ISRO Launch: ಭಾರತದ ಮೂಲಕ ಬಾಹ್ಯಾಕಾಶಕ್ಕೆ ಸಿಂಗಾಪುರ ಉಪಗ್ರಹಗಳು! | ISRO successfully launched Singapore satellites

India

oi-Malathesha M

|

Google Oneindia Kannada News

ಶ್ರೀಹರಿಕೋಟಾ: ಎಲ್ಲಾ ಅಂದುಕೊಂಡಂತೆ ನಡೆದಿದೆ, ಶುಭ ಭಾನುವಾರ ಭಾರತೀಯರಿಗೆ ಮತ್ತೊಂದು ಸಿಹಿಸುದ್ದಿ ಕೊಟ್ಟಿದೆ ಇಸ್ರೋ. 7 ವಿದೇಶಿ ಉಪಗ್ರಹ ಹೊತ್ತಿದ್ದ ಭಾರತೀಯರ ಹೆಮ್ಮೆಯ ಬಾಹ್ಯಾಕಾಶ ಸಂಸ್ಥೆ ಇಸ್ರೋ ರಾಕೆಟ್ ಯಶಸ್ವಿಯಾಗಿ ಲಾಂಚ್ ಆಗಿದೆ. ಇದಕ್ಕಾಗಿ ಪಿಎಸ್​ಎಲ್​ವಿ-ಸಿ56 ರಾಕೆಟ್ ಬಳಸಿದ್ದ ಇಸ್ರೋ ತನ್ನ ಈ ಕಾರ್ಯದಲ್ಲಿ ಭರ್ಜರಿ ಸಕ್ಸಸ್ ಕಂಡಿದೆ.

‘ಚಂದ್ರಯಾನ-3’ ಯಶಸ್ಸು ಭಾರತಕ್ಕೆ ಮತ್ತು ಇಸ್ರೋ ಸಂಸ್ಥೆಗೆ ಹೊಸ ಮೆರಗು ನೀಡಿದೆ. ಹೀಗೆ ‘ಚಂದ್ರಯಾನ-3’ ಬೆನ್ನಲ್ಲೇ ಭಾರತೀಯ ಬಾಹ್ಯಾಕಾಶ ಸಂಶೋಧನಾ ಸಂಸ್ಥೆ ಅಂದರೆ ಇಸ್ರೋ ಇಂದು ಮತ್ತೊಂದು ರಾಕೆಟ್​ ಉಡಾವಣೆ ಮಾಡಿದೆ. ಸಿಂಗಾಪುರದ ಉಪಗ್ರಹಗಳನ್ನು ಹೊತ್ತಿದ್ದ ಇಸ್ರೋದ ಪಿಎಸ್​ಎಲ್​ವಿ-ಸಿ56 ರಾಕೆಟ್​​ ಇಂದು ಬೆಳಗ್ಗೆ 6.30ಕ್ಕೆ ಶ್ರೀಹರಿಕೋಟಾದ ಸತೀಶ್​ ಧವನ್​ ಬಾಹ್ಯಾಕಾಶ ಕೇಂದ್ರದಿಂದ ಯಶಸ್ವಿಯಾಗಿ ಲಾಂಚ್ ಆಗಿದೆ. ಇಂದು ಬೆಳಗ್ಗೆ 6.30ಕ್ಕೆ ಪಿಎಸ್‌ಎಲ್‌ವಿ ಉಡಾವಣೆಯಾಗಿದ್ದು, ಎಲ್ಲ ಉಪಗ್ರಹಗಳನ್ನು ಕಕ್ಷೆಗೆ ಯಶಸ್ವಿಯಾಗಿ ಸೇರಿಸಿದೆ. ಇನ್ನು ಉಪಗ್ರಹಗಳನ್ನು 5 ಕಕ್ಷೆಯ ಇಳಿಜಾರಿನೊಂದಿಗೆ 535 ಕಿಲೋ ಮೀಟರ್ ವೃತ್ತಾಕಾರಕ್ಕೆ ಸೇರಿಸಲಾಗುತ್ತದೆ ಎಂದು ಇಸ್ರೋ ಸಂಸ್ಥೆ ಮಾಹಿತಿ ನೀಡಿತ್ತು.

ISRO successfully launched Singapore satellites

ಉಪಗ್ರಹ ಕಕ್ಷೆಗೆ ಸೇರುವುದು ಹೇಗೆ?

