Gossips
oi-Narayana M
ಯಂಗ್
ರೆಬಲ್
ಸ್ಟಾರ್
ಪ್ರಭಾಸ್
ನಟನೆಯ
‘ಸಲಾರ್’
ಫಸ್ಟ್-1
ರಿಲೀಸ್‌ಗೆ
ದಿನಗಣನೆ
ಶುರುವಾಗಿದೆ.
ಇತ್ತೀಚಿಗೆ
ಬಂದ
ಟೀಸರ್
ಸಿನಿಮಾ
ಮೇಲಿನ
ನಿರೀಕ್ಷೆ
ಹೆಚ್ಚಿಸಿದೆ.
ಪ್ರಶಾಂತ್
ನೀಲ್
ಮತ್ತೊಂದು
ಆಕ್ಷನ್
ಎಂಟರ್‌ಟೈನರ್
ಕಥೆ
ಹೇಳೋಕೆ
ಬರ್ತಿದ್ದಾರೆ.
ಪ್ಯಾನ್
ಇಂಡಿಯಾ
ಲೆವೆಲ್‌ನಲ್ಲಿ
ಸಿನಿಮಾ
ಸದ್ದು
ಮಾಡೋಕೆ
ಬರ್ತಿದೆ.
ಸದ್ಯ
ಸಿನಿಮಾ
ಕಥೆ
ಲೀಕ್
ಆಗಿದೆ
ಎನ್ನಲಾಗ್ತಿದೆ.
‘ಸಲಾರ್’
ಕಥೆ
ಏನು?
ಪ್ರಭಾಸ್
ಪಾತ್ರ
ಏನು?
ಎನ್ನುವ
ಬಗ್ಗೆ
ಚಿತ್ರತಂಡ
ಈವರೆಗೆ
ಸುಳಿವು
ಬಿಟ್ಟುಕೊಟ್ಟಿಲ್ಲ.
ಟೀಸರ್‌ನಲ್ಲೂ
ಟಿನ್ನು
ಆನಂದ್
ಸಲಾರ್
ಪಾತ್ರಕ್ಕೆ
ಬಿಲ್ಡಪ್
ಕೊಟ್ಟಿದ್ದು
ಬಿಟ್ಟರೆ
ಕಥೆ
ಬಗ್ಗೆ
ಏನು
ಗೊತ್ತಾಗಲಿಲ್ಲ.
ಪೋಸ್ಟರ್‌ಗಳನ್ನು
ನೋಡಿ
ಕಲ್ಲಿದ್ದಲು
ಗಣಿಯಲ್ಲಿ
ಕೆಲಸ
ಮಾಡುವ
ನಾಯಕನ
ಕತೆ
ಇದು
ಎಂದು
ಕೆಲವರು
ಅಂದಾಜಿಸುತ್ತಿದ್ದಾರೆ.
ಇನ್ನು
ಕನ್ನಡದ
ಸೂಪರ್
ಹಿಟ್
‘ಉಗ್ರಂ’
ಕಥೆಯನ್ನೇ
ಕೊಂಚ
ಬದಲಿಸಿ
ದೊಡ್ಡಮಟ್ಟದಲ್ಲಿ
ಕಟ್ಟಿಕೊಡುತ್ತಿದ್ದಾರೆ
ಎನ್ನುವ
ಊಹಾಪೋಹ
ಕೂಡ
ಇದೆ.

ಸದ್ಯ
ಓವರ್‌ಸೀಸ್‌ನಲ್ಲಿ
ಸಿನಿಮಾ
ಟಿಕೆಟ್
ಬುಕ್ಕಿಂಗ್
ಆಪ್‌ನಲ್ಲಿ
‘ಸಲಾರ್’
ಚಿತ್ರದ
ಸಾರಾಂಶ(Synopsis)
ಕೊಟ್ಟಿದ್ದು
ಕಥೆ
ಲೀಕ್
ಆಗಿದೆ
ಎನ್ನಲಾಗ್ತಿದೆ.
ಅದರ
ಫೋಟೊ
ಈಗ
ವೈರಲ್
ಆಗುತ್ತಿದೆ.
ಯುದ್ಧದ
ಪ್ರಭಾವ
ಹೆಚ್ಚಿರುವ
ಪ್ರಕ್ಷುಬ್ಧ
ಪ್ರದೇಶದ
ಹಿನ್ನೆಲೆಯಲ್ಲಿ
‘ಸಲಾರ್’
ಚಿತ್ರದ
ಕಥೆ
ಸಾಗುತ್ತದೆ
ಎಂದು
ಅದರಲ್ಲಿ
ಉಲ್ಲೇಖಿಸಲಾಗಿದೆ.
ತನ್ನ
ತಾಯಿ
ಹಾಗೂ
ಪರಮಾಪ್ತ
ಸ್ನೇಹಿತನಿಗೆ
ಕೊಟ್ಟ
ಮಾತಿಗಾಗಿ
ಹೋರಾಟಕ್ಕೆ
ನಿಂತ
‘ಸಲಾರ್’
ಎಂಬ
ಯುವಕನ
ಸುತ್ತಾ
ಈ
ಕಥೆ
ಸುತ್ತುತ್ತದೆಯಂತೆ.
ಸಂಬಂಧಗಳು
ಹಾಗೂ
ನಾಯನ
ಹೋರಾಟದಿಂದ
ಎದುರಾಗುವ
ಪರಿಣಾಮವನ್ನು
ಬಹಳ
ರೋಚಕವಾಗಿ
ಹೇಳಿದ್ದಾರಂತೆ.
ಚಿತ್ರದಲ್ಲಿ
ಈಶ್ವರಿ
ರಾವ್
ನಾಯಕನ
ತಾಯಿ
ಪಾತ್ರದಲ್ಲಿ
ನಟಿಸಿದ್ದಾರೆ
ಎನ್ನಲಾಗ್ತಿದೆ.
