Online Desk
ಗುವಾಹಟಿ: ಅಸ್ಸಾಂ ಮುಖ್ಯಮಂತ್ರಿ ಹಿಮಂತ ಬಿಸ್ವಾ ಶರ್ಮಾ ಅವರು ತಮ್ಮ ಹೇಳಿಕೆಗಳಿಂದಾಗಿ ಆಗಾಗ್ಗೆ ಚರ್ಚೆಯಲ್ಲಿರುತ್ತಾರೆ. ಇದೀಗ ಸರ್ಕಾರಿ ಕಾರ್ಯಕ್ರಮವೊಂದರಲ್ಲಿ ಅಸ್ಸಾಂನ ಸಿಎಂ ಹೆಣ್ಣುಮಕ್ಕಳು 22 ವರ್ಷದ ನಂತರವೇ ಗರ್ಭ ಧರಿಸಲಿ ಎಂದು ಸಲಹೆ ನೀಡಿದ್ದಾರೆ.
ಬಾಲ್ಯವಿವಾಹ ಮತ್ತು ಅಪ್ರಾಪ್ತ ವಯಸ್ಸಿನ ತಾಯ್ತನವನ್ನು ತಡೆಗಟ್ಟಲು. ಲೈಂಗಿಕ ಅಪರಾಧಗಳಿಂದ ಮಕ್ಕಳ ರಕ್ಷಣೆ (ಪೋಕ್ಸೊ) ಕಾಯ್ದೆಯನ್ನು ಜಾರಿಗೊಳಿಸಲು ಕಠಿಣ ಕಾನೂನುಗಳನ್ನು ತರಲು ರಾಜ್ಯ ಸರ್ಕಾರದ ನಿರ್ಧಾರದ ನಂತರ ಹಿಮಂತ ಬಿಸ್ವಾ ಶರ್ಮಾ ಅವರು ಈ ಹೇಳಿಕೆ ನೀಡಿದ್ದಾರೆ.
ಮುಂದಿನ ಐದು-ಆರು ತಿಂಗಳಲ್ಲಿ ಸಾವಿರಾರು ಜನರನ್ನು ಬಂಧಿಸಲಾಗುವುದು ಎಂದು ಶರ್ಮಾ ಹೇಳಿದರು. ಏಕೆಂದರೆ 14 ವರ್ಷದೊಳಗಿನ ಹುಡುಗಿ ಕಾನೂನುಬದ್ಧವಾಗಿ ಮದುವೆಯಾಗಿದ್ದರೂ ಸಹ ಲೈಂಗಿಕ ಕ್ರಿಯೆ ನಡೆಸುವುದು ಅಪರಾಧವಾಗಿದೆ. ಹೆಣ್ಣುಮಕ್ಕಳ ವಿವಾಹದ ಕಾನೂನುಬದ್ಧ ವಯಸ್ಸು 18 ವರ್ಷವಾಗಿದ್ದು, ಅಪ್ರಾಪ್ತ ಬಾಲಕಿಯರನ್ನು ಮದುವೆಯಾಗುವವರ ವಿರುದ್ಧ ಕ್ರಮ ಕೈಗೊಳ್ಳಲಾಗುವುದು ಎಂದು ಹೇಳಿದರು. ಅನೇಕ ಪುರುಷರು ಜೀವಾವಧಿ ಶಿಕ್ಷೆಗೆ ಗುರಿಯಾಗಬಹುದು ಎಂದು ಅವರು ಹೇಳಿದರು.
ಇದನ್ನೂ ಓದಿ: ಆಫ್ತಾಬ್ ನಂತಹ ಹಂತಕರನ್ನು ಗಲ್ಲಿಗೇರಿಸುವ ಕಾನೂನಿನ ಅಗತ್ಯವಿದೆ: ಅಸ್ಸಾಂ ಸಿಎಂ ಹಿಮಂತ ಬಿಸ್ವಾ ಶರ್ಮಾ
‘ಹೆಣ್ಣುಮಕ್ಕಳು ತಾಯಂದಿರಾಗಲು ಹೆಚ್ಚು ಸಮಯ ಕಾಯಬಾರದು. ಏಕೆಂದರೆ ತೊಡಕುಗಳು ಉಂಟಾಗುತ್ತವೆ. ತಾಯ್ತನಕ್ಕೆ ಸೂಕ್ತ ವಯಸ್ಸು 22ರಿಂದ 30 ವರ್ಷ’ ಎಂದು ಹೇಳಿದರು. ಯಾವುದೇ ಹುಡುಗಿ ಸಮಯಕ್ಕಿಂತ ಮೊದಲು ತಾಯಿಯಾಗಬೇಕೆಂದು ನಾವು ಬಯಸುವುದಿಲ್ಲ, ಆದರೆ ಅದೇ ಸಮಯದಲ್ಲಿ ಹುಡುಗಿಯರು ತಾಯಿಯಾಗಲು ಹೆಚ್ಚು ಸಮಯ ಕಾಯಬಾರದು. ಭಗವಂತ ನಮ್ಮ ದೇಹವನ್ನು ಎಲ್ಲದಕ್ಕೂ ಸೂಕ್ತವಾದ ವಯಸ್ಸು ಇರುವಂತೆ ಮಾಡಿದ್ದಾನೆ ಎಂದರು.
ಅಸ್ಸಾಂ ಕ್ಯಾಬಿನೆಟ್ ಸೋಮವಾರ 14 ವರ್ಷದೊಳಗಿನ ಹುಡುಗಿಯರನ್ನು ಮದುವೆಯಾಗುವ ಪುರುಷರನ್ನು ಪೋಕ್ಸೊ ಕಾಯ್ದೆಯಡಿಯಲ್ಲಿ ಬಂಧಿಸಲು ನಿರ್ಧರಿಸಿದೆ. 14 ರಿಂದ 18 ವರ್ಷದೊಳಗಿನ ಹುಡುಗಿಯರನ್ನು ಮದುವೆಯಾಗುವವರ ವಿರುದ್ಧ ಬಾಲ್ಯ ವಿವಾಹ ನಿಷೇಧ ಕಾಯ್ದೆ, 2006ರ ಅಡಿಯಲ್ಲಿ ಕಾನೂನು ಕ್ರಮ ಜರುಗಿಸಲಾಗುವುದು. ರಾಜ್ಯದಲ್ಲಿ ತಾಯಂದಿರು ಮತ್ತು ಶಿಶು ಮರಣ ಪ್ರಮಾಣ ಹೆಚ್ಚಾಗುತ್ತಿದ್ದು, ಇದಕ್ಕೆ ಪ್ರಾಥಮಿಕ ಕಾರಣ ಬಾಲ್ಯವಿವಾಹವೇ ಕಾರಣ ಎಂದು ಸಚಿವ ಸಂಪುಟ ಸಭೆಯ ಬಳಿಕ ಶರ್ಮಾ ತಿಳಿಸಿದ್ದಾರೆ.
For more news update stay with actp news
Android App
Facebook
Twitter
Dailyhunt
Share Chat
Telegram
Koo App