ODI World Cup 2023: ತೆಪ್ಪಗಾದ ಪಾಕಿಸ್ತಾನ: ನಾಳೆಯೇ 2023ರ ಏಕದಿನ ವಿಶ್ವಕಪ್ ಪಂದ್ಯಾವಳಿ ವೇಳಾಪಟ್ಟಿ ಬಿಡುಗಡೆ | ICC WC 2023 Schedule to be Released on June 27th: PCB Consents To IND vs PAK In Ahmedabad

Sports

oi-Naveen Kumar N

|

Google Oneindia Kannada News

ಭಾರತ-ಪಾಕಿಸ್ತಾನ ಪಂದ್ಯ ಅಹಮದಾಬಾದ್‌ನ ನರೇಂದ್ರ ಮೋದಿ ಕ್ರೀಡಾಂಗಣದಲ್ಲಿ ನಡೆಯಬಾರದು, ಬೇರೆ ಕಡೆಗೆ ಸ್ಥಳಾಂತರಿಸಬೇಕು ಎಂದು ಕಿರಿಕ್ ಮಾಡ್ತಿದ್ದ ಪಾಕಿಸ್ತಾನ ಕ್ರಿಕೆಟ್ ಮಂಡಳಿ ಐಸಿಸಿ ಮತ್ತು ಬಿಸಿಸಿಐ ಖಡಕ್ ಎಚ್ಚರಿಕೆ ನಂತರ ತೆಪ್ಪಗಾಗಿದ್ದು, ಜೂನ್ 27ರಂದು ಮೆಗಾ ಪಂದ್ಯಾವಳಿಯ ವೇಳಾಪಟ್ಟಿ ಬಿಡುಗಡೆಯಾಗಲಿದೆ.

ಇಂಟರ್ನ್ಯಾಷನಲ್ ಕ್ರಿಕೆಟ್ ಕೌನ್ಸಿಲ್ (ಐಸಿಸಿ) ಮತ್ತು ಭಾರತೀಯ ಕ್ರಿಕೆಟ್ ನಿಯಂತ್ರಣ ಮಂಡಳಿ (ಬಿಸಿಸಿಐ) ಜೂನ್ 27ರಂದು ಮುಂಬೈನಲ್ಲಿ ನಡೆಯುವ ಸಮಾರಂಭದಲ್ಲಿ ಏಕದಿನ ವಿಶ್ವಕಪ್ 2023ರ ವೇಳಾಪಟ್ಟಿಯನ್ನು ಬಿಡುಗಡೆ ಮಾಡಲಿವೆ. ಬೆಳಗ್ಗೆ 11.30ಕ್ಕೆ ಸಮಾರಂಭ ಆರಂಭವಾಗಲಿದೆ. ವೇಳಾಪಟ್ಟಿ ಬಿಡುಗಡೆ ದಿನಾಂಕದಿಂದ ವಿಶ್ವಕಪ್ ಆರಂಭಕ್ಕೆ 100 ದಿನಗಳು ಮಾತ್ರ ಉಳಿಯಲಿವೆ.

ICC WC 2023 Schedule to be Released

ಎರಡು ವಾರಗಳ ಮುಂಚೆಯೇ ಏಕದಿನ ವಿಶ್ವಕಪ್ ವೇಳಾಪಟ್ಟಿ ಬಿಡುಗಡೆಯಾಗಬೇಕಿತ್ತು. ಪಾಕಿಸ್ತಾನ ಕ್ರಿಕೆಟ್ ಮಂಡಳಿ ಅಹಮದಾಬಾದ್ ಮತ್ತು ಚೆನ್ನೈನಲ್ಲಿ ನಡೆಯುವ ಪಂದ್ಯಗಳನ್ನು ಸ್ಥಳಾಂತರಿಸಬೇಕು ಎಂದು ಕಿರಿಕ್ ಮಾಡಿತ್ತು. ಅಹಮದಾಬಾದ್‌ನಲ್ಲಿ ಭಾರತದ ವಿರುದ್ಧ ಪಂದ್ಯಕ್ಕೆ ಆಕ್ಷೇಪಿಸಿದ್ದರೆ, ಚೆನ್ನೈನಲ್ಲಿ ಸ್ಪಿನ್ ಪಿಚ್ ಕಾರಣ ನೀಡಿ ಅಫ್ಘಾನಿಸ್ತಾನದ ವಿರುದ್ಧದ ಪಂದ್ಯವನ್ನು ಬೆಂಗಳೂರಿಗೆ ಬದಲಾಯಿಸಲು ಕೇಳಿತ್ತು. ಪಾಕಿಸ್ತಾನದ ಮನವಿಗೆ ಐಸಿಸಿ ಆಕ್ಷೇಪ ವ್ಯಕ್ತಪಡಿಸಿದ್ದು, ವೇಳಾಪಟ್ಟಿಯಲ್ಲಿ ಬದಲಾವಣೆ ಮಾಡಲ್ಲ ಎಂದು ಖಡಕ್ಕಾಗಿ ಸೂಚನೆ ನೀಡಿದೆ.

