PTI
ಖಾಜಿಗುಂಡ್: ಜಮ್ಮು ಮತ್ತು ಕಾಶ್ಮೀರ ಪ್ರವೇಶಿಸಿರುವ ರಾಹುಲ್ ಗಾಂಧಿ ನೇತೃತ್ವದ ಭಾರತ್ ಜೋಡೋ ಯಾತ್ರೆ ಭದ್ರತಾ ಕಾರಣದಿಂದ ತಾತ್ಕಾಲಿಕವಾಗಿ ಸ್ಥಗಿತಗೊಳಿಸಲಾಗಿದ್ದು, ಕೇಂದ್ರಾಡಳಿತ ಸರ್ಕಾರ ಸೂಕ್ತ ಭದ್ರತೆ ನೀಡುವಲ್ಲಿ ವಿಫಲವಾಗಿದೆ ಎಂದು ಕಾಂಗ್ರೆಸ್ ಆರೋಪಿಸಿದೆ.
ಇಂದು ಬೆಳಗ್ಗೆ ರಾಮ್‍ಬಾನ್ ಜಿಲ್ಲೆಯ ಕ್ವಾಜಿಗುಂಡ್‍ನಿಂದ ಭಾರತ್ ಜೋಡೋ ಯಾತ್ರೆ ಪುನರ್ ಆರಂಭವಾಗಿತ್ತು. ಆದರೆ ಭದ್ರತಾ ಲೋಪದಿಂದ ಬನಿಹಾಲ್‌ನ ಖಾಜಿಗುಂಡ್ ಸಮೀಪ ದಿಢೀರ್ ಸ್ಥಗಿತಗೊಂಡಿದೆ.
ಇದನ್ನು ಓದಿ: ಜ.30ಕ್ಕೆ ಭಾರತ್ ಜೋಡೋ ಯಾತ್ರೆ ಸಮಾರೋಪ ಸಮಾರಂಭ: ಕಾಂಗ್ರೆಸ್ ಆಹ್ವಾನ ತಿರಸ್ಕರಿಸಿದ ಜೆಡಿಯು
ಈ ಕುರಿತು ಎಐಸಿಸಿ ಉಸ್ತುವಾರಿ ರಜನಿ ಪಾಟೀಲ್ ಟ್ವೀಟ್ ಮಾಡಿದ್ದು, ಜೆಕೆ ಆಡಳಿತವು “ರಾಹುಲ್ ಗಾಂಧಿ ನೇತೃತ್ವದ ಭಾರತ್ ಜೋಡೋ ಯಾತ್ರೆಗೆ ಭದ್ರತೆ ಒದಗಿಸಲು ವಿಫಲವಾಗಿದೆ. ಭದ್ರತಾ ಲೋಪಗಳು ಕೇಂದ್ರಾಡಳಿತ ಅಸಮರ್ಥತೆ ಮತ್ತು ತಯಾರಿ ಇಲ್ಲದ ವರ್ತನೆಯನ್ನು ಸೂಚಿಸುತ್ತವೆ” ಎಂದು ಆರೋಪಿಸಿದ್ದಾರೆ.
ಖಾಜಿಗುಂಡ್ ತಲುಪಿದ ನಂತರ ರಾಹುಲ್ ಗಾಂಧಿ ಅವರು ಯೋಜನೆಯ ಪ್ರಕಾರ ದಕ್ಷಿಣ ಕಾಶ್ಮೀರದ ವೆಸ್ಸು ಕಡೆಗೆ ನಡೆಯಲು ಪ್ರಾರಂಭಿಸಿದರು. ಆದರೆ ಕಾಂಗ್ರೆಸ್ ಕಾರ್ಯಕರ್ತರು ಇದ್ದಕ್ಕಿದ್ದಂತೆ ಜಮ್ಮು ಮತ್ತು ಕಾಶ್ಮೀರ ಪೊಲೀಸರಿಂದ ನಿರ್ವಹಿಸಬೇಕಾದ ಹೊರ ಕವಚವು ಕಣ್ಮರೆಯಾಯಿತು ಎಂದು ಕಾಂಗ್ರೆಸ್ ನಾಯಕರು ಆರೋಪಿಸಿದರು.
ರಾಹುಲ್ ಗಾಂಧಿಯವರು ಇಂದು 11 ಕಿಲೋಮೀಟರ್ ಪಾದಯಾತ್ರೆ ಮಾಡಬೇಕಿತ್ತು. ಆದರೆ ಅವರು ಕೇವಲ 500 ಮೀಟರ್ ನಡೆದ ನಂತರ ಅವರು ಯಾತ್ರೆ ಸ್ಥಳಗಿತಗೊಳಿಸಲಾಯಿತು ಎಂದು ಅವರು ಹೇಳಿದ್ದಾರೆ.
J&K UT Adminstration failed to provide security to #BharatJodoYatra led by Shri @RahulGandhi .
Security lapses indicate unfair & unprepared attitude of UT adminstration. @OfficeOfLGJandK pic.twitter.com/hQoCIraZIO
— Rajani Patil (@rajanipatil_in) January 27, 2023
For more news update stay with actp news
Android App
Facebook
Twitter
Dailyhunt
Share Chat
Telegram
Koo App