India
oi-Sunitha B

ತೆಲಂಗಾಣ ಮುಖ್ಯಮಂತ್ರಿ ಕೆ. ಚಂದ್ರಶೇಖರ್ ರಾವ್ ಮತ್ತು ಭಾರತ್ ರಾಷ್ಟ್ರ ಸಮಿತಿ (ಬಿಆರ್‌ಎಸ್) 2024ರ ಲೋಕಸಭೆ ಚುನಾವಣೆಗೆ ರಾಷ್ಟ್ರೀಯ ವಿರೋಧ ಪಕ್ಷದ ಮೈತ್ರಿಕೂಟದ ಭಾಗವಾಗಿರುವುದಿಲ್ಲ ಎಂದು ಕಾಂಗ್ರೆಸ್ ಪಕ್ಷದ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ಘೋಷಿಸಿದರು.
ತೆಲಂಗಾಣದಲ್ಲಿ ವರ್ಷಾಂತ್ಯದಲ್ಲಿ ನಡೆಯಲಿರುವ ವಿಧಾನಸಭೆ ಚುನಾವಣೆಯ ಹಿನ್ನೆಲೆಯಲ್ಲಿ ರಾಜ್ಯದ ಮುಖಂಡರೊಂದಿಗೆ ರಣನೀತಿಯ ಕುರಿತು ಮಲ್ಲಿಕಾರ್ಜುನ ಖರ್ಗೆ ಚರ್ಚೆ ನಡೆಸಿದ್ದಾರೆ. ಎಐಸಿಸಿ ಕೇಂದ್ರ ಕಚೇರಿಯಲ್ಲಿ ನಡೆದ ಸಭೆಯಲ್ಲಿ ಪ್ರಧಾನ ಕಾರ್ಯದರ್ಶಿ (ಸಂಘಟನೆ) ಕೆ.ಸಿ. ವೇಣುಗೋಪಾಲ್, ಎಐಸಿಸಿ ತೆಲಂಗಾಣ ಉಸ್ತುವಾರಿ ಮಾಣಿಕ್ರಾವ್ ಠಾಕರೆ ಮತ್ತು ಪ್ರದೇಶ ಕಾಂಗ್ರೆಸ್ ಸಮಿತಿ (ಪಿಸಿಸಿ) ಮುಖ್ಯಸ್ಥ ಎ. ರೇವಂತ್ ರೆಡ್ಡಿ, ಲೋಕಸಭಾ ಸದಸ್ಯರಾದ ಉತ್ತಮ್ ಕುಮಾರ್ ರೆಡ್ಡಿ, ರೇಣುಕಾ ಚೌಧರಿ ಮತ್ತು ಮಧು ಗೌಡ್ ಯಾಸ್ಕಿ ಸೇರಿದಂತೆ ರಾಜ್ಯದ ಹಿರಿಯ ನಾಯಕರು ಭಾಗವಹಿಸಿದ್ದರು.

ತೆಲಂಗಾಣದ ಜನರು ಬದಲಾವಣೆಯನ್ನು ಬಯಸುತ್ತಿದ್ದಾರೆ ಮತ್ತು ಕಾಂಗ್ರೆಸ್‌ನತ್ತ ನೋಡುತ್ತಿದ್ದಾರೆ ಎಂದು ಖರ್ಗೆ ಹೇಳಿದ್ದಾರೆ. ತೆಲಂಗಾಣದ ಜನರು ಬದಲಾವಣೆಗಾಗಿ ಹಾತೊರೆಯುತ್ತಿದ್ದಾರೆ. ಅವರು ಕಾಂಗ್ರೆಸ್ ಪಕ್ಷದತ್ತ ನೋಡುತ್ತಿದ್ದಾರೆ. ಯಾವುದೇ ಸವಾಲು ಎದುರಿಸಲು ಕಾಂಗ್ರೆಸ್ ಸಿದ್ಧವಿದೆ. ಪ್ರಜಾಪ್ರಭುತ್ವ ಮೌಲ್ಯಗಳು ಮತ್ತು ಸರ್ವಾಂಗೀಣ ಸಾಮಾಜಿಕ ಕಲ್ಯಾಣದ ಆಧಾರದ ಮೇಲೆ ನಾವು ತೆಲಂಗಾಣಕ್ಕೆ ಉಜ್ವಲ ಭವಿಷ್ಯವನ್ನು ನೀಡುತ್ತೇವೆ ಎಂದು ಖರ್ಗೆ ಹೇಳಿದ್ದಾರೆ.