ಯೋಜಿತ ವೇಳಾಪಟ್ಟಿಗೆ ಪಾಕಿಸ್ತಾನ ಒಪ್ಪಿಗೆ

ಐಸಿಸಿ ಮುಂಬೈನಲ್ಲಿ ಕಾರ್ಯಕ್ರಮ ಆಯೋಜನೆ ಮಾಡಿದೆ. ಕರಡು ವೇಳಾಪಟ್ಟಿಗೆ ಪಾಕಿಸ್ತಾನ ಒಪ್ಪಿಗೆ ಸೂಚಿಸಿದೆ. ಯಾವುದೇ ಬದಲಾವಣೆ ಇರುವುದಿಲ್ಲ. ಜೂನ್ 27ರಂದು ವೇಳಾಪಟ್ಟಿ ಬಿಡುಗಡೆಯಾಗಲಿದೆ ಎಂದು ಬಿಸಿಸಿಐ ಹಿರಿಯ ಅಧಿಕಾರಿಯೊಬ್ಬರು ತಿಳಿಸಿರುವುದಾಗಿ ಇನ್ಸೈಡ್‌ಸ್ಪೋರ್ಟ್‌ ವರದಿ ಮಾಡಿದೆ.

ವಿಶ್ವದ ದೊಡ್ಡ ಕ್ರೀಡಾಂಗಣದಲ್ಲಿ ಭಾರತ-ಪಾಕಿಸ್ತಾನ ಮುಖಾಮುಖಿ

2023ರಲ್ಲಿ ಭಾರತ ಮತ್ತು ಪಾಕಿಸ್ತಾನ ಕ್ರಿಕೆಟ್ ಅಭಿಮಾನಿಗಳಿಗೆ ಭಾರಿ ಮನೋರಂಜನೆ ಸಿಗಲಿದೆ. ಏಕದಿನ ವಿಶ್ವಕಪ್‌ಗಿಂತ ಮೊದಲು ಏಷ್ಯಾಕಪ್ ಪಂದ್ಯಾವಳಿ ನಡೆಯಲಿದ್ದು, ಭಾರತ ಮತ್ತು ಪಾಕಿಸ್ತಾನ ಕನಿಷ್ಠ ಮೂರು ಬಾರಿ ಮುಖಾಮುಖಿಯಾಗುವ ಸಾಧ್ಯತೆ ಇದೆ.

ಪಾಕಿಸ್ತಾನದಿಂದ ದಿನಕ್ಕೊಂದು ನೆಪ: ಏಕದಿನ ವಿಶ್ವಕಪ್ ವೇಳಾಪಟ್ಟಿ ಪ್ರಕಟ ತಡವಾಗ್ತಿರೋದ್ಯಾಕೆ?ಪಾಕಿಸ್ತಾನದಿಂದ ದಿನಕ್ಕೊಂದು ನೆಪ: ಏಕದಿನ ವಿಶ್ವಕಪ್ ವೇಳಾಪಟ್ಟಿ ಪ್ರಕಟ ತಡವಾಗ್ತಿರೋದ್ಯಾಕೆ?

ಏಕದಿನ ವಿಶ್ವಕಪ್ ಪಂದ್ಯ ಅಹಮದಾಬಾದ್‌ನ ನರೇಂದ್ರ ಮೋದಿ ಸ್ಟೇಡಿಯಂನಲ್ಲಿ ನಡೆಯಲಿದ್ದು, ವಿಶ್ವದ ಅತಿ ದೊಡ್ಡ ಕ್ರಿಕೆಟ್ ಮೈದಾನದಲ್ಲಿ ಸಾಂಪ್ರದಾಯಿಕ ಎದುರಾಳಿಗಳು ಮುಖಾಮುಖಿಯಾಗಲಿವೆ. ನರೇಂದ್ರ ಮೋದಿ ಕ್ರೀಡಾಂಗಣದಲ್ಲಿ 1,30,000 ಪ್ರೇಕ್ಷಕರ ಸಾಮರ್ಥ್ಯವನ್ನು ಹೊಂದಿದ್ದು, ಎಲ್ಲಾ ಟಿಕೆಟ್‌ಗಳು ಮಾರಾಟವಾಗಲಿದ್ದು, ಪಂದ್ಯದ ಸ್ಥಳವನ್ನು ಬದಲಾಯಿಸಲು ಬಿಸಿಸಿಐ, ಐಸಿಸಿ ನಿರಾಕರಿಸಿವೆ.

