Telugu
oi-Srinivasa A
ಎಲ್ಲಾ
ಕ್ಷೇತ್ರಗಳಲ್ಲಿಯೂ
ಈ
ಫ್ಯಾನ್
ವಾರ್
ಕಾಮನ್
ಆಗಿಬಿಟ್ಟಿದೆ.
ಸಿನಿಮಾ
ಕ್ಷೇತ್ರದಲ್ಲಿ
ಈ
ಫ್ಯಾನ್
ವಾರ್
ಅತಿರೇಕವೇ.
ಅದರಲ್ಲಿಯೂ
ಈ
ಸ್ಮಾರ್ಟ್‌ಫೋನ್
ಯುಗ
ಆರಂಭವಾದ
ಮೇಲಂತೂ
ಪೋಷಕರ
ಹಣದಿಂದ
ರಿಚಾರ್ಜ್
ಮಾಡಿಕೊಳ್ಳುವ
ಸ್ಕೂಲ್
ಹಾಗೂ
ಕಾಲೇಜಿನ
ಮಕ್ಕಳು
ಸಾಮಾಜಿಕ
ಜಾಲತಾಣದಲ್ಲಿ
ಚಿತ್ರ
ವಿಚಿತ್ರ
ಹೆಸರಿನಲ್ಲಿ
ನಕಲಿ
ಖಾತೆ
ತೆರೆದು
ಬೇರೆ
ನಟರ
ತೇಜೋವಧೆ
ಮಾಡಲು
ಸಜ್ಜಾಗಿಬಿಟ್ಟಿದ್ದಾರೆ.
ಹೀಗೆ
ತಮ್ಮನ್ನು
ತಾವು
ವಾರಿಯರ್ಸ್,
ವಾರ್
ಬಾಯ್ಸ್
ಎಂಬ
ಥೂ
ಎನಿಸುವ
ಹೆಸರುಗಳಿಂದ
ಕರೆದುಕೊಳ್ಳುವ
ಇವರಿಗೆ
ದಿನವಿಡೀ
ಸಾಮಾಜಿಕ
ಜಾಲತಾಣದಲ್ಲಿ
ದಿನನಿತ್ಯ
ಇದೇ
ಕೆಲಸ.
ಪ್ಯಾರಾಗ್ರಾಫ್
ಬೈಗುಳಗಳನ್ನು
ಟೈಪ್
ಮಾಡಿ
ತಮ್ಮ
ನಟನ
ತಪ್ಪನ್ನು
ಹೇಳಿದವರ
ವಿರುದ್ಧ
ಕಿಡಿ
ಕಾರುವುದೇ
ಗುರಿ.

ಇನ್ನು
ತೆಲುಗು
ಚಿತ್ರರಂಗದಲ್ಲಿ
ಈ
ಫ್ಯಾನ್
ವಾರ್
ತುಸು
ದೊಡ್ಡ
ಮಟ್ಟದಲ್ಲಿಯೇ
ಇದೆ.
ತೆಲುಗು
ನಟರ
ಅಭಿಮಾನಿಗಳ
ನಡುವಿನ
ಆನ್‌ಲೈನ್
ಕಿತ್ತಾಟ
ಆಫ್‌ಲೈನ್
ಹೊಡೆದಾಟದವರೆಗೂ
ಸಹ
ಬಂದಿತ್ತು.
ಅಭಿಮಾನಿಗಳ
ಕಿತ್ತಾಟದಲ್ಲಿ
ಸಾವು
ಸಂಭವಿಸಿದ
ಉದಾಹರಣೆಯೂ
ಸಹ
ಇದೆ.
ಇನ್ನು
ಯಾವುದೇ
ನಟನ
ಅಭಿಮಾನಿ
ಇಂತಹ
ಸಾವನ್ನು
ಅನುಭವಿಸಿದಾಗ
ಉಳಿದ
ಅಭಿಮಾನಿಗಳು
ಇನ್ನುಮುಂದೆ
ಫ್ಯಾನ್
ವಾರ್
ಸಹವಾಸವೇ
ಬೇಡ
ಎಂದು
ಕೆಲ
ದಿನಗಳ
ಕಾಲ
ಸೈಲೆಂಟ್
ಆಗಿಬಿಟ್ಟಿದ್ದಾರೆ.
