ಆಸ್ಪತ್ರೆಯಿಂದ ಅರಮನೆಗೆ ಮೆಗಾ ಪ್ರಿನ್ಸೆಸ್: ಮಗಳು ಯಾರ ಹೋಲಿಕೆ ಎಂದು ಹೇಳಿ ಚರಣ್ ಚಮಕ್ | Ramcharan wife Upasana Discharged From Hospital After Delivering Baby Girl

bredcrumb

Telugu

oi-Narayana M

|

ಇತ್ತೀಚೆಗೆ
ಮೆಗಾ
ಫ್ಯಾಮಿಲಿಗೆ
ರಾಜಕುಮಾರಿಯ
ಆಗಮನವಾಗಿತ್ತು.
ಇದೀಗ

ರಾಜಕುಮಾರಿ
ತನ್ನ
ಅರಮನೆಗೆ
ತಲುಪಿದ್ದಾಳೆ.
ಅಂದರೆ
ರಾಮ್‌ಚರಣ್
ಪತ್ನಿ
ಉಪಾಸನಾ
ಆಸ್ಪತ್ರೆಯಿಂದ
ಡಿಸ್ಚಾರ್ಜ್
ಆಗಿ
ಮಗುವಿನೊಟ್ಟಿಗೆ
ಮನೆಗೆ
ವಾಪಸ್
ಆಗಿದ್ದಾರೆ.
ಸೋಮವಾರ
ಅವರು
ಹೆರಿಗೆಗಾಗಿ
ಹೈದರಾಬಾದ್‌
ಅಪೋಲೊ
ಆಸ್ಪತ್ರೆಗೆ
ದಾಖಲಾಗಿದ್ದರು.
ಮಧ್ಯರಾತ್ರಿ
1
ಗಂಟೆ
49
ನಿಮಿಷಕ್ಕೆ
ಹೆಣ್ಣು
ಮಗುವಿಗೆ
ಜನ್ಮ
ನೀಡಿದ್ದರು.

ಡಿಸೆಂಬರ್‌ನಲ್ಲಿ
ಸೊಸೆ
ಗರ್ಭಿಣಿ
ಆಗಿರುವ
ವಿಚಾರವನ್ನು
ಚಿರಂಜೀವಿ
ಸೋಶಿಯಲ್
ಮೀಡಿಯಾದಲ್ಲಿ
ಹಂಚಿಕೊಂಡಿದ್ದರು.
ನಂತರ
ಆಸ್ಕರ್
ಪ್ರಶಸ್ತಿ
ಪ್ರದಾನ
ಸಮಾರಂಭಕ್ಕೆ
ಹೋದಾಗ
ದಂಪತಿ
ಮೊದಲ
ಬಾರಿ
ಮನೆಗೆ
ಹೊಸ
ಅತಿಥಿಯ
ಆಗಮನದ
ಬಗ್ಗೆ
ಮಾತನಾಡಿದ್ದರು.
ದುಬೈನಲ್ಲಿ
ಸೀಮಂತ
ಕಾರ್ಯಕ್ರಮ
ನಡೆದಿತ್ತು.
ನಂತರ
ರಾಮ್‌ಚರಣ್‌
ಹಾಗೂ
ಉಪಾಸನಾ
ವಿದೇಶಗಳಲ್ಲಿ
ಸುತ್ತಾಡಿ
ಬಂದಿದ್ದರು.
ನಂತರ
ಹೈದರಾಬಾದ್‌ನಲ್ಲಿ
ಆಪ್ತರೊಟ್ಟಿಗೆ
ಪಾರ್ಟಿ
ಮಾಡಿ
ಎಂಜಾಯ್
ಮಾಡಿದ್ದರು.

Ramcharan wife Upasana Discharged From Hospital After Delivering Baby Girl

ಆಸ್ಪತ್ರೆಯಿಂದ
ಉಪಾಸನಾ
ಡಿಸ್ಚಾರ್ಜ್
ಆದ
ಬಳಿಕ
ಮೊಲದ
ಬಾರಿಗೆ
ರಾಮ್‌ಚರಣ್
ಮಾಧ್ಯಮಗಳ
ಜೊತೆ
ಮಾತನಾಡಿದ್ದಾರೆ.
ಮಡದಿ,
ಮಗಳ
ಜೊತೆ
ಮೊದಲ
ಬಾರಿಗೆ
ಮೆಗಾ
ಪವರ್
ಸ್ಟಾರ್
ಮಾಧ್ಯಮದ
ಮುಂದೆ
ಬಂದಿದ್ದರು.