“ಭಾರತ-ಪಾಕಿಸ್ತಾನ ಪಂದ್ಯ ಅಹಮದಾಬಾದ್‌ನಲ್ಲಿ ನಡೆಯುತ್ತದೆ. ಪಾಕಿಸ್ತಾನ ಸ್ಥಳ ಬದಲಾವಣೆಗೆ ಮನವಿ ಮಾಡಿದೆ. ಆದರೆ ಯಾವುದೇ ಬದಲಾವಣೆಗಳು ಆಗುವುದಿಲ್ಲ. ಇದು ಇಡೀ ಪಂದ್ಯಾವಳಿಯ ಪ್ರಮುಖ ಪಂದ್ಯವಾಗಿದೆ, ಐಸಿಸಿ ಅದನ್ನು ಬದಲಾಯಿಸಲು ಬಯಸುವುದಿಲ್ಲ. ಮುಂದಿನ ದೊಡ್ಡ ಕ್ರೀಡಾಂಗಣ ಲಕ್ನೋ ಮತ್ತು ಕೋಲ್ಕತ್ತಾದಲ್ಲಿದೆ. ಆದರೆ ಆತಿಥ್ಯ ವಹಿಸುತ್ತಿರುವ ಭಾರತ ಸ್ಥಳವನ್ನು ನಿರ್ಧರಿಸುವ ಹಕ್ಕನ್ನು ಹೊಂದಿದ್ದಾರೆ” ಎಂದು ಬಿಸಿಸಿಐ ಅಧಿಕಾರಿ ಹೇಳಿದ್ದಾರೆ.

ಭಾರತ-ಪಾಕಿಸ್ತಾನದ ನಾಯಕರು ಭಾಗಿ

ಈ ಮಹತ್ವದ ಪಂದ್ಯಕ್ಕಾಗಿ ವಿಶೇಷ ಸಿದ್ದತೆ ಮಾಡಿಕೊಳ್ಳಲಾಗುತ್ತದೆ. ಭಾರತದ ಪ್ರಧಾನಿ ನರೇಂದ್ರ ಮೋದಿ, ಕೇಂದ್ರ ಗೃಹ ಸಚಿವ ಅಮಿತ್ ಶಾ ಅಲ್ಲದೆ ಐಸಿಸಿಯ ಉನ್ನತ ಅಧಿಕಾರಿಗಳು ಮತ್ತು ಸೆಲೆಬ್ರಿಟಿಗಳನ್ನು ಕೂಡ ಪಂದ್ಯವನ್ನು ನೋಡಲು ಆಹ್ವಾನಿಸಲಾಗುತ್ತದೆ. ಬಿಸಿಸಿಐ ಪಾಕಿಸ್ತಾನ ಪ್ರಧಾನಿ ಮತ್ತು ಪಿಸಿಬಿ ಮುಖ್ಯಸ್ಥರನ್ನೂ ಆಹ್ವಾನಿಸಲಿದೆ. ಆದರೆ ಅವರು ಬರುವುದು ಬಿಡುವುದು ಅವರ ನಿರ್ಧಾರಕ್ಕೆ ಬಿಟ್ಟದ್ದು ಎಂದು ಹೇಳಲಾಗಿದೆ.

ಅಕ್ಟೋಬರ್ 5 ರಂದು ನರೇಂದ್ರ ಮೋದಿ ಸ್ಟೇಡಿಯಂನಲ್ಲಿ ಪಂದ್ಯಾವಳಿ ಆರಂಭವಾಗಲಿದ್ದು, ನವೆಂಬರ್ 15ರಂದು ಅದೇ ಸ್ಟೇಡಿಯಂನಲ್ಲಿ ಫೈನಲ್ ಪಂದ್ಯ ನಡೆಯಲಿದೆ. ಬೆಂಗಳೂರಿನಲ್ಲಿ ಕೂಡ ಭಾರತ ಒಂದು ಪಂದ್ಯವನ್ನಾಡಲಿದೆ. ಎದುರಾಳಿ ತಂಡ ಯಾವುದು ಎಂದು ಇನ್ನೂ ನಿರ್ಧಾರವಾಗಿಲ್ಲ.

English summary

World Cup 2023 schedule deadlock resolved as Pakistan Cricket Board agrees to venues; schedule to be unveiled in Mumbai On June 27th.

Story first published: Monday, June 26, 2023, 16:53 [IST]

Source link