India
oi-Mamatha M
ಲಕ್ನೋ , ಜೂನ್. 27: ಏಪ್ರಿಲ್ 15 ರಂದು ಉತ್ತರ ಪ್ರದೇಶದಲ್ಲಿ ಪೊಲೀಸ್ ಕಸ್ಟಡಿಯಲ್ಲಿ ಹತ್ಯೆಗೀಡಾದ ದರೋಡೆಕೋರ-ರಾಜಕಾರಣಿಗಳಾದ ಅತೀಕ್ ಅಹ್ಮದ್ ಮತ್ತು ಅಶ್ರಫ್ ಅಹ್ಮದ್ ಅವರ ಸಹೋದರಿ ಆಯಿಷಾ ನೂರಿ ಅವರು ತಮ್ಮವರ ಹತ್ಯೆಯ ಬಗ್ಗೆ ನ್ಯಾಯಯುತ ತನಿಖೆಯನ್ನು ಕೋರಿ ಸುಪ್ರೀಂ ಕೋರ್ಟ್‌ಗೆ ಅರ್ಜಿ ಸಲ್ಲಿಸಿದ್ದಾರೆ.
ಪ್ರಕರಣದ ತನಿಖೆಯನ್ನು ನಿವೃತ್ತ ನ್ಯಾಯಾಧೀಶರು ಅಥವಾ ಸ್ವತಂತ್ರ ಏಜೆನ್ಸಿಯ ಮೂಲಕ ಮೇಲ್ವಿಚಾರಣೆ ಮಾಡಬೇಕು ಎಂದು ಮನವಿ ಮಾಡಿದ್ದಾರೆ. ತನ್ನ ಸೋದರಳಿಯ ಮತ್ತು ಅತೀಕ್ ಅಹ್ಮದ್ ಅವರ ಪುತ್ರ ಅಸದ್ ಅಹ್ಮದ್‌ನ ಎನ್‌ಕೌಂಟರ್ ಹತ್ಯೆಯ ತನಿಖೆಯನ್ನು ಕೋರಿ ಸಹ ಆಯಿಷಾ ನೂರಿ ಸುಪ್ರೀಂ ಕೋರ್ಟ್‌ನಲ್ಲಿ ಮನವಿ ಸಲ್ಲಿಸಿದ್ದಾರೆ.
ಇದಲ್ಲದೆ, ತನ್ನ ಕುಟುಂಬವನ್ನು ಗುರಿಯಾಗಿಸುವ “ಎನ್‌ಕೌಂಟರ್ ಹತ್ಯೆಗಳು, ಬಂಧನಗಳು ಮತ್ತು ಕಿರುಕುಳ” ಎಂಬ ಆಪಾದಿತ ಅಭಿಯಾನದ ಬಗ್ಗೆ ಸ್ವತಂತ್ರ ಸಂಸ್ಥೆಯಿಂದ ಸಮಗ್ರ ತನಿಖೆಗೆ ಆದೇಶಿಸುವಂತೆ ಅವರು ಸುಪ್ರೀಂ ಕೋರ್ಟ್‌ಗೆ ಒತ್ತಾಯಿಸಿದ್ದಾರೆ. ಈ ಅಭಿಯಾನವನ್ನು ಉತ್ತರ ಪ್ರದೇಶ ಸರ್ಕಾರ ನಡೆಸುತ್ತಿದೆ ಎಂದು ಅರ್ಜಿಯಲ್ಲಿ ಆರೋಪಿಸಲಾಗಿದೆ.
ತನ್ನ ಕುಟುಂಬ ಸದಸ್ಯರನ್ನು ಕೊಲ್ಲುಲು ಈ ಅಭಿಯಾನವನ್ನು ಯೋಜಿಸಿರುವ ಉನ್ನತ ಮಟ್ಟದ ರಾಜ್ಯ ಏಜೆಂಟರನ್ನು ಹಿಡಿಯಲು “ಕಸ್ಟಡಿ ಮತ್ತು ನ್ಯಾಯಾಂಗೇತರ ಹತ್ಯೆಗಳ” ಬಗ್ಗೆ ಸ್ವತಂತ್ರ ತನಿಖೆ ನಡೆಸುವುದು ಅವಶ್ಯಕ ಎಂದು ಆಕೆಯ ಮನವಿಯಲ್ಲಿ ಹೇಳಲಾಗಿದೆ. ಈ ಹತ್ಯೆಗಳನ್ನು “ರಾಜ್ಯ ಪ್ರಾಯೋಜಿತ ಹತ್ಯೆಗಳು” ಎಂದು ಕರೆದಿದ್ದಾರೆ.
