India
oi-Shankrappa Parangi

ಬೆಂಗಳೂರು, ಜೂನ್ 20: ಭಾರತ ದೇಶದಲ್ಲಿ ಕಳೆದ ಕೆಲವು ದಿನಗಳಿಂದ ಅರ್ಧ ಭಾಗದ ರಾಜ್ಯಗಳು ಬಿರುಗಾಳಿ ಮಳೆಗೆ ತತ್ತಾರಿಸಿದರೆ, ಇನ್ನರ್ಧ ಭಾಗದ ರಾಜ್ಯಗಳ ಜನರು ಶಾಖದ ಅಲೆಗೆ (Heat Wave) ತತ್ತರಿಸಿದ್ದಾರೆ. ಭಾರತೀಯ ಹವಾಮಾನ ಇಲಾಖೆ ಒಟ್ಟು 09 ರಾಜ್ಯಗಳಲ್ಲಿ ತೀವ್ರ ಶಾಖ ಅಲೆ ಮುಂದುವರಿಯುವ ಬಗ್ಗೆ ಮುನ್ಸೂಚನೆ ನೀಡಿದೆ.
ಸದ್ಯ ಭಾರತದಲ್ಲಿ ಪಶ್ವಿಮ ಭಾಗವಾದ ಕರಾವಳಿ ರಾಜ್ಯಗಳು ಬಿಪರ್‌ಜಾಯ್ ಚಂಡಮಾರುತ್ತಕ್ಕೆ ಸಿಲುಕಿ ಸಂಕಷ್ಟ ಎದುರಿಸಿವೆ. ಇತ್ತ ಅದಕ್ಕೆ ವಿರುದ್ಧ ಎಂಬಂತೆ ಪೂರ್ವ ಭಾಗದ ರಾಜ್ಯಗಳಲ್ಲಿ ಬಿಸಿಲಿನ ಶಾಖ ಮೈ ಸುಡುತ್ತಿದೆ. ಈ ಪರಿಸ್ಥಿತಿಗಳಿಗೆ ಪರಿಹಾರವೇ ಇಲ್ಲ ಎಂಬಂತಹ ಸ್ಥಿತಿ ನಿರ್ಮಾಣವಾಗಿದೆ. ಈ ಪರಿಸ್ಥಿತಿಯನ್ನು ಇನ್ನೂ ಹಲವು ದಿನ ಅನುಭವಿಸಬೇಕಿದ್ದು, ಸದ್ಯಕ್ಕೆ ಯಾವುದೇ ಪರಿಹಾರವಿಲ್ಲ ಎಂದು ಭಾರತೀಯ ಹವಾಮಾನ ಇಲಾಖೆ ತಿಳಿಸಿದೆ.

ಪೂರ್ವ ರಾಜ್ಯಗಳಾದ ಒಡಿಶಾ, ಜಾರ್ಖಂಡ್, ಆಂಧ್ರಪ್ರದೇಶ, ಉತ್ತರ ಪ್ರದೇಶ, ಬಿಹಾರ, ವಿದರ್ಭ, ಪಶ್ಚಿಮ ಬಂಗಾಳ, ಮಧ್ಯಪ್ರದೇಶ, ತೆಲಂಗಾಣ ಹಾಗೂ ತಮಿಳುನಾಡುಗಳಲ್ಲಿ ತೀವ್ರತರವಾದ ತೀವ್ರತರವಾದ ತಾಪಮಾನ ದಾಖಲಾಗುತ್ತಿದೆ. ಗರಿಷ್ಠ ಉಷ್ಣಾಂಶವು ವಾಡಿಕೆ ಮೀರಿ ದಾಖಲಾಗಿದೆ. ಹೀಗಾಗಿ ಈ ರಾಜ್ಯಗಳಲ್ಲಿ ಇನ್ನೂ ಕೆಲವು ದಿನ ಶಾಖದ ಅಲೆಗಳು ಮುಂದುವರಿಯಲಿವೆ ಎಂದು ಹವಾಮಾನ ತಜ್ಞರು ತಿಳಿಸಿದ್ದಾರೆ.
