ಅಣುಸ್ಥಾವರದ ಮೇಲೆ ಅಟ್ಯಾಕ್: ಜಸ್ಟ್ ಮಿಸ್.. ಇಲ್ಲದಿದ್ರೆ ಎಲ್ಲಾ ಉಡೀಸ್! | Russia alleged that Ukraine attacks near Zaporizhzhia Nuclear plant

International

oi-Malathesha M

|

Google Oneindia Kannada News

ಮಾಸ್ಕೋ: ರಷ್ಯಾ ವಿರುದ್ಧ ಡೆಡ್ಲಿ ಅಟ್ಯಾಕ್ ಮುಂದುರಿಸಿರುವ ಉಕ್ರೇನ್ ಸೇನೆ ಸಿಕ್ಕ ಸಿಕ್ಕ ಕಡೆ ಡ್ರೋನ್ ದಾಳಿ ಮಾಡುತ್ತಿದೆ. ಹೀಗೆ ರಷ್ಯಾ ವಶದಲ್ಲಿರುವ ತನ್ನ ಜಾಗದ ಮೇಲೆ ಉಕ್ರೇನ್ ಭೀಕರ ದಾಳಿ ಮಾಡಿದ್ದು, ಘಟನೆಯಲ್ಲಿ ಪೂರ್ವ ಉಕ್ರೇನ್‌ನ ಪಟ್ಟಣ ಮಕಿವ್ಕಾ ಛಿದ್ರ ಛಿದ್ರವಾಗಿದೆ. ಇದನ್ನ ಬಿಡಿ, ರಷ್ಯಾ ವಶದಲ್ಲಿರುವ ತನ್ನದೇ ಪರಮಾಣು ಸ್ಥಾವರದ ಮೇಲೂ ಉಕ್ರೇನ್ ದಾಳಿಗೆ ಯತ್ನಿಸಿದೆ ಎಂಬ ಗಂಭೀರ ಆರೋಪ ಜಗತ್ತನ್ನೇ ನಡುಗಿಸಿದೆ.

ನಾನು ಬಿಡಲ್ಲ, ನೀನು ಕೊಡಲ್ಲ ಅನ್ನೋ ಹಾಗೆ ಆಗಿದೆ ಉಕ್ರೇನ್-ರಷ್ಯಾ ಯುದ್ಧದ ಪರಿಸ್ಥಿತಿ. ಅತ್ತ ಉಕ್ರೇನ್ ಬಂದು ರಷ್ಯಾ ಜೊತೆ ಸಂಧಾನ ಮಾತುಕತೆಗೆ ಮುಂದಾಗಿಲ್ಲ. ಇತ್ತ ರಷ್ಯಾ ಕೂಡ ತನ್ನ ಸೇನೆಯನ್ನ ವಾಪಸ್ ಕರೆಸಿಕೊಳ್ಳಲು ಸಿದ್ಧವಿಲ್ಲ. ಹೀಗಾಗಿ ಈ ಎರಡೂ ದೇಶಗಳ ನಡುವೆ ಪರಿಸ್ಥಿತಿ ಹೊತ್ತಿ ಉರಿಯುತ್ತಿದೆ. ನಿನ್ನೆಯಷ್ಟೇ ಅಂತ್ಯಸಂಸ್ಕಾರಕ್ಕೆ ತೆರಳುತ್ತಿದ್ದವರ ಮೇಲೆ ರಷ್ಯಾ ಹಾರಿಸಿದ್ದ 1 ಮಿಸೈಲ್ ಬಿದ್ದು 38 ಜನ ಗಂಭೀರವಾಗಿ ಗಾಯಗೊಂಡಿದ್ದರು. ಈಗ ರಿವೇಂಜ್ ತೆಗೆದುಕೊಂಡಿರುವ ಉಕ್ರೇನ್, ರಷ್ಯಾ ವಶದಲ್ಲಿರುವ ಜಾಗದ ಮೇಲೆ ಭೀಕರ ದಾಳಿ ಮಾಡಿ ಚಿಂದಿ ಚಿಂದಿ ಉಡಾಯಿಸಿದೆ (Russia Ukraine War).

russia ukraine war

ಭೀಕರ ಡ್ರೋನ್ ದಾಳಿಗೆ 41 ಜನ..

