Tv
oi-Narayana M
By ಪ್ರಿಯಾ ದೊರೆ
|
‘ಶ್ರೀರಸ್ತು
ಶುಭಮಸ್ತು’
ಧಾರಾವಾಹಿಯಲ್ಲಿ
ಶಾರ್ವರಿ
ಹಾಗೂ
ತುಳಸಿ
ಭೇಟಿಯಾಗಿದ್ದಾಗಿದೆ.
ತುಳಸಿ
ಕೆಫೆಗೆ
ಚೀಫ್
ಶೆಫ್
ಎಂಬುದನ್ನು
ತಿಳಿದು
ಶಾರ್ವರಿಗೆ
ಹೊಟ್ಟೆ
ಉರಿ
ತಡೆಯಲು
ಆಗುತ್ತಿಲ್ಲ.
ಸದಾ
ತುಳಸಿ
ಮೇಲೆ
ಕೆಂಡ
ಕಾರುತ್ತಿದ್ದ
ಶಾರ್ವರಿಗೆ
ಈಗ
ಆಕೆಯಿಂದ
ಮಾಧವ್
ಭಾವನನ್ನು
ದೂರ
ಮಾಡುವುದು
ಹೇಗೆ
ಎಂಬುದೇ
ತಿಳಿಯುತ್ತಿಲ್ಲ.
ಅದಕ್ಕಾಗಿ
ಇನ್ನಿಲ್ಲದ
ಕಸರತ್ತು
ಮಾಡಲು
ಆರಂಭಿಸಿದ್ದಾಳೆ.
ಮಾಧವ್
ಪತ್ನಿ
ಅಪಘಾತದಲ್ಲಿ
ತೀರಿಕೊಂಡ
ಮೇಲೆ
ಮನೆಯಲ್ಲಿ
ಎಲ್ಲವೂ
ಶಾರ್ವರಿ
ಕೈಯಲ್ಲೇ
ಇತ್ತು.
ಅವಳಿಗೆ
ಹೇಗೆ
ಬೇಕೋ
ಹಾಗೆ
ನಡೆಸಿಕೊಂಡು
ಹೋಗುತ್ತಿದ್ದಳು.
ಈಗ
ಮಾಧವ್‌ಗೆ
ತುಳಸಿ
ಸಿಕ್ಕಿದ
ಮೇಲೆ
ಎಲ್ಲವೂ
ಬದಲಾಗಿದೆ.
ಮನೆಯಲ್ಲಿ
ಮಾಧವ್
ಮನಸ್ಸನ್ನು
ಕದಡಲು
ಶಾರ್ವರಿ
ಎಷ್ಟೇ
ಪ್ರಯತ್ನಿಸಿದರೂ
ಸಾಧ್ಯವಾಗುತ್ತಿಲ್ಲ.
ಇದಕ್ಕೆಲ್ಲಾ
ತುಳಸಿಯೇ
ಕಾರಣ
ಎಂಬುದು
ಈಗ
ಶಾರ್ವರಿಗೆ
ಅರ್ಥವಾಗಿದೆ.
ಹೇಗಾದರೂ
ಮಾಡಿ
ನಾನು
ಮತ್ತೆ
ಮಾಧವ್‌ನನ್ನು
ತುಳಸಿಯಿಂದ
ದೂರ
ಮಾಡಬೇಕು.
ಆದರೆ,
ಹೇಗೆ
ಇದೆಲ್ಲಾ
ಮಾಡುವುದು.
ಮೊದಲೆಲ್ಲಾ
ನಾನು
ಹೇಳಿದಂತೆ
ನಡೆಯುತ್ತಿತ್ತು,
ಈಗ
ಯಾವುದೂ
ನನ್ನ
ಕೈನಲ್ಲಿ
ಇಲ್ಲ
ಎಂದು
ಗೋಳಾಡುತ್ತಿರುತ್ತಾಳೆ.
ಶಾರ್ವರಿಯ
ಒದ್ದಾಟವನ್ನು
ನೋಡುತ್ತಾ
ಮಹೇಶ್
ಒಳಗೊಳಗೆ
ಖುಷಿ
ಪಡುತ್ತಿರುತ್ತಾನೆ.
