Vandhe Bharat: ಮೆಜೆಸ್ಟಿಕ್-ಯಶವಂತಪುರಕ್ಕೆ ₹410, ಬೆಂಗಳೂರು-ಧಾರವಾಡಕ್ಕೆ ಎಷ್ಟಿದೆ ಟಿಕೆಟ್ ದರ? ನೋಡಿ | Vande Bharat Express: Bengaluru-Hubballi-Dharwad Train, Ticket Fare Rs2265,Rs1165, Check fare

Karnataka

oi-Shankrappa Parangi

|

Google Oneindia Kannada News

ಬೆಂಗಳೂರು, ಜೂನ್ 27: ಉತ್ತರ ಕರ್ನಾಟಕ ಮತ್ತು ದಕ್ಷಿಣ ಕರ್ನಾಟಕ ಭಾಗ ಸಂಪರ್ಕಿಸುವ ವಂದೇ ಭಾರತ್ (VB) ಎಕ್ಸ್‌ಪ್ರೆಸ್ ರೈಲು ನಿಗದಿಯಂತೆ ಇಂದು ಮಂಗಳವಾರ ಪ್ರಧಾನಿ ನರೇಂದ್ರ ಮೋದಿ ಚಾಲನೆ ನೀಡಿದ್ದಾರೆ. ಈ ಬೆಂಗಳೂರಿನಿಂದ ಧಾರವಾಡಕ್ಕೆ ಟಿಕೆಟ್ ದರ ಎರಡು ಬದಿಯಲ್ಲಿ ಒಂದೇ ತೆರನಾಗಿಲ್ಲ. ಜೊತೆಗೆ ಬೆಂಗಳೂರು ಕ್ರಾಂತಿವೀರ ಸಂಗೊಳ್ಳಿ ರಾಯಣ್ಣ ರೈಲು ನಿಲ್ದಾಣ (KSR)ದಿಂದ ಯಶವಂತಪುರಕ್ಕೆನೇ ದಿಗಲು ಬೀಳುವಷ್ಟು ದರ ನಿಗದಿ ಆಗಿದೆ. ಅದರ ಪೂರ್ಣ ವಿವರ ಇಲ್ಲಿದೆ.

ಬೆಂಗಳೂರಿನಿಂದ ವಯಾ ಹುಬ್ಬಳ್ಳಿ ಮಾರ್ಗವಾಗಿ ಧಾರವಾಡ ತಲುಪುವ ಈ ನೂತನ ವಂದೇ ಭಾರತ್ ಎಕ್ಸ್‌ಪ್ರೆಸ್‌ಗೆ ಏಕಮುಖ ಸಂಚಾರಕ್ಕೆ ಎಕ್ಸಿಕ್ಯೂಟಿವ್ (Excutive class) ಕ್ಲಾಸ್‌ನಲ್ಲಿ ಪ್ರಯಾಣಿಸಲು ರೂ.2,265 ದರ ಇದೆ. ಮತ್ತು ಎಸಿ ಚೇರ್ ಕಾರ್‌ನಲ್ಲಿ ಕೂತ ಪ್ರಯಾಣಿಸಲು 1,165 ರೂಪಾಯಿ ಇದೆ.

Vande Bharat Express

ಇನ್ನು ಇದೇ ರೈಲಿನಲ್ಲಿ ಮರಳಿ ಧಾರವಾಡದಿಂದ ಬೆಂಗಳೂರಿಗೆ ಹಿಂದಿರುಗಲು ಎಕ್ಸಿಕ್ಯೂಟಿವ್ ಸೀಟಿನ ಟಿಕೆಟ್ ಗೆ 2,460 ರೂಪಾಯಿ ಇದ್ದರೆ, ಎಸಿ ಚೇರ್ ಕಾರ್‌ ವರ್ಗಕ್ಕೆ 1,330 ರೂಪಾಯಿ ಟಿಕೆಟ್ ಶುಲ್ಕ ವಿಧಿಸಲಾಗಿದೆ.

