ಯೂಟ್ಯೂಬ್ 2022ರ ದೇಶದ ಅತ್ಯುತ್ತಮ ವಿಡಿಯೋ ಹಾಗೂ ಯೂಟ್ಯೂಬ್ ಚಾನಲ್ ಪಟ್ಟಿಯನ್ನು ಬಹಿರಂಗಪಡಿಸಿದ್ದು ಪುಷ್ಪಾ ಚಿತ್ರದ 'ಶ್ರೀವಲ್ಲಿ' ಟಾಪ್ ಮ್ಯೂಸಿಕ್ ವೀಡಿಯೊ ಆಗಿದ್ದರೆ, ಹಾಸ್ಯ ವಿಡಿಯೋ ತಯಾರಕ 'ಶಾರ್ಟ್ಸ್ ಬ್ರೇಕ್' ಪಟ್ಟಿಯಲ್ಲಿ ಅಗ್ರಸ್ಥಾನದಲ್ಲಿದೆ. ಯೂಟ್ಯೂಬ್ 2022ರ ದೇಶದ ಅತ್ಯುತ್ತಮ ವಿಡಿಯೋ ಹಾಗೂ ಯೂಟ್ಯೂಬ್ ಚಾನಲ್ ಪಟ್ಟಿಯನ್ನು ಬಹಿರಂಗಪಡಿಸಿದ್ದು ಪುಷ್ಪಾ ಚಿತ್ರದ 'ಶ್ರೀವಲ್ಲಿ' ಟಾಪ್ ಮ್ಯೂಸಿಕ್ ವೀಡಿಯೊ ಆಗಿದ್ದರೆ, ಹಾಸ್ಯ ವಿಡಿಯೋ ತಯಾರಕ 'ಶಾರ್ಟ್ಸ್ ಬ್ರೇಕ್' ಪಟ್ಟಿಯಲ್ಲಿ ಅಗ್ರಸ್ಥಾನದಲ್ಲಿದೆ.
ಟಾಪ್ ಟ್ರೆಂಡಿಂಗ್ ವೀಡಿಯೊಗಳು, ಟಾಪ್ ಮ್ಯೂಸಿಕ್ ವೀಡಿಯೊಗಳು, ಟಾಪ್ ಶಾರ್ಟ್ಸ್, ಟಾಪ್ 20 ಬ್ರೇಕ್ಔಟ್ ನಿರ್ಮಾಪಕರು, ಟಾಪ್ ಬ್ರೇಕ್ಔಟ್ ಮಹಿಳಾ ನಿರ್ಮಾಪಕರು ಮತ್ತು ಟಾಪ್ ನಿರ್ಮಾಪಕರ ಪಟ್ಟಿಯನ್ನು ಅನಾವರಣಗೊಳಿಸಿದೆ.
"ವಿಡಿಯೋ ಆನ್ ಡಿಮ್ಯಾಂಡ್, ಶಾರ್ಟ್ ಫಾರ್ಮ್ ಕಂಟೆಂಟ್ ಮತ್ತು ಲೈವ್ ಸ್ಟ್ರೀಮ್ಗಳ ನಡುವಿನ ಪರಸ್ಪರ ಕ್ರಿಯೆಯು ಯೂಟ್ಯೂಬ್ನಲ್ಲಿ ಸ್ಪಷ್ಟವಾಗಿ ಕಂಡುಬರುತ್ತದೆ. ವಾರ್ಷಿಕ ಪಟ್ಟಿಗಳಲ್ಲಿ ಇದು ಬಹಿರಂಗಗೊಳ್ಳುತ್ತದೆ ಎಂದು ಕಂಪನಿಯು ಹೇಳಿಕೆಯಲ್ಲಿ ತಿಳಿಸಿದೆ.
ಇದನ್ನೂ ಓದಿ: ಕನ್ನಡ ಚಿತ್ರರಂಗದ ಹಿರಿಯ ನಿರ್ದೇಶಕ ಎಸ್.ಕೆ ಭಗವಾನ್ ಆರೋಗ್ಯ ಗಂಭೀರ: ಆಸ್ಪತ್ರೆಗೆ ದಾಖಲು!
