ಈ ಮೂರು ಜಿಲ್ಲೆಗಳ ಮಾರ್ಗದ ರೈಲ್ವೆ ಯೋಜನೆ ವಿಳಂಬ, ಯಾವ ಜಿಲ್ಲೆಗಳು & ಕಾರಣ ಏನು? | Delay in railway project of these three districts rout, Know details

Travel

lekhaka-Chidananda M

By ಚಿತ್ರದುರ್ಗ ಪ್ರತಿನಿಧಿ

|

Google Oneindia Kannada News

ಚಿತ್ರದುರ್ಗ, ಜೂನ್‌, 30: ಮಧ್ಯ ಕರ್ನಾಟಕದ ಬಹುನಿರೀಕ್ಷಿತ ಯೋಜನೆ ಆಗಿರುವ ತುಮಕೂರು- ಚಿತ್ರದುರ್ಗ- ದಾವಣಗೆರೆ ನೇರ ರೈಲ್ವೆ ಮಾರ್ಗ ಯೋಜನೆಗೆ ಸಂಬಂಧಿಸಿದಂತೆ ಭೂಸ್ವಾಧೀನ ಕಾರ್ಯ ಆಮೆ ವೇಗದಲ್ಲಿ ನಡೆಯುತ್ತಿದೆ.

ಚಿತ್ರದುರ್ಗ ಜಿಲ್ಲೆಯಲ್ಲಿ ಭೂ ಸ್ವಾಧೀನ ಪ್ರಕ್ರಿಯೆ ಮಂದಗತಿಯಲ್ಲಿ ಸಾಗುತ್ತಿದೆ. ಅಂದಹಾಗೆ ಜಿಲ್ಲೆಯಲ್ಲಿ ಒಟ್ಟು 101 ಕಿಲೋ ಮೀಟರ್ ದೂರದಲ್ಲಿ 1221 ಹೆಕ್ಟೇರ್‌ ಪ್ರದೇಶದಲ್ಲಿ ಜಮೀನು ಭೂ ಸ್ವಾಧೀನ ಆಗಬೇಕಿದೆ. ಇತ್ತ ಜಿಲ್ಲೆಯ ಹಿರಿಯೂರು ತಾಲೂಕಿನಲ್ಲಿ ಭೂಸ್ವಾಧೀನ ಕಾರ್ಯ ವಿವಿಧ ಹಂತಗಳಲ್ಲಿ ನಡೆಯುತ್ತಿದೆ. ಹಿರಿಯೂರು ತಾಲೂಕಿಗೆ 150.35 ಕೋಟಿ ರೂಪಾಯಿ ಹಣ ಮಂಜೂರು ಮಾಡಲಾಗಿದೆ. ಚಿತ್ರದುರ್ಗ ತಾಲೂಕಿಗೆ 392.04 ಕೋಟಿ ಅನುದಾನ ಮಂಜೂರಾಗಿದೆ ಎನ್ನುವ ಮಾಹಿತಿ ಲಭ್ಯವಾಗಿದೆ.

Delay in railway project of these three districts rout, Know details

ಚಿತ್ರದುರ್ಗದಿಂದ ಭರಮಸಾಗರ ಸ್ಟ್ರೆಚ್ 1ರಲ್ಲಿ ಹಂಪನೂರಿನಿಂದ ಚಿಕ್ಕಜಾಜೂರು ಮೂಲಕ ಚಿತ್ರದುರ್ಗ ರೈಲ್ವೆ ಮಾರ್ಗದವರೆಗೆ ಒಟ್ಟು 18 ಹಳ್ಳಿಗಳಿಂದ 255.12 ಹೆಕ್ಟೇರ್‌ ಅವಾರ್ಡ್ ಅನುಮೋದನೆ ದೊರೆತಿದೆ. ಸರ್ಕಾರ ಇದುವರೆಗೂ ಜಿಲ್ಲೆಯ ಭೂಸ್ವಾಧೀನಕ್ಕೆ 140.30ಕೋಟಿ ಬಿಡುಗಡೆ ಮಾಡಿದೆ. ಬಿಡುಗಡೆಯಾದ ಹಣದಲ್ಲಿ ರೈತರಿಗೆ ಶೇಕಡಾ 11ರಷ್ಟು ವೆಚ್ಚ ಆಗಿದೆ.

