Jagannath Ratha Yatra 2023: ಪುರಿ ಜಗನ್ನಾಥ ರಥ ಯಾತ್ರೆಗೆ ಶುಭಾಶಯ ಕೋರಿದ ಪ್ರಧಾನಿ ನರೇಂದ್ರ ಮೋದಿ | PM Narendra Modi Extends Greetings For Lord Jagannath Ratha Yatra

India

oi-Naveen Kumar N

|

Google Oneindia Kannada News

ಜಗನ್ನಾಥ ಪುರಿ ರಥಯಾತ್ರೆಗೆ ಪ್ರಧಾನಿ ನರೇಂದ್ರ ಮೋದಿ ಶುಭಾಶಯ ಕೋರಿದ್ದಾರೆ. ಮಂಗಳವಾರ ಜಗತ್ಪ್ರಸಿದ್ಧ ಪುರಿ ಜಗನ್ನಾಥ ರಥ ಯಾತ್ರೆ ಆರಂಭವಾಗಲಿದ್ದು, ಮೋದಿ ಜನರಿಗೆ ಶುಭಾಶಯ ಕೋರಿದ್ದಾರೆ. ದೇಶದ ವಿವಿಧ ಭಾಗಗಳಿಂದ ಮಾತ್ರವಲ್ಲದೆ, ವಿದೇಶದಿಂದ ಕೂಡ ಲಕ್ಷಾಂತರ ಸಂಖ್ಯೆಯಲ್ಲಿ ಭಕ್ತರು ಆಗಮಿಸಿ ರಥಯಾತ್ರೆಯನ್ನು ಕಣ್ತುಂಬಿಕೊಳ್ಳಲಿದ್ದಾರೆ.

“ಎಲ್ಲರಿಗೂ ರಥಯಾತ್ರೆಯ ಶುಭಾಶಯಗಳು. ನಾವು ಈ ಪವಿತ್ರ ಸಂದರ್ಭವನ್ನು ಆಚರಿಸುತ್ತಿರುವಾಗ, ಭಗವಾನ್ ಜಗನ್ನಾಥನ ದಿವ್ಯ ಪ್ರಯಾಣವು ನಮ್ಮ ಜೀವನವನ್ನು ಆರೋಗ್ಯ, ಸಂತೋಷ ಮತ್ತು ಆಧ್ಯಾತ್ಮಿಕ ಸಮೃದ್ಧಿಯಿಂದ ತುಂಬಲಿ ಎಂದು ಪ್ರಧಾನಿ ಮೋದಿ ಟ್ವೀಟ್‌ ಮೂಲಕ ವಿಡಿಯೋ ಹಂಚಿಕೊಂಡಿದ್ದಾರೆ.

 PM Narendra Modi Extends Greetings For Lord Jagannath Ratha Yatra

ಭಗವಾನ್ ಜಗನ್ನಾಥ ಯಾತ್ರೆಯು ಒಡಿಶಾದ ಪವಿತ್ರ ನಗರವಾದ ಪುರಿಯಲ್ಲಿ ನಡೆಯುವ ವಾರ್ಷಿಕ ಹಿಂದೂ ಹಬ್ಬವಾಗಿದೆ. ಜಗನ್ನಾಥ ದೇವಾಲಯದಿಂದ ಗುಂಡಿಚಾ ದೇವಾಲಯಕ್ಕೆ ಭಗವಾನ್ ಜಗನ್ನಾಥ, ಅವರ ಸಹೋದರ ಬಲಭದ್ರ ಮತ್ತು ಅವರ ಸಹೋದರಿ ಸುಭದ್ರಾ ರಥಯಾತ್ರೆ ಮೂಲಕ ಪ್ರಯಾಣ ಮಾಡಲಿದ್ದಾರೆ. ಸಾವಿರಾರು ಭಕ್ತರು ರಥ ಎಳೆಯುವ ಮೂಲಕ ಭಕ್ತಿ ಸಮರ್ಪಣೆ ಮಾಡುತ್ತಾರೆ.

12ನೇ ಶತಮಾನದಲ್ಲಿ ರಥಯಾತ್ರೆ ಪ್ರಾರಂಭ

ಇನ್ನು ಈ ರಥಯಾತ್ರೆ 12ನೇ ಶತಮಾನದಲ್ಲೇ ಶುರುವಾಗಿದೆ ಎಂದು ನಂಬಲಾಗಿದೆ. ವಿಶ್ವದ ಅತ್ಯಂತ ದೊಡ್ಡ ರಥೋತ್ಸವ ಎನ್ನುವ ಖ್ಯಾರಿ ಪುರಿ ಜಗನ್ನಾಥ ರಥ ಯಾತ್ರೆಗೆ ಇದೆ. ಹಬ್ಬವನ್ನು ಆಚರಿಸಲು ಭಾರತ ಮತ್ತು ಪ್ರಪಂಚದಾದ್ಯಂತದ ಲಕ್ಷಾಂತರ ಜನರು ಪುರಿಗೆ ಬರುತ್ತಾರೆ.

