Business
oi-Punith BU

ಬೆಂಗಳೂರು, ಜೂನ್ 20: ಅಪರಿಚಿತ ಸಂಖ್ಯೆಗಳಿಂದ ಸ್ಪ್ಯಾಮ್ ಕರೆಗಳು ಹೆಚ್ಚಾಗುತ್ತಿರುವ ಹಿನ್ನೆಲೆಯಲ್ಲಿ ಮೆಟಾ WhatsAppನಲ್ಲಿ ಹೊಸ ವೈಶಿಷ್ಟ್ಯವನ್ನು ಪರಿಚಯಿಸಿದೆ.
ಇದು ವಾಟ್ಸಾಪ್ ಬಳಕೆದಾರರಿಗೆ ಅಪರಿಚಿತ ಕರೆಗಳನ್ನು ಸ್ವಯಂಚಾಲಿತವಾಗಿ ಮ್ಯೂಟ್ ಮಾಡಲು ಅನುವು ಮಾಡಿಕೊಡುತ್ತದೆ. ಈ ಹೊಸ ವೈಶಿಷ್ಟ್ಯವು WhatsApp ಅನ್ನು ಇನ್ನಷ್ಟು ಬಳಕೆದಾರರಿಗೆ ಖಾಸಗಿಯನ್ನಾಗಿ ಮಾಡಲಿದ್ದು, ಬಳಕೆದಾರರಿಗೆ ಹೆಚ್ಚಿನ ನಿಯಂತ್ರಣವನ್ನು ನೀಡುತ್ತದೆ.

ಈ ವೈಶಿಷ್ಟ್ಯವು ಇನ್ನು ಬೀಟಾ ಪರೀಕ್ಷೆ ಹಂತದಲ್ಲಿದೆ. ಸ್ಥಿರ ಆವೃತ್ತಿಯು ಈಗ Android ಮತ್ತು iOS ಸ್ಮಾರ್ಟ್‌ಫೋನ್ ಬಳಕೆದಾರರಿಗೆ ಲಭ್ಯವಿದೆ. ಗೌಪ್ಯತೆ ಸೆಟ್ಟಿಂಗ್‌ಗಳ ಮೆನು ಮೂಲಕ ಸಕ್ರಿಯಗೊಳಿಸಿದಾಗ ಅಪ್ಲಿಕೇಶನ್ ಸ್ವಯಂಚಾಲಿತವಾಗಿ ಅಪರಿಚಿತ ಸಂಖ್ಯೆಗಳಿಂದ ಕರೆಗಳನ್ನು ನಿಶ್ಯಬ್ದಗೊಳಿಸುತ್ತದೆ.
ನಿಮ್ಮ ಫೋನ್‌ನಲ್ಲಿ ನೀವು WhatsAppನ ಇತ್ತೀಚಿನ ಆವೃತ್ತಿಯನ್ನು ಇನ್‌ಸ್ಟಾಲ್ ಮಾಡಿರುವಿರಾ ಎಂಬುದನ್ನು ಖಚಿತಪಡಿಸಿಕೊಳ್ಳಿ ಅಥವಾ ಅದನ್ನು Google Play Store ಅಥವಾ Apple App Store ಮೂಲಕ ಅಪ್‌ಡೇಟ್ ಮಾಡಿ. WhatsAppನ ಸ್ಥಿರ ಆವೃತ್ತಿಯೊಂದಿಗೆ Galaxy S23 Ultra ಮತ್ತು Realme 11 Pro+ ನಂತಹ ಫೋನ್‌ಗಳಲ್ಲಿ ಈ ವೈಶಿಷ್ಟ್ಯವನ್ನು ಬಳಸಲು ಈಗಾಗಲೇ ಚಾಲ್ತಿಯಲ್ಲಿದೆ ಎಂದು ವರದಿಗಳು ತಿಳಿಸಿವೆ.
ಅಪರಿಚಿತ ಕರೆ ಸೈಲಂಟ್ ಮಾಡುವ ಹಂತಗಳು
1. WhatsApp ತೆರೆಯಿರಿ
2. ಮೇಲಿನ ಬಲ ಮೂಲೆಯಲ್ಲಿರುವ ಮೆನುವಿನ ಮೇಲೆ ಕ್ಲಿಕ್ ಮಾಡಿ
3. ಸೆಟ್ಟಿಂಗ್‌ಗಳಿಗೆ ಹೋಗಿ
4. ಗೌಪ್ಯತೆ ಮೇಲೆ ಕ್ಲಿಕ್ ಮಾಡಿ
5. ಕರೆಗಳನ್ನು ಆಯ್ಕೆಮಾಡಿ
6. ಅಪರಿಚಿತ ಕರೆ ಮಾಡುವವರನ್ನು ಮ್ಯೌಟ್ ಆಕ್ಟಿವೇಟ್ ಮಾಡಿ.
ಮೆಟಾ ವಾಟ್ಸಾಪ್‌ಗೆ ಪ್ರತಿ ವಾರ ಹೊಸ ವೈಶಿಷ್ಟ್ಯಗಳನ್ನು ಸೇರಿಸುತ್ತಿದೆ. ಕಂಪನಿಯು ಇತ್ತೀಚೆಗೆ ಆಯ್ದ ಮಾರುಕಟ್ಟೆಗಳಲ್ಲಿ WhatsApp ಚಾನೆಲ್‌ಗಳನ್ನು ಪರಿಚಯಿಸಿದೆ. ಅಲ್ಲದೆ WhatsApp ಕಳುಹಿಸಿದ ಸಂದೇಶಗಳನ್ನು 15 ನಿಮಿಷಗಳವರೆಗೆ ಎಡಿಟ್ ಮಾಡುವ ಅವಕಾಶವನ್ನೂ ನೀಡಿದೆ.
English summary
In the wake of increasing spam calls from unknown phone numbers, Meta has introduced a new feature on WhatsApp.
Story first published: Tuesday, June 20, 2023, 14:24 [IST]