ಅಕ್ರಮ ವಲಸಿಗರನ್ನು ಆಫ್ರಿಕಾಗೆ ಓಡಿಸುವ ಪ್ಲ್ಯಾನ್: ಕೋರ್ಟ್ ಕೊಟ್ಟಿದೆ ಶಾಕ್! | Court said that UK government plan to deport migrants to Rwanda is unlawful

International

oi-Malathesha M

|

Google Oneindia Kannada News

ಲಂಡನ್: ವಲಸಿಗರ ಸಮಸ್ಯೆಗೆ ಬ್ರಿಟನ್ ನಲುಗಿ ಹೋಗಿದೆ. ಅದರಲ್ಲೂ ಇಂಗ್ಲಿಷ್‌ ಕಾಲುವೆಯ ಮೂಲಕ ಅಕ್ರಮವಾಗಿ ನುಸುಳಿರುವ ವಲಸಿಗರು ಬ್ರಿಟನ್ ಸರ್ಕಾರಕ್ಕೆ ತಲೆನೋವು ತರಿಸಿದ್ದಾರೆ. ಇದೇ ಕಾರಣಕ್ಕೆ ಭಾರತ ಮೂಲದ ಬ್ರಿಟನ್ ಪಿಎಂ ರಿಷಿ ಸುನಕ್ ಸರ್ಕಾರ ಕಠಿಣ ನಿರ್ಧಾರ ಕೈಗೊಂಡಿತ್ತು. ಅಕ್ರಮ ವಲಸಿಗರನ್ನ ಆಫ್ರಿಕಾಗೆ ಓಡಿಸುವ ಪ್ಲ್ಯಾನ್ ಮಾಡಿತ್ತು. ಆದರೆ ಈ ಯೋಜನೆಗೆ ಲಂಡನ್ ಕೋರ್ಟ್ ಶಾಕ್ ಕೊಟ್ಟಿದೆ.

ಬ್ರಿಟನ್‌ನಲ್ಲಿ ಸಾರ್ವತ್ರಿಕ ಚುನಾವಣೆ ನಡೆಯಲಿದೆ. ಹೀಗಾಗಿ ಆಡಳಿತ ಪಕ್ಷ ನೀಡಿರುವ ಪ್ರಮುಖ ಭರವಸೆಗಳಲ್ಲಿ ಅಕ್ರಮ ವಲಸಿಗರ ವಿರುದ್ಧದ ಕಾರ್ಯಾಚರಣೆ ಕೂಡ ಸೇರಿದೆ. ಹೀಗಾಗಿ ಅಕ್ರಮ ವಲಸಿಗರನ್ನ ಬ್ರಿಟನ್‌ನಿಂದ ಹೊರ ಕಳಿಸುವ ಕೆಲಸ ಕೂಡ ತುರ್ತಾಗಿ ನಡೆಯುತ್ತಿದೆ. ಅಕ್ರಮ ವಲಸಿಗರ ವಿರುದ್ಧ ಹೊಸ ಕಾನೂನಿನ ಅಡಿಯಲ್ಲಿ ಇಂಗ್ಲಿಷ್ ಕಾಲುವೆ ಮೂಲಕ ಅಕ್ರಮವಾಗಿ ಪ್ರವೇಶಿಸಿದ ಎಲ್ಲರನ್ನೂ ಗಡಿಪಾರು ಮಾಡುವ ಕಾರ್ಯ ನಡೆಯುತ್ತಿದೆ. ಇಂಗ್ಲಿಷ್‌ ಕಾಲುವೆ ಮೂಲಕ ಅಕ್ರಮವಾಗಿ ನುಸುಳಿದ್ದ ವಲಸಿಗರನ್ನು ಆಫ್ರಿಕಾದ ರವಾಂಡ ದೇಶಕ್ಕೆ ಕಳುಹಿಸಲು ಸುನಕ್ ಸರ್ಕಾರ ಸಿದ್ಧತೆ ನಡೆಸಿತ್ತು. ಅದರೆ ಈ ಬಗ್ಗೆ ಲಂಡನ್ ನ್ಯಾಯಾಲಯ ವ್ಯತಿರಿಕ್ತ ತೀರ್ಪು ಕೊಟ್ಟು, ಆಘಾತ ನೀಡಿದೆ (Illegal Immigration).