2014ರಲ್ಲಿ ಕೂಡ ಉಕ್ರೇನ್ ಮೇಲೆ ರಷ್ಯಾ ದಾಳಿ ನಡೆದಿತ್ತು. ಈ ಸಂದರ್ಭದಲ್ಲಿ ರಷ್ಯಾದ ಬೆಂಬಲದಿಂದ ಪ್ರತ್ಯೇಕತಾವಾದಿಗಳ ಗುಂಪು ಡೊನೆಟ್ಸ್ಕ್ ಪ್ರದೇಶವನ್ನು ವಶಕ್ಕೆ ಪಡೆದಿತ್ತು. ಇದೀಗ ಉಕ್ರೇನ್ ಬೇಕು ಅಂತಲೇ ಡೊನೆಟ್ಸ್ಕ್ ಪ್ರದೇಶವನ್ನು ಟಾರ್ಗೆಟ್ ಮಾಡಿ ಅಟ್ಯಾಕ್ ಮಾಡುತ್ತಿದೆ. ಹೀಗೆ ನಡೆದ ಭೀಕರ ದಾಳಿಯಲ್ಲಿ ಮಕ್ಕಳು ಸೇರಿದಂತೆ 41 ಜನರಿಗೆ ಗಂಭೀರ ಗಾಯವಾಗಿದೆ ಎಂದು ರಷ್ಯಾ ಹೇಳಿದೆ. ಡೊನೆಟ್ಸ್‌ನ ಮಕಿವ್ಯಾದಲಿ ವಸತಿ ಪ್ರದೇಶಗಳು ಮತ್ತು ಆಸ್ಪತ್ರೆ ಮೇಲೆ ಉಕ್ರೇನ್ ಡ್ರೋನ್ ಮೂಲಕ ದಾಳಿ ನಡೆಸಿದೆ ಎಂದು ರಷ್ಯಾ ಆರೋಪಿಸಿದೆ. ಆದರೆ ಮ್ಯಾಟರ್ ಇದಲ್ಲ, ಪರಮಾಣು ಸ್ಥಾವರದ ಮೇಲೂ ಉಕ್ರೇನ್ ಭೀಕರ ದಾಳಿಯನ್ನ ಮಾಡಿದೆಯಂತೆ.

ಪರಮಾಣು ದಾಳಿ ನಡೆಸುತ್ತಾ ರಷ್ಯಾ?

