Tv
oi-Narayana M
ಗಾರ್ಮೆಂಟ್ಸ್‌ನಿಂದ
ಬಂದ
ಆರಾಧನಾ
ಯಾಕೆ
ಕರೆಂಟ್
ಬಿಲ್
ಇಲ್ಲ
ಎಂದು
ಕೇಳಿದ್ದಾಳೆ.
ಇದಕ್ಕೆ
ವಠಾರದ
ಜನರೆಲ್ಲಾ
ನಂಬಿ
ಹಣ
ಕೊಟ್ಟರೆ
ಬಿಲ್
ಕಟ್ಟದೇ
ಬಂದಿದ್ದಾನೆ.
ಸುಶಾಂತ್
ಹಣ
ಕಳೆದುಕೊಂಡ
ಬಂದಿದ್ದಾನೆ
ಎಂದು
ಹೇಳಿದ್ದಾರೆ.
ಆರಾಧನಾ
ವಠಾರದಲ್ಲಿರುವ
ಜನರಿಗೆಲ್ಲ
ಸಮಾಧಾನ
ಮಾಡಿ
ಏನಾಯಿತು
ಎಂದು
ನಾನು
ಕೇಳುತ್ತೇನೆ
ಎಂದಿದ್ದಾಳೆ.
ಸುಶಾಂತ್,
ಆರಾಧನಾ
ಜೊತೆಗೆ
ಹೋಗಿದ್ದಾನೆ.
ಅಮಲಾ
ಮನೆಯಲ್ಲಿ
ಹೊಸದೊಂದು
ನಾಟಕ
ಮಾಡುತ್ತಿದ್ದಾಳೆ.
ಸುಶಾಂತ್
ರೂಮಿಗೆ
ಏನನ್ನೋ
ಹುಡುಕಿಕೊಂಡು
ಮೇಲೆ
ಬಂದಿದ್ದಾಳೆ.
ಇದೇ
ವೇಳೆ
ಸಾವಿತ್ರಿ
ಅಲ್ಲಿಗೆ
ಆಗಮಿಸಿದಾಗ
ಅಮಲಾ
ಏನೋ
ಹೇಳಿದ್ದಾಳೆ.
ಇದೇ
ವೇಳೆ
ಅಮಲಾ
ಕಣ್ಣೀರು
ಹಾಕುತ್ತಾ
ನಾವು
ಇಲ್ಲಿ
ಚೆನ್ನಾಗಿ
ಇದ್ದೇವೆ
ಅಲ್ಲಿ
ರಾಜ್
ಯಾವ
ರೀತಿ
ಇದ್ದಾನೋ
ಎಂದು
ಅಳಲು
ಶುರು
ಮಾಡಿದ್ದಾಳೆ.
ಸಾವಿತ್ರಿಯನ್ನು
ಭಾವನಾತ್ಮಕವಾಗಿ
ಕಟ್ಟಿ
ಹಾಕಲು
ಪ್ರಯತ್ನಿಸಿದ್ದಾಳೆ.

ವಠಾರದಲ್ಲಿ
ಇರುವವರು
ಸುಶಾಂತ್
ಮೇಲೆ
ಕೋಪ
ಮಾಡಿಕೊಂಡಿದ್ದಾರೆ.
ಮಕ್ಕಳಿಗೆ
ಪರೀಕ್ಷೆ
ಇದೆ,
ಮಕ್ಕಳು
ಈಗ
ಕತ್ತಲಲ್ಲಿ
ಓದುವಂತಾಗಿದೆ
ಎಂದು
ಆರಾಧನಾ
ಬಳಿ
ಹೇಳಿದ್ದಾರೆ.
ಆರಾಧನಾ
ಇದೆಲ್ಲಾ
ಹೇಗೆ
ಆಯಿತು
ಎಂಬುದನ್ನ
ನಾನು
ಶುಶಾಂತ್
ಬಳಿ
ಕೇಳಿ
ವಿಚಾರ
ಮಾಡುತ್ತೇನೆ.
ಇದಕ್ಕೊಂದು
ವ್ಯವಸ್ಥೆ
ಮಾಡುತ್ತೇನೆ
ಎಂದು
ವಠಾರದವರ
ಬಳಿ
ಹೇಳಿದ್ದಾಳೆ.
