ಚದುರಂಗ ಚತುರ ಗುಕೇಶ್ ಈ ಸಾಧನೆಗೈದ ವಿಶ್ವದ ಅತ್ಯಂತ ಕಿರಿಯ ಆಟಗಾರ ಎಂಬ ದಾಖಲೆಗೆ ಪಾತ್ರರಾಗಿದ್ದಾರೆ. ಅಲ್ಲದೆ, ವಿಶ್ವನಾಥನ್ ಆನಂದ್ ಬಳಿಕ ಈ ಪ್ರಶಸ್ತಿ ಗೆದ್ದ ಭಾರತದ ಎರಡನೇ ಆಟಗಾರನೂ ಹೌದು. ಆದರೆ ಗುಕೇಶ್ ಪ್ರಶಸ್ತಿ ಗೆಲ್ಲುವ ಕನಸು ಇವತ್ತು, ನಿನ್ನೆಯದ್ದಲ್ಲ, ತನ್ನ 8ನೇ ವಯಸ್ಸಿನಲ್ಲಿ ಕಂಡಿದ್ದ ಕನಸು ಇದು. ಹೌದು, ವಿಶ್ವ ಚೆಸ್ ಚಾಂಪಿಯನ್ ಗೆಲ್ಲಬೇಕೆಂದು ತನ್ನ 8ನೇ ವಯಸ್ಸಿನಲ್ಲೇ ಕನಸು ಕಂಡಿದ್ದರಂತೆ. ಇದೀಗ ಆ ಕನಸು ನನಸಾಗಿದೆ. ಇದೇ ವೇಳೆ ತನ್ನ ಜೊತೆಗಿದ್ದ ತಂದೆಯನ್ನು ಗಟ್ಟಿಯಾಗಿ ಅಪ್ಪಿಕೊಂಡು ಕಣ್ಣೀರು ಹಾಕಿದ್ದಾರೆ. ಅಮ್ಮನಿಗೆ ಕರೆ ಮಾಡಿ ಸಂತೋಷ ಹಂಚಿಕೊಂಡಿದ್ದಾರೆ. ಕೋಚ್ಗಳನ್ನು ತಬ್ಬಿಕೊಂಡು ಕಣ್ಣೀರು ಸುರಿಸಿದ್ದಾರೆ.