ಇದೀಗ
ಮತ್ತೊಂದು
ಅಭಿಮಾನಿಯೋರ್ವನ
ಸಾವು
ತೆಲುಗು
ಸಿನಿ
ರಸಿಕರನ್ನು
ಕಾಡುತ್ತಿದೆ.
ಹೌದು,
ಶ್ಯಾಮ್
ಎನ್‌ಟಿಆರ್
ಎಂಬ
ಜೂನಿಯರ್
ಎನ್‌ಟಿಆರ್
ಅಭಿಮಾನಿಯ
ಸಾವು
ಎಲ್ಲರ
ನಿದ್ದೆಗೆಡಿಸಿದೆ.
ಶ್ಯಾಮ್
ಮೃತದೇಹ
ಆತನ
ಮನೆಯಲ್ಲಿ
ಆತ್ಮಹತ್ಯೆ
ಮಾಡಿಕೊಂಡ
ಸ್ಥಿತಿಯಲ್ಲಿ
ಪತ್ತೆಯಾಗಿತ್ತು.
ಮೊದಲಿಗೆ
ಸುದ್ದಿ
ತಿಳಿದ
ಎಲ್ಲರೂ
ಆತ್ಮಹತ್ಯೆ
ಎಂದು
ಶ್ರದ್ಧಾಂಜಲಿ
ಪೋಸ್ಟ್
ಹಾಕಿ
ಬೇಸರದಲ್ಲಿದ್ದರು.
ಆದರೆ
ಕೆಲ
ಸಮಯದ
ಬಳಿಕ
ಶ್ಯಾಮ್
ಮೃತದೇಹದ
ಫೋಟೊಗಳು
ಸಾಮಾಜಿಕ
ಜಾಲತಾಣದಲ್ಲಿ
ವೈರಲ್
ಆದ
ಬೆನ್ನಲ್ಲೇ
ಎಲ್ಲರದ್ದೂ
ಒಂದೇ
ಅನುಮಾನ.
ಇದು
ಆತ್ಮಹತ್ಯೆ
ಅಲ್ಲವೇ
ಅಲ್ಲ,
ಇದೊಂದು
ಮರ್ಡರ್
ಎಂದು
ಆರೋಪಿಸಲಾರಂಭಿಸಿದರು.
ಕೆಲ
ಜೂನಿಯರ್
ಎನ್‌ಟಿಆರ್
ಅಭಿಮಾನಿಗಳು
ಈ
ರೀತಿ
ಬರೆದುಕೊಂಡಿದ್ದಾರೆ.
ಶ್ಯಾಮ್‌ಗೆ
ಕುಟುಂಬದಲ್ಲಿ
ಯಾವುದೇ
ಸಮಸ್ಯೆ
ಇರಲಿಲ್ಲ,
ಆದರೂ
ಕಾರಣವಿಲ್ಲದೇ
ಆತ್ಮಹತ್ಯೆ
ಮಾಡಿಕೊಂಡ?
ನೇಣು
ಹಾಕಿಕೊಂಡವನ
ಕಾಲು
ನೆಲದ
ಮೇಲೆಯೇ
ಹೇಗಿದೆ?
ನೇಣು
ಹಾಕಿಕೊಂಡ್ರೆ
ಮೂಗಿನಿಂದ
ರಕ್ತ
ಸುರಿಯುತ್ತಾ?
ಕೈ
ಕಟ್
ಆಗಿ
ರಕ್ತ
ಸುರಿದಿದ್ದು,
ಕೈ
ಕತ್ತರಿಸಿಕೊಂಡ
ಬಳಿಕ
ನೇಣು
ಹಾಕಿಕೊಳ್ಳುವ
ಶಕ್ತಿ
ಇರುತ್ತಾ?
ಎಂದೂ
ಸಹ
ಮಾದಕ
ವಸ್ತುಗಳನ್ನು
ಸೇವಿಸದ
ಶ್ಯಾಮ್
ಜೇಬಿನಲ್ಲಿ
ಆ
ವಸ್ತುಗಳು
ಯಾಕಿದ್ದವು?