Ganesh Chaturthi 2023: ಗಣೇಶ ಹಬ್ಬಕ್ಕೆ 156 ವಿಶೇಷ ರೈಲುಗಳ ಸಂಚಾರ, ಮಾರ್ಗಗಳು, ದಿನಾಂಕ, ಸಮಯದ ವಿವರ ತಿಳಿಯಿರಿGanesh Chaturthi 2023: ಗಣೇಶ ಹಬ್ಬಕ್ಕೆ 156 ವಿಶೇಷ ರೈಲುಗಳ ಸಂಚಾರ, ಮಾರ್ಗಗಳು, ದಿನಾಂಕ, ಸಮಯದ ವಿವರ ತಿಳಿಯಿರಿ

ಇನ್ನು ಹಿರಿಯೂರು ತಾಲೂಕಿನ ಜವನಗೊಂಡನಹಳ್ಳಿಯ ಕರಿಯಾಲ ಗ್ರಾಮದಿಂದ ಮಾಯಸಂದ್ರ ಗ್ರಾಮದವರೆಗಿನ 2ನೇ ಸ್ಟ್ರೆಚ್‌ನಲ್ಲಿ 12 ಹಳ್ಳಿಗಳ 479.12 ಹೆಕ್ಟೇರ್‌ ಭೂ ಸ್ವಾಧೀನ ಆಗಲಿದೆ. 280 ಹೆಕ್ಟೇರ್‌ ಪ್ರದೇಶದ ಭೂಮಿ ಅವಾರ್ಡ್ ಆಗಿದೆ. ಇನ್ನು ಹಿರಿಯೂರು ತಾಲೂಕಿನ ಯರದಕಟ್ಟೆ ಗ್ರಾಮದಿಂದ ಮಾಯಸಂದ್ರವರೆಗೆ 3ನೇ ಸ್ಟ್ರೆಚ್‌ನಲ್ಲಿ 13 ಹಳ್ಳಿಗಳಿಂದ 405 ಹೆಕ್ಟೇರ್‌ ಭೂಸ್ವಾಧೀನಕ್ಕೆ ಒಳಪಟ್ಟಿದೆ. ಇದಕ್ಕೆ 37.37ಕೋಟಿ ರೂಪಾಯಿ ಪರಿಹಾರ ನೀಡಲಾಗಿದೆ.

ಒಟ್ಟಾರೆಯಾಗಿ ಇದು ಮೂರು ಜಿಲ್ಲೆಗಳ ಬಹುನಿರೀಕ್ಷಿತ ಯೋಜನೆ ಆಗಿದೆ. ಈ ಯೋಜನೆ ಹತ್ತು ವರ್ಷಗಳ ಹಿಂದಿನಿಂದಲೂ ಕಾಮಗಾರಿ ಪೂರ್ಣಗೊಳಿಸಲಾಗುವುದು ಎಂದು ಸರ್ಕಾರ ಹೇಳುತ್ತಲೇ ಬಂದಿದೆ. ಇದೇ ರೀತಿ ರೈಲ್ವೆ ಕಾಮಗಾರಿ ನಡೆದರೆ ಎಷ್ಟರ ಮಟ್ಟಿಗೆ ಪೂರ್ಣಗೊಳಲ್ಲಿದೆ ಎಂಬುದನ್ನು ಕಾದುನೋಡಬೇಕಿದೆ.

English summary

Delay in land acquisition for Davanagere, Chitradurga and tumakuru districts railway routs project.

Story first published: Friday, June 30, 2023, 14:01 [IST]

Source link