ಹೌದು, ರಷ್ಯಾ & ಉಕ್ರೇನ್ ಯುದ್ಧ ಶುರುವಾದ ಮರುದಿನದಿಂದಲೇ ಜಗತ್ತಿಗೆ ಒಂದಲ್ಲ ಒಂದು ಕಂಟಕ ಎದುರಾಗುತ್ತಿದೆ. ಅದರಲ್ಲೂ ಪರಮಾಣು ಯುದ್ಧದ ಕಾರ್ಮೋಡ ಆವರಿಸಿರುವಾಗಲೇ ಉಕ್ರೇನ್ ಮತ್ತೆ ಮತ್ತೆ ಎಡವಟ್ಟು ಮಾಡಿಕೊಳ್ಳುತ್ತಿದೆ ಎಂಬ ಆರೋಪ ಕೂಡ ಕೇಳಿಬಂದಿದೆ. ಉಕ್ರೇನ್‌ನ ಜಪೋರಿಝಿಯಾ ಪರಮಾಣು ವಿದ್ಯುತ್ ಸ್ಥಾವರದ ಮೇಲೆ ಮತ್ತೆ ಉಕ್ರೇನ್ ದಾಳಿ ನಡೆಸಿದೆ ಎಂದು ರಷ್ಯಾ ಗಂಭೀರ ಆರೋಪ ಮಾಡಿದೆ. ಹೀಗೆ ಏಪ್ರಿಲ್ ಆರಂಭದಲ್ಲಿ ಕೂಡ ಜಪೋರಿಝಿಯಾ ಪರಮಾಣು ಸ್ಥಾವರದ ಮೇಲೆ ಉಕ್ರೇನ್‌ ಸೇನೆ ಸೂಸೈಡ್ ಡ್ರೋನ್ ಮೂಲಕ ದಾಳಿಗೆ ಯತ್ನಿಸಿದ್ದ ಆರೋಪ ಕೇಳಿಬಂದಿತ್ತು. ಈಗ ಮತ್ತೊಮ್ಮೆ ಇಂತಹದ್ದೇ ಘಟನೆಯು ನಡೆದಿರುವುದು ರಷ್ಯಾ ಅಧ್ಯಕ್ಷರನ್ನ ಕೆರಳಿಸಿದೆ.

russia ukraine war

ಸ್ಥಾವರಕ್ಕೆ ಬಾಂಬ್ ಬಿದ್ದರೆ ಏನಾಗುತ್ತೆ?

ಅಷ್ಟಕ್ಕೂ ಕಳೆದ ವರ್ಷ ಉಕ್ರೇನ್ ವಿರುದ್ಧ ರಷ್ಯಾ ಯುದ್ಧ ಸಾರಿದ್ದಾಗ, ರಷ್ಯಾದ ವಾಯು ಸೇನೆ ಜಪೋರಿಝಿಯಾ ಅಣುಸ್ಥಾವರದ ಮೇಲೆ ದಾಳಿ ನಡೆಸಿದೆ ಎಂದು ಖುದ್ದಾಗಿ ಉಕ್ರೇನ್ ಆರೋಪ ಮಾಡಿತ್ತು. ಆದರೆ ಈಗ ನೋಡಿದರೆ ತನ್ನದೇ ನೆಲದ ಪರಮಾಣು ವಿದ್ಯುತ್ ಸ್ಥಾವರದ ಮೇಲೆ ಉಕ್ರೇನ್ ದಾಳಿ ನಡೆಸಿದೆ ಎಂಬ ಆರೋಪ ಕೇಳಿಬಂದಿದೆ. ಅದ್ರಲ್ಲೂ 2 ತಿಂಗಳ ಅಂತರದಲ್ಲಿ ಇದು 2ನೇ ಘಟನೆಯಾಗಿದ್ದು, ಅಕಸ್ಮಾತ್ ದಾಳಿಯಲ್ಲಿ ಜಪೋರಿಝಿಯಾ ಅಣು ಸ್ಥಾವರದಲ್ಲಿ ಸ್ಫೋಟ ಸಂಭವಿಸಿದರೆ ಇಡೀ ಜಗತ್ತಿಗೆ ಗಂಡಾಂತರ ಎದುರಾಗುತ್ತಿತ್ತು. ಹೀಗಾಗಿ ರಷ್ಯಾ ಕೂಡ ಈ ಬಗ್ಗೆ ಖಡಕ್ ವಾರ್ನಿಂಗ್ ಕೊಟ್ಟಿದೆ.

ಜಸ್ಟ್ ಮಿಸ್.. ಇಲ್ಲದಿದ್ರೆ ಜಗತ್ತೇ ಉಡೀಸ್!