ನೀರಿನ ಕೊರತೆಯನ್ನು ವಿಡಂಬನಾತ್ಮಕವಾಗಿ ವಿವರಿಸುವ Round2Hell ನ 'ಏಜ್ ಆಫ್ ವಾಟರ್' ವೀಡಿಯೊ ಮತ್ತು ವ್ಯಾಪಾರ ಹೂಡಿಕೆ ಟಿವಿ ಕಾರ್ಯಕ್ರಮದ ಹಾಸ್ಯಮಯ ರಿಮೇಕ್ ಆದ ಆಶಿಶ್ ಚಂಚಲಾನಿ ಅವರ 'ಚೀಪ್ ಶಾರ್ಕ್ ಟ್ಯಾಂಕ್' ಟಾಪ್ 10 ವೀಡಿಯೊಗಳ ಪಟ್ಟಿಯಲ್ಲಿ ಅಗ್ರಸ್ಥಾನದಲ್ಲಿದೆ.
ಆದರೆ, ಸನ್ ಪಿಕ್ಚರ್ಸ್ನ ದಳಪತಿ ವಿಜಯ್ ಅವರ ಬೀಸ್ಟ್ನ 'ಅರಬಿ ಕೂತು', ಅಧಿಕೃತ ಲಿರಿಕಲ್ ವೀಡಿಯೊ ಮತ್ತು ಪುಷ್ಪಾ ಚಿತ್ರದ 'ಸಾಮಿ ಸಾಮಿ' 'ಶ್ರೀವಲ್ಲಿ' ನಂತರದ ಪ್ರಮುಖ ಸಂಗೀತ ವೀಡಿಯೊಗಳಾಗಿವೆ.
ಕಿರು-ವೀಡಿಯೊ ಸೃಷ್ಟಿಕರ್ತ ಜಾನ್ವಿ ಪಟೇಲ್ ರ ಮಹಿಳಾ ಬ್ರೇಕ್ಔಟ್ ಕ್ರಿಯೆಟಿವ್ ಪಟ್ಟಿಯಲ್ಲಿ ಮುಂಚೂಣಿಯಲ್ಲಿದ್ದಾರೆ. ಜೊತೆಗೆ, ಸ್ಕ್ರಿಪ್ಟೆಡ್ ಕಂಟೆಂಟ್ ಕ್ರಿಯೇಟರ್ಗಳಾದ ಅಕ್ಷಯ್ ನಗ್ವಾಡಿಯಾ ಮತ್ತು ಗುಲ್ಶನ್ ಕಲ್ರಾ ಅವರು 'ಶಾರ್ಟ್ಸ್ ಬ್ರೇಕ್' ನಂತರ ಟಾಪ್ ಕ್ರಿಯೇಟರ್ಗಳಾಗಿ ಪಟ್ಟಿಯಲ್ಲಿದ್ದಾರೆ ಎಂದು ಯೂಟ್ಯೂಬ್ ಹೇಳಿದೆ. <img src="https://media.kannadaprabha.com/uploads/user/imagelibrary/2022/12/6/w600X390/Pushpa.jpg" alt="ಯುಟ್ಯೂಬ್ ಇಂಡಿಯಾದಲ್ಲಿ 'ಶ್ರೀವಲ್ಲಿ' ಟಾಪ್ ಮ್ಯೂಸಿಕ್ ವಿಡಿಯೋ: ಶಾರ್ಟ್ಸ್ ಬ್ರೇಕ್ ಟಾಪ್ ಕ್ರಿಯೆಟರ್!" title="ಯುಟ್ಯೂಬ್ ಇಂಡಿಯಾದಲ್ಲಿ 'ಶ್ರೀವಲ್ಲಿ' ಟಾಪ್ ಮ್ಯೂಸಿಕ್ ವಿಡಿಯೋ: ಶಾರ್ಟ್ಸ್ ಬ್ರೇಕ್ ಟಾಪ್ ಕ್ರಿಯೆಟರ್!"
For more news update stay with actp news
Android App
Facebook
Twitter
Dailyhunt
Share Chat
Telegram
Koo App