Tv
oi-Narayana M
By Shruthi Harish Gowda
|
ಸುಪ್ರೀತಾ
ಮೊದಮೊದಲು
ಕೀರ್ತಿಯ
ಪರವಾಗಿದ್ದಳು.
ನಂತರ
ಲಕ್ಷ್ಮಿಯನ್ನ
ಮನೆಯಿಂದ
ಓಡಿಸಿದರೆ
ಸಾಕು
ಎಂದು
ಅವಮಾನಿಸುತ್ತಿದ್ದಳು.
ಈಗ
ಲಕ್ಷ್ಮಿಯೇ
ಸುಪ್ರೀತಾ
ಮನೆಯಲ್ಲಿ
ಉಳಿದುಕೊಳ್ಳುವ
ರೀತಿ
ಮಾಡಿರುವುದರಿಂದ
ಲಕ್ಷ್ಮಿಗೆ
ಬೆಂಗಾವಲಾಗಿ
ನಿಲ್ಲುತ್ತೇನೆ
ಎಂದು
ತನಗೆ
ತಾನೇ
ಅಂದುಕೊಂಡಿದ್ದಾಳೆ.
ತನ್ನನ್ನು
ಅವಮಾನಿಸಿದ
ಕೀರ್ತಿಗೆ
ತಕ್ಕ
ಪಾಠವನ್ನು
ಕಲಿಸಬೇಕು
ಎಂದುಕೊಂಡಿದ್ದಾಳೆ.
ಸುಪ್ರೀತಾ,
ವೈಷ್ಣವ್‌ಗೆ
ಕಾವೇರಿ
ಈ
ರೀತಿಯಲ್ಲ
ಮಾಡಿರಬಹುದು
ಎಂದು
ತಲೆ
ಚುಚ್ಚಿದ್ದಾಳೆ.
ನನ್ನ
ತಾಯಿಯ
ಆಣೆಗೂ
ನಾನು
ಹೇಳಿರುವುದು
ಸತ್ಯ
ಎಂದು
ಹೇಳಿದ
ಮೇಲೆ
ವೈಷ್ಣವ್
ತನ್ನ
ಅತ್ತೆಯ
ಮಾತನ್ನು
ನಂಬಿದ್ದಾನೆ.
ಇದು
ಏನಾದರೂ
ಸುಳ್ಳು
ಎಂದಾದರೆ
ಈ
ಮನೆಯಿಂದ
ನಿಮ್ಮನ್ನು
ಹೊರಗೆ
ಹಾಕುತ್ತೇನೆ
ಎಂದು
ಹೇಳಿದ್ದಾನೆ.

ಅತ್ತೆ
ಹೇಳಿದ
ಮಾತಿನ
ಬಗ್ಗೆ
ತಲೆ
ಕೆಡಿಸಿಕೊಂಡಿರುವ
ವೈಷ್ಣವ್‌ಗೆ
ಹೊಸ
ಲಿರಿಕ್ಸ್
ಬರೆಯಲು
ಆಗುತ್ತಿಲ್ಲ.
ಇನ್ನೂ
ಹೊಸ
ಲಿರಿಕ್ಸ್
ಬರೆಯುವಂತೆ
ಕಂಪನಿ
ಕಡೆಯಿಂದ
ಕಾಲ್
ಬಂದಿದ್ದು
ಅದನ್ನು
ಬರೆಯಲು
ವೈಷ್ಣವ್
ಕುಳಿತು
ಕೊಂಡಿದ್ದಾನೆ.
ಆದರೆ
ಟೆನ್ಶನ್‌ಗೆ
ಏನನ್ನು
ಬರೆಯಲು
ಆಗುತ್ತಿಲ್ಲ.
ಈ
ಕಡೆ
ಕಾವೇರಿಗೆ
ನನ್ನ
ಮಗ
ಯಾಕೆ
ಈ
ರೀತಿ
ಇದ್ದಾನೆ,
ಸುಪ್ರೀತಾ
ಏನು
ಹೇಳಿದಳು
ಎಂದು
ಬೇಸರ
ಮಾಡಿಕೊಂಡಿದ್ದಾಳೆ.
