ಬೆಂಗಳೂರು ಬಂದ್ ವಾಪಾಸ್ ಬೆನ್ನಲ್ಲೆ ಸಾರಿಗೆ ಸೋಮವಾರ (ಜುಲೈ 31) ಇಲಾಖೆ ಮಹತ್ವದ ಸಭೆ | Karnataka Transport Department Will Held Meeting on July 31st After Withdrawal Bengaluru Bandh

Bengaluru

oi-Shankrappa Parangi

|

Google Oneindia Kannada News

ಬೆಂಗಳೂರು, ಜುಲೈ 30: ರಾಜ್ಯ ಸರ್ಕಾರ ಜಾರಿಗೆ ತಂದಿರುವ ಶಕ್ತಿ ಯೋಜನೆಯಿಂದ (Shakti Scheme) ಆರ್ಥಿಕ ಸಂಕಷ್ಟ ಎದುರಿಸುತ್ತಿರುವ ಖಾಸಗಿ ಬಸ್, ಆಟೋ, ಟ್ಯಾಕ್ಸಿ ಚಾಲಕ ಸಂಘಟನೆಗಳು ಬೆಂಗಳೂರು ಬಂದ್ ವಾಪಸ್ ಪಡೆದವು. ಇದರ ಬೆನ್ನಲ್ಲೆ ಎಚ್ಚೆತ್ತಿರುವ ರಾಜ್ಯ ಸಾರಿಗೆ ಇಲಾಖೆಯು ನಾಳೆ ಸೋಮವಾರ ಬೆಳಗ್ಗೆ ಮಹತ್ವದ ಸಭೆ ನಡೆಸಲಿದೆ.

ಖಾಸಗಿ ಸಾರಿಗೆ ಸಂಸ್ಥೆಗಳು ಮುಷ್ಕರ ಎಚ್ಚರಿಕೆ ನೀಡಿದ ಬೆನ್ನಲ್ಲೆ ಸೋಮವಾರ ಬೆಳಗ್ಗೆ 11 ಗಂಟೆಗೆ ಸಾರಿಗೆ ಸಚಿವ ರಾಮಲಿಂಗಾ ರೆಡ್ಡಿ ನೇತೃತ್ವದಲ್ಲಿ 2ನೇ ಸುತ್ತಿನ ಸಭೆ ನಡೆಯಲಿದೆ. ಈ ವೇಳೆ ಶಕ್ತಿ ಯೋಜನೆಯಿಂದ ಕಂಗೆಟ್ಟಿರುವ ಖಾಸಗಿ ಸಾರಿಗೆ ಸಂಘಟನೆಗಳ ಮುಖ್ಯಸ್ಥರ ಜೊತೆಗೆ ಅವರು ಬೇಡಿಕೆ ಈಡೇರಿಕೆ ಬಗ್ಗೆ ಚರ್ಚಿಸಲಿದ್ದಾರೆ. ಈ ವೇಳೆ ಸರ್ಕಾರಿ ಅಧಿಕಾರಿಗಳು ಉಪಸ್ಥಿತರಿರಲಿದ್ದಾರೆ ಎನ್ನಲಾಗಿದೆ.

Karnataka Transport Department Will Held Meeting on July 31st After Withdrawal Bengaluru Bandh

Bengaluru Bandh: ಜುಲೈ 27ರಂದು ಆಟೋ, ಟ್ಯಾಕ್ಸಿ, ಖಾಸಗಿ ಬಸ್ ಚಾಲಕರಿಂದ ಬೆಂಗಳೂರು ಬಂದ್, ಪ್ರತಿಭಟನೆBengaluru Bandh: ಜುಲೈ 27ರಂದು ಆಟೋ, ಟ್ಯಾಕ್ಸಿ, ಖಾಸಗಿ ಬಸ್ ಚಾಲಕರಿಂದ ಬೆಂಗಳೂರು ಬಂದ್, ಪ್ರತಿಭಟನೆ

ಆಟೋ, ಕ್ಯಾಬ್ (ಆಟೋ, ಕ್ಯಾಬ್) ಮತ್ತು ಖಾಸಗಿ ಬಸ್ ಸಂಘಟನೆಗಳ ಮುಖಂಡರೊಂದಿಗೆ ಇದು ಎರಡನೇ ಬಾರಿಗೆ ನಡೆಯುತ್ತಿರುವ ಪ್ರತ್ಯೇಕ ಸಭೆಯಾಗಿದೆ. ಶಾಂತಿನಗರದ ರಾಜ್ಯ ಸಾರಿಗೆ ಇಲಾಖೆಯ ಮುಖ್ಯ ಕಚೇರಿಯಲ್ಲಿ ಸಚಿವ ರಾಮಲಿಂಗಾ ರೆಡ್ಡಿ ಅಧ್ಯಕ್ಷತೆಯಲ್ಲಿ ಸಭೆ ನಡೆಯಲಿದೆ.

