ಪ್ರೊ ಕಬಡ್ಡಿ ಲೀಗ್ 2024ರ ಆವೃತ್ತಿಯ ಫೈನಲ್ ಪಂದ್ಯವು ಮಾರ್ಚ್ 1ರಂದು ಹೈದರಾಬಾದ್‌ನ ಗಚ್ಚಿಬೌಲಿ ಒಳಾಂಗಣ ಕ್ರೀಡಾಂಗಣದಲ್ಲಿ ನಡೆಯುತ್ತಿದೆ. ಪ್ರಶಸ್ತಿ ಸುತ್ತಿನಲ್ಲಿ ಪುಣೆರಿ ಪಲ್ಟನ್ ಮತ್ತು ಹರಿಯಾಣ ಸ್ಟೀಲರ್ಸ್ ತಂಡಗಳು ಮುಖಾಮುಖಿಯಾಗುತ್ತಿವೆ. ಉಭಯ ತಂಡಗಳಲ್ಲಿ ಯಾವ ತಂಡ ಗೆದ್ದರೂ, ಚೊಚ್ಚಲ ಟ್ರೋಫಿ ಗೆಲುವನ್ನು ಸಂಭ್ರಮಿಸಲಿದೆ.