ಶಕ್ತಿ ಯೋಜನೆ: ಉಚಿತ ಬಸ್ ಸೇವೆ ಬಗ್ಗೆ ಇಲ್ಲಿದೆ ಪ್ರಮುಖ ಮಾಹಿತಿ! | Shakti scheme running successfully from 3 weeks

Karnataka

oi-Malathesha M

|

Google Oneindia Kannada News

ಬೆಂಗಳೂರು: ಕರ್ನಾಟಕ ಸರ್ಕಾರ ಘೋಷಣೆ ಮಾಡಿರುವ ‘ಶಕ್ತಿ ಯೋಜನೆ’ ಇಡೀ ದೇಶದ ಗಮನ ಸೆಳೆದಿದೆ. ಅದರಲ್ಲೂ ದೇಶದ ಕೆಲ ರಾಜ್ಯಗಳು ಕೂಡ ಈ ಯೋಜನೆ ಅಳವಡಿಕೆಗೆ ಯೋಜಿಸುತ್ತಿವೆ. ಇದೇ ಹೊತ್ತಲ್ಲಿ ಕಳೆದ 20 ದಿನದಲ್ಲಿ ಶಕ್ತಿ ಯೋಜನೆಗಾಗಿ ಸಿದ್ದರಾಮಯ್ಯ ಸರ್ಕಾರ ಖರ್ಚು ಮಾಡಿದ್ದು ಎಷ್ಟು ಹಣ ಗೊತ್ತಾ? ಹಾಗೇ ಉಚಿತವಾಗಿ ಬಸ್ ಪ್ರಯಾಣ ಮಾಡಿದ್ದು ಎಷ್ಟು ಮಹಿಳೆಯರು ಗೊತ್ತಾ? ಸಂಪೂರ್ಣ ಮಾಹಿತಿ ಇಲ್ಲಿದೆ.

ಅಂದಹಾಗೆ ಕರ್ನಾಟಕದಲ್ಲಿ 20 ದಿನದ ಹಿಂದೆ ಜಾರಿಯಾದ ಶಕ್ತಿ ಯೋಜನೆ ಯಶಸ್ವಿಯಾಗಿ ಮುನ್ನುಗ್ಗುತ್ತಿದೆ. ಅದರಲ್ಲೂ ದುಡಿವ ವರ್ಗ ಯೋಜನೆ ಸದುಪಯೋಗ ಮಾಡಿಕೊಳ್ಳುತ್ತಿದೆ. ಹಾಗೆ ಪ್ರತಿನಿತ್ಯ ಸಂಬಳದ ಬಹುಪಾಲು ಬಸ್‌ಗೆ ಖರ್ಚು ಮಾಡ್ಕೊಂಡು ಕೆಲಸಕ್ಕೆ ಹೋಗುತ್ತಿದ್ದ ಮಹಿಳೆಯರಿಗೆ ಬಲ ಸಿಕ್ಕಿದೆ. ಈ ಮಧ್ಯೆ ನೋಡ ನೋಡುತ್ತಲೇ ಈ ಯೋಜನೆ 20 ದಿನವನ್ನ ಪೂರೈಸಿದೆ. ಕರ್ನಾಟಕ ವಿಧಾನಸಭೆ ಚುನಾವಣೆಗೆ ಮೊದಲು ಕಾಂಗ್ರೆಸ್ ಕೊಟ್ಟಿದ್ದ 5 ಗ್ಯಾರಂಟಿ ಪೈಕಿ ಉಚಿತ ಬಸ್ ಪ್ರಯಾಣವೂ ಒಂದು. ಇದೀಗ ಯೋಜನೆ ಯಶಸ್ಸಿನಿಂದ ರಾಜ್ಯದ ಸಾರಿಗೆ ಸಂಸ್ಥೆಗಳು ಕೂಡ ಚೇತರಿಕೆ ಕಾಣುತ್ತಿವೆ. ಅದರ ಸಂಪೂರ್ಣ ಅಂಕಿಅಂಶ ಇಲ್ಲಿದೆ.

Shakti scheme running successfully from 3 weeks

‘ಶಕ್ತಿ ಯೋಜನೆ’ ಗ್ರ್ಯಾಂಡ್ ಸಕ್ಸಸ್!

ಈಗಾಗಲೇ ಉಚಿತ ಬಸ್ ಯೋಜನೆ ಅಂದರೆ ಶಕ್ತಿ ಯೋಜನೆ ಜಾರಿಯಾಗಿ 3 ವಾರಗಳೇ ಕಳೆದಿವೆ. ಆದರೂ ಯೋಜನೆ ಸದ್ದು ದಿನದಿಂದ ದಿನಕ್ಕೆ ಜೋರಾಗುತ್ತಿದೆ. ಅದರಲ್ಲೂ ದುಡಿವ ವರ್ಗದ ಮಹಿಳೆಯರಿಗೆ ಸಾಕಷ್ಟು ಸಹಾಯ ಆಗಿದೆ. ಇನ್ನು ದಿನದಿಂದ ದಿನಕ್ಕೆ ಮಹಿಳಾ ಪ್ರಯಾಣಿಕರ ಸಂಖ್ಯೆ ಕೂಡ ಹೆಚ್ಚಾಗುತ್ತಿದೆ. ಹೀಗಾಗಿ ಕಳೆದ 2 ವಾರದಲ್ಲಿ ಅಂದರೆ 11.06.2023ರಿಂದ 29.06.2023ರ ತನಕ ಸರ್ಕಾರ ಉಚಿತ ಬಸ್ ಪ್ರಯಾಣಕ್ಕೆ ಖರ್ಚು ಮಾಡಿದ್ದು ಬರೋಬ್ಬರಿ 200 ಕೋಟಿಗೂ ಹೆಚ್ಚು. ಹಾಗಾದರೆ ಉಚಿತವಾಗಿ ಪ್ರಯಾಣ ಮಾಡಿದ ಮಹಿಳೆಯರು ಎಷ್ಟು? ಮುಂದೆ ಓದಿ.

