾಪತ್ತೆಯಾದ ಹಡಗಿನಲ್ಲಿ ಆಮ್ಲಜನಕ (oxygen) ಖಾಲಿ ಆಗಿದೆ. ಮುಳುಗಡೆ ಆಗಿರುವ ಜಲಾಂತರ್ಗಾಮಿ ಒಳಗೆ ಉಸಿರಾಡಲು ಇಂದು ಸಂಜೆ 7.15ರ ತನಕ ಸಾಕಾಗುವಷ್ಟು ಆಮ್ಲಜನಕ ಬಾಕಿ ಇತ್ತು. ಭಾನುವಾರ ಮಧ್ಯಾಹ್ನ ಕಾಣೆಯಾಗಿರುವ ಜಲಾಂತರ್ಗಾಮಿ ಒಳಗೆ ಈಗ ಆಕ್ಸಿಜೆನ್ ಇಲ್ಲವೆಂಬ ಮಾತು ಕೇಳಿಬರುತ್ತಿದೆ. ಗರಿಷ್ಠ 96 ಗಂಟೆಗಳ ತುರ್ತು ಆಮ್ಲಜನಕವನ್ನ ಜಲಾಂತರ್ಗಾಮಿಯ ಒಳಗೆ ಅಳವಡಿಸಲಾಗಿತ್ತು. ಈಗ ಮತ್ತೊಂದು ಮಾಹಿತಿ ಹೊರಬಿದ್ದಿದ್ದು, ಜಲಾಂತರ್ಗಾಮಿ ಅವಶೇಷ ಪತ್ತೆಯಾಗಿದೆ ಎನ್ನುತ್ತಿದ್ದಾರೆ ಅಮೆರಿಕದ ನೌಕಾಪಡೆ ಸಿಬ್ಬಂದಿ.

ಇಲ್ಲಿ ಬಿದ್ದಿದ್ದು ಏಕೆ ಟೈಟಾನಿಕ್ ಅವಶೇಷ?

ಕೆನಡಾ ದೇಶದ ನ್ಯೂಫೌಂಡ್‌ಲ್ಯಾಂಡ್‌ ಕರಾವಳಿಯಿಂದ 400 ಮೈಲು ದೂರದಲ್ಲಿ ಟೈಟಾನಿಕ್‌ ಅವಶೇಷಗಳು ಬಿದ್ದಿವೆ. 100 ವರ್ಷಕ್ಕೂ ಹೆಚ್ಚು ಕಾಲ ಸಮುದ್ರದ 12,600 ಅಡಿ ಆಳದಲ್ಲಿ ಟೈಟಾನಿಕ್ ಅವಶೇಷ ಬಿದ್ದಿವೆ. ಏಪ್ರಿಲ್ 14, 1912ರಂದು ಟೈಟಾನಿಕ್ ಹಡಗು ಅಪಘಾತಕ್ಕೆ ತುತ್ತಾಗಿತ್ತು. ಬೃಹತ್ ಮಂಜುಗಡ್ಡೆಗೆ ಟೈಟಾನಿಕ್ ಅಪ್ಪಳಿಸಿದ್ದ ಕಾರಣ 1500ಕ್ಕೂ ಹೆಚ್ಚು ಜನರು ಮೃತಪಟ್ಟಿದ್ದರು. ಹಾಗೇ 700 ಜನರು ಮಾತ್ರ ಜೀವ ಉಳಿಸಿಕೊಳ್ಳಲು ಸಾಧ್ಯವಾಗಿತ್ತು. 1982ರ ತನಕ ಟೈಟಾನಿಕ್ ಬಗ್ಗೆ ಹೆಚ್ಚಿನ ಮಾಹಿತಿ ತಿಳಿದಿರಲಿಲ್ಲ, ಆದರೆ 1982ರಲ್ಲಿ ಟೈಟಾನಿಕ್ ಹಡಗಿನ ಅವಶೇಷಗಳು ಪತ್ತೆಯಾಗಿದ್ದವು. ಈಗ ಅದನ್ನ ನೋಡಲು ಹೋದವರ ಜೀವವೇ ಹೋಗಿದೆ ಎನ್ನಲಾಗುತ್ತಿದೆ.