ದಕ್ಷಿಣ ಪಶ್ಚಿಮ ರೈಲ್ವೆ ಅಥವಾ ನೈಋತ್ಯ ರೈಲ್ವೆ (SWR) ಕರ್ನಾಟಕದ ಮೊದಲ ಅಂತಾರಾಜ್ಯ ವಂದೇ ಭಾರತ್ ರೈಲನ್ನು ನಿರ್ವಹಿಸಲು ಸಿದ್ಧವಾಗಿದೆ. ಈಗಾಗಲೇ ಪ್ರಾಯೋಗಿಕ ಚಾಲನೆ, ಹಳಿ , ಸಿಗ್ನಲಿಂಗ್ ತಪಾಸಣೆ ಯಶಸ್ವಿಯಾಗಿದೆ. ಇದೀಗ ದೇಶದ ಪ್ರಧಾನಿ ನರೇಂದ್ರ ಮೋದಿ ಸಹ ರೈಲಿಗೆ ವಿದ್ಯುಕ್ತವಾಗಿ ಚಾಲನೆ ನೀಡಿದ್ದಾರೆ.

Vande Bharat Express

ವರ್ಚುವಲ್ ಮೂಲಕ ಬೆಂಗಳೂರು-ಹುಬ್ಬಳ್ಳಿ-ಧಾರವಾಡ ರೈಲು ಜೊತೆಗೆ ಇನ್ನಿತರ ಭಾಗದ ಒಟ್ಟು 04 ವಂದೇ ಭಾರತ್ ಎಕ್ಸ್‌ಪ್ರೆಸ್ ರೈಲುಗಳ ಚಾಲನೆಗೆ ಇದೇ ವೇಳೆ ಅವರು ಹಸಿರು ನಿಶಾನೆ ತೋರಿಸಿದರು. ಭೋಪಾಲ್‌ನ ರಾಣಿ ಕಮಲಾಪತಿ ರೈಲು ನಿಲ್ದಾಣ. ಧಾರವಾಡ ನಿಲ್ದಾಣದಲ್ಲಿ ರಾಜ್ಯಪಾಲ ತಾವರಚಂದ್ ಗೆಹ್ಲೋಟ್ ಮತ್ತು ಕೇಂದ್ರ ಸಚಿವ ಪ್ರಲ್ಹಾದ್ ಜೋಶಿ ಉದ್ಘಾಟನಾ ಕಾರ್ಯಕ್ರಮದಲ್ಲಿ ಭಾಗವಹಿಸಿದರು.

ಮೆಜೆಸ್ಟಿಕ್ (KSR) -ಯಶವಂತಪುರಕ್ಕೆ 410 ರೂ. ಶುಲ್ಕ

ಈ ವಂದೇ ಭಾರತ್ ಟಿಕೆಟ್‌ನಲ್ಲಿ ಅಚ್ಚರಿ ಎಂದರೆ ಬೆಂಗಳೂರಿನ ಕ್ರಾಂತಿವೀರ ಸಂಗೊಳ್ಳಿ ರಾಯಣ್ಣ ರೈಲುನಿಲ್ದಾಣ ಮೆಜೆಸ್ಟಿಕ್‌ನಿಂದ ಮಲ್ಲೇಶ್ವರಂ ನಿಲ್ದಾಣ ಮೂಲಕ ಯಶವಂಪುರ ತಲುಪಲು 410 ರೂಪಾಯಿ ವಿಧಿಸಲಾಗಿದೆ. ಕಡಿಮೆ ಅಂತರಕ್ಕೆ ಯಾಕಿಷ್ಟು ಹಣ ಎಂದು ಕೆಲವರು ಕೇಳುತ್ತಿದ್ದಾರೆ.

