PTI
ನವದೆಹಲಿ: ಕೇಂದ್ರ ಸರ್ಕಾರ ಫೆ.1 ರಂದು ಮಂಡಿಸಲಿರುವ ಬಜೆಟ್ ನಲ್ಲಿ ಘೋಷಣೆಯಾಗುವ ಜನಪರ ಕ್ರಮಗಳ ಬಗ್ಗೆ ಜನಜಾಗೃತಿ ಮೂಡಿಸಲು ಬಿಜೆಪಿ 12 ದಿನಗಳ ರಾಷ್ಟ್ರವ್ಯಾಪಿ ಅಭಿಯಾನವನ್ನು ಆರಂಭಿಸಲಿದೆ.
ಬಜೆಟ್ ಮಂಡನೆಯಾದ ದಿನದಿಂದ ಈ ಅಭಿಯಾನ ಪ್ರಾರಂಭಗೊಳ್ಳಲಿದ್ದು, ಈ ಅಭಿಯಾನಕ್ಕೆ ಬಿಜೆಪಿ ನಾಯಕ ಸುಶೀಲ್ ಮೋದಿ ಸಮನ್ವಯಕಾರರಾಗಿರಲಿದ್ದಾರೆ. ಫೆ.12 ರಂದು ಈ ಅಭಿಯಾನ ಪೂರ್ಣಗೊಳ್ಳಲಿದೆ ಎಂದು ಬಿಜೆಪಿ ನಾಯಕರೊಬ್ಬರು ತಿಳಿಸಿದ್ದಾರೆ.
ಬಿಜೆಪಿ ರಾಷ್ಟ್ರಾಧ್ಯಕ್ಷ ಜೆಪಿ ನಡ್ಡಾ ಈ ಅಭಿಯಾನಕ್ಕಾಗಿ 9 ಸದಸ್ಯರನ್ನೊಳಗೊಂಡ ಟಾಸ್ಕ್ ಫೋರ್ಸ್ ರಚಿಸಿದ್ದು, ಇದರಲ್ಲಿ ಪಕ್ಷದ ಪ್ರಧಾನ ಕಾರ್ಯದರ್ಶಿ ಸುನಿಲ್ ಬನ್ಸಾಲ್ ಹಾಗೂ ಪಕ್ಷದ ರೈತ ಹಾಗೂ ಯುವ ಘಟಕಗಳ ಮುಖಂಡರೂ ಇದ್ದು, ಕೇಂದ್ರ ಬಜೆಟ್ ಬಗ್ಗೆ ಜಿಲ್ಲಾ ಮಟ್ಟಗಳಲ್ಲಿ ಚರ್ಚೆಗಳು, ಪತ್ರಿಕಾಗೋಷ್ಠಿ, ಸೆಮಿನಾರ್ ಗಳನ್ನು ನಡೆಸಲಿದ್ದಾರೆ.
ಕೇಂದ್ರ ಬಜೆಟ್ ಮಂಡನೆಯಾದ ನಂತರ ಬಿಜೆಪಿ ಆಡಳಿತವಿರುವ ರಾಜ್ಯಗಳ ಮುಖ್ಯಮಂತ್ರಿಗಳು ಜಾಗೃತಿ ಅಭಿಯಾನದ ಭಾಗವಾಗಿ ಪತ್ರಿಕಾಗೋಷ್ಠಿ ನಡೆಸಲಿದ್ದಾರೆ. ಉಳಿದೆಡೆ ಪಕ್ಷದ ಅಧ್ಯಕ್ಷರು ಪತ್ರಿಕಾಗೋಷ್ಠಿ ನಡೆಸಲಿದ್ದಾರೆ. 50 ಪ್ರಮುಖ ನಗರಗಳಲ್ಲಿ ಈ ಕ್ರಮಗಳ ಬಗ್ಗೆ ಜಾಗೃತಿ ಮೂಡಿಸುವ ಪತ್ರಿಕಾಗೋಷ್ಠಿ ನಡೆಯಲಿದೆ.
For more news update stay with actp news
Android App
Facebook
Twitter
Dailyhunt
Share Chat
Telegram
Koo App