ವೇಳೆ
ಮಾತನಾಡಿ
ತಮ್ಮ
ಸಂತಸ
ಹಂಚಿಕೊಂಡರು.
“ತುಂಬಾ
ಸಂತೋಷವಾಗಿದೆ.
ಪ್ರಪಂಚದಾದ್ಯಂತ
ಇರುವ
ಅಭಿಮಾನಿಗಳು,
ಮೆಗಾ
ಫ್ಯಾನ್ಸ್
ಆಶಿರ್ವಾದ
ನಮ್ಮ
ಮಗುವಿಗೆ
ಸಿಕ್ಕಿದೆ.
ಇದಕ್ಕಾಗಿ
ಎಲ್ಲರಿಗೂ
ಧನ್ಯವಾದ”
ಎಂದರು.

ರಾಮ್‌ಚರಣ್- ಉಪಾಸನಾ ಮಗಳ ಫಸ್ಟ್ ಫೋಟೊ ಲೀಕ್? 'ಸೋ ಕ್ಯೂಟ್' ಎನ್ನುತ್ತಿರುವ ಫ್ಯಾನ್ಸ್ರಾಮ್‌ಚರಣ್-
ಉಪಾಸನಾ
ಮಗಳ
ಫಸ್ಟ್
ಫೋಟೊ
ಲೀಕ್?
‘ಸೋ
ಕ್ಯೂಟ್’
ಎನ್ನುತ್ತಿರುವ
ಫ್ಯಾನ್ಸ್

ಮಗುವಿನ
ಹೆಸರೇನು?

“ವಿಶೇಷವಾಗಿ
ವಿದೇಶದಲ್ಲಿರುವ
ಅಭಿಮಾನಿಗಳು
ನಮ್ಮ
ಮಗುವಿನ
ಬಗ್ಗೆ
ಸಂತಸ
ವ್ಯಕ್ತಪಡಿಸಿರುವುದು
ಖುಷಿಯಾಗಿದೆ.
ನಮ್ಮ
ಮಗುವಿಗೆ
ಯಾವಾಗಲೂ
ನಿಮ್ಮ
ಆಶೀರ್ವಾದ
ಇರಬೇಕು.
ಪಾಪ
ಹುಟ್ಟಿದ
ಕ್ಷಣ
ನಾನು
ಮಾತಿನಲ್ಲಿ
ಹೇಳಲಾಗದ
ಸಂತೋಷ.
ಶೀಘ್ರದಲ್ಲೇ
ಮಗುವಿನ
ನಾಮಕರಣ
ಕೂಡ
ಮಾಡುತ್ತೇವೆ.
ನನಗೆ
ಸಂಪ್ರದಾಯಗಳು
ಅಷ್ಟಾಗಿ
ತಿಳಿದಿಲ್ಲ.
13ನೇ
ದಿನ,
ಇಲ್ಲವೇ
21ನೇ
ದಿನ
ಮಗುವಿನ
ಹೆಸರು
ಏನು
ಎನ್ನುವುದನ್ನು
ರಿವೀಲ್
ಮಾಡುತ್ತೇವೆ.
ಈಗಾಗಲೇ
ನಾವಿಬ್ಬರು
ಒಂದು
ಹೆಸರನ್ನು
ಆಯ್ಕೆ
ಮಾಡಿದ್ದೇವೆ”

Ramcharan wife Upasana Discharged From Hospital After Delivering Baby Girl

ಮಗು
ಭಗವಂತನ
ಪ್ರಸಾದ

“ನಿಮ್ಮೆಲ್ಲರ
ಆಶೀರ್ವಾದ
ಯಾವಾಗಲೂ
ಇರಬೇಕೆಂದು
ಬಯಸುತ್ತೇನೆ.
ಇಂತಹ
ಸಂತೋಷದ
ಸಂದರ್ಭದಲ್ಲಿ
ಹೆಚ್ಚಾಗಿ
ಮಾತನಾಡಲು
ಸಾಧ್ಯವಾಗುತ್ತಿಲ್ಲ.
ಬಹಳ
ವರ್ಷಗಳಿಂದ

ದಿನಕ್ಕಾಗಿ
ಎದುರು
ನೋಡುತ್ತಿದ್ದೆವು.
ಅಂದುಕೊಂಡ
ಸಮಯದಲ್ಲಿ
ಭಗವಂತನು
ನಮಗೆ
ಮಗು
ಪ್ರಸಾದಿಸಿದನು.
ಹೆರಿಗೆ
ಮಾಡಿಸಿದ
ಆಸ್ಪತ್ರೆಯ
ವೈದ್ಯರು,
ಸಿಬ್ಬಂದಿ
ಎಲ್ಲರಿಗೂ
ಧನ್ಯವಾದ”
ಎಂದು
ರಾಮ್‌ಚರಣ್
ಹೇಳಿದ್ದಾರೆ.

