Bollywood
oi-Srinivasa A
ಜೂನ್
16ರ
ಶುಕ್ರವಾರ
ವಿಶ್ವದಾದ್ಯಂತ
ಬಿಡುಗಡೆಗೊಂಡ
ಆದಿಪುರುಷ್
ಚಿತ್ರ
ಮೊನ್ನೆ
(
ಜೂನ್
25
)
10
ದಿನಗಳ
ಪ್ರದರ್ಶನವನ್ನು
ಪೂರೈಸಿದೆ.
ಬಿಡುಗಡೆಗೂ
ಮುನ್ನವೇ
ಟೀಸರ್
ರಿಲೀಸ್
ಮಾಡಿ
ಅದರಲ್ಲಿನ
ಕಳಪೆ
ವಿಎಫ್ಎಕ್ಸ್
ಕಾರಣದಿಂದಾಗಿ
ಹೀನಾಯವಾಗಿ
ಟ್ರೋಲ್‌ಗೆ
ಒಳಗಾಗಿದ್ದ
ಆದಿಪುರುಷ್
ತೆರೆಗೆ
ಬಂದ
ನಂತರವೂ
ಸಹ
ಅದೇ
ರೀತಿಯ
ರಿಪೋರ್ಟ್
ಪಡೆದುಕೊಂಡಿದೆ.
ಹೌದು,
ಆದಿಪುರುಷ್
ಚಿತ್ರವನ್ನು
ವೀಕ್ಷಿಸಿದ
ಸಿನಿ
ರಸಿಕರ
ಪೈಕಿ
ಬಹುತೇಕರು
ಚಿತ್ರದ
ಬಗ್ಗೆ
ಕೆಟ್ಟ
ವಿಮರ್ಶೆಗಳನ್ನು
ನೀಡಿದ್ದಾರೆ.
ರೆಬೆಲ್
ಸ್ಟಾರ್
ಪ್ರಭಾಸ್
ನಾಯಕನಾಗಿ
ಹಾಗೂ
ಕೃತಿ
ಸೆನನ್
ನಾಯಕಿಯಾಗಿ
ನಟಿಸಿರುವ
ಈ
ಚಿತ್ರಕ್ಕೆ
ಓಂ
ರಾವತ್
ಆಕ್ಷನ್
ಕಟ್
ಹೇಳಿದ್ದಾರೆ.
ಮೂಲ
ಹಿಂದಿ
ಚಿತ್ರವಾಗಿರುವ
ಈ
ಚಿತ್ರ
ಪ್ರಭಾಸ್
ನಟನೆಯ
ಮೊದಲ
ಬಾಲಿವುಡ್
ಸಿನಿಮಾವಾಗಿದ್ದು,
ಕನ್ನಡ,
ತೆಲುಗು,
ತಮಿಳು
ಹಾಗೂ
ಮಲಯಾಳಂ
ಭಾಷೆಗಳಿಗೂ
ಸಹ
ಈ
ಚಿತ್ರ
ಡಬ್
ಆಗಿದ್ದು
ಪ್ಯಾನ್
ಇಂಡಿಯಾ
ಬಿಡುಗಡೆಯಾಗಿದೆ.
ಚಿತ್ರ
ವೀಕ್ಷಿಸಿ
ಹೊರಬಂದ
ಸಿನಿ
ರಸಿಕರು
ಪಾತ್ರಗಳ
ವಸ್ತ್ರ,
ವೇಷದ
ಕುರಿತು
ವ್ಯಂಗ್ಯವಾಡಿದರು
ಹಾಗೂ
ಹೀನಾಯವಾಗಿ
ಟ್ರೋಲ್
ಮಾಡಿದರು.
ಅಲ್ಲದೇ
ಚಿತ್ರದಲ್ಲಿ
ಆಕ್ಷೇಪಾರ್ಹ
ಸಂಭಾಷಣೆಗಳಿವೆ
ಎಂಬ
ಕಾರಣಕ್ಕೂ
ಸಹ
ಚಿತ್ರತಂಡ
ಹೀನಾಯವಾಗಿ
ಟೀಕೆಗೆ
ಒಳಗಾಯಿತು.
ಹೀಗೆ
ದೊಡ್ಡ
ಮಟ್ಟದಲ್ಲಿ
ಟೀಕೆಗೆ
ಒಳಗಾಗಿರುವ
ಆದಿಪುರುಷ್
ಕಲೆಕ್ಷನ್
ವಿಷಯದಲ್ಲಿಯೂ
ಸಹ
ಹಿನ್ನಡೆ
ಅನುಭವಿಸಿದೆ.
ಹೌದು,
ಮೊದಲ
ದಿನ
140
ಕೋಟಿ
ಗಳಿಸುವ
ಮೂಲಕ
ಸಮಾಧಾನಕರ
ಕಲೆಕ್ಷನ್
ಮಾಡಿದ
ಆದಿಪುರುಷ್
ಹತ್ತು
ದಿನಗಳಲ್ಲಿ
450
ಕೋಟಿ
ಗ್ರಾಸ್
ಕಲೆಕ್ಷನ್
ಅನ್ನು
ವಿಶ್ವ
ಬಾಕ್ಸ್
ಆಫೀಸ್‌ನಲ್ಲಿ
ಗಳಿಸಿದೆ.