ಮಹೇಶ್‌ಗೆ
ಶಾರ್ವರಿಯ
ಆಟವನ್ನು
ನಿಲ್ಲಿಸುವವರು
ಯಾರಾದರೂ
ಬರಲಿ
ಎಂದು
ಆಶೀಸುತ್ತಿದ್ದಾರೆ.

ಅಪ್ಪನ
ಬಳಿ
ಮಗನ
ಬಗ್ಗೆ
ಹೇಳಿದ
ತುಳಸಿ
ಇತ್ತ
ಮಾಧವ್
ರಾಗಿ
ಪಿಜ್ಜಾ
ತಿಂದು
ತುಳಸಿಯನ್ನು
ಹೊಗಳುತ್ತಿರುತ್ತಾನೆ.
ಬಳಿಕ
ಶಾರ್ವರಿಯನ್ನು
ಭೇಟಿ
ಮಾಡಿದ್ರಲ್ಲ
ನಿಮಗೆ
ಖುಷಿ
ಆಯ್ತಾ
ಎಂದು
ಕೇಳುತ್ತಾನೆ.
ಆದರೆ,
ತುಳಸಿಗೆ
ಮನದೊಳಗೆ
ತನ್ನ
ಹಾಗೂ
ಶಾರ್ವರಿ
ನಡುವಿನ
ಸಂಬಂಧದ
ಬಗ್ಗೆ
ಬೇಸರವಿದೆ.
ಜೊತೆಗೆ
ಮಾಧವ್
ಅವರಂತೆ
ಶಾರ್ವರಿ
ಅಲ್ಲ
ಎಂಬುದು
ತಿಳಿದಿದೆ.
ತುಳಸಿ
ಮನೆಗೆ
ಹೊರಟಾಗ
ಮಾಧವ್
ರಸ್ತೆ
ದಾಟುವಾಗ
ಎಚ್ಚರ
ಎಂದು
ಹೇಳುತ್ತಾರೆ.
Puttakkana
Makkalu:
ಭುವನ್‌ಗೆ
ಗೊತ್ತಾಯ್ತು
ಸ್ನೇಹಾ
ಲವ್
ವಿಚಾರ;
ತಂಗಿ
ಮದುವೆ
ನಿಲ್ಲಿಸಲು
ಹೊರಟ
ಸಹನಾ!
ಮಾಧವ್
ಮಾತು
ಕೇಳಿದ
ತುಳಸಿ,
ಅವಿ
ಆಕೆಗೆ
ರಸ್ತೆ
ದಾಟಿಸಿ,
ಆಟೋ
ಬುಕ್
ಮಾಡಿಕೊಟ್ಟ
ವಿಚಾರವನ್ನು
ಹೇಳುತ್ತಾಳೆ.
ಅಲ್ಲದೇ,
ಯಾರೋ
ಒಂದುಳ್ಳೆಯ
ಹುಡುಗ,
ಸಂಸ್ಕಾರವಂತ
ಎಂದು
ತಂದೆಯ
ಎದುರೇ
ಮಗನನ್ನು
ಹೊಗಳುತ್ತಾಳೆ.
ಆದರೆ,
ತುಳಸಿ
ತನ್ನ
ಮಗ
ಅವಿ
ಬಗ್ಗೆ
ಹೇಳುತ್ತಿರುವುದು
ಎಂಬುದು
ಮಾಧವ್‌ಗೂ
ತಿಳಿಯುವುದಿಲ್ಲ.
ತಾತನ
ಹಣ
ಕದ್ದ
ಸಂಧ್ಯಾ
ಇನ್ನು
ದತ್ತ
ತಾತನ
ರೂಮ್‌ನಲ್ಲಿ
ಹಣ
ಕದಿಯುತ್ತಿದ್ದ
ಸಂಧ್ಯಾಳನ್ನು
ತಾತ
ನೋಡುವುದೇ
ಇಲ್ಲ.