Karnataka rain: ಇಂದು ರಾಜ್ಯದ ಈ ಭಾಗಗಳಲ್ಲಿ ಮಾತ್ರ ಗಡುಗು ಸಹಿತ ಮಳೆ ಆರ್ಭಟ: IMD ಮುನ್ಸೂಚನೆ
ಶಾಲಾ-ಕಾಲೇಜುಗಳ ಬೇಸಿಗೆ ರಜೆ ವಿಸ್ತರಣೆ
ಬಿಸಿಗಾಳಿ ಪರಿಸ್ಥಿತಿ ಸಕ್ರಿಯವಾಗಿರುವ ಕಾರಣದಿಂದಾಗಿ ಬಿಹಾರ ರಾಜ್ಯಕ್ಕೆ ರೆಡ್ ಅಲರ್ಟ್ ಎಚ್ಚರಿಕೆ ನೀಡಿರುವ ಬಗ್ಗೆ ಹವಾಮಾನ ಇಲಾಖೆ (IMD) ತನ್ನ ವರದಿಯಲ್ಲಿ ಉಲ್ಲೇಖಿಸಿದೆ. ಬಿಸಿಲಿನ ತಾಪಮಾನದ ಹಿನ್ನೆಲೆಯಲ್ಲಿ, ಪಾಟ್ನಾ ಜಿಲ್ಲಾಡಳಿತವು ದ್ವಿತೀಯ ಪಿಯುಸಿ ವರೆಗಿನ ಶೈಕ್ಷಣಿಕ ತರಗತಿಗಳಿಗೆ/ ಶಾಲೆ-ಕಾಲೇಜುಗಳಿಗೆ ಬೇಸಿಗೆ ರಜೆಯನ್ನು ಜೂನ್ 24 ರವರೆಗೆ ವಿಸ್ತರಿಸಿದೆ ಆದೇಶ ಹೊರಡಿಸಿದೆ.
ಬಿಹಾರ ಜೊತೆಗೆ ಕೆಲವು ರಾಜ್ಯಗಳು ಸಹ ಜನರ ಆರೋಗ್ಯ ಹಿತದೃಷ್ಟಿಯಿಂದ ರಾಜ್ಯಗಳಲ್ಲಿ ಶಾಲೆ ಕಾಲೇಜುಗಳಿಗೆ ಬೇಸಿಗೆ ರಜೆಯನ್ನು ವಿಸ್ತರಿಸಿವೆ. ಜಾರ್ಖಂಡ್ ರಾಜ್ಯದ ಶಾಲಾ ಶಿಕ್ಷಣ ಮತ್ತು ಸಾಕ್ಷರತಾ ಇಲಾಖೆ 8ನೇ ತರಗತಿಯವರೆಗಿನ ಶಾಲೆಗಳಿಗೆ ನೀಡಿದ್ದ ಬೇಸಿಗೆ ರಜೆ ಆದೇಶವನ್ನು ಈಗಾಗಲೇ ವಿಸ್ತರಣೆ ಮಾಡಿದೆ. ಇದರೊಂದಿಗೆ ಛತ್ತೀಸ್‌ಗಢ, ಗೋವಾ, ಆಂಧ್ರಪ್ರದೇಶ ರಾಜ್ಯಗಳು ಸಹ ತಮ್ಮ ರಾಜ್ಯದ ವಿದ್ಯಾರ್ಥಿಗಳಿಗೆ ಶಾಲೆಯ ತರಗತಿಗಳನ್ನು ಸ್ಥಗಿತಗೊಳಿಸುವುದಾಗಿ ಘೋಷಿಸಿವೆ.

ಇನ್ನೂ ವಿದರ್ಭ ಹಾಗೂ ಕರಾವಳಿ ಆಂಧ್ರಪ್ರದೇಶ ಮತ್ತು ಯಾನಂ, ಬಿಹಾರ, ಒಡಿಶಾದ ವಿವಿಧೆಡೆ ಹಾಗೂ ಗಂಗಾನದಿ ಪಶ್ಚಿಮ ಬಂಗಾಳ, ಜಾರ್ಖಂಡ್, ಛತ್ತೀಸ್‌ಗಢದ ಪ್ರತ್ಯೇಕ ಕಡೆಗಳಲ್ಲಿ ಶಾಖದ ಅಲೆ ತೀವ್ರ ಸ್ವರೂಪ ಪಡೆದುಕೊಳ್ಳುವ ಸಾಧ್ಯತೆ ಇದೆ.
