News
oi-Srinivasa A
ಪೈರಸಿ..
ಚಿತ್ರವೊಂದರ
ಯಶಸ್ಸಿಗೆ
ಹಲವು
ವರ್ಷಗಳಿಂದಲೂ
ಸಹ
ನೇರವಾಗಿ
ಹಾಗೂ
ಪರೋಕ್ಷವಾಗಿ
ಅಡ್ಡಿಯನ್ನು
ಉಂಟು
ಮಾಡುತ್ತಾ
ಬಂದಿರುವ
ಒಂದು
ಕೆಟ್ಟ
ಅಭ್ಯಾಸ
ಎಂದೇ
ಹೇಳಬಹುದು.
ಈ
ಹಿಂದೆ
ಸಿಡಿ,
ಡಿವಿಡಿ
ಡಿಸ್ಕ್ಗಳ
ಮೂಲಕ
ಜನರ
ಕೈ
ಸೇರುತ್ತಿದ್ದ
ಹೊಸ
ಚಿತ್ರಗಳ
ಥಿಯೇಟರ್
ಪ್ರಿಂಟ್
ಹಾಗೂ
ಲೀಕ್
ಆದ
ಕಾಪಿಗಳು
ಸದ್ಯ
ಅಂತರ್ಜಾಲದ
ಯುಗದಲ್ಲಿ
ಅತಿ
ಸುಲಭವಾಗಿ
ಸೆಕೆಂಡುಗಳಲ್ಲಿ
ಬಳಕೆದಾರರ
ಮೊಬೈಲ್
ತಲುಪಿಬಿಡುತ್ತದೆ.
ಹೀಗೆ
ಸುಲಭವಾಗಿ
ಸಿಗುವ
ಹೊಸ
ಚಿತ್ರಗಳ
ಪೈರಸಿ
ಕಾಪಿಯನ್ನು
ಕೆಲ
ಒಳ್ಳೆಯ
ಸಿನಿ
ರಸಿಕರು
ತಿರಸ್ಕರಿಸಿ
ಚಿತ್ರಮಂದಿರಗಳಿಗೇ
ಬಂದು
ಸಿನಿಮಾವನ್ನು
ವೀಕ್ಷಿಸಿದರೆ,
ಇನ್ನೂ
ಕೆಲ
ಸಿನಿ
ರಸಿಕರು
ಈ
ಪೈರಸಿ
ಪ್ರಿಂಟ್ಗಳನ್ನೇ
ಡೌನ್ಲೋಡ್
ಮಾಡಿಕೊಂಡು
ತಮ್ಮ
ಮೊಬೈಲ್ಗಳಲ್ಲಿಯೇ
ವೀಕ್ಷಿಸುವುದನ್ನು
ರೂಢಿ
ಮಾಡಿಕೊಂಡುಬಿಟ್ಟಿದ್ದಾರೆ.

ಇನ್ನು
ಈ
ಹಿಂದೆ
ವೆಬ್
ತಾಣಗಳಲ್ಲಿ
ಮಾತ್ರ
ಲಭ್ಯವಿರುತ್ತಿದ್ದ
ಪೈರಸಿ
ಲಿಂಕ್ಗಳು
ಈಗ
ಸುಲಭವಾಗಿ
ಟೆಲಿಗ್ರಾಮ್
ಚಾನೆಲ್ಗಳಲ್ಲಿ
ಸಿಗಲು
ಆರಂಭಿಸಿದ್ದು,
ಪೈರಸಿ
ಪ್ರಿಯರ
ಸಂಖ್ಯೆ
ಭಾರೀ
ಮಟ್ಟದಲ್ಲಿ
ಏರಿಕೆ
ಕಂಡಿದೆ.
ಹೀಗೆ
ದಿನದಿಂದ
ದಿನಕ್ಕೆ
ಮಿತಿ
ಮೀರುತ್ತಿರುವ
ಪೈರಸಿ
ಕಾಟವನ್ನು
ತಪ್ಪಿಸಲು
ಸರ್ಕಾರ
ಹಾಗೂ
ಸಿನಿಮಾ
ಇಂಡಸ್ಟ್ರಿಗಳು
ಸಾಕಷ್ಟು
ಪ್ರಯತ್ನಗಳನ್ನು
ಪಟ್ಟಿವೆ.
ಆದರೂ
ಸಹ
ಪೈರಸಿ
ಎಂಬ
ಪೆಡಂಭೂತವನ್ನು
ಕಟ್ಟಿಹಾಕಲು
ಸಾಧ್ಯವಾಗದೇ
ಇದ್ದು,
ಇದೀಗ
ಕೇಂದ್ರ
ಸರ್ಕಾರ
ರಾಜ್ಯಸಭೆಯಲ್ಲಿ
ಮಹತ್ವದ
ಬಿಲ್
ಒಂದನ್ನು
ಪಾಸ್
ಮಾಡಿದೆ.
ಹೌದು,
ಸಿನಿಮಾ
ಮಂದಿರಗಳಲ್ಲಿ
ಚಿತ್ರಗಳನ್ನು
ವೀಕ್ಷಿಸುವಾಗ
ಯಾವುದೇ
ಕ್ಯಾಮೆರಾ
ಬಳಸಿ
ಆ
ಚಿತ್ರದ
ವಿಡಿಯೊಗಳನ್ನು
ತೆಗೆದು
ಪೈರಸಿ
ಮಾಡಿದವರಿಗೆ
ಹಾಗೂ
ಆ
ಲಿಂಕ್
ಅನ್ನು
ಇತರರೊಂದಿಗೆ
ಹಂಚಿಕೊಳ್ಳುವವರಿಗೆ
3
ವರ್ಷ
ಜೈಲು
ಶಿಕ್ಷೆ
ಹಾಗೂ
ಆ
ಚಿತ್ರದ
ಬಜೆಟ್ನ
ಶೇ
5%
ಹಣವನ್ನು
ದಂಡದ
ರೂಪದದಲ್ಲಿ
ಕಟ್ಟಿ
ಕೊಡಬೇಕಿದೆ.
ಈ
ರೀತಿಯ
ಬಿಲ್
ಪಾಸ್
ಆಗಿದ್ದು,
ಇನ್ನು
ಮುಂದೆ
ಯಾರಾದರೂ
ಚಿತ್ರದ
ಪೈರಸಿ
ಲಿಂಕ್
ಶೇರ್
ಮಾಡುವಾಗ
ಸಿಕ್ಕಿ
ಬಿದ್ದರೆ
ಮೇಲ್ಕಂಡ
ಶಿಕ್ಷೆ
ಹಾಗೂ
ದುಬಾರಿ
ಮೊತ್ತ
ಕಟ್ಟುವುದು
ತಪ್ಪಿದ್ದಲ್ಲ.
English summary
Movie Piracy: Doing piracy is now punishable offense by 3 years jail and 5% fine of budget
Sunday, July 30, 2023, 13:48
Story first published: Sunday, July 30, 2023, 13:48 [IST]