ಪವಾಡ ನಡೆದರೆ ಜೀವ ಉಳಿಸಬಹುದು!

ಈಗ ನಾಪತ್ತೆಯಾಗಿರುವ ಸಬ್‌ಮರೀನ್ ಒಳಗೆ ಬ್ರಿಟಿಷ್ ಬಿಲಿಯನೇರ್ ಪರಿಶೋಧಕ ಹಮೀಶ್ ಹಾರ್ಡಿಂಗ್ ಹಾಗೂ ಫ್ರೆಂಚ್ ಡೈವರ್ ಪಾಲ್-ಹೆನ್ರಿ ನಾರ್ಜಿಯೊಲೆಟ್ ಸೇರಿದಂತೆ ಪಾಕಿಸ್ತಾನ ಮೂಲದ ಉದ್ಯಮಿ ಶಹಜಾದಾ ದಾವೂದ್ ಹಾಗೂ ಅವರ 19 ವರ್ಷದ ಮಗ ಸುಲೇಮಾನ್ ದಾವೂದ್ ಇದ್ದಾರೆ ಎನ್ನಲಾಗಿದೆ. ಈಗಿನ ಪರಿಸ್ಥಿತಿಯಲ್ಲಿ ಪವಾಡ ನಡೆಯಬೇಕು. ಪವಾಡ ಸಂಭವಿಸಲೂ ಬಹುದು ಎಂದು ಸಬ್ ಮರೀನ್ ಪೈಲಟ್ ಸ್ನೇಹಿತ, ಸಮುದ್ರ ಪರಿಶೋಧಕ ಡಾ.ಡೇವಿಡ್ ಗ್ಯಾಲೊ ಹೇಳಿದ್ದಾರೆ. ಹೀಗಾಗಿ ಜಲಾಂತರ್ಗಾಮಿಗೆ ನಿರಂತರವಾಗಿ ಹುಡುಕಾಟ ಸಾಗಿತ್ತು. ಆದರೆ ಅವಶೇಷ ಪತ್ತೆಯಾಗಿರುವುದು ಆತಂಕ ಸೃಷ್ಟಿಸಿದೆ.

ಒಟ್ನಲ್ಲಿ ಖುಷಿ ಖುಷಿಯಾಗಿ ಸಮುದ್ರದ ಆಳಕ್ಕೆ ಹೋಗಿ ಟೈಟಾನಿಕ್ ಅವಶೇಷ ನೋಡಲು ಹೋದವರಿಗೆ ವಿಧಿ ನಿರ್ಧಾರವೇ ಆಘಾತ ನೀಡಿದೆ. ಸಬ್ ಮರೀನ್ ಅವಶೇಷ ಕಂಡಿರುವ ಜಾಗದಲ್ಲಿ ತೀವ್ರ ಶೋಧಕಾರ್ಯ ನಡೆಯುತ್ತಿದೆ. ಈ ಭಾಗದಲ್ಲಿ ಸಾಕಷ್ಟು ಆಳವೂ ಇರುವ ಕಾರಣ ಕಾರ್ಯಾಚರಣೆ ಸಾಕಷ್ಟು ತಡವಾಗುತ್ತಿದೆ ಎನ್ನಲಾಗಿದೆ. ಅಮೆರಿಕ ನೌಕಾಪಡೆ & ಕೆನಡಾ ನೌಕಾಪಡೆ ಸಿಬ್ಬಂದಿ ಕಾರ್ಯಾಚರಣೆಗೆ ಸಾಥ್ ನೀಡಿದ್ದಾರೆ. ಇನ್ನು ಈ ದುರಂತ ಜಗತ್ತಿನಾದ್ಯಂತ ತೀವ್ರ ಸಂಚಲನ ಸೃಷ್ಟಿಮಾಡಿದೆ.

English summary

US Coast Guard says they found debris of missing Submarine near Titanic debris.

Story first published: Thursday, June 22, 2023, 22:53 [IST]

Source link