Bengaluru
oi-Shankrappa Parangi

ಬೆಂಗಳೂರು, ಜೂನ್ 19: ರಾಜ್ಯ ರಾಜಧಾನಿ ಸಿಲಿಕಾನ್ ಸಿಟಿ ಬೆಂಗಳೂರು ವ್ಯಾಪಕವಾಗಿ ಬೆಳೆಯುತ್ತಿದ್ದು, ವಿವಿಧ ರಂಗಗಳಲ್ಲಿಯು ಸಹ ಅಭಿವೃದ್ಧಿ ಆಗುತ್ತಿದೆ. ಇತ್ತ ಅಪರಾಧ ಚಟುವಟಿಕೆಗಳು ಸಹ ಹೆಚ್ಚಾಗುತ್ತಿದ್ದು, ಅವುಗಳ ತಡೆಗೆ ಮತ್ತು ಮಹಿಳೆಯರು ಸೇರಿದಂತೆ ನಗರದ ನಾಗರಿಕರಿಗೆ ರಕ್ಷಣೆ ನೀಡಲು ಬೆಂಗಳೂರು ಪೊಲೀಸರು ನೂತನ ‘ತುರ್ತು ಸೇವೆ’ (Emergency Helpline) ಯೋಜನೆ ಆರಂಭಿಸಿದೆ.
ಬೆಂಗಳೂರು ನಗರ ಸುರಕ್ಷಿತ ನಗರವಾಗಿ ಬದಲಾಗುವತ್ತ ಕಾಲಿಟ್ಟಿದೆ. ಮಹಿಳೆಯರು, ಮಕ್ಕಳು ಸೇರಿದಂತೆ ನಗರದ ನಾಗರಿಕರ ಸಹಾಯಕ್ಕೆ ಪೊಲೀಸರು ‘ಎಮರ್ಜೆನ್ಸಿ ಸೇವೆ’ ಸೇವೆ ಆರಂಭಿಸಿದ್ದಾರೆ. ಸಹಾಯವಾಣಿ ಬಾಕ್ಸ್ (ಬೂತ್) ರೀತಿಯಲ್ಲಿರುತ್ತದೆ. ತೊಂದರೆ ಆದವರು ಕೂಡಲೇ ಬಾಕ್ಸ್ ಇರುವ ನಿಗದಿತ ಸ್ಥಳಕ್ಕೆ ಬಂದು ಸಹಾಯವಾಣಿ ಮೂಲಕ ಪೊಲೀಸರನ್ನು ಸಂಪರ್ಕಿಸಬಹುದಾಗಿದೆ.

ಈ ಮೂಲಕ ನಗರದ ಯಾವುದೇ ಪ್ರದೇಶದ ಜನರ ರಕ್ಷಣೆಗೆ ಪೊಲೀಸ್ ಇಲಾಖೆ ಈ ಹೊಸ ಪ್ಲಾನ್ ಮಾಡಿದೆ.ಈ ತುರ್ತು ಸಹಾಯವಾಣಿ ಬಳಕೆಯಿಂದ ಮಹಿಳೆಯರು ನಿಂತ ಸ್ಥಳದಿಂದಲೇ ಪೊಲೀಸರಿಗೆ ಮಾಹಿತಿ ನೀಡಲು ಅನುಕೂಲವಾಗುತ್ತದೆ. ಇದರಿಂದ ಅಪರಾಧ ಚಟುವಟಿಕೆ ಮತ್ತು ವ್ಯಕ್ತಿಗೆ ಎದುರಾಗುವ ಅಪಾಯ ತಡೆಯಬಹುದಾಗಿದೆ.
ಬೂತ್ ರೀತಿಯಲ್ಲಿರುವ ಸಹಾಯವಾಣಿ ಬಳಿ ಬಂದು ತಿಳಿಸಲಾಗಿರುವ ನಿರ್ದಿಷ್ಟ ಬಟನ್ ಒತ್ತಿದರೆ ಸಾಕು ನೀವಿರುವ ಸ್ಥಳದಲ್ಲಿರುವ ಸಿಸಿಟಿವಿ ವಿಡಿಯೋ ಸಮೇತರಾಗಿ ನೀವು ಪೊಲೀಸ್ ಸಿಬ್ಬಂದಿಗೆ ಕಾಣುತ್ತೀರಿ. ಅಲ್ಲದೇ ನಿಮ್ಮ ಧ್ವನಿ ಸಹ ಸಹಾಯವಾಣಿ ಮೂಲಕ ಸಿಬ್ಬಂದಿಗೆ ಕೇಳಲಿದೆ. ಅದರ ಆಧಾರದಲ್ಲಿ ತತಕ್ಷಣಕ್ಕೆ ಮಾಹಿತಿ ಕಲೆ ಹಾಕಿ ಸ್ಥಳಕ್ಕೆ ಪೊಲೀಸರು ಬಂದು ನೆರವಾಗಲಿದ್ದಾರೆ. ಅಪಾಯದಿಂದ ನಿಮ್ಮನ್ನು ರಕ್ಷಿಸಲಿದ್ದಾರೆ ಎಂದು ಪೊಲೀಸರು ಮಾಹಿತಿ ನೀಡಿದ್ದಾರೆ. ಅಲ್ಲದೇ ಈ ಸಂಬಂಧ ಸ್ಥಳಿಯಿಂದ ಪ್ರಾಯೋಗಿಕ ಕಾರ್ಯಚರಣೆ ಸಹ ಮಾಡಲಾಗಿದೆ.
ಸಹಾಯವಾಣಿ ಸ್ಥಳದಿಂದ ನೀವು ಮಾಹಿತಿ ನೀಡಿದ ಏಳು ನಿಮಿಷಗಳಲ್ಲಿ ಹೊಯ್ಸಳ ಪೊಲೀಸರು ದೌಡಾಯಿಸುತ್ತಾರೆ. ಸದ್ಯ ನಗರಾದ್ಯಂತ ಒಟ್ಟು 30 ಕಡೆಗಳಲ್ಲಿ ಈ ತುರ್ತು ಸಹಾಯವಾಣಿ ಯನ್ನು ಸ್ಥಾಪಿಸಲಾಗಿದೆ. ಓದಿರುವವರು ಮೊಬೈಲ್ ಬಳಕೆ ಮಾಡಿ ಪೊಲೀಸರನ್ನು ಸಂಪರ್ಕಿಸುತ್ತಾರೆ. ಈ ಸಹಾಯವಾಣಿ ಅನಕ್ಷರಸ್ಥರಿಗೂ ಸಹ ಸಹಾಯಕ್ಕೆ ಧಾವಿಸಲಿದೆ.

