ಕೋಲಾರದ ಮುನಿಸ್ವಾಮಿ ಚೈಲ್ಡ್ ಆರ್ಟಿಸ್ಟ್ ಎಂದ ಪ್ರದೀಪ್ ಈಶ್ವರ್; ಅವನೊಬ್ಬ ಸೆಕೆಂಡ್ ಹುಚ್ಚ ವೆಂಕಟ್ ಎಂದ ಮುನಿಸ್ವಾಮಿ | Kolar MP Muniswamy Slams Pradeep Eshwar Has Second Huccha Venkat

Karnataka

oi-Reshma P

|

Google Oneindia Kannada News

ದೊಡ್ಡಬಳ್ಳಾಪುರ, ಜೂನ್‌ 24: ಕೋಲಾರ ‌ಸಂಸದ ಮುನಿಸ್ವಾಮಿ ಒಬ್ಬ‌ ಚೈಲ್ಡ್ ಆರ್ಟಿಸ್ಟ್ ಎಂದಿದ್ದ ಚಿಕ್ಕಬಳ್ಳಾಪುರ ಶಾಸಕ ಪ್ರದೀಪ್ ‌ಈಶ್ವರ್ ಕೋಲಾರ ಸಂಸದ ಮುನಿಸ್ವಾಮಿ ತಿರುಗೇಟು ನೀಡಿದ್ದಾರೆ.

ಬೆಂಗಳೂರು ಗ್ರಾಮಾಂತರ ‌ಜಿಲ್ಲಾ ಕಾರ್ಯಕರ್ತರ ಸಭೆಯಲ್ಲಿ ಪ್ರದೀಪ್ ಈಶ್ವರ್ ವಿರುದ್ಧ ವಾಗ್ದಾಳಿ ನಡೆಸಿದ ಸಂಸದ ಮುನಿಸ್ವಾಮಿ, ಪ್ರದೀಪ್‌ ಈಶ್ವರ್‌ ಮೊದಲ ಬಾರಿಗೆ ಶಾಸಕರಾಗಿದ್ದು, ಎರಡನೇ ಹುಚ್ಚ ವೆಂಕಟ್‌ ರೀತಿ ಆಡುತ್ತಿದ್ದಾರೆ. ಇಂಥ ಡ್ರಾಮಾ ಕಂಪನಿಗಳನ್ನು ತುಂಬಾ ನೋಡಿದ್ದೇನೆ ಎಂದು ಮುನಿಸ್ವಾಮಿ ಕಿಡಿಕಾರಿದ್ದಾರೆ.

Kolar MP Muniswamy Slams Pradeep Eshwar Has Second Huccha Venkat

ನಾನು 2002ರಿಂದಲೂ ರಾಜಕೀಯದಲ್ಲಿದ್ದು, ಪ್ರದೀಪ್‌ ಈಶ್ವರ್‌ಗೆ ರಾಜಕೀಯ ಪ್ರಬುದ್ಧತೆ ಇಲ್ಲ. ರಾಜಕೀಯ ಮೆಚ್ಯುರಿಟಿಗಾಗಿ ನನ್ನ ಬಳಿ ಟ್ಯೂಶನ್‌ಗೆ ಬರಲಿ. ನಾನು ಗ್ರಾಮ ಪಂಚಾಯ್ತಿ ಚುನಾವಣೆಯಿಂದ ಸಂಸದ ಚುನಾವಣೆವರೆಗೂ ಫೇಸ್ ಮಾಡಿದ್ದೇನೆ. ರಾಜಕೀಯ ಅನನುಭವಿಯಿಂದ ಕಲಿಯೋದು ಏನಿದೆ? ಎಂದು ಸಂಸದ ಮುನಿಸ್ವಾಮಿ ಅವರು ಪ್ರಶ್ನಿಸಿದ್ದು, ಅವನೊಬ್ಬ ಎರಡನೇ‌ ಹುಚ್ಚಾ ವೆಂಕಟ್, ಲಬಾ ಲಬಾ ಅಂತ ಬಾಯಿ‌ ಬಡ್ಕೋತಾನೆ. ಮಕ್ಕಳಿಗೆ ಪಾಠ ಮಾಡಿ ಬಾಯಿ‌ ಬಡ್ಕೋಳೋದಲ್ಲ, ನನ್ನತ್ರ ಟ್ಯೂಷನ್‌ಗೆ ಬರಲಿ ಎಂದು ಆಕ್ರೋಶ ವ್ಯಕ್ತಪಡಿಸಿದರು.

