Online Desk
ಚೆನ್ನೈ: ಭಾರತೀಯ ಚಿತ್ರರಂಗದ ಜೀವಂತ ದಂತಕಥೆ, ದಕ್ಷಿಣ ಭಾರತದ ಸೂಪರ್ ಸ್ಟಾರ್ ರಜನಿಕಾಂತ್(Super star Rajinikanth) ಎಂದರೆ ಸಾಮಾನ್ಯವಾಗಿ ಎಲ್ಲರಿಗೂ ಅಚ್ಚುಮೆಚ್ಚು. ಅವರ ಸ್ಟೈಲ್, ನಟನೆ, ಮ್ಯಾನರಿಸಂಗೆ ಮನಸೋಲದವರಿಲ್ಲ, ಇಂತಹ ಹೊತ್ತಿನಲ್ಲಿ ಅವರು ತಮ್ಮ ಹಿಂದಿನ ಜೀವನವೆಲ್ಲ ನೆನಪಿಸಿಕೊಂಡಿದ್ದಾರೆ. ಈ ಸಂದರ್ಭದಲ್ಲಿ ಅವರು ತಮ್ಮ ಪತ್ನಿಯನ್ನು ಮನಸಾರೆ ಹೊಗಳಿದ್ದಾರೆ.
ಸೂಪರ್‌ಸ್ಟಾರ್ ರಜನಿಕಾಂತ್ ಅವರಿಗೆ ತಮ್ಮ ಪತ್ನಿ ಲತಾ ಎಂದರೆ ವಿಶೇಷ ಪ್ರೀತಿ ಮತ್ತು ಅಭಿಮಾನ, ಅದನ್ನು ಸಾರ್ವಜನಿಕವಾಗಿ ಅನೇಕ ಬಾರಿ ಹೇಳಿಕೊಂಡಿದ್ದಾರೆ ಕೂಡ. ತಮ್ಮ ಜೀವನಶೈಲಿಯನ್ನು ಉತ್ತಮ ರೀತಿಗೆ ಬದಲಾಯಿಸಿದ ಪ್ರೇರಣೆ ಶಕ್ತಿ ಪತ್ನಿ ಲತಾ ಎಂದು ಇತ್ತೀಚೆಗೆ ರಜನಿಕಾಂತ್ ಹೇಳಿಕೊಂಡಿದ್ದಾರೆ.
ಇತ್ತೀಚೆಗೆ ವೈ ಜೀ ಮಹೇಂದ್ರನ್ ಅವರ ಚಾರುಕೇಸಿ ನಾಟಕದ 50ನೇ ದಿನದ ಸಂಭ್ರಮದಲ್ಲಿ ಮುಖ್ಯ ಅತಿಥಿಯಾಗಿ ಭಾಗವಹಿಸಿದ್ದರು. ಸಮಾರಂಭದಲ್ಲಿ ಮಾತನಾಡಿದ ರಜನಿಕಾಂತ್, ವೈ ಜೀ ಮಹೇಂದ್ರನ್ ಅವರೇ ನನಗೆ ಲತಾಳನ್ನು ಪರಿಚಯಿಸಿದ್ದು, ಅವರಿಗೆ ನನ್ನ ಧನ್ಯವಾದಗಳು ಎಂದಿದ್ದಾರೆ.
ವಿಪರೀತ ಕುಡಿತ, ಸಿಗರೇಟ್ ಹುಚ್ಚು: ರಜನಿಕಾಂತ್ ಅವರು ತಾವು ಯುವಕರಾಗಿದ್ದಾಗ ತಮಗಿದ್ದ ಕೆಟ್ಟ ಅಭ್ಯಾಸಗಳನ್ನು ಸಾರ್ವಜನಿಕವಾಗಿ ಹೇಳಲು ಹಿಂಜರಿದವರಲ್ಲ, ಅನೇಕ ಬಾರಿ ಅದನ್ನು ಹೇಳಿಕೊಂಡಿದ್ದಾರೆ. ತಾವು ಕಂಡಕ್ಟರ್ ಆಗಿದ್ದಾಗ, ನಟನಾದ ನಂತರವೂ ಕುಡಿತ, ನಾನ್ ವೆಜ್, ಸಿಗರೇಟ್ ಚಟಕ್ಕೆ ಬಿದ್ದಿದ್ದೆ, ನನ್ನನ್ನು ಮನುಷ್ಯನನ್ನಾಗಿ ಬದಲಾಯಿಸಿದ್ದು ಲತಾ ಎಂದರು.