ಯೂರೋಪಿನ ಅತಿ ದೊಡ್ಡ ಅಣುಸ್ಥಾವರ ಜಪೋರಿಝಿಯಾ ನ್ಯೂಕ್ಲಿಯರ್ ಪ್ಲಾಂಟ್. 2022ರ ಮಾರ್ಚ್ ತಿಂಗಳಲ್ಲಿ ಇದೇ ಉಕ್ರೇನ್ ತನ್ನ ಅಣುಸ್ಥಾವರದ ಮೇಲೆ ರಷ್ಯಾ ಸೇನೆಯಿಂದ ದಾಳಿ ನಡೆದಿದೆ ಎಂದು ಗಂಭೀರ ಆರೋಪ ಮಾಡಿತ್ತು. ಬೇರೆಯವರ ವಿರುದ್ಧ ಬೆರಳು ತೋರಿಸುತ್ತಾ ಆರೋಪ ಹೊರಿಸಿದ್ದ ದೇಶವೇ ಈಗ ತನ್ನದೇ ಅಣುಸ್ಥಾವರದ ಮೇಲೆ ಅಟ್ಯಾಕ್ ಮಾಡಿದೆ ಎಂಬ ಆರೋಪ ಹೊತ್ತಿದೆ. ವಿಶ್ವಸಂಸ್ಥೆ ಕೂಡ ಈ ವಿಚಾರದಲ್ಲಿ ಮಧ್ಯಪ್ರವೇಶ ಮಾಡುವ ಸಾಧ್ಯತೆ ಇದೆ. ಆದರೆ ಈವರೆಗೂ ಯಾವುದೇ ಮಾಹಿತಿ ಸಿಕ್ಕಿಲ್ಲ.

BIG Breaking: ಭಾರತೀಯ ಸೇನೆಯಿಂದ 15 ಉಗ್ರರು ಉಡೀಸ್! ತಪ್ಪಿದ ಭಾರೀ ದಾಳಿBIG Breaking: ಭಾರತೀಯ ಸೇನೆಯಿಂದ 15 ಉಗ್ರರು ಉಡೀಸ್! ತಪ್ಪಿದ ಭಾರೀ ದಾಳಿ

ಅಕಸ್ಮಾತ್ ದಾಳಿಯಲ್ಲಿ ಜಪೋರಿಝಿಯಾ ಸ್ಥಾವರ ಸ್ಫೋಟವಾಗಿದ್ರೆ ಈ ಘಟನೆ ಚೆರ್ನೊಬಿಲ್‌ ದುರಂತಕ್ಕಿಂತ 10 ಪಟ್ಟು ಹೆಚ್ಚು ಸಂಕಷ್ಟ ನೀಡುತ್ತಿತ್ತು. ಏಕೆಂದರೆ ಇಡೀ ಜಗತ್ತಿನ ಅತಿದೊಡ್ಡ ಪರಮಾಣು ಸ್ಥಾವರಗಳ ಪೈಕಿ ಜಪೋರಿಝಿಯಾ ಕೂಡ ಒಂದು. ಯುರೋಪಿನ ಅತಿದೊಡ್ಡ ಅಣುಸ್ಥಾವರ ಎಂಬ ಹೆಗ್ಗಳಿಕೆಗೂ ಪಾತ್ರವಾಗಿದೆ. ಹೀಗಾಗಿ ಇಲ್ಲಿನ ಪರಿಸ್ಥಿತಿ ಬೂದಿ ಮುಚ್ಚಿದ ಕೆಂಡವಾಗಿದೆ. ಇನ್ನೊಂದ್ಕಡೆ ಅಂತಾರಾಷ್ಟ್ರೀಯ ಪರಮಾಣು ಶಕ್ತಿ ಸಂಸ್ಥೆ ಕೂಡ ಈ ಕುರಿತು ಮಾಹಿತಿ ಪಡೆಯುವ ಸಾಧ್ಯತೆ ಇದೆ ಎನ್ನಲಾಗಿದೆ.

English summary

Russia alleged that Ukraine attacks near Zaporizhzhia Nuclear plant.

Story first published: Wednesday, July 5, 2023, 21:14 [IST]

Source link