ಏಷ್ಯನ್ ಗೇಮ್ಸ್​ನಲ್ಲಿ ಭಾರತ ಚಿನ್ನದ ಬೇಟೆ; ತಜಿಂದರ್‌ ಪಾಲ್, ಅವಿನಾಶ್ ಸೇಬಲ್​ಗೆ ದಾಖಲೆಯ ಪದಕ

ತಜಿಂದರ್ ಪಾಲ್​ಗೆ ಸತತ 2ನೇ ಚಿನ್ನ

ತಜಿಂದರ್​ ಪಾಲ್​ ಸಿಂಗ್​ ತೂರ್ ಸತತ 2ನೇ ಚಿನ್ನ ಗೆಲ್ಲುವ ಮೂಲಕ ತಮ್ಮ ಪ್ರಶಸ್ತಿಯನ್ನು ಉಳಿಸಿಕೊಂಡಿದ್ದಾರೆ. ಅಲ್ಲದೆ, ಭಾರತದ ಪದಕಗಳ ಸಂಖ್ಯೆಯನ್ನೂ ಏರಿಸಿದರು. ಪುರುಷರ ಫೈನಲ್​​ನಲ್ಲಿ ತೂರ್, ಸೌದಿ ಅರೇಬಿಯಾದ ಪ್ರತಿಸ್ಪರ್ಧಿಯನ್ನು ಮಣಿಸಿದರು. 2018ರಲ್ಲಿ ಜಕಾರ್ತಾದಲ್ಲಿ ನಡೆದಿದ್ದ ಏಷ್ಯನ್ ಗೇಮ್ಸ್​​ನಲ್ಲಿ ಚಿನ್ನ ಗೆದ್ದಿದ್ದ ತಜಿಂದರ್​​, ಮೊದಲ ಎರಡು ಪ್ರಯತ್ನಗಳಲ್ಲಿ ಫೌಲ್ ಮಾಡಿದ್ದರು. ಇದರ ಹೊರತಾಗಿಯೂ ಅತ್ಯುತ್ತಮ ಪ್ರದರ್ಶನ ನೀಡಿದ ಅವರು, 20.36 ಮೀಟರ್ ದೂರ ಎಸೆದು ಚಿನ್ನದ ಪದಕ ತಮ್ಮದಾಗಿಸಿಕೊಂಡರು. ಮೊಹಮ್ಮದ್ ದಾವುಡಾ ಟೊಲೊ ಎರಡನೇ ಸ್ಥಾನಕ್ಕೆ ತೃಪ್ತಿಪಟ್ಟರು.

Source link