ಬಜೆಟ್‌ಗೆ
ಹಾಗೂ
ಹೈಪ್‌ಗೆ
ಹೋಲಿಸಿದರೆ
ಈ
ಕಲೆಕ್ಷನ್
ಅಷ್ಟು
ದೊಡ್ಡ
ಮಟ್ಟದಲ್ಲಿ
ಇಲ್ಲದೇ
ಇದ್ದರೂ
ಸಮಾಧಾನಕರ
ಎನ್ನಬಹುದಾಗಿದೆ.
ಈ
ಮೂಲಕ
ಆದಿಪುರುಷ್
ಚಿತ್ರ
ಸಾಹೋ
ಚಿತ್ರದ
ಲೈಫ್‌ಟೈಮ್
ಕಲೆಕ್ಷನ್
ಅನ್ನು
ಹಿಂದಿಕ್ಕಿದೆ.
ಹಾಗಿದ್ದರೆ
ಸಾಹೋ
ಚಿತ್ರ
ಎಷ್ಟು
ಕಲೆಕ್ಷನ್
ಮಾಡಿತ್ತು
ಮತ್ತು
ಪ್ರಭಾಸ್
ನಟನೆಯ
ಕೊನೆಯ
5
ಚಿತ್ರಗಳು
ಎಷ್ಟು
ಗಳಿಕೆ
ಮಾಡಿದ್ದವು
ಎಂಬ
ಮಾಹಿತಿ
ಈ
ಕೆಳಕಂಡಂತಿದೆ..
*
ಬಾಹುಬಲಿ
ದ
ಬೆಗಿನಿಂಗ್
ಚಿತ್ರ
ಒಟ್ಟಾರೆ
600
ಕೋಟಿ
ಗ್ರಾಸ್
ಕಲೆಕ್ಷನ್
ಮಾಡಿತ್ತು.
*
ಬಾಹುಬಲಿ
ದ
ಕನ್ಲ್ಕೂಷನ್
ಚಿತ್ರ
ಒಟ್ಟಾರೆ
1850
ಕೋಟಿ
ಗಳಿಕೆ
ಮಾಡಿತ್ತು.
*
ಸಾಹೋ
ಚಿತ್ರ
ಒಟ್ಟಾರೆ
420
ಕೋಟಿ
ರೂಪಾಯಿ
ಗ್ರಾಸ್
ಕಲೆಕ್ಷನ್
ಮಾಡಿತ್ತು.
*
ರಾಧೆ
ಶ್ಯಾಮ್
ಚಿತ್ರ
200
ಕೋಟಿ
ರೂಪಾಯಿ
ಗ್ರಾಸ್
ಕಲೆಕ್ಷನ್
ಮಾಡಿತ್ತು.
*
ಆದಿಪುರುಷ್
ಹತ್ತು
ದಿನಗಳಲ್ಲಿ
450
ಕೋಟಿ
ರೂಪಾಯಿ
ಗ್ರಾಸ್
ಕಲೆಕ್ಷನ್
ಮಾಡಿದೆ.
500
ಕೋಟಿ
ಬಜೆಟ್‌ನಲ್ಲಿ
ತಯಾರಾಗಿರುವ
ಆದಿಪುರುಷ್
ಇನ್ನೂ
ಸಹ
ತನ್ನ
ಬಜೆಟ್‌ಗಿಂತ
ಹೆಚ್ಚು
ಗಳಿಸಲಾಗದೇ
ಒದ್ದಾಡುತ್ತಿದೆ.
ಹೀಗೆ
ಹಿನ್ನಡೆ
ಅನುಭವಿಸುತ್ತಿರುವ
ಆದಿಪುರುಷ್
ಚಿತ್ರತಂಡ
ಸಿನಿ
ರಸಿಕರನ್ನು
ತನ್ನತ್ತ
ಸೆಳೆಯಲು
ದುಬಾರಿಯಾಗಿದ್ದ
ಟಿಕೆಟ್
ದರವನ್ನು
ಇಳಿಸಿದ್ದು,
112
ರೂಪಾಯಿಗಳಿಗೆ
ಒಂದು
ಟಿಕೆಟ್
ಎಂದು
ಘೋಷಿಸಿದೆ.
ಜತೆಗೆ
ಈ
ಘೋಷಣೆಯ
ಪೋಸ್ಟರ್‌ನ
ಕೊನೆಯಲ್ಲಿ
‘ಎಡಿಟ್
ಮಾಡಲಾದ
ಹಾಗೂ
ಬದಲಾಯಿಸಿದ
ಸಂಭಾಷಣೆಗಳೊಂದಿಗೆ’
ಎಂದು
ಬರೆದುಕೊಂಡಿದೆ.
English summary
Adipurush surpasses Saaho lifetime collection in worldwide box office. Read on
Tuesday, June 27, 2023, 10:58
Story first published: Tuesday, June 27, 2023, 10:58 [IST]