ಮಹಿಳೆಯರ 100 ಮೀಟರ್ ಹರ್ಡಲ್ಸ್‌ನಲ್ಲಿ ಜ್ಯೋತಿ ಯರ್ರಾಜಿ (Jyothi Yarraji) ಅಂತರಾಷ್ಟ್ರೀಯ ಸ್ಪರ್ಧೆಯಲ್ಲಿ ತನ್ನ ಚೊಚ್ಚಲ ಚಿನ್ನ ಪಡೆದರು. ಇದೇ ವೇಳೆ ಗುರುವಾರ ನಡೆದ ಪುರುಷರ 1500 ಮೀಟರ್ ಓಟದಲ್ಲಿ ಅಜಯ್ ಕುಮಾರ್ ಸರೋಜ್ (Ajay Kumar Saroj) ಕೂಡಾ ಚಿನ್ನದ ಪದಕ ಗೆದ್ದರು. ಇದೇ ವೇಳೆ ಕಾಮನ್‌ವೆಲ್ತ್ ಕ್ರೀಡಾಕೂಟದಲ್ಲಿ ಬೆಳ್ಳಿ ಪದಕ ಗೆದ್ದಿದ್ದ ಅಬ್ದುಲ್ಲಾ ಅಬೂಬಕರ್ (Abdulla Aboobacker), ಪುರುಷರ ಟ್ರಿಪಲ್ ಜಂಪ್ ಸ್ಪರ್ಧೆಯಲ್ಲಿ ಬಂಗಾರ ಗೆಲ್ಲುವ ಮೂಲಕ, ಎರಡನೇ ದಿನದಲ್ಲಿ ದೇಶಕ್ಕಾಗಿ ಮೂರನೇ ಚಿನ್ನವನ್ನು ಪಡೆದರು.