ಕೀರ್ತಿಗೆ
ತಿಳಿಯಿತು
ತಾಳಿ
ಸತ್ಯ
ಕೀರ್ತಿಗೆ
ಸುಪ್ರೀತಾ
ನಾಳೆ
ವೈಷ್ಣವ್
ಹಾಗೂ
ಲಕ್ಷ್ಮೀಯ
ತಾಳಿ
ಪೂಜೆ
ಕಾರ್ಯಕ್ರಮವಿದೆ.
ಕಾವೇರಿ
ಅತ್ತಿಗೆ
ನಿನಗೆ
ಆಹ್ವಾನ
ನೀಡಿಲ್ಲ.
ಆದರೆ
ನಾನು
ನಿನ್ನನ್ನ
ಮನೆಗೆ
ಕರೆಯುತ್ತಿದ್ದೇನೆ,
ದಯವಿಟ್ಟು
ಬಂದುಬಿಡು
ಎಂದಿದ್ದಾಳೆ.
ಇನ್ನೂ
ಸುಪ್ರೀತಾ
ಮಾತನ್ನ
ಕೇಳಿದ
ಕೀರ್ತಿಗೆ
ಶಾಕ್
ಆಗಿದೆ.
ಕಾವೇರಿ
ಆಂಟಿ
ಯಾವಾಗ
ತಾಳಿಯನ್ನ
ತೆಗೆದುಕೊಂಡರು.
ಅದು
ತಮ್ಮ
ಕೈಯಾರೆ
ತಾಳಿ
ಶಾಸ್ತ್ರವನ್ನ
ಮಾಡಿಸುತ್ತಿದ್ದಾರೆ
ಎಂದು
ಟೆನ್ಷನ್
ಆಗಿದೆ.
ಕೀರ್ತಿ
ಹೊಸ
ಪ್ಲ್ಯಾನ್
ಕಾವೇರಿ
ಹಾಗೂ
ಕೀರ್ತಿ
ಇಬ್ಬರೂ
ಜುವೆಲ್ಲರಿ
ಶಾಪಿಗೆ
ಹೋದಾಗ
ನನಗೆ
ಡೈಮೆಂಡ್
ಕ್ರೇಜ್
ಇದೆ
ಎಂದು
ಕಾವೇರಿ
ತಾಳಿ
ತೆಗೆದುಕೊಂಡಿದ್ದು
ಕೀರ್ತಿ
ನೆನಪಿಗೆ
ಬಂದಿದೆ.
ಅಂದರೆ
ಕಾವೇರಿ
ಆಂಟಿ
ಸುಳ್ಳು
ಹೇಳಿ
ಲಕ್ಷ್ಮಿಗೆ
ತಾಳಿ
ತೆಗೆದುಕೊಂಡ್ರಾ?
ಎಂದು
ಕೀರ್ತಿ
ಬೇಸರ
ಮಾಡಿಕೊಂಡಿದ್ದಾಳೆ.
ಹೇಗಾದರೂ
ಮಾಡಿ
ಈ
ತಾಳಿ
ಶಾಸ್ತ್ರವನ್ನು
ತಡೆಯಬೇಕು
ಎಂದು
ಕೀರ್ತಿ
ಪ್ಲ್ಯಾನ್
ಮಾಡಿದ್ದಾಳೆ.

ವೈಷ್ಣವ್
ಮೇಲೆ
ಲಕ್ಷ್ಮೀಗೆ
ಮುನಿಸು
ಲಕ್ಷ್ಮಿ,
ವೈಷ್ಣವ್‌ನನ್ನು
ಹುಡುಕಿಕೊಂಡು
ಬಂದಿದ್ದಾಳೆ.
ಇದೇ
ವೇಳೆ
ವೈಷ್ಣವ್
ಲಿರಿಕ್ಸ್
ಬರೆಯಲು
ಕುಳಿತುಕೊಂಡಿದ್ದಾನೆ.
ಟೆನ್ಷನ್‌ನಲ್ಲಿ
ಲಿರಿಕ್ಸ್
ಬರೆಯಲು
ಸಾಧ್ಯವಿಲ್ಲ
ಎಂದು
ಲಕ್ಷ್ಮಿ
ಹೇಳಿದಾಗ
ನೀವು
ಸಹ
ನನ್ನ
ಬಾಯಲ್ಲಿ
ಸತ್ಯವನ್ನ
ಬಿಡಿಸಲು
ಬರಬೇಡಿ.