ನಾಳೆ
ಬಿಲ್
ಕಟ್ಟಲು
ವ್ಯವಸ್ಥೆ
ಮಾಡುವುದಾಗಿ
ತಿಳಿಸಿದ್ದಾಳೆ.

ಅಮಲಾ
ಹೊಸ
ಪ್ಲ್ಯಾನ್
ಏನು?
ಈಗ
ಅಮಲಾ
ಹೊಸದೊಂದು
ಪ್ಲಾನ್
ಮಾಡಿದ್ದಾಳೆ,
ಸಾವಿತ್ರಿಯನ್ನು
ಭಾವನಾತ್ಮಕವಾಗಿ
ಕಟ್ಟಿಹಾಕಬೇಕು
ಎಂದುಕೊಂಡಿದ್ದಾಳೆ.
ಇದಕ್ಕಾಗಿ
ಹೊಸ
ವರಸೆ
ಶುರುಮಾಡಿದ್ದಾಳೆ.
ತಮ್ಮ
ಹೇಗಿದ್ದಾನೋ
ಎಂದು
ನಾಟಕವನ್ನು
ಆಡುತ್ತಿದ್ದಾಳೆ.
ಅಮ್ಮ
ದಯವಿಟ್ಟು
ನೀನು
ಸುಶಾಂತ್‌ನನ್ನು
ಮನೆಗೆ
ಕರೆಯಿಸು
ಎಂದು
ಹೇಳಿದ್ದಾಳೆ.
ರಾಜ್‌ನನ್ನು
ಮೂರ್ತಿ
ಚೆನ್ನಾಗಿ
ನೋಡಿಕೊಳ್ಳುತ್ತಿದ್ದಾರೆ
ಎಂದು
ಸಾವಿತ್ರಿ
ಹೇಳಿದ್ದಾಳೆ.
ಅವನಿಗೆ
ಯಾವುದೇ
ಕೊರತೆ
ಆಗಿಲ್ಲ
ಎನ್ನುವ
ನಂಬಿಕೆ
ಇದೆ
ಎಂದಿದ್ದಾಳೆ.
ಆದರೂ
ಸಹ
ಅಮಲಾ
ಮತ್ತೊಂದು
ಹುಳವನ್ನು
ಬಿಟ್ಟಿದ್ದಾಳೆ.
ಖುಷಿಯಲ್ಲಿ
ತೇಲಾಡುತ್ತಿರುವ
ಅಮಲಾ
ಇನ್ನೊಂದು
ವರ್ಷವಾದರೂ
ಸಹ
ಅವನನ್ನ
ಇಲ್ಲಿಗೆ
ಕರೆದುಕೊಂಡು
ಬರುವುದಿಲ್ಲ.
ಮಾಡದ
ತಪ್ಪಿಗೆ
ಅವನು
ಯಾಕೆ
ಶಿಕ್ಷೆಯನ್ನ
ಅನುಭವಿಸಬೇಕು
ಎಂದು
ಅಮಲಾ
ಹೇಳಿದ್ದಾಳೆ.
ಸಾವಿತ್ರಿ
ಮಗನ
ಬಗ್ಗೆ
ಚಿಂತೆ
ಮಾಡುತ್ತ
ರೂಮಿನಿಂದ
ಹೊರಗೆ
ಹೋಗಿದ್ದಾರೆ.
ಇದನ್ನೇ
ಕಾಯುತ್ತಿದ್ದ
ಅಮಲಾ
ಬಹಳ
ಖುಷಿಯಿಂದ
ನಗುತ್ತಿದ್ದಾಳೆ.
ರಾಜ್
ನೀನೊಂದು
ಸಣ್ಣ
ಮೀನು
ನಾನು
ತಿಮಿಂಗಲ,
ನಿನ್ನನ್ನೇ
ಗಾಳಕ್ಕೆ
ಕಟ್ಟಿ
ಹಾಕಿ
ಯಾವ
ರೀತಿ
ಆಟವಾಡಿಸುತ್ತೇನೆ
ನೋಡುತ್ತಾ
ಇರು.
