Tomato Price: 100 ರೂಪಾಯಿ ದಾಟಿದ ಟೊಮ್ಯಾಟೊ ಬೆಲೆ: ಏಕಾಏಕಿ ದರ ಹೆಚ್ಚಳಕ್ಕೆ ಕಾರಣವೇನು ನೋಡಿ | Tomato Price: Know Why Tomato Prices Have Suddenly Skyrocketed

Karnataka

oi-Naveen Kumar N

|

Google Oneindia Kannada News

ಬೆಂಗಳೂರು, ಜೂನ್ 27: ದೇಶಾದ್ಯಂತ ಟೊಮ್ಯಾಟೋ ಬೆಲೆಯಲ್ಲಿ ಭಾರಿ ಏರಿಕೆಯಾಗಿದ್ದು, ಸದ್ಯ ಶತಕದ ಗಡಿ ದಾಟಿದೆ. ಬೆಂಗಳೂರು ಸೇರಿದಂತೆ ಹಲವು ನಗರಗಳಲ್ಲಿ ಟೊಮ್ಯಾಟೋ ಬೆಲೆ ನೂರು ರೂಪಾಯಿ ಮುಟ್ಟಿದೆ. ಕಳೆದ ವಾರ 40-50 ರೂಪಾಯಿ ಆಸುಪಾಸಿನಲ್ಲಿದ್ದ ಟೊಮ್ಯಾಟೊ ಬೆಲೆ ಒಂದೇ ವಾರದಲ್ಲಿ ದುಪ್ಪಟ್ಟಾಗಿದೆ.

ಟೊಮ್ಯಾಟೋ ಮಾತ್ರವಲ್ಲದೆ ಇತರೆ ತರಕಾರಿಗಳ ಬೆಲೆ ಕೂಡ ಗಗನಕ್ಕೇರಿದೆ. ತರಕಾರಿ ಬೆಲೆ ಹೆಚ್ಚಳದ ಪರಿಣಾಮ ಹಲವು ಹೋಟೆಲ್‌ಗಳು ಊಟ-ತಿಂಡಿಗಳ ದರ ಹೆಚ್ಚಿಸಿವೆ. ಟೊಮ್ಯಾಟೋ ಸದ್ಯ 100-120 ರೂಪಾಯಿ ಆಗಿದೆ. ರಾಜ್ಯದಲ್ಲಿ ಅತಿ ಹೆಚ್ಚು ಟೊಮ್ಯಾಟೋ ಬೆಳೆಯುವ ಕೋಲಾರ ಜಿಲ್ಲೆಯಲ್ಲಿ ಟೊಮ್ಯಾಟೋ ಬೆಳೆಯುವ ರೈತರ ಸಂಖ್ಯೆ ಕಡಿಮೆಯಾಗಿದ್ದು, ನಿರೀಕ್ಷಿತ ಪ್ರಮಾಣದಲ್ಲಿ ಪೂರೈಕೆಯಾಗದ ಕಾರಣ ಬೆಲೆ ಗಗನಕ್ಕೇರಿದೆ.

Tomato Price: Know Why Tomato Prices Have Suddenly Skyrocketed

ಏಷ್ಯಾದ ಎರಡನೇ ಅತಿ ದೊಡ್ಡ ಮಾರುಕಟ್ಟೆ ಕೋಲಾರ ಎಪಿಎಂಸಿಯಲ್ಲಿ ಸದ್ಯ 15 ಕೆ.ಜಿ.ಯ ಟೊಮ್ಯಾಟೋ ಬಾಕ್ಸ್ 1,100 ರೂಪಾಯಿಗೆ ಮಾರಾಟವಾಗಿದೆ. ಯಾದಗಿರಿ ಜಿಲ್ಲೆಯಲ್ಲಿ 20 ಕೆ.ಜಿ ಟೊಮ್ಯಾಟೋ ಚೀಲದ ಬೆಲೆ 2400 ರೂಪಾಯಿಗೆ ಮಾರಾಟವಾಗಿದೆ.

ಏಕಾಏಕಿ ದರ ಹೆಚ್ಚಳಕ್ಕೆ ಕಾರಣವೇನು?

