PTI
ಚೆನ್ನೈ: ನಟ-ರಾಜಕಾರಣಿ ಕಮಲ್ ಹಾಸನ್ ಅವರ ಮಕ್ಕಳ್ ನೀಧಿ ಮೈಯಂ ಪಕ್ಷದ ವೆಬ್‌ಸೈಟ್ ಹ್ಯಾಕ್ ಆಗಿದೆ ಎಂದು ಪಕ್ಷವು ಶುಕ್ರವಾರ ತಿಳಿಸಿದೆ. ವೆಬ್‌ಸೈಟ್ ಹ್ಯಾಕ್ ಆದ ಕೆಲ ಗಂಟೆಗಳ ನಂತರ ಅಧಿಕೃತ ವೆಬ್‌ಸೈಟ್ ನ್ನು ಕೆಲವು ಕಿಡಿಗೇಡಿಗಳು ಹ್ಯಾಕ್ ಮಾಡಿದ್ದಾರೆ ಮತ್ತು ಅಂತಹ ಬೆದರಿಕೆಗೆ ಹೆದರುವುದಿಲ್ಲ ಮತ್ತು ಅದಕ್ಕೆ ತಕ್ಕ ಉತ್ತರವನ್ನು ನೀಡುತ್ತದೆ ಎಂದು ಎಂಎನ್ ಎಂ ಪಕ್ಷದ ಟ್ವೀಟರ್ ಖಾತೆಯಲ್ಲಿ ಹೇಳಲಾಗಿದೆ.
ಜನವರಿ 30 ರಂದು ಕಾಂಗ್ರೆಸ್ ಪಕ್ಷದೊಂದಿಗೆ ಎಂಎನ್ ಎಂನ್ನು ವಿಲೀನಗೊಳಿಸುವುದಾಗಿ ವೆಬ್ ಸೈಟ್ ನಲ್ಲಿ ಮಾಡಲಾದ ಪೋಸ್ಟ್ ಪಕ್ಷದ ಕಾರ್ಯಕರ್ತರನ್ನು ಅಚ್ಚರಿಗೊಳಿಸಿದರೆ, ಅನೇಕರ ಕಣ್ಣು ಕೆಂಪಾಗಿಸಿತ್ತು. ನಂತರ ಆ ಹೇಳಿಕೆಯನ್ನು ಹಿಂಪಡೆಯಲಾಗಿದೆ ಎಂದು ಹೇಳಲಾಗಿತ್ತು. ಕಾಂಗ್ರೆಸ್ ಪಕ್ಷದೊಂದಿಗೆ ವಿಲೀನದಂತಹ ನಿರ್ಧಾರ ತೆಗೆದುಕೊಂಡಿಲ್ಲ. ಇದು ಹ್ಯಾಕರ್ ಗಳ ಕೈ ಕೆಲಸ ಎಂದು ಪಕ್ಷದ ವಕ್ತಾರರೊಬ್ಬರು ಹೇಳಿದ್ದಾರೆ.
The official website of Makkal Needhi Maiam has been hacked by miscreants who thrive on stifling the voice of Democracy !
Unruffled, we will react appropriately and continue to stand tall !
— Makkal Needhi Maiam | மக்கள் நீதி மய்யம் (@maiamofficial) January 27, 2023
ಫೆಬ್ರವರಿ 27 ರಂದು ನಡೆಯಲಿರುವ ಈರೋಡ್ ಪೂರ್ವ ಉಪಚುನಾವಣೆಯಲ್ಲಿ ಕಾಂಗ್ರೆಸ್ ಅಭ್ಯರ್ಥಿಯನ್ನು ಬೆಂಬಲಿಸುವುದಾಗಿ ಎಂಎನ್ ಎಂ ಘೋಷಿಸಿತ್ತು. ಕಳೆದ ತಿಂಗಳು ನಡೆದ ಭಾರತ್ ಜೋಡೋ ಯಾತ್ರೆಯ ವೇಳೆ ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ ಜೊತೆಗೆ ಕಮಲ್ ಹಾಸನ್ ಪಾಲ್ಗೊಂಡಿದ್ದನ್ನು ಸ್ಮರಿಸಬಹುದಾಗಿದೆ.
For more news update stay with actp news
Android App
Facebook
Twitter
Dailyhunt
Share Chat
Telegram
Koo App