Tumakuru
oi-Mallika P
ತುಮಕೂರು, ಜುಲೈ 04: ಈ ಜಗತ್ತು ವಿಸ್ಮಯಗಳ ಆಗರ. ಪ್ರತಿ ನಿತ್ಯ ಒಂದಲ್ಲ ಒಂದು ವಿಚಿತ್ರ ಘಟನೆಗಳು ನಡೆಯುತ್ತಲೇ ಇರುತ್ತದೆ. ಸಾಮಾಜಿಕ ಜಾಲತಾಣಗಳು ಸಕ್ರಿಯವಾಗಿರುವ ಪ್ರಸ್ತುತ ದಿನಗಳಲ್ಲಿ ಜಗತ್ತಿನ ಯಾವುದೇ ಮೂಲೆಯಲ್ಲಿ ಆಶ್ಚರ್ಯಕರ ಘಟನೆಗಳು ನಡೆದರೂ ಸಹ ಶೀಘ್ರವಾಗಿಯೇ ಬೆಳಕಿಗೆ ಬರುತ್ತದೆ. ಅದೇ ರೀತಿ ಜನರು ಬಾಯಿ ಮೇಲೆ ಕೈ ಇಟ್ಟು ಕೇಳುವಂತಹ ಘಟನೆ ನಮ್ಮ ಕರ್ನಾಟಕದ ತುಮಕೂರು ಜಿಲ್ಲೆಯಲ್ಲಿ ನಡೆದಿದೆ.
ಒಂದು ಹಸು ಒಂದು ಸಮಯಕ್ಕೆ ಎಷ್ಟು ಕರುಗಳಿಗೆ ಜನ್ಮ ನೀಡಬಹುದು? ಇಂದೆಥಾ ಪ್ರಶ್ನೆ ಎಂದು ಕೊಳ್ಳಬೇಡಿ. ಹಸು ಒಂದು ಬಾರಿಗೆ ಒಂದು ಕರುವಿಗೆ ಜನ್ಮ ನೀಡಬಹುದು. ಇದು ಸರ್ವೇ ಸಾಮಾನ್ಯ, ಇದಕ್ಕೂ ಮೀರಿ ಅವಳಿ ಕರುಗಳಿಗೆ ಕೆಲವು ಹಸುಗಳು ಜನ್ಮ ನೀಡುತ್ತವೆ. ಇದು ಬೆರಳೆಣಿಕೆಯ ಘಟನೆಗಳಾಗಿರುತ್ತವೆ. ಆದರೆ ಇಲ್ಲೊಂದು ಹಸು ಒಂದಲ್ಲ.. ಎರಡಲ್ಲ.. ಹೋಗ್ಲಿ ಮೂರು ಅಲ್ಲ ಬರೋಬ್ಬರಿ ನಾಲ್ಕು ಕರುಗಳಿಗೆ ಜನ್ಮ ನೀಡಿದೆ.
ತುಮಕೂರು ಜಿಲ್ಲೆಯ ಗುಬ್ಬಿ ತಾಲೂಕಿನ ಚೇಳೂರು ಗ್ರಾಮದಲ್ಲಿ ಈ ಅಚ್ಚರಿಯ ಘಟನೆ ನಡೆದಿದೆ. ಚೇಳೂರು ಗ್ರಾಮದ ಮುನಿಯಪ್ಪ ಎನ್ನುವವರಿಗೆ ಸೇರಿದ ರೈತರ ಹಸುವೊಂದು ನಾಲ್ಕು ಕರುಗಳಿಗೆ ಜನ್ಮ ನೀಡಿದೆ. ಕಪ್ಪು ಬಿಳುಪಿನ ನಾಲ್ಕು ಮುದ್ದಾದ ಆರೋಗ್ಯವಂತ ಕರುಗಳಿಗೆ ಮುನಿಯಪ್ಪ ಅವರ ಮನೆಯ ಹಸು ಜನ್ಮ ನೀಡಿದೆ. ನಾಲ್ಕು ಕರುಗಳಲ್ಲಿ ಒಂದು ಹೆಣ್ಣು ಹಾಗೂ ಮೂರು ಗಂಡು ಕರುಗಳಾಗಿದ್ದು, ಸದ್ಯ ತಾಯಿ ಹಸು ಹಾಗೂ ನಾಲ್ಕೂ ಕರುಗಳು ಆರೋಗ್ಯವಾಗಿವೆ. ಒಮ್ಮೆಲೆ ನಾಲ್ಕು ಕರುಗಳ ಜನನದಿಂದ ರೈತ ಮುನಿಯಪ್ಪ ಅವರ ಮನೆಯಲ್ಲಿ ಖುಷಿ ಮನೆ ಮಾಡಿದೆ.
ವಾಹನ ಸವಾರರೇ ಗಮನಿಸಿ! ಇಂದಿನಿಂದ ನೈಸ್ ರಸ್ತೆ, ತುಮಕೂರು-ಬೆಂಗಳೂರು ಟೋಲ್ ದರ ಹೆಚ್ಚಳ
ಇನ್ನು 2023ರಲ್ಲಿ ಇದು ಎರಡನೇ ಘಟನೆಯಾಗಿದೆ. ಈ ಹಿಂದೆ ಬಾಗಲಕೋಟೆ ಜಿಲ್ಲೆಯ ಆಸಂಗಿ ಗ್ರಾಮದಲ್ಲಿ ಹಸುವೊಂದು ಒಂದೇ ಬಾರಿಗೆ 4 ಕರುಗಳಿಗೆ ಜನ್ಮ ನೀಡಿತ್ತು. ಬಾಗಲಕೋಟೆ ಜಿಲ್ಲೆಯ ರಬಕವಿ ಬನಹಟ್ಟಿ ತಾಲೂಕಿನ ಆಸಂಗಿ ಗ್ರಾಮದ ಮಹಾವೀರ ಶಿರಹಟ್ಟಿ ಎಂಬ ರೈತರಿಗೆ ಸೇರಿದ ಹಸು ಜನವರಿ 12ರಂದು ನಾಲ್ಕು ಆರೋಗ್ಯವಂತ ಕರುಗಳಿಗೆ ಜನ್ಮ ನೀಡಿತ್ತು. ಎರಡು ಹೆಣ್ಣು, ಎರಡು ಗಂಡು ಕರುಗಳಿಗೆ ಜನ್ಮ ನೀಡಿತ್ತು. ಇನ್ನು ಈ ಅಚ್ಚರಿಯನ್ನು ನೋಡಲು ಜನ ತಂಡೋಪಾದಿಯಲ್ಲಿ ಆಗಮಿಸಿ ಕರುಗಳನ್ನು ಮುದ್ದಾಡಿದ್ದರು.
English summary
Cow given birth to four calf in Chelur village in Gubbi taluk of Tumakuru all four calves are healthy. Know more,
Story first published: Tuesday, July 4, 2023, 12:46 [IST]