ಅಂತಾರಾಷ್ಟ್ರೀಯ ಒಲಂಪಿಯಾಡ್ ಪರೀಕ್ಷೆಯಲ್ಲಿ ರ‍್ಯಾಂಕ್‌: ಚಿನ್ನದ ಪದಕಕ್ಕೆ ಕೊರಳೊಡ್ಡಿದ ಧಾರವಾಡದ ವಿದ್ಯಾರ್ಥಿನಿ | Rank in International Olympiad Examination: Gold Medal to Dharwad Student

Dharwad

lekhaka-Sandesh R Pawar

By ಧಾರವಾಡ ಪ್ರತಿನಿಧಿ

|

Google Oneindia Kannada News

ಧಾರವಾಡ, ಜೂನ್‌, 23: ದೆಹಲಿ ಮೂಲದ ಸಿಲ್ವರ್ ಝೋನ್ ಫೌಂಡೇಶನ್ ಸಂಸ್ಥೆ ನಡೆಸಿದ ಸ್ಪರ್ಧಾತ್ಮಕ ಪರೀಕ್ಷೆಯಲ್ಲಿ ಧಾರವಾಡದ ವಿದ್ಯಾರ್ಥಿನಿ ಅತೀ ಹೆಚ್ಚು ಅಂಕ ಗಳಿಸುವ ಮೂಲಕ ಚಿನ್ನದ ಪದಕಕ್ಕೆ ಕೊರಳೊಡ್ಡಿದ್ದಾಳೆ.

ದೆಹಲಿ ಮೂಲದ ಸಿಲ್ವರ್ ಝೋನ್ ಫೌಂಡೇಶನ್ ಸಂಸ್ಥೆ ನಡೆಸಿದ ಸ್ಪರ್ಧಾತ್ಮಕ ಪರೀಕ್ಷೆಯಲ್ಲಿ ವಿಜ್ಞಾನ ವಿಭಾಗದಲ್ಲಿ (ಸಿಬಿಎಸ್‌ಸಿ) ಜೆಎಸ್ಎಸ್ ಪ್ರೌಢಶಾಲೆಯ 10ನೇ ತರಗತಿಯ ಶ್ರೇಯಾಂಕಾ ಎಸ್.ಹಿರೇಮಠ ಎಂಬ ವಿದ್ಯಾರ್ಥಿನಿ ಅತೀ ಹೆಚ್ಚು ಅಂಕ ಪಡೆದು ಚಿನ್ನದ ಪದಕವನ್ನು ಪಡೆದಿದ್ದಾಳೆ.

Rank in International Olympiad Examination: Gold Medal to Dharwad Student

ಅದೇ ರೀತಿ ಇಂಗ್ಲಿಷ್ ವಿಭಾಗದಲ್ಲಿ ಮೊಹ್ಮದ್ ಫಾಜಿಲ್, ಗಣಿತ ವಿಭಾಗದಲ್ಲಿ ಅವೀಶ್ ಶೆಟ್ಟಿ ಅವರು ಅತೀ ಹೆಚ್ಚು ಅಂಕದೊಂದಿಗೆ ಚಿನ್ನದ ಪದಕವನ್ನು ಪಡೆದಿದ್ದಾರೆ. ಇನ್ನು ಪರೀಕ್ಷಾ ಸಂಯೋಜಕರಾಗಿ ಶಿಕ್ಷಕರಾದ ಕುಮುದಾ ಬನ್ನೂರ (ವಿಜ್ಞಾನ), ಪ್ರಸಾದ ಪೂಜಾರ (ಗಣಿತ) ಮತ್ತು ಶ್ವೇತಾ ಪಾಟೀಲ (ಇಂಗ್ಲಿಷ್) ಅವರು ವಿದ್ಯಾರ್ಥಿಗಳಿಗೆ ಮಾರ್ಗದರ್ಶನ ನೀಡುವ ಮೂಲಕ ವಿದ್ಯಾರ್ಥಿಗಳ ಸಾಧನೆಗೆ ಪ್ರಮುಖ ಪಾತ್ರವಹಿಸಿದ್ದಾರೆ.