KGF
ಚಿತ್ರದ
ರೀತಿಯಲ್ಲೇ
ಈ
ಚಿತ್ರದಲ್ಲೂ
ಮದರ್
ಸೆಂಟಿಮೆಂಟ್
ಹೈಲೆಟ್
ಮಾಡಿ
ಪ್ರಶಾಂತ್
ನೀಲ್
ಕಥೆ
ಹೇಳಲು
ಬರುತ್ತಿರುವಂತೆ
ಕಾಣುತ್ತಿದೆ.
ಕೆಲವರು
ಇದು
‘ಉಗ್ರಂ’
ಕಥೆ
ರೀತಿಯೇ
ಇದೆ
ಎಂದು
ಕಾಮೆಂಟ್
ಮಾಡುತ್ತಿದ್ದಾರೆ.
ಆಗಸ್ಟ್
ಕೊನೆ
ವಾರದಲ್ಲಿ
‘ಸಲಾರ್’
ಟೀಸರ್
ರಿಲೀಸ್
ಮಾಡೋದಾಗಿ
ಹೊಂಬಾಳೆ
ಸಂಸ್ಥೆ
ಹೇಳಿದೆ.
ಸೆಪ್ಟೆಂಬರ್
28ಕ್ಕೆ
ಈ
ಹೈವೋಲ್ಟೇಜ್
ಆಕ್ಷನ್
ಎಂಟರ್‌ಟೈನರ್
ಸಿನಿಮಾ
ತೆರಗಪ್ಪಳಿಸಲಿದೆ.
ಅಂದಾಜು
300
ಕೋಟಿ
ರೂ.
ವೆಚ್ಚದಲ್ಲಿ
ಬಹಳ
ಅದ್ಧೂರಿಯಾಗಿ
ಸಿನಿಮಾ
ನಿರ್ಮಾಣವಾಗುತ್ತಿದೆ.
ಚಿತ್ರದಲ್ಲಿ
ಶ್ರುತಿ
ಹಾಸ್
ನಾಯಕಿಯಾಗಿ
ಮಿಂಚಿದ್ದಾರೆ.
ಜಗಪತಿ
ಬಾಬು,
ಪೃಥ್ವಿರಾಜ್
ಸುಕುಮಾರ್
ಮುಖ್ಯಭೂಮಿಕೆಯಲ್ಲಿ
ನಟಿಸಿದ್ದಾರೆ.
KGF
ಚಿತ್ರಕ್ಕೆ
ಕೆಲಸ
ಮಾಡಿದ
ಬಹುತೇಕ
ತಂಡ
‘ಸಲಾರ್’
ಚಿತ್ರಕ್ಕೂ
ಕೆಲಸ
ಮಾಡುತ್ತಿದೆ.
ಪ್ರಶಾಂತ್
ನೀಲ್
ಎಡ
ಬಲ
ಆಗಿ
ರವಿ
ಬಸ್ರೂರು,
ಭುವನ್
ಗೌಡ
ಈ
ಚಿತ್ರದಲ್ಲೂ
ಇದ್ದಾರೆ.
ಇನ್ನು
ಕನ್ನಡದ
ನಟರಾದ
ಮಧು
ಗುರುಸ್ವಾಮಿ,
ಪ್ರಮೋದ್,
ಭಜರಂಗಿ
ಲೋಕಿ
ಕೂಡ
ತಾರಾಗಣದಲ್ಲಿದ್ದಾರೆ.
ಈಗಾಗಲೇ
ಚಿತ್ರೀಕರಣ
ಮುಕ್ತಾಯವಾಗಿದ್ದು
ಪೋಸ್ಟ್
ಪ್ರೊಡಕ್ಷನ್
ವರ್ಕ್
ಭರದಿಂದ
ಸಾಗುತ್ತಿದೆ.
ಸಿನಿಮಾ
ಪ್ರೀ
ರಿಲೀಸ್
ಬ್ಯುಸಿನೆಸ್
ಭರ್ಜರಿಯಾಗಿ
ನಡೀತಿದ್ದು
ಸಿನಿಮಾ
1000
ಕೋಟಿ
ರೂ.
ಕಲೆಕ್ಷನ್
ಮಾಡುವ
ಅಂದಾಜಿದೆ.
5
ಭಾಷೆಗಳಲ್ಲಿ
ಪ್ಯಾನ್
ಇಂಡಿಯಾ
ಲೆವೆಲ್‌ನಲ್ಲಿ
‘ಸಲಾರ್’
ಆರ್ಭಟ
ಶುರುವಾಗಲಿದೆ.
‘ಸಾಹೋ’,
‘ರಾಧೆಶ್ಯಾಮ್’,
‘ಆದಿಪುರುಷ್’
ಸೋಲಿನಿಂದ
ಕಂಗೆಟ್ಟಿರುವ
ಪ್ರಭಾಸ್
‘ಸಲಾರ್’
ಮೇಲೆ
ಬಹಳ
ನಿರೀಕ್ಷೆ
ಇಟ್ಟುಕೊಂಡಿದ್ದಾರೆ.
ಅಭಿಮಾನಿಗಳು
ಕೂಡ
ಮತ್ತೊಂದು
ಬಾಹುಬಲಿ
ರೀತಿ
ಬ್ಲಾಕ್‌ಬಸ್ಟರ್
ಚಿತ್ರಕ್ಕಾಗಿ
ಕಾಯುತ್ತಿದ್ದಾರೆ.
English summary
Prabhas- Prashanth neel’s Salaar Story/plot/Synopsis Leaked online. know more.
Sunday, July 30, 2023, 23:17