Court said that UK government plan to deport migrants to Rwanda is unlawful

ಆಫ್ರಿಕಾ ದೇಶಗಳಿಗೆ ವಲಸಿಗರನ್ನು ಕಳುಹಿಸಬೇಡಿ!

ಹೌದು ಬ್ರಿಟನ್‌ನ ರಿಷಿ ಸುನಕ್ ಅವರ ಸರ್ಕಾರ ಅಕ್ರಮ ವಲಸಿಗರನ್ನು ಆಫ್ರಿಕಾದ ರವಾಂಡ ದೇಶಕ್ಕೆ ಗಡಿಪಾರು ಮಾಡಲು ಸಿದ್ಧವಾಗಿತ್ತು. ಬ್ರಿಟನ್‌ನಿಂದ 6,400 ‌ಕಿಮೀ ದೂರದಲ್ಲಿರುವ ರವಾಂಡಗೆ ಕಳುಹಿಸಿದರೆ ಸಮಸ್ಯೆಯಿಂದ ಮುಕ್ತಿ ಸಿಗಲಿದೆ ಎಂಬ ಪ್ಲ್ಯಾನ್ ಇತ್ತು. ಆದ್ರೆ ಈ ನಿರ್ಧಾರದ ಬಗ್ಗೆ ಕೋರ್ಟ್ ಆದೇಶ ಶಾಕ್ ಕೊಟ್ಟಿದ್ದು, ವಲಸಿಗರನ್ನು ಕಳುಹಿಸಬಹುದಾದ ಸುರಕ್ಷಿತವಾದ 3ನೇ ದೇಶ ಎಂದು ರವಾಂಡ ಪರಿಗಣಿಸಲಾಗದು ಎಂದಿದೆ. ಈ ಹಿನ್ನೆಲೆಯಲ್ಲಿ ಇದೀಗ ರಿಷಿ ಸುನಕ್ ಸರ್ಕಾರ ತೀರ್ಪು ಪ್ರಶ್ನಿಸಿ ಸುಪ್ರೀಂ ಕೋರ್ಟ್‌ನ ಮೊರೆ ಹೋಗುವ ಸಾಧ್ಯತೆ ಇದೆ ಎನ್ನಲಾಗಿದೆ. ಇನ್ನು ಅಲ್ಲಿನ ಸರ್ಕಾರ ಅಕ್ರಮ ವಲಸಿಗರ ವಿರುದ್ಧ ಯುದ್ಧ ಸಾರಿದ ಸಂದರ್ಭದಲ್ಲೇ ಕೋರ್ಟ್ ಆದೇಶ ವ್ಯತಿರಿಕ್ತವಾಗಿ ಬಂದಿರುವುದು ಹಿನ್ನಡೆ ತಂದಿದೆ.

Rishi Sunak: ಕಾರಿನಲ್ಲಿ ಸೀಟ್ ಬೆಲ್ಟ್ ಧರಿಸದ ಬ್ರಿಟನ್ ಪ್ರಧಾನಿ ರಿಷಿ ಸುನಕ್‌ಗೆ ದಂಡ ವಿಧಿಸಿದ ಪೊಲೀಸರುRishi Sunak: ಕಾರಿನಲ್ಲಿ ಸೀಟ್ ಬೆಲ್ಟ್ ಧರಿಸದ ಬ್ರಿಟನ್ ಪ್ರಧಾನಿ ರಿಷಿ ಸುನಕ್‌ಗೆ ದಂಡ ವಿಧಿಸಿದ ಪೊಲೀಸರು

ಅಕ್ರಮ ವಲಸಿಗರ ಹಾವಳಿ ಬಲುಜೋರು!