ಚಾಮರಾಜನಗರ: KCET ಪರೀಕ್ಷೆಯಲ್ಲಿ ಮಾನಸ ಕಾಲೇಜಿನ ವಿದ್ಯಾರ್ಥಿಗಳ ಸಾಧನೆಚಾಮರಾಜನಗರ: KCET ಪರೀಕ್ಷೆಯಲ್ಲಿ ಮಾನಸ ಕಾಲೇಜಿನ ವಿದ್ಯಾರ್ಥಿಗಳ ಸಾಧನೆ

ಜೆಎಸ್ಎಸ್ ಶಾಲೆಯಿಂದ 1 ರಿಂದ 10ನೇ ತರಗತಿವರೆಗಿನ ಒಟ್ಟು ವಿಜ್ಞಾನ ವಿಭಾಗಕ್ಕೆ 132, ಗಣಿತ ವಿಭಾಗಕ್ಕೆ 122 ಮತ್ತು ಇಂಗ್ಲಿಷ್ ವಿಭಾಗಕ್ಕೆ 68 ಜನ ವಿದ್ಯಾರ್ಥಿಗಳು ಸೇರಿ ಒಟ್ಟು 322 ವಿದ್ಯಾರ್ಥಿಗಳು ಅಂತರಾಷ್ಟ್ರೀಯ ಒಲಂಪಿಯಾಡ್ ಪರೀಕ್ಷೆಗೆ ಹಾಜರಾಗಿದ್ದರು.
ಇವರಲ್ಲಿ ವಿಜ್ಞಾನದಲ್ಲಿ 35, ಗಣಿತದಲ್ಲಿ 22, ಇಂಗ್ಲಿಷ್ ವಿಷಯದಲ್ಲಿ 24 ವಿದ್ಯಾರ್ಥಿಗಳು ಬೆಳ್ಳಿ ಹಾಗೂ ಕಂಚಿನ ಪದಕ ಪಡೆದಿದ್ದಾರೆ.

ಅಂತಾರಾಷ್ಟ್ರೀಯ ಒಲಂಪಿಯಾಡ್ ಪರೀಕ್ಷೆಯಲ್ಲಿ ಚಿನ್ನ, ಬೆಳ್ಳಿ ಮತ್ತು ಕಂಚಿನ ಪದಕ ಗಳಿಸಿದ ವಿದ್ಯಾರ್ಥಿಗಳನ್ನು ಶಾಲೆಯ ಪ್ರಾಂಶುಪಾಲೆ ಲಿಲಿಯನ್ ಅಂಥೋನಿ ಶಾನ್.ಜಿ ಅವರು ಶಾಲೆಯ ಸಮಾರಂಭದಲ್ಲಿ ಅಭಿನಂದಿಸಿದರು. ಇದೇ ವೇಳೆ ವಿಜೇತ ವಿದ್ಯಾರ್ಥಿಗಳಿಗೆ ಪದಕ ಹಾಗೂ ಪ್ರಮಾಣಪತ್ರ ಪ್ರಧಾನ ಮಾಡಿದರು.

ಈ ಸಂದರ್ಭದಲ್ಲಿ ಶಾಲೆಯ ಬೋಧಕ ಬೋಧಕೇತರ ಸಿಬ್ಬಂದಿ ಮತ್ತು ವಿದ್ಯಾರ್ಥಿ, ವಿದ್ಯರ್ಥಿನೀಯರು ಉಪಸ್ಥಿತರಿದ್ದರು.

ವಿದೇಶಗಳಲ್ಲಿ ಯಕ್ಷಗಾನದ ಕಲರವ

ಇನ್ನು ಇತ್ತೀಚೆಗಷ್ಟೇ ಭಾರತದ ಅಭಿಜಾತ ಕಲಾಪ್ರಕಾರವಾಗಿ ಗುರುತಿಸಬೇಕಾದ ಯಕ್ಷಗಾನವು ಕರಾವಳಿಯ ಕಡಲಾಚೆಯೂ ತನ್ನ ಕಂಪನ್ನು ಪಸರಿಸಿದೆ. ಮಳೆಗಾಲದಲ್ಲಿ ರಾಜ್ಯದ ಇತರೆಡೆಗಳಲ್ಲಿ, ಮುಂಬೈ, ದೆಹಲಿಯಲ್ಲಿ ಕರಾವಳಿಯ ಯಕ್ಷಗಾನ ಸದ್ದು ಮಾಡುತ್ತಿದೆ. ಅದೇ ರೀತಿ ಯಕ್ಷಧ್ರುವ ಪಟ್ಲ ಫೌಂಡೇಶನ್‌ನಿಂದ ಯುರೋಪ್ ದೇಶದ ವಿವಿಧ ಭಾಗಗಳಲ್ಲಿ ಯಕ್ಷಗಾನ ಪ್ರದರ್ಶನ ನಡೆಯಲಿದೆ.

ಯಕ್ಷಧ್ರುವ ಪಟ್ಲ ಸತೀಶ್ ಶೆಟ್ಟಿ ಅವರ ನೇತೃತ್ವದ ತಂಡ ಒಂದು ವಾರ ಲಂಡನ್, ಮಿಡ್ಲ್ಯಾಂಡ್, ಎಡಿನ್ ಬರ್ಗ್, ಸ್ಕಾಟ್ ಲ್ಯಾಂಡ್‌ಗಳಲ್ಲಿ ಯಕ್ಷಗಾನ ಪ್ರದರ್ಶನ ಮಾಡಿದ್ದರು. ಕನ್ನಡಿಗರೊಂದಿಗೆ ಬ್ರಿಟೀಷ್ ಪ್ರಜೆಗಳು ಇಲ್ಲಿ ಯಕ್ಷಗಾನವನ್ನು ಆಸ್ವಾದಿಸಿದ್ದರು.

