News
oi-Srinivasa A
ಈ
ವರ್ಷದ
ಮೊದಲ
ಆರು
ತಿಂಗಳುಗಳು
ಮುಕ್ತಾಯವಾದ
ನಂತರ
ಹೊರಬಿದ್ದ
ವರ್ಷ
ಮೊದಲಾರ್ಧದ
ವರದಿಯಲ್ಲಿ
ಭಾರತ
ಚಿತ್ರರಂಗದ
ಎಲ್ಲಾ
ಭಾಷೆಗಳ
ಚಿತ್ರರಂಗಗಳೂ
ಸಹ
ಸಾಕಷ್ಟು
ಹಿಟ್ಗಳನ್ನು
ನೀಡಿದ್ದವು.
ಹೌದು,
ಬಾಲಿವುಡ್,
ಟಾಲಿವುಡ್,
ಕಾಲಿವುಡ್
ಹಾಗೂ
ಮಾಲಿವುಡ್ನ
ಅನೇಕ
ಚಿತ್ರಗಳು
ವರ್ಷ
ಮೊದಲಾರ್ಧದಲ್ಲಿ
ಬ್ಲಾಕ್ಬಸ್ಟರ್
ಟ್ಯಾಗ್
ಕಟ್ಟಿಕೊಂಡಿದ್ದವು.
ಆದರೆ
ಕನ್ನಡ
ಚಿತ್ರರಂಗದ
ಯಾವೊಂದೂ
ಚಿತ್ರವೂ
ಸಹ
ಇಷ್ಟು
ದೊಡ್ಡ
ಮಟ್ಟದ
ಯಶಸ್ಸನ್ನು
ಸಾಧಿಸಲು
ಸಾಧ್ಯವಾಗಲಿಲ್ಲ.
ಹೌದು,
ಕನ್ನಡ
ಚಿತ್ರರಂಗದ
ಹೊಯ್ಸಳ
ಸೇರಿದಂತೆ
ಒಂದೆರಡು
ಚಿತ್ರಗಳು
ಕಥೆಯ
ವಿಚಾರವಾಗಿ
ತುಸು
ಸದ್ದು
ಮಾಡಿದ್ದು
ಬಿಟ್ಟರೆ
ಪರ
ಭಾಷೆಯ
ಸಿನಿಮಾಗಳ
ಹಾಗೆ
ದೊಡ್ಡ
ಮಟ್ಟದ
ಯಶಸ್ಸನ್ನು
ಕನ್ನಡದ
ಉಳಿದ
ಯಾವ
ಚಿತ್ರಗಳೂ
ಸಹ
ಗಳಿಸಲು
ಆಗಿರಲಿಲ್ಲ.

ಹೀಗೆ
ಮೊದಲಾರ್ಧದ
ರಿಪೋರ್ಟ್ಗಳನ್ನು
ಕಂಡ
ಕನ್ನಡ
ಸಿನಿ
ರಸಿಕರು
ಕನ್ನಡದಲ್ಲಿ
ಇಂತಹ
ಚಿತ್ರಗಳು
ಯಾವಾಗ
ಬರಲಿವೆ
ಎಂದು
ಪ್ರಶ್ನೆ
ಹಾಕಿಕೊಂಡಿದ್ದರು.
ಕಳೆದ
ವರ್ಷ
ಸಾಲು
ಸಾಲು
ನೂರು
ಕೋಟಿ
ಗಳಿಕೆ
ಮಾಡಿದ
ಸಿನಿಮಾಗಳನ್ನು
ನೀಡಿದ್ದ
ಕನ್ನಡ
ಚಿತ್ರರಂಗ
ಈ
ವರ್ಷ
ಇಷ್ಟರ
ಮಟ್ಟಿಗೆ
ಮಂಕಾಗಿತ್ತು.
ಆದರೆ
ಈ
ಬೇಸರವನ್ನು
ವರ್ಷದ
ದ್ವಿತೀಯಾರ್ಧ
ಆರಂಭವಾಗುತ್ತಿದ್ದಂತೆ
ಹೋಗಲಾಡಿಸಿವೆ
ಈ
ತಿಂಗಳು
ಬಿಡುಗಡೆಗೊಂಡಿರುವ
ಈ
ಮೂರು
ಕನ್ನಡ
ಸಿನಿಮಾಗಳು.
ಹೌದು,
ಈ
ತಿಂಗಳು
ಬಿಡುಗಡೆಗೊಂಡಿರುವ
ಹಾಸ್ಟೆಲ್
ಹುಡುಗರು
ಬೇಕಾಗಿದ್ದಾರೆ,
ಕೌಸಲ್ಯಾ
ಸುಪ್ರಜಾ
ರಾಮ
ಹಾಗೂ
ಆಚಾರ್ಯ
ಅಂಡ್
ಕೋ
ಚಿತ್ರಗಳು
ಸದ್ಯ
ಬಾಕ್ಸ್
ಆಫೀಸ್ನಲ್ಲಿ
ಒಳ್ಳೆಯ
ಗಳಿಕೆ
ಮಾಡಿ
ಉತ್ತಮ
ಬುಕಿಂಗ್
ಪಡೆದುಕೊಳ್ಳುತ್ತಿವೆ.