ತಮಗಿದ್ದ ಮದ್ಯಪಾನ ಮತ್ತು ಧೂಮಪಾನದ ಚಟದ ಬಗ್ಗೆ ಸಮಾರಂಭದಲ್ಲಿ ಮಾತನಾಡಿದ ತಲೈವರ್, ನನ್ನ ಪತ್ನಿ ಲತಾ ಅವರನ್ನು ಪರಿಚಯಿಸಿದ ವೈ ಜೀ ಮಹೇಂದ್ರನ್ ಅವರಿಗೆ ನಾನು ಚಿರ ಋಣಿಯಾಗಿದ್ದೇನೆ, ನಾನು ಕಂಡಕ್ಟರ್ ಆಗಿದ್ದಾಗ ಪ್ರತಿದಿನ ಕುಡಿಯುತ್ತಿದ್ದೆ. ನಾನು ಪ್ರತಿದಿನ ಲೆಕ್ಕವಿಲ್ಲದಷ್ಟು ಸಿಗರೇಟು ಸೇದುತ್ತಿದ್ದೆ. ಧೂಮಪಾನ, ಮಾಂಸ ಸೇವನೆಯಿಂದ ದಿನ ಪ್ರಾರಂಭಿಸುತ್ತಿದ್ದೆ. ದಿನಕ್ಕೆ ಎರಡು ಬಾರಿ ಮಾಂಸಾಹಾರಿ ಊಟ ಮಾಡದಿದ್ದರೆ ನನಗೆ ಆಗುತ್ತಿರಲಿಲ್ಲ. ಆಗ ಸಸ್ಯಾಹಾರಿಗಳನ್ನು ನೋಡಿದಾಗ ನನಗೆ ಬೇಸರವಾಗುತ್ತಿತ್ತು. ಆದರೆ, ಈ ಮೂರೂ ಸಂಯೋಜನೆ ಮನುಷ್ಯನ ದೇಹಕ್ಕೆ ಮಾರಕ.
“ನನ್ನ ಪ್ರಕಾರ, ಈ ಮೂರನ್ನು ಹೆಚ್ಚು ಕಾಲ ಸೇವಿಸುವವರು 60ರ ನಂತರ ಆರೋಗ್ಯಕರ ಜೀವನವನ್ನು ನಡೆಸುವುದಿಲ್ಲ, ವಾಸ್ತವವಾಗಿ, ನನ್ನ ಹೆಂಡತಿ ಲತಾ ಅವರು ನನ್ನ ಮೇಲೆ ಪ್ರೀತಿಯಿಂದ ನಾನು ಈ ದುಶ್ಚಟಗಳಿಂದ ದೂರವಾಗುವಂತೆ ಮಾಡಿದರು. ಇದರಿಂದ ಇಂದು ನಾನು ಶಿಸ್ತಿನ ಜೀವನವನ್ನು ನಡೆಸುತ್ತೇನೆ ಎಂದರು.
ರಜನಿಕಾಂತ್ ಕೊನೆಯದಾಗಿ ನಿರ್ದೇಶಕ ಸಿರುತೈ ಶಿವ ಅವರ ಅಣ್ಣಾತ್ತೆ ಚಿತ್ರದಲ್ಲಿ ಕಾಣಿಸಿಕೊಂಡಿದ್ದರು. ಸದ್ಯ ನೆಲ್ಸನ್ ದಿಲೀಪ್ ಕುಮಾರ್ ಅವರ ಜೈಲರ್ ಚಿತ್ರದ ಶೂಟಿಂಗ್ ನಲ್ಲಿ ಬ್ಯುಸಿಯಾಗಿದ್ದಾರೆ. ಈ ಚಿತ್ರವನ್ನು ಸನ್ ಪಿಕ್ಚರ್ಸ್ ಅದ್ಧೂರಿ ಬಜೆಟ್‌ನಲ್ಲಿ ನಿರ್ಮಿಸಿದೆ. ಚಿತ್ರದಲ್ಲಿ ಮಲಯಾಳಂ ಸೂಪರ್ ಸ್ಟಾರ್ ಮೋಹನ್ ಲಾಲ್ ಅತಿಥಿ ಪಾತ್ರದಲ್ಲಿ ಕಾಣಿಸಿಕೊಳ್ಳಲಿದ್ದಾರೆ. ಕನ್ನಡದ ಸೂಪರ್ ಸ್ಟಾರ್ ಶಿವರಾಜಕುಮಾರ್ ವಿಶೇಷ ಪಾತ್ರದಲ್ಲಿ ಕಾಣಿಸಿಕೊಳ್ಳಲಿದ್ದಾರೆ. ಸುನಿಲ್, ತಮನ್ನಾ, ವಿಜಯಕನ್, ವಸಂತ್ ರವಿ ಮತ್ತು ರಮ್ಯಾ ಕೃಷ್ಣನ್ ಪೋಷಕ ಪಾತ್ರಗಳ ಭಾಗವಾಗಿದ್ದಾರೆ.
ಸನ್ ಪಿಕ್ಚರ್ಸ್ ನಿರ್ಮಿಸಿರುವ ಜೈಲರ್ ಈ ವರ್ಷದ ಕೊನೆಯಲ್ಲಿ ಚಿತ್ರಮಂದಿರಗಳಲ್ಲಿ ಬಿಡುಗಡೆಯಾಗುವ ನಿರೀಕ್ಷೆಯಿದೆ.
For more news update stay with actp news
Android App
Facebook
Twitter
Dailyhunt
Share Chat
Telegram
Koo App