Vande Bharat; ಹುಬ್ಬಳ್ಳಿ-ಬೆಳಗಾವಿ ಸಂಪರ್ಕಿಸಲು ಬಸ್, ವೇಳಾಪಟ್ಟಿ Vande Bharat; ಹುಬ್ಬಳ್ಳಿ-ಬೆಳಗಾವಿ ಸಂಪರ್ಕಿಸಲು ಬಸ್, ವೇಳಾಪಟ್ಟಿ

3 ವಾರದಲ್ಲಿ 234 ಕೋಟಿ ರೂಪಾಯಿ ಖರ್ಚು!

11.06.2023ರಿಂದ 29.06.2023ರ ತನಕ ಕರ್ನಾಟಕದ 4 ನಿಗಮಗಳ ಬಸ್‌ಗಳಲ್ಲಿ ಒಟ್ಟಾರೆ 9 ಕೋಟಿ 95 ಲಕ್ಷ ಮಹಿಳೆಯರು ಉಚಿತವಾಗಿ ಪ್ರಯಾಣ ಮಾಡಿದ್ದಾರೆ. ಇದಕ್ಕೆ ರಾಜ್ಯ ಸರ್ಕಾರ ಒಟ್ಟಾರೆ 234 ಕೋಟಿ 49 ಲಕ್ಷ ರೂ. ಖರ್ಚು ಮಾಡಿದೆ. ಈ ಮೂಲಕ ಸರ್ಕಾರಿ ಸಾರಿಗೆಗೆ ಜನ ಬರ್ತಿಲ್ಲ ಅನ್ನೋ ಕೊರಗು ದೂರವಾಗುತ್ತಿದೆ. ಹಾಗೇ ಸಾರಿಗೆ ಸಂಸ್ಥೆಗಳಿಗೂ ಹೊಸ ಉತ್ತೇಜನ ಸಿಕ್ಕಂತಾಗಿದೆ. ಸಾಕಷ್ಟು ನಷ್ಟದ ಹಾದಿಯಲ್ಲಿ ಸಾಗುತ್ತಿದ್ದ ರಾಜ್ಯ ಸರ್ಕಾರಿ ಸಾರಿಗೆಗೆ ಹೊಸ ಹುಮ್ಮಸ್ಸು ಬಂದಿದೆ ಎಂಬ ಮಾತುಗಳು ಕೇಳಿಬಂದಿವೆ. ಉಚಿತವಾಗಿ ಮಹಿಳೆಯರು ಪ್ರಯಾಣ ಮಾಡಿದರೂ ರಾಜ್ಯ ಸರ್ಕಾರವೇ ಅದರ ಟಿಕೆಟ್‌ನ ವೆಚ್ಚ ಭರಿಸಲಿದೆ. ಹಾಗೇ ಸಾರಿಗೆ ಇಲಾಖೆ ಬಾಕಿ ಉಳಿಸಿಕೊಂಡಿದ್ದ ಉದ್ಯೋಗ ಭರ್ತಿಗೂ ಮುಂದಾಗಿದೆ.

Shakti scheme running successfully from 3 weeks

ಒಟ್ನಲ್ಲಿ ರಾಜ್ಯದಲ್ಲಿ ಉಚಿತ ಬಸ್ ಪ್ರಯಾಣದ ಬಗ್ಗೆ ಎಷ್ಟೆಲ್ಲಾ ಚರ್ಚೆ ನಡೆದರೂ, ಈ ಬಗ್ಗೆ ಟ್ರೋಲ್ ಮಾಡಿದರೂ ಶಕ್ತಿ ಯೋಜನೆ ಮಾತ್ರ ಮುನ್ನುಗ್ಗುತ್ತಿದೆ. ಅದರಲ್ಲೂ ಸಾರಿಗೆ ಇಲಾಖೆ ತೀವ್ರ ನಷ್ಟದಲ್ಲಿ ನರಳುವ ಸಂದರ್ಭದಲ್ಲೇ ಶಕ್ತಿ ಯೋಜನೆ ಮೂಲಕ ಟಾನಿಕ್ ಕೊಟ್ಟಂತಾಗಿದೆ. ಜೊತೆಗೆ ರಾಜ್ಯದಲ್ಲಿ ದುಡಿಯುವ ವರ್ಗದ ಮಹಿಳೆಯರಿಗೆ ಇದರಿಂದಾಗಿ ಬೆಂಬಲವೂ ಸಿಕ್ಕಂತಾಗಿದೆ. ಇನ್ನೂ ಹೆಚ್ಚಾಗಿ ಹಲವು ವರ್ಷದಿಂದ ಬಾಕಿ ಇದ್ದ ಉದ್ಯೋಗ ಭರ್ತಿಗೂ ಸಾರಿಗೆ ಇಲಾಖೆ ಮುಂದಾಗಿರುವುದು, ರಾಜ್ಯದಲ್ಲಿ ಸಾವಿರಾರು ಉದ್ಯೋಗ ಆಕಾಂಕ್ಷಿಗಳಿಗೆ ಹೊಸ ಭರವಸೆ ನೀಡಿದಂತಾಗಿದೆ.

English summary

Shakti scheme running successfully from 3 weeks.

Story first published: Friday, June 30, 2023, 22:25 [IST]

Source link