ಒಂದೆಡೆ
ಹಾಲಿವುಡ್ನ
ಆಪನ್ಹೈಮರ್
ಹಾಗೂ
ಬಾರ್ಬಿ
ಚಿತ್ರಗಳು
ಬೆಂಗಳೂರಿನಲ್ಲಿ
ಹೆಚ್ಚಿನ
ಪ್ರದರ್ಶನಗಳನ್ನು
ಗಿಟ್ಟಿಸಿಕೊಂಡು
ಬಿಡುಗಡೆಯಾದರೂ
ಸಹ
ಕನ್ನಡದ
ಈ
ಚಿತ್ರಗಳು
ಒಳ್ಳೆಯ
ಸಂಖ್ಯೆಯ
ಪ್ರದರ್ಶನಗಳನ್ನು
ಪಡೆದುಕೊಳ್ಳುವಲ್ಲಿ
ಯಶಸ್ವಿಯಾಗಿವೆ.
ಹಾಸ್ಟೆಲ್
ಹುಡುಗರು
ಬೇಕಾಗಿದ್ದಾರೆ
ಸಿನಿಮಾ
ಬಿಡುಗಡೆಯ
ಮೊದಲ
ದಿನದಿಂದಲೂ
ಆಪನ್ಹೈಮರ್
ಹಾಗೂ
ಬಾರ್ಬಿ
ಚಿತ್ರಗಳಿಗೆ
ಪೈಪೋಟಿ
ನೀಡುತ್ತಾ
ಬಂದಿದ್ದು,
ಮೊನ್ನೆ
(
ಶುಕ್ರವಾರ
28
)
ಬಿಡುಗಡೆಗೊಂಡ
ಡಾರ್ಲಿಂಗ್
ಕೃಷ್ಣ
ಹಾಗೂ
ಶಶಾಂಕ್
ಕಾಂಬಿನೇಶನ್ನ
ಕೌಸಲ್ಯಾ
ಸುಪ್ರಜಾ
ರಾಮ
ಹಾಗೂ
ಅಶ್ವಿನಿ
ಪುನೀತ್
ರಾಜ್ಕುಮಾರ್
ನಿರ್ಮಾಣದ
ಆಚಾರ್ಯ
ಅಂಡ್
ಕೋ
ಚಿತ್ರಗಳೂ
ಸಹ
ಅದೇ
ರೀತಿ
ಪ್ರೇಕ್ಷಕರನ್ನು
ತನ್ನತ್ತ
ಸೆಳೆಯುತ್ತಿವೆ.
ಇಂದು
(
ಜುಲೈ
30
)
ಭಾನುವಾರವೂ
ಸಹ
ಈ
ಎಲ್ಲಾ
ಚಿತ್ರಗಳೂ
ಬೆಂಗಳೂರಿನಲ್ಲಿ
ಉತ್ತಮ
ಪ್ರದರ್ಶನಗಳ
ಸಂಖ್ಯೆಯನ್ನು
ಪಡೆದುಕೊಂಡಿದ್ದು,
ಈ
ಪೈಕಿ
ಅನೇಕ
ಪ್ರದರ್ಶನಗಳು
ಸೋಲ್ಡ್
ಔಟ್
ಆಗಿವೆ.
ಈ
ಮೂಲಕ
ಕನ್ನಡದ
ಪರ
ಅಂತೂ
ಇಂತೂ
ಈ
ವರ್ಷ
ಗೆದ್ದು
ಬೀಗುವ
ಸಿನಿಮಾಗಳು
ಬಂದಂತಾಗಿವೆ.
ಹಾಗಿದ್ದರೆ
ಈ
ದಿನ
ಬೆಳಗ್ಗೆ
10
ಗಂಟೆ
ಸಮಯಕ್ಕೆ
ಈ
ಚಿತ್ರಗಳು
ಬೆಂಗಳೂರಿನಲ್ಲಿ
ಎಷ್ಟು
ಪ್ರದರ್ಶನಗಳಲ್ಲಿ
ಸೋಲ್ಡ್
ಔಟ್
ಆಗಿವೆ
ಎಂಬ
ಮಾಹಿತಿ
ಈ
ಕೆಳಕಂಡಂತಿದೆ
ಹಾಸ್ಟೆಲ್
ಹುಡುಗರು
ಬೇಕಾಗಿದ್ದಾರೆ:
57
ಪ್ರದರ್ಶನಗಳು
ಕೌಸಲ್ಯಾ
ಸುಪ್ರಜಾ
ರಾಮ:
21
ಪ್ರದರ್ಶನಗಳು
ಆಚಾರ್ಯ
ಅಂಡ್
ಕೋ:
17
ಪ್ರದರ್ಶನಗಳು
English summary
Sandalwood: Newly released Kousalya Rama Supraja and Achar and Co getting hit talks
Sunday, July 30, 2023, 16:15
Story first published: Sunday, July 30, 2023, 16:15 [IST]