ಹುಟ್ಟುಹಬ್ಬಕ್ಕೆ ಪುನೀತ್ ರಾಜ್ಕುಮಾರ್ ನಾಮಸ್ಮರಣೆ, ಅಪ್ಪುಗೆ ನಮನ, ಕನ್ನಡ ಹಾಡುಗಳ ಕಲವರ, ಕೊಹ್ಲಿ ಕೊಹ್ಲಿ ಕೂಗು, ಎಬಿ ವಿಲಿಯರ್ಸ್ ನೆನಪು, ಹೊಸ ಆಟಗಾರರನ್ನು ಪರಿಚಯ, ಮೈದಾನದ ತುಂಬೆಲ್ಲಾ ಬಣ್ಣಬಣ್ಣಗಳ ಚಿತ್ತಾರ, ಆಟಗಾರರ ಅಭ್ಯಾಸ, ಕೊಹ್ಲಿ ತುಂಟಾಟ, ಸಂಗೀತ ಕಲಾವಿದರ ಪ್ರದರ್ಶನ, ಆರ್ಸಿಬಿ ಆರ್ಸಿಬಿ ಕೂಗು… ಈ ದೃಶ್ಯಗಳು ಕಂಡು ಬಂದದ್ದು ಬೆಂಗಳೂರಿನ ಚಿನ್ನಸ್ವಾಮಿ ಮೈದಾನದಲ್ಲಿ ನಡೆದ ಆರ್ಸಿಬಿ ಅನ್ಬಾಕ್ಸ್ ಈವೆಂಟ್ನಲ್ಲಿ!