ದುರ್ಬಲ ಪ್ರದೇಶಲ್ಲಿ ಬಾಕ್ಸ್ ಅಳವಡಿಕೆ
ನಗರದಲ್ಲಿ ಗುರುತಿಸಲಾಗಿರುವ ದುರ್ಬಲ ಪ್ರದೇಶಗಳಲ್ಲಿ ತುರ್ತು ಸಹಾಯವಾಣಿ ಬಾಕ್ಸ್‌ಗಳನ್ನು ಅಳವಡಿಸಲಾಗುತ್ತಿದೆ. ಸದ್ಯ ಆರಂಭಿಕ ಹಂತದಲ್ಲಿ ಐಒಸಿ ವೃತ್ತ, ರಾಸೆಲ್ ಮಾರುಕಟ್ಟೆ, ಮಾರೇನಹಳ್ಳಿ, ಅಶೋಕ್ ನಗರ, ಜ್ಞಾನಭಾರತಿ ಕ್ಯಾಂಪಸ್ ಸೇರಿದಂತೆ ಇತರೆಡೆ ತುರ್ತು ಸಹಾಯವಾಣಿ ಬಾಕ್ಸ್‌ಗಳನ್ನು ಅಳವಡಿಸಲಾಗಿದೆ.
7,500 ಸಿಸಿಟಿವಿ ಪೈಕಿ 4,000 ಅಳವಡಿಕೆ
ಜನರ ಸುರಕ್ಷಿತತೆಯ ಭಾಗವಾಗಿ ಮುಂದಿನ ದಿನಗಳಲ್ಲಿ ನಗರಾದ್ಯಂತ ಒಟ್ಟು 7,500 ಸಿಸಿಟಿವಿಗಳನ್ನು ಸ್ಥಾಪಿಸುವ ಗುರಿ ಪೊಲೀಸ್ ಇಲಾಖೆ ಹೊಂದಿದೆ. ಅದರಲ್ಲಿ ಸುಮಾರು 4,000 ಸಿಸಿಟಿವಿ ಗಳನ್ನು ಅಳವಡಿಕೆ ಈಗಾಗಲೇ ಮಾಡಲಾಗಿದೆ. ಈ ಕ್ಯಾಮೆರಾಗಳು ಸ್ವಯಂಚಾಲಿತ ನಂಬರ್ ಪ್ಲೇಟ್ ಗುರುತಿಸುವ ವ್ಯವಸ್ಥೆ, ಮುಖ ಗುರುತಿಸುವ ವ್ಯವಸ್ಥೆ ಹೊಂದಿವೆ. ಮೊಬೈಲ್ ಕಮಾಂಡ್ ಸೆಂಟರ್, ನಿಯಂತ್ರಣಾ ಕೊಠಡಿಗಳಿಗೆ ಮಾಹಿತಿ ರವಾನಿಸುತ್ತವೆ. ಈ ಯೋಜನೆಗಾಗಿ ಒಟ್ಟು 490 ಕೋಟಿಗೂ ಅಧಿಕ ವೆಚ್ಚದಲ್ಲಿ ಜಾರಿಯಾಗುತ್ತಿದೆ ಎಂದು ಪೊಲೀಸ್ ಮೂಲಗಳು ತಿಳಿಸಿವೆ.
English summary
Bengaluru Police provides emergency helpline service to people for safety, now set up at 30 locations.
Story first published: Monday, June 19, 2023, 22:26 [IST]