ಹೋಲ್ಡರ್ ಎಸೆದ ಸೂಪರ್ ಓವರ್‌ನಲ್ಲಿ ವ್ಯಾನ್ ಬೀಕ್ ಮತ್ತೆ ಬ್ಯಾಟಿಂಗ್‌ಗೆ ಇಳಿದರು. ಬೌಂಡರಿಯೊಂದಿಗೆ ಓವರ್ ಆರಂಭಿಸಿದ ಅವರು, ಎದುರಿಸಿದ ಎಲ್ಲಾ ಆರು ಎಸೆತಗಳಲ್ಲೂ ಬೌಂಡರಿ ಹಾಗೂ ಸಿಕ್ಸರ್ ಮಳೆ ಸುರಿಸಿದರು. ವಿಂಡೀಸ್ ವೇಗಿ ಮೇಲೆ ಆಕ್ರಮಣ ಮಾಡಿದ ಯಾನ್ ಬೀಕ್, ಸೂಪರ್ ಓವರ್‌ನಲ್ಲಿ ಬರೋಬ್ಬರಿ 30 ರನ್ ಕೊಳ್ಳೆ ಹೊಡೆದರು. ಸೂಪರ್ ಓವರ್‌ನಲ್ಲಿ 30 ರನ್‌ಗಳನ್ನು ಯಶಸ್ವಿಯಾಗಿ ಚೇಸ್ ಮಾಡಲು ವಿಂಡೀಸ್ ಆಟಗಾರರಿಂದ ಸಾಧ್ಯವಾಗಲಿಲ್ಲ. ಅಂತಿಮವಾಗಿ 5 ಎಸೆತಗಳಲ್ಲಿ 2 ವಿಕೆಟ್ ಕಳೆದುಕೊಂಡು 8 ರನ್ ಗಳಿಸಲಷ್ಟೇ ವಿಂಡೀಸ್‌ಗೆ ಸಾಧ್ಯವಾಯ್ತು. ಹೀಗಾಗಿ ರೋಚಕ ಪಂದ್ಯವನ್ನು ನೆದರ್ಲೆಂಡ್ಸ್ ಗೆದ್ದಿತು.