Tv
oi-Srinivasa A
By Poorva
|
ಪುಟ್ಟಕ್ಕನ
ಮಕ್ಕಳು
ಧಾರಾವಾಹಿ
ಅದ್ಭುತವಾಗಿ
ಮೂಡಿ
ಬರುತ್ತಿದೆ.
ಇದೀಗ
ಕಂಠಿ
ಸ್ನೇಹಾಗೆ
ತಾಳಿ
ಕಟ್ಟಿದ್ದಾನೆ.
ಮನೆಗೆ
ಕರೆದುಕೊಂಡು
ಬಂದು
ತನ್ನ
ಅಮ್ಮನ
ಬಳಿ
ಅವ್ವ
ನಿಮ್ಮ
ಸೊಸೆಯನ್ನು
ಕರೆದುಕೊಂಡು
ಬಂದಿದ್ದೇನೆ
ಮನೆ
ತುಂಬಿಸಿಕೊಳ್ಳಿ
ಎಂದು
ಹೇಳಿದಾಗ
ಬಂಗಾರಮ್ಮ
ಸ್ನೇಹಳನ್ನು
ಮನೆ
ತುಂಬಿಸಿಕೊಳ್ಳಲು
ಒಪ್ಪುವುದೇ
ಇಲ್ಲ.
ಯಾರ್ಯಾರನ್ನೋ
ನನ್ನ
ಸೊಸೆ
ಎಂದು
ಹೇಳಿದರೆ
ನಾನು
ಹೇಗೆ
ಒಪ್ಪಿಕೊಳ್ಳಲಿ
ಎಂದೆಲ್ಲ
ಕೋಪದಲ್ಲಿ
ಹೇಳುತ್ತಿರುತ್ತಾಳೆ.
ಸ್ನೇಹಾ
ಚಿಕ್ಕ
ವಯಸ್ಸಿನಿಂದಲೂ
ಕಾತರದಿಂದ
ಕಾಯುತ್ತಿದ್ದ
ದಿನ
.
ಆಕೆಗೆ
ಒಂದು
ಕಡೆ
ಪರೀಕ್ಷೆ
.
ತನ್ನ
ತಾಯಿಯ
ಬಳಿ
ಪರೀಕ್ಷೆ
ಎಂದು
ಹೇಳಿ
ದೇವರಿಗೆ
ಕೈ
ಮುಗಿಯುತ್ತಾ
ಇರಬೇಕಾದರೆ
ಕಂಠಿ
ಬಂದು
ತಾಳಿ
ಕಟ್ಟಿದ್ದಾನೆ.
ಆದರೆ
ಬಂಗಾರಮ್ಮನ
ದೃಷ್ಟಿಯಲ್ಲಿ
ಸ್ನೇಹಾ
ತಪ್ಪು
ಮಾಡಿದ್ದಾಳೆ
ಎಂದುಕೊಂಡಿದ್ದಾಳೆ.
ಆದರೆ
ಸ್ನೇಹಾನಾ
ತಪ್ಪು
ಏನು
ಇಲ್ಲದೇ
ಆಕೆ
ಬಂಗಾರಮ್ಮನ
ಕೈಯಿಂದ
ಬೈಗುಳ
ತಿನ್ನುವ
ಪರಿಸ್ಥಿತಿ
ಬಂದಿದೆ
.
ಇದೀಗ
ಸ್ನೇಹಾ
ಕೋಪ
ಮಿತಿ
ಮೀರಿದೆ.
ಇದನ್ನು
ನೋಡಿದ
ಕಂಠಿ
ಮಿಸ್ಸು
ನನ್ನ
ತಾಯಿ
ನಮ್ಮಿಬ್ಬರ
ಪ್ರೀತಿಗೆ
ಒಪ್ಪಿಗೆ
ನೀಡಿದ್ದಾರೆ.
