ಯುದ್ಧ ಬೇಡ.. ಶಾಂತಿ ಬೇಕು.. ಜಗತ್ತಿಗೆ ಪ್ರಧಾನಿ ಮೋದಿ ಶಾಂತಿಯ ಸಂದೇಶ! | PM Modi answer to Russia and Ukraine deadly battle

International

oi-Malathesha M

|

Google Oneindia Kannada News

ವಾಷಿಂಗ್ಟನ್: ಭಾರತ ಜಗತ್ತಿಗೆ ಎಂದೆಂದಿಗೂ ಮಾದರಿ, ಅದರಲ್ಲೂ ಶಾಂತಿಯ ವಿಚಾರ ಬಂದಾಗ ಭಾರತ ಅತ್ಯಗತ್ಯ. ಹೀಗೆ ರಷ್ಯಾ & ಉಕ್ರೇನ್ ಮಧ್ಯೆ ಭೀಕರ ಯುದ್ಧ ನಡೆಯುವ ಸಂದರ್ಭದಲ್ಲಿ ಪ್ರಧಾನಿ ಮೋದಿ ಮತ್ತೊಮ್ಮೆ ಶಾಂತಿ ಸಂದೇಶ ಸಾರಿದ್ದಾರೆ. ಅದೂ ದೊಡ್ಡಣ್ಣ ಅಮೆರಿಕದ ನೆಲದಲ್ಲಿ ನಿಂತು. ಈ ಮೂಲಕ ಭಾರತ ಮತ್ತೊಮ್ಮೆ ಜಗತ್ತಿಗೆ ಶಾಂತಿಯ ಸಂದೇಶ ಕಳುಹಿಸಿದೆ.

ರಷ್ಯಾ ಹಾಗೂ ಉಕ್ರೇನ್ ಯುದ್ಧದಲ್ಲಿ ಅಮೆರಿಕ ಈಗ ಭಾರತದ ಸಹಾಯ ಬಯಸುತ್ತಿದೆ. ಹೀಗಾಗಿ ಭಾರತವನ್ನ ನ್ಯಾಟೋ ಒಕ್ಕೂಟಕ್ಕೂ ಸೇರಿಸುವ ಬಗ್ಗೆ ಚಿಂತನೆ ನಡೆದಿದೆ ಅನ್ನೋ ಆರೋಪವಿದೆ. ಆದರೆ ರಷ್ಯಾ ಜೊತೆಗಿನ ಸ್ನೇಹ & ಸಂಬಂಧಕ್ಕೆ ಪೆಟ್ಟು ಕೊಡಲು ಭಾರತ ಸಿದ್ಧವಿಲ್ಲ. ಈ ಕಾರಣಕ್ಕೆ ಭಾರತದ ಪ್ರಧಾನಿ, ರಷ್ಯಾ & ಉಕ್ರೇನ್ ಜಗಳದಲ್ಲಿ ಜಾಣ ನಡೆ ಅನುಸರಿಸಿದ್ದಾರೆ. ಈ ಹಿಂದೆ ಕೂಡ ಪ್ರಧಾನಿ ಮೋದಿ ಶಾಂತಿಯ ಸಂದೇಶ ಸಾರಿ ಯುದ್ಧ ಬೇಡ ಎಂದಿದ್ದರು. ಈಗ ಅಮೆರಿಕದಲ್ಲಿ ನಿಂತು ಪ್ರಧಾನಿ ಮೋದಿ ಏನ್ ಹೇಳಿದ್ದಾರೆ ಗೊತ್ತಾ? ಸಂಪೂರ್ಣ ಮಾಹಿತಿ ತಿಳಿಯೋಣ ಬನ್ನಿ.

PM Modi answer to Russia and Ukraine deadly battle

ಅಂದು, ಇಂದು.. ಎಂದೆಂದಿಗೂ ಒಂದೇ!