ಅಂದಹಾಗೆ ಇಸ್ರೋ ಮೂಲಕ ಉಪಗ್ರಹ ಉಡಾವಣೆ ಸುಲಭ & ತುಂಬಾ ಕಡಿಮೆ ಖರ್ಚು ಎಂಬ ಕಾರಣಕ್ಕೆ ವಿದೇಶಿ ಬಾಹ್ಯಾಕಾಶ ಸಂಸ್ಥೆಗಳು ಮುಂದೆ ಬರುತ್ತವೆ. ಅದ್ರಲ್ಲೂ ಇಸ್ರೋ ಉಪಗ್ರಹ ಉಡಾವಣೆ ವಿಚಾರದಲ್ಲಿ ತುಂಬಾನೆ ದೊಡ್ಡ ಹೆಸರು ಸಂಪಾದಿಸಿದೆ. ಹೀಗೆ ಸದ್ಯ ಏಳು ವಿದೇಶಿ ಉಪಗ್ರಹ ಉಡಾಯಿಸಿದೆ. ಇದು ಇಸ್ರೋ ಸಂಸ್ಥೆಯ 56ನೇ ಕಾರ್ಯಾಚರಣೆ, ಪೋಲಾರ್ ಸ್ಯಾಟಲೈಟ್ ಲಾಂಚ್ ವೆಹಿಕಲ್ ಅನ್ನು ಯಶಸ್ವಿಯಾಗಿಯೇ ಉಡಾವಣೆ ಮಾಡಿದೆ. ಸದ್ಯ ಉಡಾವಣೆ ಮಾಡಲಾಗಿರುವ ರಾಕೆಟ್‌ನ ಮೇಲಿನ ಹಂತವನ್ನು ಕಡಿಮೆ ಕಕ್ಷೆಯಲ್ಲಿ ಇರಿಸಿ, ಅದರಲ್ಲಿರುವ ಉಪಗ್ರಹಗಳನ್ನು ಸ್ಥಾಪಿಸುವ ಬಗ್ಗೆ ಯೋಜನೆ ರೂಪುಗೊಳಿಸಲಾಗಿದೆ.

ಹೊಸ ಉಪಗ್ರಹಗಳಿಂದ ಏನು ಪ್ರಯೋಜನ?

ಅಂದಹಾಗೆ ಇದೀಗ ಸಿಂಗಾಪುರಕ್ಕೆ ಸೇರಿದ ಉಪಗ್ರಹಗಳನ್ನು ಇಸ್ರೋ ಯಶಸ್ವಿಯಾಗಿ PSLV-C56 ರಾಕೆಟ್​ ಮೂಲಕ ಉಡಾಯಿಸಿದೆ. DS-SAR ಉಪಗ್ರಹವನ್ನು DSTA (ಸಿಂಗಾಪೂರ್ ಸರ್ಕಾರವನ್ನು ಪ್ರತಿನಿಧಿಸುತ್ತದೆ) ಮತ್ತು ಇದನ್ನು ST ಇಂಜಿನಿಯರಿಂಗ್ ಪಾಲುದಾರಿಕೆಯ ಅಡಿಯಲ್ಲಿ ಅಭಿವೃದ್ಧಿಪಡಿಸಲಾಗಿದೆ. ಈ ಉಪಗ್ರಹವು ಕಾರ್ಯಾಚರಣೆ ಆರಂಭಿಸಿದ ನಂತರ ಸಿಂಗಾಪುರ ಸರ್ಕಾರದ ವಿವಿಧ ಏಜೆನ್ಸಿಗಳು ಉಪಗ್ರಹದ ಫೋಟೋ ಬಳಸಿಕೊಳ್ಳಲಿವೆ ಅಂತಾ ಹೇಳಲಾಗುತ್ತಿದೆ. ಈ DS-SAR ರಾಡಾರ್ ಇಮೇಜಿಂಗ್ ಅರ್ಥ್ ಅಬ್ಸರ್ವೇಶನ್ ಉಪಗ್ರಹವು, ಈ ಮಿಷನ್​ನ ಪ್ರಾಥಮಿಕ ಉಪಗ್ರಹವಾಗಿದೆ.

ಮಾನವ ಕೂಡ ಬಾಹ್ಯಾಕಾಶಕ್ಕೆ ಹೋಗುತ್ತಾನೆ!

