“ನನಗೂ ಕಾಸ್ಟಿಂಗ್ ಕೌಚ್ ಅನುಭವ ಆಗಿತ್ತು.. ನನ್ನನ್ನು ನೋಡಿ ಆ ನಿರ್ಮಾಪಕ ಏನಂದ ಗೊತ್ತಾ? ಕ್ಯಾಕರಿಸಿ ಉಗಿದೆ” | Rajeev Khandelwal reveals his Casting Couch experience in the industry

bredcrumb

Bollywood

oi-Narayana M

|

ಚಿತ್ರರಂಗದಲ್ಲಿ
ಕಾಸ್ಟಿಂಗ್
ಕೌಚ್
ವಿವಾದ
ಸದ್ದು
ಮಾಡುತ್ತಲೇ
ಇದೆ.
ಸಾಕಷ್ಟು
ನಟಿಯರು

ಬಗ್ಗೆ
ದನಿ
ಎತ್ತಿದ್ದಾರೆ.
ಪಾತ್ರಕ್ಕಾಗಿ
ಪಲ್ಲಂಗ
ಏರುವಂತೆ
ಒತ್ತಾಯಿಸಿದರು
ಎಂದು
ಕಹಿ
ಅನುಭವ
ಬಿಚ್ಚಿಟ್ಟಿದ್ದಾರೆ.
ಕೆಲ
ನಟರಿಗೂ
ಸಹ
ಇಂತಹ
ಕೆಟ್ಟ
ಅನುಭವ
ಆಗಿದೆ.
ಇದೀಗ
ನಟ
ರಾಜೀವ್
ಖಂಡೇಲ್ವಾಲ್
ತಾನು
ಕೂಡ
ಕಾಸ್ಟಿಂಗ್
ಕೌಚ್
ಸಂತ್ರಸ್ತ
ಎಂದಿದ್ದಾರೆ.

ಸಾಕಷ್ಟು
ಹಿಂದಿ
ಸಿನಿಮಾಗಳಲ್ಲಿ
ಕಿರುತೆರೆ
ಕಾರ್ಯಕ್ರಮಗಳಲ್ಲಿ
ರಾಜೀವ್
ಕೆಲಸ
ಮಾಡಿದ್ದಾರೆ.
ಕಿರುತೆರೆ
ನಿರೂಪಕನಾಗಿ
ಗಾಯಕನಾಗಿಯೂ
ಗುರ್ತಿಸಿಕೊಂಡಿದ್ದಾರೆ.
ಆತನಿಗೆ
ದೊಡ್ಡ
ಅಭಿಮಾನಿ
ಬಳಗ
ಇದೆ.
ಆದರೆ
ತನಗೆ
ಕಾಸ್ಟಿಂಗ್
ಕೌಚ್
ಅನುಭವ
ಆಗಿತ್ತು
ಎಂದು
ರಾಜೀವ್
ಹೇಳಿರುವುದು
ಈಗ
ಹಾಟ್
ಟಾಪಿಕ್
ಆಗಿದೆ.
ನನ್ನ
ಕರಿಯರ್‌ನಲ್ಲೂ
ಒಮ್ಮೆ
ಇಂತಹ
ಸಂದರ್ಭ
ಎದುರಾಗಿತ್ತು.
ಆದರೆ
ನಾನು
ಜಾಣತನದಿಂದ
ತಪ್ಪಿಸಿಕೊಂಡೆ.
ಆದರೆ
ಹೆಣ್ಣು
ಮಕ್ಕಳ
ಕಥೆಯೇನು?
ಎಂದು
ಆತಂಕ
ವ್ಯಕ್ತಪಡಿಸಿದ್ದಾರೆ.

Rajeev Khandelwal reveals his Casting Couch experience in the industry

ಆಮೀರ್,
ಸೈತಾನ್,
ವಿಲ್
ಯು
ಮ್ಯಾರಿ,
ಫೀವರ್,
ಪ್ರಣಾಮ್,
ಸಲಾಂ
ವೆಂಕಿ
ಸೇರಿದಂತೆ
ಹಲವು
ಸಿನಿಮಾಗಳಲ್ಲಿ
ರಾಜೀಲ್
ಖಂಡೇಲ್ವಾಲ್
ನಟಿಸಿದ್ದಾರೆ.
90ರ
ದಶಕದ
ಕೊನೆಗೆ
ಕಿರುತೆರೆ
ಬಂದ
ಇವರು
ಕೆಲ
ಧಾರಾವಾಹಿಗಳಲ್ಲಿ
ನಟಿಸಿದರು.
ನಂತರ
ಸಚ್‌ಕೆ
ಸಾಮ್ನಾ,
ಸೂಪರ್
ಕಾರ್ಸ್,
ಝಜ್‌ಬಾತ್
ರೀತಿಯ
ಟಾಕ್‌ಶೋ,
ರಿಯಾಲಿಟಿ
ಶೋಗಳ
ನಿರೂಪಕರಾಗಿ
ಕೆಲಸ
ಮಾಡಿದ್ದಾರೆ.

“ರಣ್‌ವೀರ್
ತೊಡೆ
ಮೇಲೆ
ದೀಪಿಕಾ
ಕೂತಿದ್ದು
ಕಂಡ
ಆಶ್ಚರ್ಯ
ಆಗಿತ್ತು”:
ಬಾಲಿವುಡ್
ನಟ
ಗುಲ್ಶನ್
ದೇವಯ್ಯ!