ಇನ್ನು ದುರಾಅಮ್‌ ಹಾಗೂ ಲೀಡ್ಸ್ ವಿಶ್ವವಿದ್ಯಾಲಯಗಳಲ್ಲಿ ಯಕ್ಷಗಾನದ ಶಿಬಿರ ನಡೆದಿತ್ತು. ಇಲ್ಲಿ ಬಣ್ಣಗಾರಿಕೆಯೊಂದಿಗೆ ಕುಣಿತ, ಅಭಿನಯಗಳೊಂದಿಗೆ ಪ್ರಾತ್ಯಕ್ಷಿಕೆ ನಡೆಯಿತು. ನಂತರ ಆಗಸ್ಟ್‌ನಲ್ಲಿ ಫ್ರಾನ್ಸ್, ಪ್ಯಾರಿಸ್, ಫ್ರಾಂಕ್ ಫರ್ಟ್, ಮನಿಚ್, ಜರ್ಮನಿ, ಬಿಲ್ಲಿಂಗಾಮ್‌ಗಳಲ್ಲಿ ಯಕ್ಷಗಾನ ಪ್ರದರ್ಶನ ನಡೆಯಲಿದೆ. ಈ ವೇಳೆ ಕಲಾವಿದರು ಶ್ರೀಕೃಷ್ಣ ಲೀಲೆ – ಕಂಸವಧೆ, ನರಕಾಸುರ ಮೋಕ್ಷ, ಸುದರ್ಶನ ವಿಜಯ ಪ್ರಸಂಗವನ್ನು ಪ್ರದರ್ಶಿಸಲಿದ್ದಾರೆ ಎನ್ನುವ ಮಾಹಿತಿ ಲಭ್ಯವಾಗಿತ್ತು.

ಮತ್ತೊಂದೆಡೆ ಪಣಂಬೂರು ವಾಸು ಐತಾಳ್ ಅವರ ನೇತೃತ್ವದಲ್ಲಿ ಯಕ್ಷಧ್ರುವ ಪಟ್ಲ ಫೌಂಡೇಶನ್ ಸ್ಥಾಪಕಾಧ್ಯಕ್ಷ ಭಾಗವತ ಪಟ್ಲ ಸತೀಶ್ ಶೆಟ್ಟಿಯವರೊಂದಿಗೆ ಪ್ರೊ.ಎಂ.ಎಲ್.ಸಾಮಗ, ಕಲಾವಿದರಾದ ಪದ್ಮನಾಭ ಉಪಾಧ್ಯಾಯ, ಚೈತನ್ಯಕೃಷ್ಣ ಪದ್ಯಾಣ, ಚಂದ್ರಶೇಖರ ಧರ್ಮಸ್ಥಳ, ಮಹೇಶ್ ಮಣಿಯಾಣಿ, ಪ್ರಶಾಂತ್ ಶೆಟ್ಟಿ ನೆಲ್ಯಾಡಿ, ಮೋಹನ್‌ ಬೆಳ್ಳಿಪಾಡಿಯವರು ಕಡಲಾಚೆ ಯಕ್ಷಗಾನದ ಕಲರವ ಮೂಡಿಸಲಿದ್ದಾರೆ ಎಂದು ತಿಳಿದುಬಂದಿತ್ತು.

ಈಗಾಗಲೇ ಯಕ್ಷಗಾನ ಬಯಲಾಟಗಳು ತಮ್ಮ ಪ್ರದರ್ಶನ ನಿಲ್ಲಿಸಿದ್ದು, ಮಳೆಗಾಲ ಮುಗಿದ ಬಳಿಕ ಮತ್ತೆ ಯಕ್ಷಗಾನ ಪ್ರದರ್ಶನ ಆರಂಭಗೊಳ್ಳಲಿದೆ. ಮುಂದಿನ ಎರಡು ತಿಂಗಳು ಅಲ್ಲಲ್ಲಿ ಕಲಾವಿದರ ತಂಡಗಳು ಆಹ್ವಾನಿತ ಪ್ರದರ್ಶನ ನೀಡಲಿದೆ ಎನ್ನುವ ಮಾಹಿತಿ ಲಭ್ಯವಾಗಿದೆ.

English summary

Rank in International Olympiad Examination: Gold Medal to Dharwad’s jss high school Student

Story first published: Friday, June 23, 2023, 20:16 [IST]

Source link