ತೆಲಂಗಾಣ: ಚುನಾವಣೆಗು ಮುನ್ನ ಸಿಎಂ ಕೆಸಿಆರ್‌ಗೆ ಆಘಾತ, ಕಾಂಗ್ರೆಸ್ ಸೇರಿದ ಪ್ರಮುಖ 35 ನಾಯಕರು!
ಸಭೆಯ ನಂತರ ಸುದ್ದಿಗಾರರೊಂದಿಗೆ ಮಾತನಾಡಿದ ಠಾಕರೆ, ಪಕ್ಷದ ನಾಯಕತ್ವ ಬಡವರು, ಇತರ ಹಿಂದುಳಿದ ವರ್ಗಗಳು (ಒಬಿಸಿ) ಮತ್ತು ಬಡತನದ ಅಂಚಿನಲ್ಲಿರುವವರ ಮೇಲೆ ಕೇಂದ್ರೀಕರಿಸುತ್ತದೆ. ಕಾಂಗ್ರೆಸ್ ಯೋಜಿಸಿರುವ ಭರವಸೆಗಳೊಂದಿಗೆ ಮನೆ-ಮನೆ ಪ್ರಚಾರವನ್ನು ಮಾಡಲಾಗುತ್ತದೆ ಎಂದು ಹೇಳಿದರು.
ಇನ್ನೂ ಬಿಆರ್‌ಎಸ್ ಕುರಿತು ಮಾತನಾಡಿದ ಠಾಕರೆ, ತೆಲಂಗಾಣ ಸಿಎಂ ಎಂದು ಜನಜನಿತರಾಗಿರುವ ಕೆಸಿಆರ್ ಅವರು ರಾಜ್ಯದ ಹಣವನ್ನು ತಮ್ಮ ಕುಟುಂಬದ ಜನರಿಗಾಗಿ ಖರ್ಚು ಮಾಡುತ್ತಿದ್ದಾರೆ ಮತ್ತು ಬಿಆರ್‌ಎಸ್ ಭಾರತೀಯ ಜನತಾ ಪಕ್ಷ (ಬಿಜೆಪಿ) ಯೊಂದಿಗೆ ಮೈತ್ರಿ ಮಾಡಿಕೊಂಡಿದೆ ಎಂದು ಆರೋಪಿಸಿದರು.
“ಕೆಸಿಆರ್ ಮತ್ತು ಅವರ BRS ಕಾಂಗ್ರೆಸ್ ಪ್ರಬಲವಾಗಿರುವ ಪ್ರದೇಶಗಳಲ್ಲಿ ಬಿಜೆಪಿಗೆ ಸಹಾಯ ಮಾಡುತ್ತಿದ್ದಾರೆ” ಎಂದು ಠಾಕರೆ ಪತ್ರಿಕಾಗೋಷ್ಠಿಯಲ್ಲಿ ಹೇಳಿದರು.
ಇದೇ ವೇಳೆ ರಾಹುಲ್ ಗಾಂಧಿ ಅವರು ತಮ್ಮ ಪಕ್ಷದ ಸಹೋದ್ಯೋಗಿಗಳಿಗೆ ತಮ್ಮ ವೈಯಕ್ತಿಕ ಭಿನ್ನಾಭಿಪ್ರಾಯಗಳನ್ನು ಬದಿಗಿಟ್ಟು ತಂಡವಾಗಿ ಒಟ್ಟಾಗಿ ಕೆಲಸ ಮಾಡಲು ಒತ್ತಾಯಿಸಿದರು.
ಸೋಮವಾರ ಹಲವಾರು ಬಿಆರ್‌ಎಸ್ ನಾಯಕರು ಕಾಂಗ್ರೆಸ್‌ಗೆ ಸೇರಿದ ನಂತರ ವೇಣುಗೋಪಾಲ್ ಅವರು ಟ್ವೀಟ್ ಮಾಡಿದ್ದರು: “ಕೆಸಿಆರ್ ಅವರ ಊಳಿಗಮಾನ್ಯ ಸರ್ಕಾರವನ್ನು ಸೋಲಿಸಲು ಮತ್ತು ಬಿಆರ್‌ಎಸ್ ಮತ್ತು ಬಿಜೆಪಿ ನಡುವಿನ ಅಪವಿತ್ರ ಮೈತ್ರಿಯನ್ನು ಹತ್ತಿಕ್ಕಲು ತೆಲಂಗಾಣ ಸಿದ್ಧವಾಗಿದೆ.”
English summary
Telangana Chief Minister K. Chandrasekhar Rao and the Bharat Rashtra Samithi (BRS) will not be part of the National Opposition alliance for the 2024 Lok Sabha elections, Congress party president Mallikarjuna Kharge has announced.
Story first published: Tuesday, June 27, 2023, 22:53 [IST]