‘ಚಂದ್ರಯಾನ-3’ ಬಳಿಕ ಮತ್ತೊಂದು ಮಹತ್ವದ ಪ್ರಾಜೆಕ್ಟ್‌ಗೆ ಇಸ್ರೋ ಸಿದ್ಧತೆ ಆರಂಭಿಸಿದೆ. ಮಾನವಸಹಿತ ಬಾಹ್ಯಾಕಾಶ ಕಾರ್ಯಕ್ರಮ ‘ಗಗನಯಾನ’ದ ‘ಸರ್ವೀಸ್‌ ಮಾಡ್ಯೂಲ್‌ ಪ್ರೊಪಲ್ಷನ್ ಸಿಸ್ಟಮ್‌’ ಅಂದ್ರೆ ಎಸ್‌ಎಂಪಿಎಸ್‌ ಕಾರ್ಯಕ್ಷಮತೆ ಮತ್ತೆ ಸನ್ನದ್ಧತೆ ಕುರಿತಾಗಿ ನಡೆದ ಎರಡು ಪರೀಕ್ಷೆಗಳಲ್ಲಿ ಇತ್ತೀಚೆಗೆ ಯಶಸ್ವಿಯಾಗಿತ್ತು ಇಸ್ರೋ. ಈ ಮೂಲಕ ಹಾಟ್‌ ಟೆಸ್ಟ್ ಪಾಸ್ ಆಗಿರುವ ಈ ಯೋಜನೆ ಮುಂದಿನ ಹಂತಕ್ಕೆ ಲಗ್ಗೆ ಇಡುತ್ತಿದೆ. ‘ಚಂದ್ರಯಾನ-3’ ಯಶಸ್ಸಿನ ಬೆನ್ನಲ್ಲೇ ಮತ್ತೊಂದು ಮಹತ್ವದ ಕಾರ್ಯದಲ್ಲಿ ದೊಡ್ಡ ಯಶಸ್ಸನ್ನು ಕಂಡಿದೆ ಭಾರತೀಯರ ಹೆಮ್ಮೆಯ ಇಸ್ರೋ. ಇದೀಗ ಸಿಂಗಾಪುರದ ಉಪಗ್ರಹಗಳನ್ನು ಯಶಸ್ವಿಯಾಗಿ ಲಾಂಚ್ ಮಾಡಿದೆ.

ISRO successfully launched Singapore satellites

ಚಂದ್ರಯಾನ ನೌಕೆ ಎಲ್ಲಿದೆ ಈಗ?

‘ಚಂದ್ರಯಾನ-3’ ಬಾಹ್ಯಾಕಾಶ ನೌಕೆ 1,27,609 ಕಿಮೀ x 228 ಕಿಮೀ ಕಕ್ಷೆಗೆ ತಲುಪಿದೆ. ಜುಲೈ 14ರ ಮಧ್ಯಾಹ್ನ 2:35ಕ್ಕೆ ಶ್ರೀಹರಿಕೋಟದ ಸತೀಶ್ ಧವನ್ ಉಡ್ಡಯನ ಕೇಂದ್ರದಿಂದ ಭಾರತದ ಚಂದ್ರಯಾನ-3 ರಾಕೆಟ್ ಲಾಂಚ್ ಆಗಿತ್ತು. 3900 ಕೆಜೆ ತೂಕದ ಬಾಹ್ಯಾಕಾಶ ನೌಕೆ & ರೋವರ್‌ನ ಹೊತ್ತ ರಾಕೆಟ್ ಬಾಹ್ಯಾಕಾಶ ತಲುಪಿ ಈಗಾಗಲೇ ತನ್ನ ಗುರಿಯ ಕಡೆಗೆ ಪ್ರಯಾಣ ಬೆಳೆಸಿದೆ. ಕೆಲ ದಿನಗಳ ಹಿಂದಷ್ಟೇ ಬಾಹ್ಯಾಕಾಶ ನೌಕೆಯ ಕಕ್ಷೆ ಏರಿಸುವ ಕಾರ್ಯ ಬಹುತೇಕ ಯಶಸ್ವಿಯಾಗಿದೆ. ಮುಂದಿನ ಫೈರಿಂಗ್, ಟ್ರಾನ್ಸ್‌ಲೂನಾರ್ ಇಂಜೆಕ್ಷನ್ ಆಗಸ್ಟ್ 1 ರಂದು ಮಧ್ಯರಾತ್ರಿ 12 ಹಾಗೂ ಬೆಳಗ್ಗೆ 1 ಗಂಟೆ ನಡುವೆ ನಡೆಸಲು ಯೋಜಿಸಲಾಗಿದೆ.

English summary

ISRO successfully launched Singapore satellites

Story first published: Sunday, July 30, 2023, 11:23 [IST]

Source link