ವಿಶೇಷವೇನೆಂದರೆ ಬೆಳಗ್ಗೆ 11 ಗಂಟೆಗೆವರೆಗೆ ಆಟೋ ಅಸೋಸಿಯೇಷನ್, 12 ರಿಂದ 1 ಗಂಟೆಯವರೆಗೆ ಟ್ಯಾಕ್ಸಿ ಮತ್ತು ಮ್ಯಾಕ್ಯಾಬ್ ಅಸೋಸಿಯೇಷನ್ ಮತ್ತು ಮಧ್ಯಾಹ್ನ 1 ಗಂಟೆಯಿಂದ 2 ಗಂಟೆಗಳವರೆಗೆ ಖಾಸಗಿ ಬಸ್ ಮಾಲೀಕರ ಸಂಘದ ಪದಾಧಿಕಾರಿಗಳ ಜೊತೆಗೆ ಸಭೆ ನಡೆಯಲಿದೆ.

ಆರ್ಥಿಕ ಸಂಕಷ್ಟಕ್ಕೆ ತುತ್ತಾಗಿರುವ ಖಾಸಗಿ ಬಸ್ ಮಾಲೀಕರು ತಮಗೂ ಉಚಿತ ಪ್ರಯಾಣ ವ್ಯವಸ್ಥೆ ವಿಸ್ತರಿಸಬೇಕು. ಆಟೋ, ಟ್ಯಾಕ್ಸಿ ಚಾಲಕರು ತಮಗೆ ಮಾಸಿಕ ಪರಿಹಾರ ನೀಡುವುದು ಸೇರಿದಂತೆ ವಿವಿಧ ಬೇಡಿಕೆಗಳ ಈಡೇರಿಕೆ ಆಗ್ರಹಿಸಿ ಇದೇ ಜುಲೈ 27ರಂದು ‘ಬೆಂಗಳೂರು ಬಂದ್’ (Bengaluru Bandh) ಗೆ ಕರೆ ನೀಡಿದ್ದವು.

ಮತ್ತೆ ಬಂದ್ ಎಚ್ಚರಿಕೆ: ಎಚ್ಚೆತ್ತು ಸರ್ಕಾರ ಸಭೆ
ಶಕ್ತಿ ಯೋಜನೆ ಜಾರಿಗೆ ಬಳಿ ನಮ್ಮ ಸಮಸ್ಯೆಗಳಿಗೆ ಸ್ಪಂದಿಸುವಂತೆ ಕೆಲವು ಬಾಗಿ ಮನವಿ ನೀಡಿದ್ದೇವೆ. ಹೀಗಿದ್ದರೂ ಸಹ ಸರ್ಕಾರವಾಗಲಿ, ಅಧಿಕಾರಿಗಳು ಆಗಲಿ ಸ್ಪಂದಿಸಿಲ್ಲ. ಹೀಗಾಗಿ ನಾವು ಅನಿವಾರ್ಯವಾಗಿ ಬಂದ್‌ಗೆ ಕರೆ ನೀಡಬೇಕಾಯಿತು ಎಂದು ಖಾಸಗಿ ಸಾರಿಗೆ ಸಂಸ್ಥೆ/ಸಂಘಟನೆಗಳು ತಿಳಿಸಿದ್ದವು.

ಆಗ ಸಾರಿಗೆ ಸಚಿವರು ಮಧ್ಯ ಪ್ರವೇಶಿಸಿ ಎಲ್ಲಾ ಸಂಘಟನೆಗಳು ಪ್ರತ್ಯೇಕ ಮಾಡಿ ಬೇಡಿಕೆಗಳನ್ನು ಈಡೇರಿಸುವ ಬಗ್ಗೆ ಭರವಸೆ ನೀಡಿದ್ದರು. ಇದಕ್ಕೆ ಒಪ್ಪಿಗೆ ನೀಡಿದ್ದ ಖಾಸಗಿ ಸಾರಿಗೆ ಸಂಘಟನೆಗಳು ಬಂದ್ ಹಿಂಪಡೆದು, ಶೀಘ್ರವೇ ಭರವಸೆ ಈಡೇರದಿದ್ದರೆ ಮತ್ತೆ ಬಂದ್ ಮಾಡಬೇಕಾಗುತ್ತದೆ ಎಂದಿರುವ ಬೆನ್ನಲ್ಲೆ ನಾಳೆ ಸಾರಿಗೆ ಇಲಾಖೆ ಸಭೆ ನಡೆಸುತ್ತಿದೆ.

English summary

Karnataka transport department will be held meeting led Ramalinga Reddy on July 31st monday after withdrawal Bengaluru Bandh.

Source link