ಅಮೆರಿಕನ್ ಕಾಂಗ್ರೆಸ್ ಜಂಟಿ ಅಧಿವೇಶನ ಉದ್ದೇಶಿಸಿ ಮಾತನಾಡಿದ ಪ್ರಧಾನಿ ಮೋದಿ, ಈ ವೇಳೆ ರಷ್ಯಾ & ಉಕ್ರೇನ್ ಯುದ್ಧದ ವಿಚಾರದಲ್ಲಿ ಭಾರತ ನಿಲುವನ್ನ ಮತ್ತೊಮ್ಮೆ ಜಗತ್ತಿಗೆ ಸ್ಪಷ್ಟವಾಗಿ ಹೇಳಿದ್ದಾರೆ. ಕೆಲವು ವರ್ಷದಿಂದ ಭೀಕರ ಘಟನೆಗಳಿಗೆ ಜಗತ್ತು ಸಾಕ್ಷಿಯಾಗಿದೆ. ಅದರಲ್ಲೂ ಉಕ್ರೇನ್ & ರಷ್ಯಾ ಸಂಘರ್ಷದ ಮೂಲಕ ಯುರೋಪ್‌ಗೆ ಯುದ್ಧ ಮರಳಿದೆ. ಹಾಗೇ ಯುದ್ಧ ಆ ಭಾಗದಲ್ಲಿ ಸಾಕಷ್ಟು ಆಳವಾದ ಪರಿಣಾಮ ಉಂಟುಮಾಡಿದೆ. ಜೊತೆಗೆ ಬಲಿಷ್ಠ ರಾಷ್ಟ್ರಗಳು ಯುದ್ಧದಲ್ಲಿ ಭಾಗಿಯಾಗಿರುವುದು ಸಾಕಷ್ಟು ನೋವಿಗೆ ಕಾರಣವಾಗಿದೆ ಎಂದರು. ಅಲ್ಲದೆ ನಾನು ಈ ಹಿಂದೆ ಹೇಳಿದಂತೆ ಇದು ಯುದ್ಧದ ಯುಗವಲ್ಲ. ಸಂಭಾಷಣೆ ಮತ್ತು ರಾಜತಾಂತ್ರಿಕತೆಯ ಯುಗ ಎಂಬುದನ್ನ ಮತ್ತೆ ಸಾರಿ ಸಾರಿ ಹೇಳಿದ್ದಾರೆ.

ಕಾಂಗ್ರೆಸ್ ಬಗ್ಗೆ ಪ್ರಧಾನಿ ಮೋದಿ ಹೆಮ್ಮೆಯ ಮಾತು: ಮೋದಿ ಮಾತಿಗೆ ಎಲ್ಲರೂ ಫಿದಾ! ಕಾಂಗ್ರೆಸ್ ಬಗ್ಗೆ ಪ್ರಧಾನಿ ಮೋದಿ ಹೆಮ್ಮೆಯ ಮಾತು: ಮೋದಿ ಮಾತಿಗೆ ಎಲ್ಲರೂ ಫಿದಾ!

ಅಮೆರಿಕನ್ ಕಾಂಗ್ರೆಸ್ ಉದ್ದೇಶಿಸಿ ಭಾಷಣ

ಆಲೋಚನೆ ಮತ್ತು ಸಿದ್ಧಾಂತದ ಚರ್ಚೆ ಅರ್ಥಮಾಡಿಕೊಳ್ಳಬಲ್ಲೆ. ನೀವು ಒಟ್ಟಿಗೆ ಸೇರಿದನ್ನು ನೋಡಲು ನನಗೆ ಸಂತೋಷವಾಗಿದೆ, ವಿಶ್ವದ 2 ಬಲಿಷ್ಠ ಪ್ರಜಾಪ್ರಭುತ್ವ ರಾಷ್ಟ್ರಗಳಾದ ಭಾರತ ಮತ್ತು ಅಮೆರಿಕ ನಡುವಿನ ಬಾಂಧವ್ಯವನ್ನ ಆಚರಿಸಲು ನಾವೆಲ್ಲರೂ ಇಂದು ಇಲ್ಲಿ ಸೇರಿದ್ದೇವೆ. ನಮ್ಮ ಮನೆಯ ಒಳಗೆ ವೈಚಾರಿಕವಾದ ಭಿನ್ನಾಭಿಪ್ರಾಯ, ಸ್ಪರ್ಧೆ ಏನೇ ಇರಬಹುದು. ಆದರೆ ರಾಷ್ಟ್ರದ ವಿಚಾರ ಬಂದಾಗ ನಾವು ಒಟ್ಟಾಗಿ ಇರಬೇಕು ಎಂದಿದ್ದಾರೆ ಪಿಎಂ ಮೋದಿ. ಇನ್ನು ಪ್ರಧಾನಿ ಮೋದಿ ಅವರ ಭಾಷಣಕ್ಕೆ ಅಮೆರಿಕನ್ ಕಾಂಗ್ರೆಸ್ ಸದಸ್ಯರು ಚಪ್ಫಾಳೆ ತಟ್ಟಿ ಸ್ವಾಗತಿಸಿದರು.