ಒಂದು ಹಂತದ ಐಶಾರಾಮಿ ರೈಲು ಇದಾಗಿದೆ. ಉತ್ತಮ ಸೌಲಭ್ಯ ಹೊಂದಿರುವ ಈ ರೈಲು ನೋಡಲು, ಇತರ ಬಳಕೆಗೆಂದು ಹತ್ತಿ ಮುಂದಿನ ನಿಲ್ದಾಣದಲ್ಲಿ ಇಳಿಯುವವರು ಇದ್ದಾರೆ. ಈ ವೇಳೆ ದೂರದ ಊರಿಗೆ ತೆರಳುವವರಿಗೆ ತೊಂದರೆ ಆಗುವ ಸಾಧ್ಯತೆ ಹೆಚ್ಚಿರುತ್ತದೆ. ಹೀಗಾಗಿ ಕೆಎಸ್‌ಆರ್‌- ಯಶವಂತಪುರ ಮಧ್ಯದ ಪ್ರಯಾಣಕ್ಕೆ ಇಷ್ಟೊಂದು (410) ಶುಲ್ಕ ವಿಧಿಸಲಾಗಿದೆ.

ಒಂದೇ ದಿನ ರಜೆ-ಆರು ದಿನ ಕಾರ್ಯಾಚರಣೆ

ಇನ್ನೂ ಬೆಂಗಳೂರು-ಧಾರವಾಡ ವಂದೇ ಭಾರತ್ ಎಕ್ಸ್‌ಪ್ರೆಸ್ ರೈಲು ಸಂಖ್ಯೆ (20661/20662) ವಾರದಲ್ಲಿ ಆರು ದಿನ ಕಾರ್ಯ ನಿರ್ವಹಿಸುತ್ತದೆ. ಮಂಗಳವಾರ ಈ ರೈಲಿನ ಯಾವುದೇ ಸೇವೆಗಳು ಲಭ್ಯವಿರುವುದಿಲ್ಲ. ವಾಣಿಜ್ಯ ಕಾರ್ಯಾಚರಣೆಗಳು ಜೂನ್ 28 ಬುಧವಾರ ಆರಂಭಗೊಳ್ಳಲಿದೆ. ಬೆಂಗಳೂರಿನಿಂದ ಹುಬ್ಬಳ್ಳಿಗೆ ಪ್ರಯಾಣಿಸಲು ಎಕ್ಸಿಕ್ಯೂಟಿವ್ ವರ್ಗದಲ್ಲಿ 2,220 ರೂ. ಮತ್ತು ಹುಬ್ಬಳ್ಳಿಯಿಂದ ಬೆಂಗಳೂರಿಗೆ 2,395 ರೂ ನಿಗದಿ ಮಾಡಲಾಗಿದೆ ಎಂದು ಅಧಿಕಾರಿಗಲು ಮಾಹಿತಿ ನೀಡಿದ್ದಾರೆ.

ರೈಲು ಬೆಂಗಳೂರಿನಿಂದ ಬೆಳಗ್ಗೆ 5.45ಕ್ಕೆ ಮೆಜೆಸ್ಟಿಕ್‌ನಿಂದ ಹೊರಡಲಿದ್ದು, ಮಧ್ಯಾಹ್ನ 12.10ಕ್ಕೆ ಧಾರವಾಡ ತಲುಪುತ್ತದೆ. ಹಿಂತಿರುಗುವ ದಿಕ್ಕಿನಲ್ಲಿ, ರೈಲು ಧಾರವಾಡದಿಂದ ಮಧ್ಯಾಹ್ನ 1.15 ಕ್ಕೆ ಹೊರಟು ರಾತ್ರಿ 7.45 ಕ್ಕೆ ಬೆಂಗಳೂರು ಕ್ರಾಂತಿವೀರ ಸಂಗೊಳ್ಳಿ ರಾಯಣ್ಣ ರೈಲು ನಿಲ್ದಾಣ ಮೆಜೆಸ್ಟಿಕ್‌ಗೆ ತಲುಪುತ್ತದೆ.

English summary

Vande Bharat Express: Bengaluru-Dharwad exclusive class ticket rs 2,265 retursn fare Rs 1165, Check train ticket fare.

Source link