ಸಂಸದ ಮುನಿಸ್ವಾಮಿ ಚೈಲ್ಡ್ ಆರ್ಟಿಸ್ಟ್: ಪ್ರದೀಪ್ ಈಶ್ವರ್

ಇನ್ನೂ ಶುಕ್ರವಾರ ಚಿಕ್ಕಬಳ್ಳಾಪುರ ಶಾಸಕ ಪ್ರದೀಪ್ ಈಶ್ವರ್ ಅವರು, ಬಿಜೆಪಿ ಕೋಲಾರ ಸಂಸದ ಮುನಿಸ್ವಾಮಿ ಅವರ ವಿರುದ್ದ ಕಿಡಿಕಾರಿದ್ದು, ಸಂಸದ ಮುನಿಸ್ವಾಮಿ ಒಂದು ತರ ಚೈಲ್ಡ್ ಆರ್ಟಿಸ್ಟ್ ಇದ್ದಂಗೆ ಎಂದು ವ್ಯಂಗ್ಯವಾಡಿದ್ದರು. ಅಲ್ಲದೇ, ಮುನಿಸ್ವಾಮಿ ಅಲ್ಲ ಅವರು ‘ಮನಿ’ ಸ್ವಾಮಿ. ನಾನು ಅವರನ್ನು ಮನಿಸ್ವಾಮಿ ಅನ್ಕೊಂಡೆ. ಚಿಂತಾಮಣಿ ಹಾಗೂ ಕೋಲಾರದ ಪ್ರಭಾವಿ ನಾಯಕರು ಮನಸ್ಸು ಮಾಡಲಿಲ್ಲ ಅಂದಿದ್ರೆ ಹೇಗೆ ಸಂಸದರಾಗುತ್ತಿದ್ದರು ಎಂದು ಕಿಡಿಕಾರಿದ್ದು,ಅವರು ಒಂದ್ತರಾ ಚೈಲ್ಡ್ ಆರ್ಟಿಸ್ಟ್‌ ಬಹಳ ಬೇಜಾರಾಗುತ್ತೆ ಎಂದು ಶಾಸಕ ಪ್ರದೀಪ್ ಈಶ್ವರ್ ವ್ಯಂಗ್ಯವಾಡಿದ್ದರು.

Kolar MP Muniswamy Slams Pradeep Eshwar Has Second Huccha Venkat

ಇನ್ನೂ ವಿಧಾನಸಭಾ ಚುನಾವಣೆಯಲ್ಲಿ ಪ್ರದೀಪ್‌ ಈಶ್ವರ್‌ ಗೆಲುವು ಸಾಧಿಸಿ ಬಳಿಕ ಸುಧಾಕರ್‌ ಸೇರಿದಂತೆ ಹಲವು ನಾಯಕರ ಇರುದ್ದ ತೀವ್ರ ವಾಗ್ದಾಳಿ ನಡೆಸಿದ್ದು, ಇದೀಗ ಒಬ್ಬ ಎಂಪಿ ಹೇಗೆ ಇರಬೇಕು ಅನ್ನುವುದು ಗೊತ್ತಿಲ್ಲ ಅವರಿಗೆ, ಮುನಿಶಾಮಣ್ಣ ನನಗೆ 5 ವರ್ಷಕ್ಕೆ ಇರೋದು ಹಬ್ಬ, ನಿಮಗೆ ಮುಂದಿನ ವರ್ಷವೇ ಇದೆ ಹಬ್ಬ ಎಂದು ಕಾಲೆಳೆದಿದ್ದಾರೆ.

English summary

Pradeep Eshwar Huchha Venkat 2 Says Kolar MP Muniswamy.

Source link