ಅದೇ ರೀತಿ ಪಶ್ಚಿಮ ಬಂಗಾಳ ಮತ್ತು ಸಿಕ್ಕಿಂ, ಪೂರ್ವ ಉತ್ತರ ಪ್ರದೇಶ, ಮಧ್ಯಪ್ರದೇಶ, ತೆಲಂಗಾಣ, ತಮಿಳುನಾಡು, ರಾಯಲಸೀಮಾ, ಪುದುಚೇರಿ ಹಾಗೂ ಕಾರೈಕಲ್ ಪ್ರದೇಶಗಳಲ್ಲೂ ಸಹ ಶಾಖದ ಅಲೆ ಮೇಲುಗೈ ಸಾಧಿಸಲಿದೆ. ಐಎಂಡಿ ಮುನ್ಸೂಚನೆ ಆಧರಿಸಿ ಆಯಾ ರಾಜ್ಯಗಳು ಅಗತ್ಯ ಎಚ್ಚರಿಕೆ ವಹಿಸಿವೆ ಎನ್ನಲಾಗಿದೆ.
ಶಾಖದ ಅಲೆ ಬಗ್ಗೆ IMD ಮುನ್ಸೂಚನಾ ಅಂಶಗಳು
* ಮುಂದಿನ ನಾಲ್ಕು ದಿನಗಳಲ್ಲಿ ಒಡಿಶಾ, ವಿದರ್ಭದ ಪ್ರತ್ಯೇಕ ಕಡೆಗಳಲ್ಲಿ ಶಾಖದ ಅಲೆ ತೀವ್ರ ಸ್ವರೂಪ ಪಡೆಯಲಿದೆ.
* ಗಂಗಾನದಿ ಪಶ್ಚಿಮ ಬಂಗಾಳ, ಜಾರ್ಖಂಡ್ ರಾಜ್ಯದ ಜನರು ಮುಂದಿನ 3 ಜೂನ್ 23ವರೆಗೆ ಅತ್ಯಧಿಕ ಸುಡುವ ತಾಪಮಾನಕ್ಕೆ ಸಾಕ್ಷಿ ಆಗಲಿದ್ದಾರೆ.
* ಆಂಧ್ರಪ್ರದೇಶ ಕರಾವಳಿ ಭಾಗ ಯಾನಂ, ಪೂರ್ವ ಮಧ್ಯಪ್ರದೇಶ, ಬಿಹಾರ ರಾಜ್ಯ ಮತ್ತು ಪೂರ್ವ ಉತ್ತರ ಪ್ರದೇಶದ ಜನರಿಗೆ ಮುಂದಿನ ಎರಡು ದಿನ ಗರಿಷ್ಠ ಉಷ್ಣಾಂಶದ ಬಿಸಿ ತಟ್ಟಲಿದೆ.
* ಮುಂದಿನ 24 ಗಂಟೆಗಳಲ್ಲಿ ಪಶ್ಚಿಮ ಮಧ್ಯಪ್ರದೇಶ, ತಮಿಳುನಾಡು, ರಾಯಲಸೀಮಾ ಹಾಗೂ ತೆಲಂಗಾಣದಲ್ಲಿ ಬಿಸಿಗಾಳಿಯ ಯಥಾ ಸ್ಥಿತಿ ಮುಂದುವರಿಯಲಿದೆ.
* ಇದೇ ರೀತಿಯ ಸ್ಥಿತಿಯನ್ನು ಪೂರ್ವ ಮಧ್ಯಪ್ರದೇಶ, ಛತ್ತೀಸ್‌ಗಢದಲ್ಲಿ ಜೂನ್ 17 ಮತ್ತು 18 ರಂದು ಶಾಖದ ಅಲೆ ಮುಂದುವರಿಯಲಿದೆ.
* ಸುಡುವ ಹಗಲಿನ ಸಮಯದ ಹೊರತಾಗಿ, ಜೂನ್ 17 ರಂದು ವಿದರ್ಭ, ಪೂರ್ವ ಉತ್ತರ ಪ್ರದೇಶದ ಮೇಲೆ ಪ್ರತ್ಯೇಕವಾದ ಪಾಕೆಟ್‌ಗಳಲ್ಲಿ ಬೆಚ್ಚಗಿನ ರಾತ್ರಿಯ ಪರಿಸ್ಥಿತಿಗಳು ಮೇಲುಗೈ ಸಾಧಿಸುವ ನಿರೀಕ್ಷೆಯಿದೆ.
English summary
Heatwave Alert: IMD Heatwave warning issued for 9 states of India
Story first published: Tuesday, June 20, 2023, 20:46 [IST]