ಹವಾಮಾನ ಬದಲಾವಣೆ, ತೀವ್ರ ಬಿಸಿಲು, ನೀರಿನ ಕೊರತೆ ಟೊಮ್ಯಾಟೋ ಉತ್ಪಾದನೆ ಕಡಿಮೆಯಾಗಲು ಪ್ರಮುಖ ಕಾರಣವಾಗಿದೆ. ಬಿಸಿಲು ಹೆಚ್ಚು ಮತ್ತು ಅಕಾಲಿಕ ಮಳೆಯಿಂದಾಗಿ ಹಲವು ಕಡೆ ನಿರೀಕ್ಷಿಯ ಪ್ರಮಾಣದಲ್ಲಿ ಇಳುವರಿ ಬಂದಿಲ್ಲ. ಇದರಿಂದ ಪೂರೈಕೆ ಕಡಿಮೆಯಾಗಿದ್ದು ಏಕಾಏಕಿ ಬೇಡಿಕೆ ಹೆಚ್ಚಾಗಿರುವ ಕಾರಣ ದರ ಗಗನಕ್ಕೇರಿದೆ.

ಟೊಮ್ಯಾಟೋ ಮತ್ತು ಈರುಳ್ಳಿ ಬೆಳೆಗಳು ಒಂದು ರೀತಿಯ ಲಾಟರಿ ಇದ್ದಂತೆ. ಇದರಲ್ಲಿ ಬಂದರೆ ಲಕ್ಷಗಟ್ಟಲೆ ಲಾಭ ಪಡೆಯಬಹುದು, ಬೆಲೆ ಸಿಗದೇ ಇದ್ದರೆ ದೊಡ್ಡ ಪ್ರಮಾಣದಲ್ಲಿ ನಷ್ಟ ಕೂಡ ಆಗುತ್ತದೆ. ಟೊಮ್ಯಾಟೋ ಬೆಳೆಯಲು ಸಾಮಾನ್ಯವಾಗಿ ಹೆಚ್ಚಿನ ಬಂಡವಾಳ ಕೂಡ ಬೇಕಾಗುತ್ತದೆ. ಶ್ರಮವೂ ಜಾಸ್ತಿ ಬೇಡುವ ಬೆಳೆಯಾಗಿರುವ ಕಾರಣ ಕೂಲಿಯಾಳುಗಳ ಕೊರತೆಯೂ ಹಲವು ರೈತರನ್ನು ಟೊಮ್ಯಾಟೋ ಬೆಳೆಯುವ ನಿರ್ಧಾರದಿಂದ ಹಿಂದೆ ಸರಿಯುವಂತೆ ಮಾಡಿದೆ. ಕೋಲಾರದಲ್ಲಿ ರೈತರು ಟೊಮ್ಯಾಟೋ ಬೆಳೆಯನ್ನು ಕಡಿಮೆ ಮಾಡಿ ಬೀನ್ಸ್ ಬೆಳೆಯಲು ಆರಂಭಿಸಿದ್ದಾರೆ. ಇದು ಕೂಡ ಉತ್ಪಾದನೆ ಕಡಿಮೆಯಾಗಲು ಕಾರಣವಾಗಿದೆ.

ದೇಶದ ಇತರೆ ರಾಜ್ಯಗಳಲ್ಲಿ ಕೂಡ ದರ ಹೆಚ್ಚಳ

ಕರ್ನಾಟಕ ಮಾತ್ರವಲ್ಲದೆ ದೇಶಾದ್ಯಂತ ಟೊಮ್ಯಾಟೊ ದರದಲ್ಲಿ ಭಾರಿ ಏರಿಕೆ ಕಂಡಿದೆ. ಭೋಪಾಲ್‌ನಲ್ಲಿ ಕೆ.ಜಿ. ಟೊಮ್ಯಾಟೋ ದರ 100 ರೂಪಾಯಿ ಇದ್ದರೆ, ರಾಷ್ಟ್ರ ರಾಜಧಾನಿ ನವದೆಹಲಿಯಲ್ಲಿ ಕೂಡ ಟೊಮ್ಯಾಟೋ ದರ 100 ರೂಪಾಯಿ ದಾಟಿದೆ. ಪಂಜಾಬ್ ಮತ್ತು ಜೈಪುರದಲ್ಲಿ ಸದ್ಯ ಟೊಮ್ಯಾಟೋ ದರ 60-80 ರೂಪಾಯಿ ಆಗಿದೆ.

English summary

Tomato prices have suddenly skyrocketed in India, with prices reaching as high as Rs. 100 per kilogram in several cities across the country. In Asia’s second-largest tomato market, Kolara, a 15 kg box of tomatoes is being sold at a price of Rs. 1,100. Know Why Tomato Price Rate Suddenly Increased.

Story first published: Tuesday, June 27, 2023, 16:05 [IST]

Source link