ಪ್ರತಿವಾದಿಗಳು (ಪೊಲೀಸರು ಮತ್ತು ಅಧಿಕಾರಿಗಳು) ಉತ್ತರ ಪ್ರದೇಶ ಸರ್ಕಾರದ ಸಂಪೂರ್ಣ ಬೆಂಬಲವನ್ನು ಪಡೆಯುತ್ತಿದ್ದಾರೆ ಎಂದು ಅವರು ತಮ್ಮ ಮನವಿಯಲ್ಲಿ ಸುಪ್ರೀಂ ಕೋರ್ಟ್‌ಗೆ ತಿಳಿಸಿದ್ದಾರೆ. ಪೊಲೀಸರು ಮತ್ತು ಅಧಿಕಾರಿಗಳಿಗೆ ಪ್ರತಿಕಾರಕ್ಕಾಗಿ ಅರ್ಜಿದಾರರ ಕುಟುಂಬದ ಸದಸ್ಯರನ್ನು ಕೊಲ್ಲಲು, ಬಂಧಿಸಲು, ವಶಕ್ಕೆ ಪಡೆಯಲು ಮತ್ತು ಕಿರುಕುಳ ನೀಡಲು ಸಂಪೂರ್ಣ ಸಹಕಾರ ನೀಡಿದೆ ಎಂದು ತೋರುತ್ತದೆ ಎಂದಿದ್ದಾರೆ.
ತನ್ನ ಕುಟುಂಬದ ಸದಸ್ಯರ ಸಾವುಗಳು ಯುಪಿ ಸರ್ಕಾರದ ಕೆಟ್ಟ, ಅನಿಯಂತ್ರಿತ ಮತ್ತು ಕಾನೂನುಬಾಹಿರ ಅಭಿಯಾನದ ಭಾಗಗಳಾಗಿವೆ. ಈ ಹತ್ಯೆಗಳ ಬಗ್ಗೆ ಸಮಗ್ರ ಮತ್ತು ಸ್ವತಂತ್ರ ತನಿಖೆಯನ್ನು ನಡೆಸದಿದ್ದರೆ, ಸಂವಿಧಾನದ 21 ನೇ ವಿಧಿಯ ಅಡಿಯಲ್ಲಿ ಅರ್ಜಿದಾರರು ಮತ್ತು ಅವರ ಕುಟುಂಬ ಸದಸ್ಯರ ಹಕ್ಕುಗಳನ್ನು ಉಲ್ಲಂಘಿಸಲಾಗುತ್ತದೆ ಎಂದು ಅರ್ಜಿಯಲ್ಲಿ ತಿಳಿಸಿದ್ದಾರೆ.
ಕಳೆದ 4 ವರ್ಷಗಳಲ್ಲಿ ಯುಪಿ ರಫ್ತು 400 ಪಟ್ಟು ಹೆಚ್ಚಾಗಿದೆ: ಯೋಗಿ ಆದಿತ್ಯನಾಥ್
ಆಕೆಯ ಕುಟುಂಬ ಸದಸ್ಯರ ಹತ್ಯೆಗಳು, ಬಂಧನಗಳು ಮತ್ತು ಕಿರುಕುಳಗಳ, ಕುಟುಂಬ ಸದಸ್ಯರ ನ್ಯಾಯಾಂಗ ಹತ್ಯೆಗಳು ಕುರಿತು ಸಮಗ್ರ ತನಿಖೆಯನ್ನು ಖಚಿತಪಡಿಸಿಕೊಳ್ಳಲು ರಾಜ್ಯ ಅಧಿಕಾರಿಗಳಿಗೆ ನಿರ್ದೇಶನ ನೀಡುವುದು ಮಾತ್ರವಲ್ಲದೆ ಹೆಚ್ಚುವರಿ ಪ್ರಕರಣಗಳ ತನಿಖೆಯ ಸಂದರ್ಭದಲ್ಲಿ ಸುಪ್ರೀಂ ಕೋರ್ಟ್‌ನ ನಿರ್ದೇಶನಗಳನ್ನು ಅನುಸರಿಸುವಂತೆಯೂ ಅರ್ಜಿದಾರರು ಸುಪ್ರೀಂ ಕೋರ್ಟ್‌ಗೆ ಒತ್ತಾಯಿಸಿದ್ದಾರೆ.
ಅರ್ಜಿದಾರರು ಸುಪ್ರೀಂ ಕೋರ್ಟ್‌ನ ತೀರ್ಪನ್ನು ಅನುಸರಿಸಲು ಮತ್ತು ಎನ್‌ಕೌಂಟರ್‌ಗಳನ್ನು ನಡೆಸಿದ ಪೊಲೀಸ್ ಅಧಿಕಾರಿಗಳ ವಿರುದ್ಧ ಭಾರತೀಯ ದಂಡ ಸಂಹಿತೆಯ ಸೆಕ್ಷನ್ 302, 201, 120-ಬಿ ಮತ್ತು 193 ರ ಅಡಿಯಲ್ಲಿ ಅಪರಾಧಗಳಿಗೆ ಎಫ್‌ಐಆರ್‌ಗಳನ್ನು ದಾಖಲಿಸಲು ಕೋರಿದ್ದಾರೆ.
English summary
Atiq Ahmed death: Atiq Ahmed’s Sister Aisha Noori moved the Supreme Court seeking a fair probe into their assassination. know more.
Story first published: Tuesday, June 27, 2023, 17:46 [IST]