ಬೈದು
ಅಲ್ಲಿಂದ
ಹೊರ
ಬಂದೆ

ಕಾಸ್ಟಿಂಗ್
ಕೌಚ್
ಅನುಭವದ
ಬಗ್ಗೆ
ರಾಜೀವ್
ಮಾತನಾಡುತ್ತಾ
“ನನಗೆ

ಕೆಟ್ಟ
ಅನುಭವದ
ಸಂದರ್ಭದಲ್ಲಿ
ಯಾವುದೇ
ಹಿಂಜರಿಕೆ
ಇರಲಿಲ್ಲ
ಎಂದಿದ್ದಾರೆ.
ಕೂಡಲೇ
ನಾನು
ಸ್ವಾರಿ
ಬಾಸ್,
ನೀವು
ಹೇಳಿದ
ಹಾಗೆ
ನಾನು
ಮಾಡಲಾರೆ
ಎಂದು
ಅವರನ್ನು
ಬೈದು
ಹೊರಬಂದೆ
ಎಂದು
ಬಹಿರಂಗಪಡಿಸಿದ್ದಾರೆ.
ಆದಾಗ್ಯೂ,
ಮಹಿಳೆಯರು
ಅಂತಹ
ಸಂದರ್ಭಗಳನ್ನು
ಪುರುಷರಂತೆ
ನಿಭಾಯಿಸಲು
ಸಾಧ್ಯವಿಲ್ಲ.
ಪುರುಷರು
ಇದನ್ನು
ಧೈರ್ಯದಿಂದ
ಎದುರಿಸಬಹುದು.
ಆದರೆ
ಮಹಿಳೆಯರಿಗೆ

ಸಂದರ್ಭಗಳನ್ನು
ನಿಭಾಯಿಸಲು
ಸಾಧ್ಯವಿಲ್ಲ”

ಪುರುಷರ
ರಕ್ಷಣೆ
ಬಗ್ಗೆ
ಯಾರಿಗೂ
ಕಾಳಜಿಯಿಲ್ಲ

“ಕೆಲವೊಮ್ಮೆ
ಹುಡುಗಿಯರು
ಅಂತಹ
ಸಂದರ್ಭಗಳಿಗೆ
ಮಣಿಯದೇ
ಬೇರೆ
ವಿಧಿ
ಇರುವುದಿಲ್ಲ.
ಇಷ್ಟವಿಲ್ಲದಿದ್ದರೂ
ತಮ್ಮಲ್ಲೇ
ತಾವು
ಬೆಂದು
ಸಂಕಷ್ಟ
ಅನುಭವಿಸುತ್ತಾರೆ.
ಆದರೆ
ಹುಡುಗರು
ಅದರ
ವಿರುದ್ಧ
ನಿಂತು
ಮುನ್ನಡೆಯುತ್ತಾರೆ.
ಆದರೆ
ಅಂತಹ
ವಿಷಯಗಳನ್ನು
ಹೊರಗೆ
ಹೇಳುವುದಿಲ್ಲ.
ಚಿತ್ರರಂಗದಲ್ಲಿ
ಮಹಿಳೆಯರ
ರಕ್ಷಣೆಯ
ಬಗ್ಗೆಯೇ
ಸದಾ
ಮಾತನಾಡುತ್ತಾರೆ.
ಪುರುಷರ
ರಕ್ಷಣೆಯ
ಬಗ್ಗೆ
ಯಾರಿಗೂ
ಕಾಳಜಿಯಿಲ್ಲ”
ಎಂದು
ರಾಜೀವ್
ಹೇಳಿದ್ದಾರೆ.

Rajeev Khandelwal reveals his Casting Couch experience in the industry

“ಈಗ
ಪರಿಸ್ಥಿತಿ
ಬದಲಾಗಿದೆ

“ಸದ್ಯ
ಚಿತ್ರರಂಗದಲ್ಲಿ
ಸಾಕಷ್ಟು
ಬದಲಾವಣೆಗಳಾಗಿವೆ.
ಒಂದಾನೊಂದು
ಕಾಲದಲ್ಲಿ
ಚಿತ್ರರಂಗದಲ್ಲಿ
ಪುರುಷರ
ಪ್ರಾಬಲ್ಯದಿಂದ
ಹುಡುಗಿಯರು
ತೊಂದರೆ
ಅನುಭವಿಸುತ್ತಿದ್ದರು.
ಅವರ
ರಕ್ಷಣೆಗೆ
ಹೆಚ್ಚಿನ
ಆಸಕ್ತಿ
ತೋರಿಸುತ್ತಿದ್ದರು.
ಅದರಲ್ಲಿ
ತಪ್ಪೇನಿಲ್ಲ.
ಆದರೆ
ಈಗ
ಪರಿಸ್ಥಿತಿ
ಬದಲಾಗಿದೆ”
ಎಂದು
ರಾಜೀವ್
ವಿವರಿಸಿದ್ದಾರೆ.
ರಾಜೀವ್
ಖಂಡೇಲ್ವಾಲ್
ದೂರದರ್ಶನದಲ್ಲಿ
ನಟರಾಗಿ
ತಮ್ಮ
ವೃತ್ತಿಜೀವನವನ್ನು
ಪ್ರಾರಂಭಿಸಿದರು.
ನಂತರ
ಬೆಳ್ಳಿತೆರೆಗೆ
ಕಾಲಿಟ್ಟರು.

English summary

Rajeev Khandelwal reveals his Casting Couch experience in the industry. he says People talk about women’s safety, but men, too, have their own challenges. know more.

Saturday, June 24, 2023, 12:03

Story first published: Saturday, June 24, 2023, 12:03 [IST]

Source link