Power Cut: ಬೆಂಗಳೂರಿನಲ್ಲಿ ಜೂ.21 ಬುಧವಾರ ವಿದ್ಯುತ್ ಕಡಿತವಾಗಲಿದೆ, ಸ್ಥಳಗಳ ಮಾಹಿತಿ ತಿಳಿಯಿರಿ | Bengaluru Several Parts Will Face Power Cut Issue On Wednesday June 21st, Know Areas Names

Bengaluru

oi-Shankrappa Parangi

|

Google Oneindia Kannada News

ಬೆಂಗಳೂರು, ಜೂನ್ 20: ಕರ್ನಾಟಕ ವಿದ್ಯುತ್ ಪ್ರಸರಣ ನಿಗಮ ನಿಯಮಿತ (KPTCL) ತ್ರೈಮಾಸಿಕ ಅವಧಿಯ ವಿದ್ಯುತ್ ನಿರ್ವಹಣಾ ಕಾರ್ಯಗಳನ್ನು ಹಮ್ಮಿಕೊಳ್ಳಲಿದೆ. ಈ ಸಂಬಂಧ ಬೆಂಗಳೂರಿನ ಹಲವು ಪ್ರದೇಶಗಳಲ್ಲಿ ಬುಧವಾರ ವಿದ್ಯುತ್ ಕಡಿತಗೊಳ್ಳಲಿದೆ. ಈ ಸಂಬಂಧ ಬೆಸ್ಕಾಂ ಮಾಹಿತಿ ನೀಡಿದೆ.

ನಗರದ ಹಲವು ಬಡಾವಣೆಗಳಲ್ಲಿ ಮಂಗಳವಾರ ಬೆಳಗ್ಗೆಯಿಂದ ಸಂಜೆ ವರೆಗೆ ವಿದ್ಯುತ್ ಕಡಿತಗೊಂಡಿದೆ. ಅದೇ ರೀತಿ ನಾಳೆ ಬುಧವಾರ ಯಾವ ಯಾವ ಪ್ರದೇಶಗಳಲ್ಲಿ ವಿದ್ಯುತ್ ಪೂರೈಕೆಯಲ್ಲಿ ವ್ಯತ್ಯವಾಗಲಿದೆ ಎಂದು ಇಲ್ಲಿ ತಿಳಿದುಕೊಳ್ಳಿ.

Bengaluru Several Parts Will Face Power Cut Issue On Wednesday June 21st, Know Areas Names

ಬುಧವಾರ ಬೆಳಗ್ಗೆ 10ಗಂಟೆಯಿಂದ ಸಂಜೆ 5ರವರೆಗೆ ವಿದ್ಯುತ್ ಸ್ಥಗಿತಗೊಳ್ಳುವ ಪ್ರದೇಶಗಳೆಂದರೆ, ಬಿಡಿಎಸ್ ಲೇಔಟ್, ರೈಲ್ವೇ ಮುಖ್ಯ ಬಡಾವಣೆ, ತಿರುಮೇನಹಳ್ಳಿ, ಭಾರತಿ ನಗರ, ನಂದನವನ ಬಡಾವಣೆ, ಮಣಿಪಾಲ್, ಪೊಲೀಸ್ ಕ್ವಾರ್ಟರ್ಸ್, ಕೆಂಪೇಗೌಡ ಬಡಾವಣೆ, ನಾಗೇನಹಳ್ಳಿ, ಕೆಎನ್‌ಪಿ ಬಡಾವಣೆ, ಹುಜಭವನ, ಮೈಕೋನೋಸ್ ಬ್ಲಾಕ್ 2, 3 ಮತ್ತು 4ನೇ ಬ್ಲಾಕ್, ಕ್ಲಬ್ ಹೌಸ್, ಸ್ಯಾಂಟೋರಿನಿ 2 ಮತ್ತು 10ನೇ ಬ್ಲಾಕ್, ಸೆರೆನಿಟಾ 13ನೇ ಬ್ಲಾಕ್, ಪ್ಯಾರಡೈಸ್ 3ನೇ ಮತ್ತ 17ನೇ ಬ್ಲಾಕ್, ಬ್ರಿಗೇಡ್ ನಾರ್ತ್‌ರಿಡ್ಜ್, ಸಂಪಿಗೆಹಳ್ಳಿ ಪೊಲೀಸ್ ಠಾಣೆ, ಚೊಕ್ಕನಹಳ್ಳಿ ಬಡಾವಣೆ, ಬಸವಲಿಂಗಪ್ಪನಗರ, ಹೆಗಡೆನಗರ, ಬಾಲಾಜಿ ಕೃಪಾ ಲೇಔಟ್, ರಾಮ್ ಬಡಾವಣೆ.

