Karnataka
oi-Reshma P

ಹಾವೇರಿ, ಜೂನ್ 19: ಸಿಎಂ ಸಿದ್ದರಾಮಯ್ಯ ಪೂರ್ಣಾವಧಿ ಸಿಎಂ ಅಲ್ಲಾ ಎಂಬ ವದಂತಿ ಬಗ್ಗೆ ಮಾತನಾಡುವ ಪಾಲುದಾರರು ತಾವಲ್ಲ. ಸಿಎಂ ಸಿದ್ದರಾಮಯ್ಯ ಇರುತ್ತಾರೆ ಎಂಬುವದು ಪಕ್ಷದ ನಿರ್ಧಾರ. ಯಾರು ಇರುತ್ತಾರೋ ಇಲ್ಲವೋ ಎಂದು ನಿರ್ಧರಿಸುವುದು ಅಲ್ಲಿ. ಈ ಅವಧಿಗೆ ಹೊರತು ಪಡಿಸಿ ಮುಂದಿನ ಅವಧಿಗೆ ಸಿಎಂ ಹುದ್ದೆಗೆ ತಾವು ಅರ್ಜಿ ಹಾಕುತ್ತೇವೆ ಎಂದು ಸತೀಶ್ ಜಾರಕಿಹೊಳಿ ಹೇಳಿದರು.
ಈ ಕುರಿತು ಮಾಧ್ಯಮಗಳ ಜೊತೆಗೆ ಮಾತನಾಡಿದ ಅವರು, ಗ್ಯಾರಂಟಿ ಯೋಜನೆಗಳನ್ನ ಲೋಕಸಭೆ ಚುನಾವಣೆಗೆ ಮಾತ್ರ ಇರುತ್ತವೆ ಎಂಬ ವದಂತಿ ಸುಳ್ಳು. ಆ ರೀತಿ ಮಾಡಿದರೆ ಬಿಜೆಪಿಯವರಿಗೆ ಬುದ್ದಿ ಕಲಿಸಿದಂತೆ ಜನತೆ ಲೋಕಸಭೆ ಚುನಾವಣೆ, ಜಿಲ್ಲಾ ಪಂಚಾಯತ್ ಚುನಾವಣೆಯಲ್ಲಿ ತಕ್ಕಪಾಠ ಕಲಿಸುತ್ತಾರೆ ಎಂದು ಲೋಕೋಪಯೋಗಿ ಸಚಿವ ಸತೀಶ್ ಜಾರಕಿಹೊಳಿ ಹೇಳಿದರು.

ಗ್ಯಾರಂಟಿ ಯೋಜನೆಗಳಿಗೆ ಸರ್ವಸ್ ಸಮಸ್ಯೆಯಾಗಿರುವುದು ರಾಕೀಟ್ ಬಿದ್ದಂತಹ ಸಮಸ್ಯೆಯಲ್ಲ. ಅದಕ್ಕೆ ಸಮಯಬೇಕು ಮತ್ತು ಪ್ರಯತ್ನಿಸಿ ಪ್ರಯತ್ನಿಸಿದ ನಂತರ ಯಶಸ್ವಿಯಾಗುತ್ತದೆ. ನಮ್ಮ ಸರ್ಕಾರ ಬಂದು ಈಗ 15 ದಿನ ಆಗಿದೆ ಕಾಯಬೇಕು ತಾಂತ್ರಿಕ ತೊಂದರೆ ಇದ್ದೇ ಇರುತ್ತೆ. ಈ ಸಮಸ್ಯೆ ಪರಿಹಾರವಾಗಲು ಎರಡ್ಮೂರು ತಿಂಗಳು ಆಗಬಹುದು ಕಾಯಬೇಕು ಎಂದು ಜಾರಕಿಹೊಳಿ ತಿಳಿಸಿದರು.
