The New Indian Express
ಗುವಾಹಟಿ: ಫೆಬ್ರವರಿ 16 ರಂದು ನಡೆಯಲಿರುವ ತ್ರಿಪುರಾ ವಿಧಾನಸಭೆ ಚುನಾವಣೆಗೆ ಕಾಂಗ್ರೆಸ್ ಶನಿವಾರ ತನ್ನ 17 ಅಭ್ಯರ್ಥಿಗಳ ಪಟ್ಟಿ ಬಿಡುಗಡೆ ಮಾಡಿದ್ದು, ತ್ರಿಪುರಾದಲ್ಲಿ 17 ಸ್ಥಾನಗಳಲ್ಲಿ ಸ್ಪರ್ಧಿಸುತ್ತಿದೆ. ಮಿತ್ರಪಕ್ಷಗಳಾದ ಎಡ ಪಕ್ಷಗಳು ತನಗೆ ನೀಡಿದ್ದಕ್ಕಿಂತ ನಾಲ್ಕು ಹೆಚ್ಚು ಕ್ಷೇತ್ರಗಳಲ್ಲಿ ಕಾಂಗ್ರೆಸ್ ಕಣಕ್ಕಿಳಿಯುತ್ತಿದೆ.
ಈ ಚುನಾವಣೆಯಲ್ಲಿ ಮೊದಲ ಬಾರಿಗೆ ತ್ರಿಪುರಾದಲ್ಲಿ ಕಾಂಗ್ರೆಸ್ ಮತ್ತು ಎಡಪಕ್ಷಗಳು ಚುನಾವಣಾ ಪೂರ್ವ ಮೈತ್ರಿ ಮಾಡಿಕೊಂಡಿವೆ. ಎರಡು ದಿನಗಳ ಹಿಂದೆ, ಎಡಪಕ್ಷ ತನ್ನ 47 ಅಭ್ಯರ್ಥಿಗಳ ಹೆಸರನ್ನು ಘೋಷಿಸಿತ್ತು. ಅದರಲ್ಲಿ 43 ಸಿಪಿಐ-ಎಂ. ಕಾಂಗ್ರೆಸ್ ಗೆ ಕೇವಲ 13 ಸ್ಥಾನಗಳನ್ನು ನೀಡಿದ್ದರಿಂದ ಅಸಮಾಧಾನಗೊಂಡಿತ್ತು.
ಇದನ್ನು ಓದಿ: ತ್ರಿಪುರಾ ವಿಧಾನಸಭಾ ಚುನಾವಣೆ: ಬಿಜೆಪಿಯ 48 ಅಭ್ಯರ್ಥಿಗಳ ಮೊದಲ ಪಟ್ಟಿ ಬಿಡುಗಡೆ
ಆರಂಭದಲ್ಲಿ ರಾಜ್ಯದ 60 ಸ್ಥಾನಗಳ ಪೈಕಿ 27 ಸ್ಥಾನಗಳಲ್ಲಿ ಸ್ಪರ್ಧಿಸಲು ಕಾಂಗ್ರೆಸ್ ಯತ್ನಿಸಿತ್ತು. ಆದರೆ ಎಡಪಕ್ಷಗಳ ವಿರೋಧದ ನಂತರ ಅದನ್ನು 23 ಕ್ಕೆ ಇಳಿಸಲಾಯಿತು ಎಂದು ಪಕ್ಷ ಹೇಳಿದೆ. ಸೀಟು ಹಂಚಿಕೆಯ ನಡುವೆಯೂ ಕಾಂಗ್ರೆಸ್ ಮತ್ತು ಎಡಪಕ್ಷ ಈಗ ನಾಲ್ಕು ಸ್ಥಾನಗಳಲ್ಲಿ ಪರಸ್ಪರ ಸ್ಪರ್ಧೆಗಿಳಿಯಲಿವೆ.
ಜನರ ಇಚ್ಛೆಯಂತೆ 17 ಸ್ಥಾನಗಳಲ್ಲಿ ಸ್ಪರ್ಧಿಸುವುದಾಗಿ ಕಾಂಗ್ರೆಸ್ ಹೇಳಿದೆ.
For more news update stay with actp news
Android App
Facebook
Twitter
Dailyhunt
Share Chat
Telegram
Koo App