ಮಣ್ಣೇಹಳ್ಳಿ, ಗುಡ್ಡದಹಳ್ಳಿ, ಮಣ್ಣೇಹಳ್ಳಿ, ಗುಡ್ಡದಹಳ್ಳಿ , ಮಾರುತಿನಗರ, ಚಿಕ್ಕಮ್ಮನಹಳ್ಳಿ, ತಿಮ್ಮನಹಳ್ಳಿ, ಮನ್ನೆಕೋಟೆ, ಬಂಜಿಗೆರೆ, ಅಜ್ಜನಹಳ್ಳಿ, ಕೋಡಿಹಳ್ಳಿ, ಚಿಕ್ಕಹಳ್ಳಿ, ಬೂಕ್ಲೋರಹಳ್ಳಿ ಗರಣಿ ಕ್ರಾಸ್, ಹೊಸಹಳ್ಳಿ, ಮಾರೇನಹಟ್ಟಿ, ಎನ್.ದೇವರಹಳ್ಳಿ, ಭೀಮನಕೆರೆ ತಿಪ್ಪಯ್ಯನಕೋಟೆ, ಕೆರೆಯಾಗಲಹಳ್ಳಿ, ಬೇಡರೆಡ್ಡಿಹಳ್ಳಿ, ದೇವರೆಡ್ಡಿಹಳ್ಳಿ, ಹೊನ್ನೂರು ತಾಲೂಕು ವ್ಯಾಪ್ತಿಯ ವಿವಿಧ ಪ್ರದೇಶಗಳು.

ಎಣ್ಣೆಗೆರೆ, ಕಮಲಾಪುರ, ಕೈಮರ, ಹೊಸಕೆರೆ, ಹಾಗಲವಾಡಿ ಮತ್ತು ನಂದಿಹಳ್ಳಿ, ಹಂದನಕೆರೆ ಮತ್ತು ಹುಳಿಯಾರು, ಚಿಕ್ಕಮ್ಮನಹಳ್ಳಿ, ಯದ್ವಾನಿ, ಉಂಗ್ರಾ, ಅರ್ಜುನಹಳ್ಳಿ , ಪಲ್ಲೇರಾಯನಹಳ್ಳಿ, ಬೆನವರ, ದೊಡ್ಡಾಲಹಳ್ಳಿ, ಜಿಆರ್‌ಟಿ ಜ್ಯುವೆಲರ್ಸ್, ಚೇಳೂರು, ಮತ್ತಿಘಟ್ಟ, ಅಮ್ಮನಹಳ್ಳಿ, ಉಪ್ಪಿನಕಟ್ಟೆ, ಮಲ್ಲಿಗೆರೆ, ಕೆಂಗ್ಲಾಪುರ, ಹೊಸೂರು, ವೈಸಿಸಿ, ಚಿಕ್ಕಬಿದರೆ, ನಂದಿಹಳ್ಳಿ, ಲಿಂಗಪ್ಪನಹಳ್ಳಿ, ಮತಿಹಳ್ಳಿ, ಕಲ್ಲಹಳ್ಳಿ, ಸೀಗೆಬಾಗಿ ಹಾಗೂ ಕೇಶವಾಪುರ, ಹೊಸಳ್ಳಿ ಪ್ರದೇಶಗಳಲ್ಲಿ ವಿದ್ಯುತ್ ಸರಬರಾಜಿನಲ್ಲಿ ವ್ಯತ್ಯವಾಗಲಿದೆ ಎಂದು ಬೆಸ್ಕಾಂ ಮಾಹಿತಿ ನೀಡಿದೆ.

ಮಳೆಗಾಳ ಹಿನ್ನೆಲೆಯಲ್ಲು ಬಿರುಗಾಳಿ ಸಹಿತ ಜೋರು ಮಳೆ ಬರುವುದರಿಂದಲೂ, ಮಳೆಗೆ ಮರಗಳು, ಮರದ ಕೊಂಬೆ ಮುರಿದು ಬೀಳುವುದರಿಂದ ಬೆಂಗಳೂರು ಸೇರಿದಂತೆ ರಾಜ್ಯದ ವಿವಿಧ ಕಡೆ ಆಗಾಗ ವಿದ್ಯುತ್ ಕಡಿತವಾಗುತ್ತಿದೆ.

English summary

Bengaluru ciry several parts will be face Power Cut issue on wednesday June 21st, Know more areas details.

Story first published: Tuesday, June 20, 2023, 15:52 [IST]

Source link