ಬ್ರಿಟನ್‌ನಲ್ಲಿ ಹಿಂದೆ ಎಂದಿಗಿಂತಲೂ ಈಗ ಅಕ್ರಮ ವಲಸಿಗರ ಹಾವಳಿ ಹೆಚ್ಚಿದೆ. ಹೀಗಾಗಿ ಅಕ್ರಮ ವಲಸಿಗರ ವಿರುದ್ಧ ಹೊಸ ಕಾನೂನಿನ ಅಡಿಯಲ್ಲಿ, ಇಂಗ್ಲಿಷ್ ಕಾಲುವೆಯ ಮೂಲಕ ಅಕ್ರಮವಾಗಿ ಪ್ರವೇಶಿಸಿದ ಎಲ್ಲಾ ವಲಸಿಗರನ್ನ ಗಡಿಪಾರು ಮಾಡುವ ಕಾರ್ಯ ನಡೆಯುತ್ತಿದೆ. ಕಳೆದ ವರ್ಷ ಸಣ್ಣ ಸಣ್ಣ ದೋಣಿಗಳ ಮೂಲಕವೇ ಇಂಗ್ಲೆಂಡ್‌ ಆಗ್ನೇಯ ಕರಾವಳಿ ತೀರಗಳಿಗೆ 45 ಸಾವಿರಕ್ಕೂ ಹೆಚ್ಚು ವಲಸಿಗರು ಪ್ರವೇಶಿಸಿದ್ದಾರೆ ಎಂಬ ಮಾಹಿತಿ ಇದೆ. 2018ರಿಂದ ಈ ಕಳ್ಳ ಮಾರ್ಗ ಹೆಚ್ಚು ಜನಪ್ರಿಯವಾಗುತ್ತಿದ್ದು, ಅಕ್ರಮ ವಲಸಿಗರ ಸಂಖ್ಯೆಯಲ್ಲಿ ಪ್ರತಿ ವರ್ಷ ಶೇಕಡಾ 60ರಷ್ಟು ಏರಿಕೆ ಕಂಡುಬಂದಿದೆ. ಹೀಗೆ ಅಕ್ರಮ ವಲಸಿಗರನ್ನ ಕರೆತರಲು ದೊಡ್ಡ ಜಾಲವೇ ಬೆಳೆದಿದೆ ಎಂಬ ಆರೋಪ ಕೂಡ ಇದೆ.

Court said that UK government plan to deport migrants to Rwanda is unlawful

ಒಟ್ನಲ್ಲಿ ಬ್ರಿಟನ್ ಅಕ್ರಮ ವಲಸಿಗರ ಕಾಟದಿಂದ ನರಳಿ ಹೋಗಿದೆ. ಅದರಲ್ಲೂ ಇತ್ತೀಚೆಗೆ ಇದು ಹಲವು ಗ್ಯಾಂಗ್‌ಗಳನ್ನ ಕೂಡ ಹುಟ್ಟುಹಾಕಿದೆ ಎಂಬ ಆರೋಪವಿದೆ. ಬ್ರಿಟನ್ ಜನರ ನೆಮ್ಮದಿ ಕೆಡಿಸುವ ಜೊತೆ ಬ್ರಿಟನ್ ಭದ್ರತೆಗೂ ಮಾರಕ ಎಂದು ಅಲ್ಲಿನ ಸರ್ಕಾರ ಆರೋಪ ಮಾಡುತ್ತಿದೆ. ಹೀಗಾಗಿ ಅಕ್ರಮ ವಲಸಿಗರ ವಿರುದ್ಧ ಕಠಿಣ ಕ್ರಮ ಕೈಗೊಳ್ಳಲು ಈ ರೀತಿಯ ಯೋಜನೆ ರೂಪಿಸಿ, ಆಫ್ರಿಕಾದ ದೇಶಕ್ಕೆ ಗಡಿಪಾರು ಮಾಡಲು ಯೋಜಿಸಲಾಗಿತ್ತು. ಆದರೆ ಲಂಡನ್ ನ್ಯಾಯಾಲಯ ನೀಡಿರುವ ಆದೇಶ ಸುನಕ್ ಸರ್ಕಾರಕ್ಕೆ ಆಘಾತವನ್ನು ನೀಡಿದೆ. ಇದೀಗ ತೀರ್ಪು ಪ್ರಶ್ನಿಸಿ ಉನ್ನತ ನ್ಯಾಯಾಲಯದಲ್ಲಿ ಸುನಕ್ ಸರ್ಕಾರ ಅರ್ಜಿ ಸಲ್ಲಿಸುವ ಸಾಧ್ಯತೆ ಇದೆ.

English summary

Court said that UK government plan to deport migrants to Rwanda is unlawful.

Story first published: Thursday, June 29, 2023, 21:31 [IST]

Source link