ನಾನು
ಕೊಡುವ
ಏಟಿಗೆ
ನೀನು
ಎಚ್ಚೆತ್ತು
ಕೊಳ್ಳಬಾರದು
ಆ
ರೀತಿ
ಮಾಡುತ್ತೇನೆ
ಎಂದು
ಅಮಲಾ
ಮಾತನಾಡಿಕೊಳ್ಳುತ್ತಿದ್ದಾಳೆ.
ಹಣ
ಕದ್ದಿಲ್ಲ
ಎಂದ
ಸುಶಾಂತ್
ಆರಾಧನಾ,
ಸುಶಾಂತ್‌ನನ್ನು
ಸೈಡಿಗೆ
ಕರೆದುಕೊಂಡು
ಬಂದು
ಏನಾಯಿತು
ಎಂದು
ಕೇಳಿದ್ದಾಳೆ.
ಬೆಳಗ್ಗೆನಿಂದ
ಏನೇನು
ಆಯಿತು
ಎಂಬುದನ್ನು
ಸುಶಾಂತ್
ಹೇಳಿದ್ದಾನೆ.
ನಾನು
ಅಂಗಡಿಗೆ
ಹೋಗಿದ್ದೆ
ಅಂಗಡಿ
ಅಂಕಲ್‌ಗೆ
ಹಣ
ನೀಡುವ
ವೇಳೆ
ಅಲ್ಲೇ
ಎಲ್ಲೋ
ಹಣ
ಬಿದ್ದುಹೋಗಿದೆ.
ನಾನು
ಕರೆಂಟ್
ಬಿಲ್
ಕಟ್ಟಲು
ಹೋದಾಗ
ಹಣ
ಕಳೆದು
ಹೋಗಿರುವ
ಬಗ್ಗೆ
ಗೊತ್ತಾಯಿತು
ಎಂದು
ಸುಶಾಂತ್
ಹೇಳಿದ್ದಾನೆ.
ಆರಾಧನಾ
ಬಳಿ
ಬೇಡಿಕೊಂಡ
ಸುಶಾಂತ್
ನಾನೇನು
ಹಣವನ್ನ
ಕದ್ದಿಲ್ಲ,
ನನ್ನ
ಮೇಲೆ
ಈ
ವಠಾರದಲ್ಲಿ
ನಂಬಿಕೆ
ಇಟ್ಟಿರುವವರು
ನೀವು
ಒಬ್ಬರೇ.
ನನ್ನ
ಮಾತನ್ನ
ನಂಬಿ
ಎಂದು
ಸುಶಾಂತ್,
ಆರಾಧನಾ
ಬಳಿ
ಹೇಳಿದ್ದಾನೆ.
ನನಗೆ
ಹಣ
ಬೇಕು
ಎಂದಿದ್ದರೆ
ನಿಮ್ಮ
ಬಳಿಯೋ
ಅಥವಾ
ಕೆಂಪಮ್ಮಜ್ಜಿ
ಬಳಿ
ತೆಗೆದುಕೊಳ್ಳುತ್ತಿದ್ದೆ.
ನಾನು
ವಠಾರದವರ
ಹಣ
ಹಾಳು
ಮಾಡಿಲ್ಲ.
ಹಣ
ಕಳೆದುಹೋಗಿದೆ
ಎಂದು
ಸುಶಾಂತ್
ಪರಿಪರಿಯಾಗಿ
ಆರಾಧನಾ
ಬಳಿ
ಬೇಡಿಕೊಳ್ಳುತ್ತಿದ್ದಾನೆ.
ಆರಾಧನಾ
ಪರವಾಗಿಲ್ಲ
ಎಂದು
ಸುಶಾಂತ್
ನನ್ನ
ಸಮಾಧಾನ
ಮಾಡಿದ್ದಾಳೆ.
English summary
Colors Kannada Antarapata serial written update on June 27th episode. here is details about neighbors blame Sushant for lost money. Amala acting infornt of her mother. know more.
Tuesday, June 27, 2023, 23:53
Story first published: Tuesday, June 27, 2023, 23:53 [IST]