ಅದೇ
ಪ್ರಕಾರವಾಗಿ
ನಾನು
ಎಂದು
ಹೇಳಿದಾಗ
ಕಂಠಿ
ಮಾತನ್ನು
ತಡೆದ
ಸ್ನೇಹಾ
ನನ್ನ
ನಿನ್ನ
ಮದುವೆ
ಆಗದ
ಹಾಗೆ
ಪ್ರಮಾಣ
ಮಾಡಿಸಿಕೊಂಡು
ಇದ್ದಾರೆ
ನಿಮ್ಮ
ತಾಯಿ
ಎಂದು
ಹೇಳಿದಾಗ
ಬಂಗಾರಮ್ಮ
ತನ್ನ
ಮಗನ
ಜೊತೆ
ಮಾಡಿದ್ದು
ನಾಟಕ
ಎಂದು
ಕಂಠಿಗೆ
ಅರಿವಾಗುತ್ತದೆ.
ಆದರೆ
ಅಮ್ಮ
ಸ್ನೇಹಾ
ಮೇಲೆ
ದೂಷಣೆ
ಮಾಡುತ್ತಾ
ಇರುವುದನ್ನು
ನೋಡಿದ
ಕಂಠಿ
ಏನು
ಮಾತನಾಡದೆ
ಸುಮ್ಮನೆ
ಇರುತ್ತಾನೆ.
ಇನ್ನು
ಪರೀಕ್ಷೆ
ಬರೆಯಲು
ಆಗಲಿಲ್ಲ
ಎಂದು
ಬಹಳ
ಬೇಸರ
ಮಾಡಿಕೊಂಡು
ಇರುವ
ಸ್ನೇಹಾ
ಕಂಠಿ
ಕುತ್ತಿಗೆ
ಪಟ್ಟಿ
ಹಿಡಿದು
ನನಗೆ
ಯಾಕೆ
ಮೋಸ
ಮಾಡಿದೆ
ನೀನು,
ನನ್ನ
ಕನಸೆಲ್ಲ
ಹಾಳು
ಮಾಡಿದೆ
ನಾನು
ಪರೀಕ್ಷೆ
ಬರೆದು
ಒಳ್ಳೆಯ
ಸ್ಥಾನಕ್ಕೆ
ಏರಬೇಕು
ಅಂದುಕೊಂಡಿದ್ದೆ
ಆದರೆ
ಇದೀಗ
ನೀನು
ಏನು
ಮಾಡಿ
ಬಿಟ್ಟೆ
ಎಂದು
ಹೇಳುತ್ತಾಳೆ.
ಆಗ
ಕೋಪಗೊಂಡ
ಬಂಗಾರಮ್ಮ
ಜೋರಾಗಿ
ಸ್ನೇಹಳನ್ನು
ತಳ್ಳುತ್ತಾಳೆ.
ನನ್ನ
ಮಗನ
ಕುತ್ತಿಗೆ
ಪಟ್ಟಿ
ಹಿಡಿಯಲು
ಯಾರು
ನೀನು
ಎಂದು
ಜೋರಾಗಿ
ಹೇಳುತ್ತಾಳೆ.
ಇನ್ನು
ಬಂಗಾರಮ್ಮ
ಸ್ನೇಹಾ
ಬಳಿ
ಯಾರ್ಯಾರೋ
ನಮ್ಮ
ಮನೆಗೆ
ಸೊಸೆ
ಎಂದು
ಬಂದರೆ
ನಾನು
ಒಪ್ಪಿಕೊಳ್ಳಲ್ಲ
ಎಂದು
ಹೇಳುತ್ತಾಳೆ.
ಆದರೆ
ಸ್ನೇಹಾ
ಜೋರಾಗಿ
ನಾನು
ನಿಮ್ಮ
ಸೊಸೆ
ಆಗಿ
ಬರುತ್ತೇನೆ
ಅಂದುಕೊಂಡಿರಲಿಲ್ಲ,
ನನಗೆ
ಈ
ತಾಳಿ
ಅಗತ್ಯನು
ಇಲ್ಲ
ಎಂದು
ಹೇಳುತ್ತಾಳೆ.
ಬಳಿಕ
ತಾಳಿಯನ್ನು
ತೆಗೆಯಲು
ನೋಡಿದಾಗ
ಪುಟ್ಟಕ್ಕ
ಬರುತ್ತಾಳೆ.
ಮುಂದೇನು
ಕಾದು
ನೋಡಬೇಕಿದೆ.
English summary
Kannada serial puttakkana makkalu written updated on 30th june
Friday, June 30, 2023, 19:47
Story first published: Friday, June 30, 2023, 19:47 [IST]