Online Desk
ಕುಪ್ಪಂ: ತೆಲುಗಿನ ಸೂಪರ್ ಸ್ಟಾರ್ ಬಾಲಕೃಷ್ಣ ಅವರ ಸಹೋದರನ ಮಗ, ನಟ ನಂದಮೂರಿ ತಾರಕರತ್ನ ಅವರು ತೀವ್ರವಾಗಿ ಅಸ್ವಸ್ಥಗೊಂಡಿದ್ದಾರೆ. ಅವರಿಗೆ ಹೃದಯಾಘಾತವಾಗಿರುವ ಸಾಧ್ಯತೆಯಿರುವುದಾಗಿ ಹೇಳಲಾಗಿದೆ. ಕೂಡಲೇ ಅವರನ್ನು ಕುಪ್ಪಂ ಬಳಿ ಇರುವ ಆಸ್ಪತ್ರೆಗೆ ದಾಖಲು ಮಾಡಲಾಗಿದೆ.ಹೆಚ್ಚಿನ ಚಿಕಿತ್ಸೆಗಾಗಿ ಅವರನ್ನು ಬೆಂಗಳೂರಿಗೆ ಕರೆತರುವ ಸಾಧ್ಯತೆ ಇದೆ ಎನ್ನಲಾಗಿದೆ.
ಆಂಧ್ರಪ್ರದೇಶದ ಚಿತ್ತೂರು ಜಿಲ್ಲೆಯ ಕುಪ್ಪಂನಲ್ಲಿ ಟಿಡಿಪಿ ಪ್ರಧಾನ ಕಾರ್ಯದರ್ಶಿ ನಾರಾ ಲೋಕೇಶ್ ಅವರ ಪಾದಯಾತ್ರೆಯಲ್ಲಿ ನಂದಮೂರಿ ತಾರಕ ರತ್ನ ಅವರು ಭಾಗವಹಿಸಿದ್ದರು. ಈ ವೇಳೆ ಈ ಘಟನೆ ಸಂಭವಿಸಿದೆ. ತಾರಕ ರತ್ನ ಅವರನ್ನು ಆಸ್ಪತ್ರೆಗೆ ಕರೆದುಕೊಂಡು ಹೋಗುತ್ತಿರುವ ವಿಡಿಯೋ ಕೂಡ ಸೋಶಿಯಲ್ ಮೀಡಿಯಾದಲ್ಲಿ ವೈರಲ್ ಆಗಿದೆ.
తారకరత్న త్వరగా కోలుకోవాలి…. 2009 లో జూనియర్ .. ఇప్పుడు తారకరత్న pic.twitter.com/TiNaGi8adS
— Sridhar Reddy Avuthu (@SridharAvuthu) January 27, 2023
ಸದ್ಯ ಕುಪ್ಪಂನ ಖಾಸಗಿಯಲ್ಲಿ ಆಸ್ಪತ್ರೆಯಲ್ಲಿ ಚಿಕಿತ್ಸೆ ನೀಡಲಾಗುತ್ತಿದೆ. ಹೆಚ್ಚಿನ ಚಿಕಿತ್ಸೆಗೆ ಬೆಂಗಳೂರಿಗೆ ಕರೆತರುವ ಸಾಧ್ಯತೆ ಇರುವುದಾಗಿ ಮೂಲಗಳು ತಿಳಿಸಿವೆ.
For more news update stay with actp news
Android App
Facebook
Twitter
Dailyhunt
Share Chat
Telegram
Koo App