ಇತಿಹಾಸ ನಿರ್ಮಿಸಿದ ಪ್ರಧಾನಿ ಮೋದಿ!

ಪ್ರಧಾನಿ ಮೋದಿ ಈಗ 2ನೇ ಬಾರಿಗೆ ಅಮೆರಿಕನ್ ಕಾಂಗ್ರೆಸ್ ಜಂಟಿ ಅಧಿವೇಶನ ಉದ್ದೇಶಿಸಿ ಮಾತನಾಡಿದ್ದಾರೆ. ಈ ಹಿಂದೆ ಟ್ರಂಪ್ ಅಮೆರಿಕದ ಅಧ್ಯಕ್ಷರಾಗಿದ್ದ ಸಂದರ್ಭದಲ್ಲಿ ಕೂಡ ಪ್ರಧಾನಿ ಮೋದಿ ಅಮೆರಿಕಗೆ ಭೇಟಿ ನೀಡಿ, ಅಮೆರಿಕನ್ ಕಾಂಗ್ರೆಸ್ ಜಂಟಿ ಅಧಿವೇಶನವನ್ನ ಉದ್ದೇಶಿಸಿ ಮಾತನಾಡಿದ್ದರು. ಈ ಮೂಲಕ 2 ಬಾರಿ ಅಮೆರಿಕನ್ ಕಾಂಗ್ರೆಸ್ ಅಧಿವೇಶನ ಉದ್ದೇಶಿಸಿ ಮಾತನಾಡಿದ ಮೊದಲ ಭಾರತದ ಪ್ರಧಾನಿ ಎಂಬ ಹೆಗ್ಗಳಿಕೆಯನ್ನ ಪಡೆದಿದ್ದಾರೆ ಮೋದಿ. ಹೀಗೆ ಭಾರತದ ಪ್ರಧಾನಿ ಅಮೆರಿಕದಲ್ಲಿ ಭಾರತದ ಪವರ್ ತೋರಿಸುತ್ತಿದ್ದಾರೆ ಎಂಬುದು ಮೋದಿ ಅವರ ಅಭಿಮಾನಿಗಳ ಮಾತು.

PM Modi answer to Russia and Ukraine deadly battle

ಒಟ್ನಲ್ಲಿ ಪ್ರಧಾನಿ ಮೋದಿ ಮತ್ತೊಮ್ಮೆ ಭಾರತದ ಶಾಂತಿಯ ಪರವಾದ ನಿಲುವನ್ನು ಇಡೀ ಜಗತ್ತಿಗೆ ತಿಳಿಸಿದ್ದಾರೆ. ಈ ಮೂಲಕ ಭಾರತವನ್ನ ಮಾದರಿ ಮಾಡಿಕೊಳ್ಳಲು ಜಗತ್ತು ಕೂಡ ಮುಂದಾಗುತ್ತಿದೆ. ಅದರಲ್ಲೂ ರಷ್ಯಾ ಮತ್ತು ಉಕ್ರೇನ್ ಯುದ್ಧದಲ್ಲಿ ಭಾರತದ ನಿಲುವಿಗೆ ಸಾಕಷ್ಟು ಪ್ರಶಂಸೆ ಕೂಡ ವ್ಯಕ್ತವಾಗುತ್ತಿದೆ. ಏಕೆಂದರೆ ಜಗತ್ತು ಈಗಾಗಲೇ 2 ಭಾಗವಾಗಿದೆ. ಒಂದು ಬಣ ಉಕ್ರೇನ್ ಪರವಾಗಿ ನಿಂತರೆ, ಇನ್ನೊಂದು ಬಣ ರಷ್ಯಾ ಪರ ನಿಂತುಬಿಟ್ಟಿದೆ. ಈ ಹೊತ್ತಲ್ಲಿ ಭಾರತ ಯಾವ ಬಣಕ್ಕೂ ಸೇರಿಕೊಳ್ಳದೆ, ಎಲ್ಲಾ ದೇಶಗಳ ಜೊತೆ ಉತ್ತಮ ಬಾಂಧವ್ಯ ಉಳಿಸಿಕೊಂಡಿದೆ. ಹಾಗೇ ಶಾಂತಿಯ ಸಂದೇಶವನ್ನೂ ಸಾರುತ್ತಿದೆ.

English summary

PM Modi answer to Russia and Ukraine deadly battle.

Story first published: Friday, June 23, 2023, 18:14 [IST]

Source link