ನಾನು
ಏನನ್ನ
ಹೇಳುವುದಿಲ್ಲ
ಸುಮ್ಮನೆ
ಹೋಗಿ
ಮಲಗಿಕೊಳ್ಳಿ
ಎಂದು
ಲಕ್ಷ್ಮಿ
ಮೇಲೆ
ವೈಷ್ಣವ್
ರೇಗಾಡಿದ್ದಾನೆ.
ವೈಷ್ಣವ್
ರೇಗಾಡಿದ್ದಕ್ಕೆ
ಲಕ್ಷ್ಮಿಗೆ
ವೈಷ್ಣವ್
ಮೇಲೆ
ಕೋಪ
ಬಂದಿದ್ದು
ಮಳೆಯಲ್ಲಿ
ನೆನೆಯಲು
ಶುರು
ಮಾಡಿದ್ದಾಳೆ.
ಇನ್ನೂ
ಇದನ್ನು
ನೋಡಿದ
ವೈಷ್ಣವ್‌ಗೆ
ಸ್ವಲ್ಪ
ಕೋಪ
ಕಮ್ಮಿ
ಆದಂತೆ
ಕಾಣುತ್ತಿದೆ.
ಲಕ್ಷ್ಮಿಯ
ಪಕ್ಕದಲ್ಲಿ
ಬಂದು
ಟೆನ್ಷನ್‌ನಲ್ಲಿ
ಏನೇನೋ
ಮಾತನಾಡಿಬಿಟ್ಟೆ
ಎಂದು
ಹೇಳಿದ್ದಾನೆ.
ವೈಷ್ಣವ್-
ಲಕ್ಷ್ಮಿ
ಮಾತು
ಕೇಳಿಸಿಕೊಂಡ
ಕಾವೇರಿ
ಲಕ್ಷ್ಮಿ
ಸಹ
ಗಂಡನಿಗೆ
ಸಮಾಧಾನ
ಮಾಡಿದ್ದಾಳೆ.
ಈಗ
ನಾವು
ಇಬ್ಬರು
ನಿಮಗೆ
ಏನಾದರೂ
ಬೇಸರವಾದರೆ
ನನಗೂ
ಸಹ
ಬೇಸರವಾಗುತ್ತದೆ.
ದಯವಿಟ್ಟು
ನೀವು
ಯಾವುದೇ
ಟೆನ್ಶನ್
ಮಾಡಿಕೊಳ್ಳದೆ
ಎಲ್ಲವನ್ನು
ಬಿಟ್ಟು
ಆರಾಮಾಗಿ
ಇರಿ
ಎಂದು
ಲಕ್ಷ್ಮೀ
ಗಂಡನಿಗೆ
ಹೇಳಿದ್ದಾಳೆ.
ಏನೇ
ಆದರೂ
ನಿಮಗೆ
ಕಂಪನಿಯನ್ನ
ನಾನು
ಕೊಡುತ್ತೇನೆ,
ನೀವೇನು
ಸುಪ್ರೀತಾ
ಚಿಕ್ಕಮ್ಮ
ಹೇಳಿದ್ದನ್ನು
ನನ್ನ
ಬಳಿ
ಹೇಳಬೇಕು
ಅಂತ
ಏನಿಲ್ಲ
ಎಂದಿದ್ದಾಳೆ.
ಲಕ್ಷ್ಮಿ
ಹಾಗೂ
ವೈಷ್ಣವ್
ನಡುವಿನ
ಸಂಭಾಷಣೆಯನ್ನು
ಕಾವೇರಿ
ಮೇಲೆ
ನಿಂತು
ಕೇಳಿಸಿಕೊಳ್ಳುತ್ತಿದ್ದಾಳೆ.
English summary
colors kannada lakshmibaramma serial Written Update on July 29th episode. know more
Sunday, July 30, 2023, 12:49
Story first published: Sunday, July 30, 2023, 12:49 [IST]