ಸಾಯುವಾಗ
ಅದನ್ನು
ತನ್ನ
ಜೇಬಿನಲ್ಲಿ
ಇಟ್ಟುಕೊಂಡರೆ
ತನ್ನ
ಬಗ್ಗೆ
ಕೆಟ್ಟದಾಗಿ
ಮಾತನಾಡಿಕೊಳ್ತಾರೆ
ಎಂಬ
ಯೋಚನೆ
ಓದು
ಕಲಿತಿದ್ದ
ಶ್ಯಾಮ್‌ಗೆ
ಇರಲಿಲ್ವಾ?
ಮಾದಕ
ವಸ್ತುವನ್ನು
ಸೇವಿಸಿದ್ರೂ
ಅದು
ಹೇಗೆ
ಆ
ಮತ್ತಿನಲ್ಲಿ
ನೇಣು
ಹಾಕಿಕೊಳ್ಳಲು
ಸಾಧ್ಯ?
ಎಂದು
ಅನುಮಾನ
ವ್ಯಕ್ತಪಡಿಸಿದ್ದಾರೆ.
ಶ್ಯಾಮ್
ಮೃತದೇಹದಲ್ಲಿ
ಕಂಡು
ಬಂದ
ಇಷ್ಟು
ಅನುಮಾನಾಸ್ಪದ
ವಿಷಯಗಳನ್ನು
ಉಲ್ಲೇಖಿಸಿರುವ
ಎನ್‌ಟಿಆರ್
ಫ್ಯಾನ್ಸ್
ಶ್ಯಾಮ್
ಸಾವಿಗೆ
ನ್ಯಾಯ
ಒದಗಿಸಬೇಕೆಂದು
ಆಗ್ರಹಿಸಿದ್ದಾರೆ.
ಇನ್ನು
ಕೆಲ
ಎನ್‌ಟಿಆರ್
ಫ್ಯಾನ್ಸ್
ಕೆಲ
ದಿನಗಳ
ಹಿಂದಷ್ಟೇ
ಶ್ಯಾಮ್
ಸಾಮಾಜಿಕ
ಜಾಲತಾಣದಲ್ಲಿ
ಪವನ್
ಕಲ್ಯಾಣ್‌ಗಿಂತ
ಎನ್‌ಟಿಆರ್
ದೊಡ್ಡ
ನಟ
ಎಂದು
ಕಾಮೆಂಟ್
ಮಾಡಿದ್ದ.
ಅದರಿಂದಲೇ
ಇಷ್ಟೆಲ್ಲಾ
ಆಗಿರಬಹುದು,
ಆ
ಜಗಳ
ಕೊಲೆಯಲ್ಲಿ
ಕೊನೆಗೊಂಡಿರಬಹುದು
ಎಂದು
ಪವನ್
ಕಲ್ಯಾಣ್
ಅಭಿಮಾನಿಗಳ
ಕಡೆ
ಬೆರಳು
ಮಾಡಿದ್ದಾರೆ.
ಇನ್ನು
ಶ್ಯಾಮ್
ಕುಟುಂಬಸ್ಥರ
ಬಳಿ
ಮರಣೋತ್ತರ
ಪರೀಕ್ಷೆಗೆ
ಪೊಲೀಸರು
ಬಲವಂತವಾಗಿ
ಸಹಿ
ಹಾಕಿಸಿಕೊಂಡಿದ್ದಾರೆ
ಎಂಬ
ಆರೋಪಗಳೂ
ಸಹ
ಕೇಳಿ
ಬರುತ್ತಿದ್ದು,
ಇದರ
ಹಿಂದೆ
ದೊಡ್ಡ
ವ್ಯಕ್ತಿಗಳ
ಕೈವಾಡವೂ
ಸಹ
ಇದೆ
ಎಂಬ
ಕಾಮೆಂಟ್‌ಗಳೂ
ಸಹ
ಹರಿದಾಡುತ್ತಿವೆ.
ಸದ್ಯ
ಶ್ಯಾಮ್
ಸಾವು
ಟಾಲಿವುಡ್‌ನಲ್ಲಿ
ಭಾರೀ
ಚರ್ಚೆಗೆ
ಎಡೆ
ಮಾಡಿಕೊಟ್ಟಿದೆ.
English summary
Jr NTR fan Shyam death creating huge doubts among NTR fans. Read on.
Tuesday, June 27, 2023, 7:34
Story first published: Tuesday, June 27, 2023, 7:34 [IST]