ಟೆನಿಸ್‌ ಮಿಶ್ರ ಡಬಲ್ಸ್‌ನಲ್ಲಿ ಬಂಗಾರ ಗೆದ್ದ ರೋಹನ್ ಬೋಪಣ್ಣ-ರುತುಜಾ ಭೋಸಲೆ ಜೋಡಿ-rohan bopanna and rutuja sampatrao bhosale pair win gold in tennis mixed doubles in asian games 2023 chinese taipei jra ,ಕ್ರೀಡೆ ಸುದ್ದಿ

ಚೊಚ್ಚಲ ಫೈನಲ್‌ ಪಂದ್ಯವಾಡಿದ ರುತುಜಾ, ಅನುಭವಿ ಬೋಪಣ್ಣ ಜೊತೆಗೂಡಿ ರೋಚಕ ಪೈಪೋಟಿ ನೀಡಿದರು. ಭಾರತವು ಆರಂಭಿಕ ಸೆಟ್‌ನಲ್ಲಿ ಕೇವಲ ಎರಡು ಪಾಯಿಂಟ್‌ ಗಳಿಸಲಷ್ಟೇ ಸಾಧ್ಯವಾಯ್ತು. ಅರ್ಧ ಗಂಟೆಯ ಹೋರಾಟದಲ್ಲಿ 2-6ರಿಂದ ಮೊದಲು ಹೋರಾಟದಲ್ಲಿ ಸೋತಿತು. ಅಲ್ಲಿಗೆ ಭಾರತೀಯರು ಪಂದ್ಯ ಕೈಚೆಲ್ಲಲಿಲ್ಲ. ಎರಡನೇ ಸೆಟ್‌ನಲ್ಲಿ ಪುಟಿದೆದ್ದು, ಆಕ್ರೋಶಭರಿತ ಆಟವಾಡಿದರು. ಅಂತಿಮವಾಗಿ ಎರಡನೇ ಸೆಟ್‌ನಲ್ಲಿ ಮೇಲುಗೈ ಸಾಧಿಸಿದ ಭಾರತವು, 6-3ರಿಂದ ಗೆದ್ದು ಟೈ ಬ್ರೇಕರ್‌ಗೆ ಪ್ರೇರೇಪಿಸಿತು. ಅಂತಿಮ ಹಣಾಹಣಿಯಲ್ಲಿ ರೋಚಕವಾಗಿ ಗೆದ್ದ ಭಾರತ ಚಿನ್ನಕ್ಕೆ ಮುತ್ತಿಟ್ಟಿತು.

Source link