ಕೆಲವೊಂದು ಯೋಜನೆಗಳಿಗೆ ಈ ರೀತಿಯಾಗಿದೆ ಇನ್ನು ಕೆಲವೊಂದು ಯೋಜನೆಗಳನ್ನ ಈಗಾಗಲೇ ನಾನು ಜಾರಿಗೆ ತಂದಿದ್ದೇವೆ. ಕೆಲ ಗ್ಯಾರಂಟಿ ಯೋಜನೆಗಳಿಗೆ ಅರ್ಜಿ ಸಲ್ಲಿಸಲು ಕೊನೆಯ ದಿನಾಂಕವೇ ಇಲ್ಲ. ಇವತ್ತು ಸರ್ವರ್ ಸಿಗದವರು ನಾಳೆ ಹಾಕಬಹುದು ಎಂದು ಸಚಿವ ಸತೀಶ್ ಜಾರಕಿಹೊಳಿ ಹೇಳಿದ್ದು, ಉಚಿತ ಅಕ್ಕಿ ಪೂರೈಕೆ ಯೋಜನೆಗೆ ಅನ್ನಭಾಗ್ಯ ಅಕ್ಕಿ ನೀಡದ ಕೇಂದ್ರ ಸರ್ಕಾರದ ವಿರುದ್ದ ಪ್ರತಿಭಟನೆ ಮಾಡಿದರೇ ಲೋಕಸಭೆಯಲ್ಲಿ ಹೋರಾಟ ಮಾಡಿದರೇ ಸರಿಯಾಗುವಂತದಲ್ಲ. ಇದಕ್ಕಾಗಿ ರಾಜ್ಯ ಸರ್ಕಾರ ಈಗಾಗಲೇ ಹಲವು ರಾಜ್ಯಗಳ ಜೊತೆ ಮಾತುಕತೆ ನಡೆಸಿದೆ ಎಂದು ಹೇಳಿದರು.
ಐದು ವರ್ಷವೂ ಸಿದ್ದರಾಮಯ್ಯರೇ ಸಿಎಂ: ಸಚಿವ ಸತೀಶ್ ಜಾರಕಿಹೊಳಿ
ರಾಜ್ಯದಲ್ಲಿ ಅಕ್ಕಿ ತೊಂದರೆ ಇದ್ದರು ಕೇಂದ್ರ ಸರ್ಕಾರ ಎಥೆನಾಲ್ ತಯಾರಿಕೆಗೆ ಯತೇಚ್ಛವಾಗಿ ನೀಡುತ್ತಿದೆ. ಇದು ಕೇಂದ್ರ ಸರ್ಕಾರಕ್ಕೆ ತಿಳಿಯಬೇಕು ಜನರಿಗೆ ಊಟಕ್ಕೆ ನೀಡುವದು ಬಿಟ್ಟು ಎಥೆನಾಲ್ ಉತ್ಪಾಧನೆಗೆ ನೀಡುವದು ಎಷ್ಟು ಸರಿ ಎಂದು ಸತೀಶ್ ಜಾರಕಿಹೊಳಿ ಪ್ರಶ್ನಿಸಿದ ಅವರು, ಹಿರಿಯ ಕಾಂಗ್ರೆಸ್ ನಾಯಕ ಶಾಮನೂರು ಶಿವಶಂಕರಪ್ಪ ಗ್ಯಾರಂಟಿ ಯೋಜನೆಗಳ ಬಗ್ಗೆ ಹೇಳಿಲ್ಲ. ಅವರು ಹೇಳಿದ್ದು ಕರೆಂಟ್ ಬಿಲ್ ಏರಿಕೆ ವಿಚಾರ ಇದು ಪ್ರತಿ ವರ್ಷವಾಗುವುದು ಸಾಮಾನ್ಯ. ಬಿಜೆಪಿ ಸರ್ಕಾರ ಇದ್ದಾಗಲೇ ಕರೆಂಟ್ ಬಿಲ್ ಹೆಚ್ಚಾಗಿದೆ ಆದರೆ ನಮ್ಮ ಸರ್ಕಾರ ಬಂದ ಮೇಲೆ ಜಾರಿ ಆಗಿದೆ. ಇದನ್ನ ಶಾಮನೂರು ಶಿವಶಂಕರಪ್ಪ ತಿಳಿಸಿದ್ದಾರೆ ಎಂದರು.
English summary
Minister Satish Jarkiholi Said That I Am Applying For The Post Of CM For The Next Term
Story first published: Monday, June 19, 2023, 14:34 [IST]