Online Desk
ಹಂಪಿ: ವಿಜಯನಗರ ಜಿಲ್ಲೆಯ ಐತಿಹಾಸಿಕ ಹಂಪಿಯಲ್ಲಿ “ಹಂಪಿ ಉತ್ಸವ – 2023ಕ್ಕೆ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಶುಕ್ರವಾರ ಚಾಲನೆ ನೀಡಿದರು. ಈ ಸಂದರ್ಭದಲ್ಲಿ ಸಚಿವರಾದ ಬಿ. ಶ್ರೀರಾಮುಲು. ಶಶಿಕಲಾ ಜೊಲ್ಲೆ ಮತ್ತಿತರರು ಉಪಸ್ಥಿತರಿದ್ದರು.
ನಂತರ ಮಾತನಾಡಿದ ಮುಖ್ಯಮಂತ್ರಿ, ಹಂಪಿ ಸರ್ಕಿಟ್ ಶೀಘ್ರದಲ್ಲಿಯೇ ಆರಂಭವಾಗಿ, ಪ್ರವಾಸೋದ್ಯಮಕ್ಕೆ ಪೂರಕವಾಗುವ ಚಟುವಟಿಕೆಗಳನ್ನು ಆರಂಭಿಸಲಿದೆ ಎಂದರು.
ಇಂದು ಮಾನ್ಯ ಮುಖ್ಯಮಂತ್ರಿಗಳಾದ ಶ್ರೀ @BSBommai ಅವರು ವಿಜಯನಗರ ಜಿಲ್ಲೆಯ ಹಂಪಿಯಲ್ಲಿ ನಡೆದ “ಹಂಪಿ ಉತ್ಸವ – 2023″ನ್ನು ಉದ್ಘಾಟಿಸಿ, ಮಾತನಾಡಿದರು. pic.twitter.com/L9zWF5sywq
— CM of Karnataka (@CMofKarnataka) January 27, 2023
ಕರ್ನಾಟಕ ಅತಿ ಹೆಚ್ಚು ಐತಿಹಾಸಿಕ ಸ್ಥಳಗಳನ್ನು ಹೊಂದಿರುವ ರಾಜ್ಯವಾಗಿದೆ. ಅಂತಾರಾಷ್ಟ್ರೀಯ ಪ್ರವಾಸಿಗರಿಗೆ ಅನುಕೂಲವಾಗುವ ನಿಟ್ಟಿನಲ್ಲಿ ನಮ್ಮ ಸರ್ಕಾರ ಆಯವ್ಯಯದಲ್ಲಿ ಉತ್ತರದಲ್ಲಿ ಹಂಪಿ ಸರ್ಕಿಟ್ ಹಾಗೂ ದಕ್ಷಿಣದಲ್ಲಿ ಮೈಸೂರು ಸರ್ಕಿಟ್ ನ್ನು ಘೋಷಿಸಿತ್ತು ಎಂದು ಅವರು ತಿಳಿಸಿದರು.
For more news update stay with actp news
Android App
Facebook
Twitter
Dailyhunt
Share Chat
Telegram
Koo App