ಬಳ್ಳಾರಿ: ಲಾರಿ ಮತ್ತು ಎರಡು ಆಟೋಗಳ ನಡುವೆ ಭೀಕರ ಅಪಘಾತ, 7 ಜನ ಸಾವು | Accident between lorry and two autos near ballari, seven people death

Ballari

oi-Muruli Kanth Rao

By ಬಳ್ಳಾರಿ ಪ್ರತಿನಿಧಿ

|

Google Oneindia Kannada News

ಬಳ್ಳಾರಿ, ಜೂನ್‌, 30: ಬಳ್ಳಾರಿ ನಗರದಿಂದ ಹೊಸಪೇಟೆ ಬಳಿಯಿರುವ ತುಂಗಭದ್ರಾ ಜಲಾಶಯ ನೋಡಲು ಆಗಮಿಸಿದ್ದ ಪ್ರವಾಸಿಗರ ಆಟೋಗೆ ಲಾರಿ ಡಿಕ್ಕಿ ಹೊಡೆದಿದೆ. ಪರಿಣಾಮ ಸ್ಥಳದಲ್ಲಿಯೇ ನಾಲ್ವರು ಸಾವನ್ನಪ್ಪಿದ್ದಾರೆ ಎನ್ನುವ ಮಾಹಿತಿ ಲಭ್ಯವಾಗಿದೆ.

ಮೃತರ ಸಂಖ್ಯೆ ಬಗ್ಗೆ ನಿಖರ ಮಾಹಿತಿ ಲಭ್ಯವಾಗಿಲ್ಲ. ಹೊಸಪೇಟೆ ತಾಲೂಕಿನ ವಡ್ಡರಹಳ್ಳಿ ಬ್ರಿಡ್ಜ್ ಬಳಿ ಈ ಅಪಘಾತ ನಡೆದಿದೆ.
ಎರಡು ಆಟೋ ಮತ್ತು ಲಾರಿ ನಡುವೆ ಡಿಕ್ಕಿ ಆಗಿ ಈ ಅಪಘಾತ ಸಂಭವಿಸಿದ್ದು, ಒಂದು ಆಟೋ ಡಿಕ್ಕಿಯ ರಭಸಕ್ಕೆ ಹಲವು ಮೀಟರ್ ದೂರ ಹೋಗಿ ಬಿದ್ದಿದೆ. ಇಬ್ಬರು ಗಾಯಗೊಂಡಿದ್ದು, ಗಾಯಾಳುಗಳನ್ನು ಬಳ್ಳಾರಿಯ ವಿಮ್ಸ್ ಆಸ್ಪತ್ರೆಗೆ ಸಾಗಿಸಲಾಗಿದೆ.

Accident between lorry and two autos near ballari, seven people death

ಇನ್ನು ಘಟನಾ ಸ್ಥಳಕ್ಕೆ ಹೊಸಪೇಟೆ ಗ್ರಾಮೀಣ ಪೊಲೀಸರು ಭೇಟಿ ನೀಡಿ ಪರಿಶೀಲಿಸಿದ್ದಾರೆ. ಅಪಘಾತಕ್ಕೀಡಾದ ಎರಡು ಆಟೋಗಳ ಪೈಕಿ ಒಂದು ಬಳ್ಳಾರಿಯಿಂದ ಹೊಸಪೇಟೆಗೆ ಹೊರಟಿತ್ತು. ಒಂದೇ ಆಟೋದಲ್ಲಿ 20 ಜನರಿದ್ದರು ಎನ್ನಲಾಗಿದೆ. ಈ ಇಪ್ಪತ್ತು ಜನರ ಪೈಕಿ ಶಾಶಮ್ಮ ಎಂಬ ಓರ್ವ ಮಹಿಳೆ ಮೃತಪಟ್ಟಿದ್ದಾರೆ. ಮತ್ತೊಂದು ಆಟೋದಲ್ಲಿದ್ದ ಮೂವರು ಮೃತಪಟ್ಟಿದ್ದಾರೆ ಎನ್ನಲಾಗಿದೆ.

ಮತ್ತೊಂದೆಡೆ ಕೆಲವು ಗಾಯಾಳುಗಳನ್ನು ಹೊಸಪೇಟೆಯ ಸರ್ಕಾರಿ ಆಸ್ಪತ್ರೆಗೆ ದಾಖಲಿಸಲಾಗಿದೆ. ಇನ್ನು ಇಬ್ಬರು ತೀವ್ರವಾಗಿ ಗಾಯಗೊಂಡವರನ್ನು ಬಳ್ಳಾರಿಯ ವಿಮ್ಸ್‌ಗೆ ರವಾನಿಸಲಾಗಿದೆ ಎಂದು ತಿಳಿದುಬಂದಿದೆ.

Accident between lorry and two autos near ballari, seven people death

English summary

ccident between lorry and two autos near ballari, four death, heres see details,

Story first published: Friday, June 30, 2023, 17:19 [IST]

Source link