ಆಷಾಢ ಮಾಸದ ಅಮಾವಾಸ್ಯೆಯ ಎರಡನೇ ದಿನದಂದು ಈ ರಥಯಾತ್ರೆ ಪ್ರಾರಂಭವಾಗುತ್ತದೆ. ಈ ದಿನ ಮೂರು ದೇವತೆಗಳನ್ನು ಹಾಲು, ನೀರು ಮತ್ತು ಹೂವುಗಳಿಂದ ಸ್ನಾನ ಮಾಡಲಾಗುತ್ತದೆ. ಮರುದಿನ, ರಥಗಳನ್ನು ಪುರಿಯ ಬೀದಿಗಳಲ್ಲಿ ಎಳೆಯಲಾಗುತ್ತದೆ. ರಥಗಳನ್ನು ಹೂವುಗಳು, ಧ್ವಜಗಳು ಮತ್ತು ಬ್ಯಾನರ್‌ಗಳಿಂದ ಅಲಂಕರಿಸಲಾಗಿದೆ.

ರಥಗಳನ್ನು ಗುಂಡಿಚಾ ದೇವಸ್ಥಾನಕ್ಕೆ ಎಳೆಯಲಾಗುತ್ತದೆ, ಅಲ್ಲಿ ದೇವತೆಗಳು ಒಂಬತ್ತು ದಿನಗಳ ಕಾಲ ತಂಗುತ್ತಾರೆ. ಈ ಸಮಯದಲ್ಲಿ, ಭಕ್ತರಿಂದ ದೇವತೆಗಳನ್ನು ಪೂಜೆ ಸಲ್ಲಿಸಲು ಅವಕಾಶ ನೀಡಲಾಗುತ್ತದೆ. ಒಂಬತ್ತನೇ ದಿನ, ದೇವತೆಗಳು ಜಗನ್ನಾಥ ದೇವಾಲಯಕ್ಕೆ ಹಿಂತಿರುಗುತ್ತಾರೆ. ಹಿಂದಿರುಗುವ ಪ್ರಯಾಣವನ್ನು ಸಹ ಬಹಳ ಸಂತೋಷ ಮತ್ತು ಸಂಭ್ರಮದಿಂದ ಆಚರಿಸಲಾಗುತ್ತದೆ.

 PM Narendra Modi Extends Greetings For Lord Jagannath Ratha Yatra

ಈ ಬಾರಿ ರಥಯಾತ್ರೆಯಲ್ಲಿ ಸುಮಾರು 25 ಲಕ್ಷ ಭಕ್ತರು ಭೇಟಿ ನೀಡಲಿದ್ದಾರೆ ಎಂದು ಅಂದಾಜಿಸಲಾಗಿದೆ. ಯಾವುದೇ ಅಹಿತಕರ ಘಟನೆ ನಡೆಯದಂತೆ ಎಲ್ಲಾ ರೀತಿಯ ಮುನ್ನೆಚ್ಚರಿಕೆ ವಹಿಸಲಾಗಿದೆ. ಮೊದಲನೇ ದಿನವನ್ನು “ಶ್ರೀ ಗುಂಡಿಚಾ ದಿನ” ಎಂದು ಆಚರಿಸಲಾಗುತ್ತದೆ ಈ ದಿನ ಸುಮಾರು 10 ಲಕ್ಷ ಭಕ್ತರು ಭಾಗವಹಿಸುವ ನಿರೀಕ್ಷೆ ಇದೆ.

ಭಕ್ತಾದಿಗಳಿಗೆ ಕುಡಿಯುವ ನೀರಿನ ವ್ಯವಸ್ಥೆ ಮಾಡಲಾಗಿದೆ. ಊಟದ ವ್ಯವಸ್ಥೆ ಕೂಡ ಇರುತ್ತದೆ. ಬಿಸಿಲು ಹೆಚ್ಚಾಗಿರುವ ಕಾರಣ, ಬಿಸಿಲಿನಿಂದ ಬಾಧಿತರಾದವರಿಗೆ ಸೂಕ್ತ ಚಿಕಿತ್ಸೆ ನೀಡಲು ವೈದ್ಯಕೀಯ ವ್ಯವಸ್ಥೆ ಮಾಡಲಾಗಿದೆ. ರಾಜ್ಯ, ಕೇಂದ್ರ ಪೊಲೀಸರ ತಲಾ ಮೂವತ್ತು ಸಿಬ್ಬಂದಿ ಇರುವ 180 ತುಕಡಿಗಳನ್ನು ಭದ್ರತೆಗಾಗಿ ನಿಯೋಜಿಸಲಾಗಿದೆ. ಭದ್ರತಾ ವ್ಯವಸ್ಥೆಗೆ ಆರ್ ಒಎಫ್, ಒಡಿಆರ್ ಎಫ್, ಎನ್‌ಡಿಆರ್‍ಎಫ್ ಸಿಬ್ಬಂದಿ ಕೂಡ ಕೈಜೋಡಿಸಿದ್ದಾರೆ.

English summary

PM Narendra Modi extends greetings for Lord Jagannath Yatra, wishing well-being, happiness, and spiritual growth to everyone celebrating this auspicious occasion.

Story first published: Tuesday, June 20, 2023, 10:51 [IST]

Source link