ರಾಮ್‌ ಚರಣ್‌ಗೆ ಮತ್ತೊಂದು ಮಗು ಆಗೋದಿಲ್ಲ: ಟಾಲಿವುಡ್ ಜ್ಯೋತಿಷಿ ನುಡಿದ ಭವಿಷ್ಯದಲ್ಲಿ ಇನ್ನೇನಿದೆ?ರಾಮ್‌
ಚರಣ್‌ಗೆ
ಮತ್ತೊಂದು
ಮಗು
ಆಗೋದಿಲ್ಲ:
ಟಾಲಿವುಡ್
ಜ್ಯೋತಿಷಿ
ನುಡಿದ
ಭವಿಷ್ಯದಲ್ಲಿ
ಇನ್ನೇನಿದೆ?

ಮಗು
ಯಾರ
ಹೋಲಿಕೆ?

“ಮಗು
ಯಾರ
ಹೋಲಿಕೆ
ಎಂದು
ಮಾಧ್ಯಮದವರು
ಕೇಳಿದ
ಪ್ರಶ್ನೆಗೆ
“ಖಂಡಿತ
ತಂದೆಯಂತೆ
ಇದ್ದಾಳೆ”
ಎಂದು
ಹೇಳಿ
ರಾಮ್‌ಚರಣ್
ನಕ್ಕಿದ್ದಾರೆ.
ಸದ್ಯ
ರಾಮ್‌ಚರಣ್‌ಗೆ
ಮಗಳು
ಹುಟ್ಟಿರುವ
ವಿಚಾರ
ಮೆಗಾ
ಫ್ಯಾಮಿಲಿ
ಹಾಗೂ
ಅಭಿಮಾನಿಗಳ
ಸಂಭ್ರಮ
ತಂದಿದೆ.
ಚಿರಂಜೀವಿ
ಮನೆಯಲ್ಲಿ
ಸಡಗರ
ಮುಗಿಲು
ಮುಟ್ಟಿದೆ.
ಇನ್ನು
ಇತ್ತೀಚಿಗೆ
ಚಿರು
ಆಪ್ತರಿಗೆ
ಪಾರ್ಟಿ
ಕೊಟ್ಟದ್ದಾಗಿಯೂ
ಹೇಳಲಾಗ್ತಿದೆ.

ಮೆಗಾ
ಪ್ರಿನ್ಸೆನ್ಸ್
ಹ್ಯಾಷ್‌ಟ್ಯಾಗ್
ವೈರಲ್

ಇನ್ನು
ಕಳೆದ
4
ದಿನಗಳಿಂದ
ಮೆಗಾ
ಪ್ರಿನ್ಸೆನ್ಸ್
ಹ್ಯಾಷ್‌ಟ್ಯಾಗ್
ಸೋಶಿಯಲ್
ಮೀಡಿಯಾದಲ್ಲಿ
ವೈರಲ್
ಆಗುತ್ತಿದೆ.
ಮದುವೆಯಾಗಿ
11
ವರ್ಷಗಳ
ನಂತರ
ದಂಪತಿಗೆ
ಮಗುವಾಗಿದೆ.
ರಾಮ್‌ಚರಣ್
ಕೆಲ
ದಿನಗಳ
ಕಾಲ
ಸಿನಿಮಾ
ಚಿತ್ರೀಕರಣದಿಂದ
ಬ್ರೇಕ್
ಪಡೆದು
ಮಡದಿ
ಮಗಳ
ಜೊತೆ
ಕಾಲ
ಕಳೆಯುತ್ತಿದ್ದಾರೆ.
ಸದ್ಯ
ಶಂಕರ್
ನಿರ್ದೇಶನದ
‘ಗೇಮ್‌
ಚೇಂಜರ್’
ಚಿತ್ರದಲ್ಲಿ
ಮೆಗಾ
ಪವರ್
ಸ್ಟಾರ್
ಬಣ್ಣ
ಹಚ್ಚಿದ್ದಾರೆ.

English summary

Ramcharan wife Upasana Discharged From Hospital After Delivering Baby Girl. she reaches home with baby and husband. Ramcharan reacts Baby Looks like him. know more.

Friday, June 23, 2023, 16:25

Story first published: Friday, June 23, 2023, 16:25 [IST]

Source link