ನಂದಿನಿ
ಶೇಷು
ಹಾಗೂ
ಅವರ
ಹೆಂಡತಿಯನ್ನು
ಮನೆಯಿಂದ
ಆಚೆ
ಕಳಿಸಿದ
ವಿಚಾರವಾಗಿ
ಮಾತನಾಡುತ್ತಿರುತ್ತಾನೆ.
ಇದೇ
ಸರಿಯಾದ
ಸಮಯ
ಎಂದು
ತಿಳಿದ
ಸಂಧ್ಯಾ,
ರೂಮ್‌ನಿಂದ
ಹಣದ
ಬ್ಯಾಗ್
ಜೊತೆಗೆ
ತೆವಳಿಕೊಂಡು
ಆಚೆ
ಬರುತ್ತಾಳೆ.
ಇನ್ನು
ಈ
ಹಣ
ಕದ್ದಿರುವುದು
ದತ್ತ
ತಾತನಿಗೆ
ತಿಳಿದರೆ,
ಮುಂದೇನಾಗುತ್ತದೋ
ಗೊತ್ತಿಲ್ಲ.

ಸಿರಿ
ಮೇಲೆ
ಕಳ್ಳತನದ
ಆರೋಪ
ಪೂರ್ಣಿಮಾ,
ನಿಧಿ
ಹಾಗೂ
ದೀಪಿಕಾ
ಮದುವೆಗೆ
ಒಡವೆ
ತೆಗೆಯಲು
ಬಂದಿರುತ್ತಾರೆ.
ಪೂರ್ಣಿಮಾ
ಜೊತೆಗೆ
ಬಂದಿರುವುದು
ದೀಪಿಕಾಗೆ
ಮೊದಲೇ
ಇಷ್ಟವಿರುವುದಿಲ್ಲ.
ಹಾಗಿರುವಾಗ
ಸಿರಿಯೂ
ಪೂರ್ಣಿಮಾಳನ್ನು
ನೋಡಿ
ಮಾತನಾಡಿಸುತ್ತಾಳೆ.
ಪೂರ್ಣಿಮಾ
ನೀನು
ಒಡವೆ
ಸೆಲೆಕ್ಟ್
ಮಾಡು
ಎಂದು
ಕರೆದುಕೊಂಡು
ಬರುತ್ತಾಳೆ.
ಇದರಿಂದ
ಭೂಮಿಕಾ
ಇನ್ನಷ್ಟು
ಇರಿಟೇಟ್
ಮಾಡಿಕೊಳ್ಳುತ್ತಾಳೆ.
ಬೇಕಂತಲೇ
ದೀಪಿಕಾ
ಅಲ್ಲಿದ್ದ
ಓಲೆಯನ್ನು
ಕದ್ದು,
ಸಿರಿ
ಬ್ಯಾಗ್‌ನಲ್ಲಿ
ಹಾಕುತ್ತಾಳೆ.
ಇದನ್ನು
ನಿಧಿ
ನೋಡುತ್ತಾಳೆ.
ಆದರೆ,
ತನಗೇನು
ಗೊತ್ತಿಲ್ಲದಂತೆ
ಇರುತ್ತಾಳೆ.
ಅಂಗಡಿಯಿಂದ
ಆಚೆ
ಬರುವಾಗ
ಶಬ್ಧವಾಗುತ್ತದೆ.
ಆಗ
ಸೆಕ್ಯೂರಿಟಿ
ಸಿರಿ
ಬ್ಯಾಗ್
ಅನ್ನು
ಚೆಕ್
ಮಾಡಿ
ಓಲೆಯ
ಡಬ್ಬಿಯನ್ನು
ತೆಗೆದುಕೊಡುತ್ತಾರೆ.
ದೀಪಿಕಾಳಿಂದ
ಈಗ
ಸಿರಿಯ
ಮೇಲೆ
ಕಳ್ಳತನದ
ಆರೋಪ
ಬಿದ್ದಿದೆ.
English summary
Shrirastu Shubhamasthu serial 19th June Episode Written Update. here is detials about After met Tulasi, Sharvari gets more angry and she is planning to disturb Madhav. know more.
Monday, June 19, 2023, 18:38
Story first published: Monday, June 19, 2023, 18:38 [IST]